Maldives: ವಿಕ್ಕಿ ಇಲ್ಲದೆ ಕತ್ರಿನಾ ಕೈಫ್ ಒಬ್ಬರೇ ಏನು ಮಾಡುತ್ತಿದ್ದಾರೆ?
ಇತ್ತೀಚಿಗೆ ಕತ್ರಿನಾ ಕೈಫ್ (Katrina Kaif) ಮುಂಬೈನಿಂದ ಮಾಲ್ಡೀವ್ಸ್‌ಗೆ (Maldives) ತೆರಳಿದ್ದಾರೆ. ಪತಿ ವಿಕ್ಕಿ ಕೌಶಲ್ (Vicky Kaushal) ಪ್ರಸ್ತುತ ಮಧ್ಯಪ್ರದೇಶದ ಮಹೇಶ್ವರದಲ್ಲಿ ತಮ್ಮ ಸಹನಟಿ ಸಾರಾ ಅಲಿ ಖಾನ್ (Sara Ali Khan) ಅವರೊಂದಿಗೆ ಚಿತ್ರೀಕರಣದಲ್ಲಿದ್ದಾರೆ. ವಿಕ್ಕಿ ಇಲ್ಲದೆ ಮಾಲ್ಡೀವ್ಸ್‌ನಲ್ಲಿ ಕತ್ರಿನಾ ಕೈಫ್ ಒಬ್ಬರೇ ಏನು ಮಾಡುತ್ತಿದ್ದಾರೆ? ಎಂದು ಎಲ್ಲರಲ್ಲಿ ಕೂತುಹಲ ಮೂಡಿಸಿದೆ. ಮಾಹಿತಿಗಾಗಿ ಮುಂದೆ ಓದಿ.
ಕೆಲವು ದಿನಗಳ ಹಿಂದೆ, ಬಾಲಿವುಡ್ ನಟಿ (Bollywood Actress) ಕತ್ರಿನಾ ಕೈಫ್ ಅವರು ಗ್ರೀನ್ ಕೋ-ಆರ್ಡ್ ಡ್ರೆಸ್ ಸೆಟ್ ಧರಿಸಿ ವಿಮಾನ ನಿಲ್ದಾಣದಲ್ಲಿ (Airport) ಕಾಣಿಸಿಕೊಂಡಿದ್ದರು.ಆ ಸಮಯ ಅವರು ಕೂದಲನ್ನು ಕಟ್ಟಿದ್ದರು ಬಿಳಿ ಸ್ನೀಕರ್ಸ್ ಮತ್ತು ಮಾಸ್ಕ್‌ನೊಂದಿಗೆ ತನ್ನ ಏರ್‌ಪೋರ್ಟ್ ಲುಕ್ಕಿನಲ್ಲಿ ರಾರಾಜಿಸುತ್ತಿದ್ದರು.
ಕತ್ರಿನಾ ಧರಿಸಿದ್ದ ಕೋ-ಆರ್ಡ್ ಸೆಟ್ ವಿಕ್ಟೋರಿಯಾ ಬೆಕ್‌ಹ್ಯಾಮ್‌ರ ಪ್ರಿ ಸ್ಪ್ರಿಂಗ್ ಸಮ್ಮರ್ 2022 ಕಲೆಕ್ಷನ್‌ನದ್ದು. ಇದರ ಬೆಲೆ 1,07,600 ರೂ. ಕತ್ರಿನಾ ಅವರ ಓವರ್‌ಸೈಜ್ಡ್ ಶರ್ಟ್ ಬೆಲೆ 56,000 ಮತ್ತು ಪೈಜಾಮ 51,600 ಮೌಲ್ಯದ್ದಾಗಿತ್ತು.
ಪತಿ ವಿಕ್ಕಿ ಕೌಶಲ್ ಮಧ್ಯ ಪ್ರದೇಶದ (Madhyapradesh) ಮಹೇಶ್ವರದಲ್ಲಿ ತಮ್ಮ ಸಹನಟಿ ಸಾರಾ ಅಲಿ ಖಾನ್ (Sara Ali Khan) ಅವರೊಂದಿಗೆ ಚಿತ್ರೀಕರಣದಲ್ಲಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಕತ್ರಿನಾ ಕೈಫ್ ಮುಂಬೈನಿಂದ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಅಲ್ಲಿ ನಟಿ ಒಬ್ಬರೇ ಏನು ಮಾಡುತ್ತಿದ್ದಾರೆ ಎಂದು ಫ್ಯಾನ್ಸ್ ಕೇಳುತ್ತಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಕತ್ರಿನಾ ಟಿವಿ ಕಮರ್ಷಿಯಲ್ ಚಿತ್ರೀಕರಣಕ್ಕಾಗಿ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಶೀಘ್ರದಲ್ಲೇ ಅವರು ಸಲ್ಮಾನ್ ಖಾನ್ ಅವರೊಂದಿಗೆ ಟೈಗರ್ 3 ರ ಅಂತಿಮ ವೇಳಾಪಟ್ಟಿಯ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಮುಂಬೈಗೆ ಹಿಂದಿರುಗುವ ಮೊದಲು ಕತ್ರಿನಾ ಒಂದೆರಡು ದಿನಗಳ ಕಾಲ ಅಲ್ಲಿ (ಮಾಲ್ಡೀವ್ಸ್) ಇರುತ್ತಾರೆ.
ಕತ್ರಿನಾ ಕೈಫ್ ತನ್ನ ಮುಂದಿನ ಚಿತ್ರವಾದ ಮೆರ್ರಿ ಕ್ರಿಸ್‌ಮಸ್ ಚಿತ್ರೀಕರಣವನ್ನು ತಮಿಳು ಸ್ಟಾರ್ ವಿಜಯ್ ಸೇತುಪತಿ ಜೊತೆಗೆ ಪ್ರಾರಂಭಿಸಲಿದ್ದಾರೆ. ಈ ಸಿನಿಮಾವನ್ನು ಶ್ರೀರಾಮ್ ರಾಘವನ್ ಅವರು ನಿರ್ದೇಶಿಸಲಿದ್ದಾರೆ.
ಸಲ್ಮಾನ್ ಜೊತೆಗಿನ ಟೈಗರ್ 3 ನ ನಟಿಯ ಅಂತಿಮ ಶೆಡ್ಯೂಲ್ ದೆಹಲಿಯಲ್ಲಿ ನಡೆಯಲಿದೆ ಎಂದು ಕತ್ರಿನಾಗೆ ಹತ್ತಿರವಿರುವ ಮೂಲವೊಂದು ತಿಳಿಸಿದೆ. ಇದನ್ನು ಜನವರಿಯ ಆರಂಭದಲ್ಲಿ ನಿಗದಿಪಡಿಸಲಾಗಿತ್ತು. ಆದರೆ ರಾಜಧಾನಿಯಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳದಿಂದಾಗಿ ಮುಂದೂಡಲಾಯಿತು.
ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್ ಜೊತೆಗೆ ಫರ್ಹಾನ್ ಅಖ್ತರ್ ಅವರ ನಿರ್ದೇಶನದ ಜೀ ಲೆ ಜರಾ ಸಿನಿಮಾದಲ್ಲಿ ಕೂಡ ಕತ್ರಿನಾ ನಟಿಸಲಿದ್ದಾರೆ ಮತ್ತು ಈ ಸಿನಿಮಾದಲ್ಲಿ ಕತ್ರಿನಾ ಜೊತೆಗೆ ಕಾಣಿಸಿಕೊಳ್ಳಲು ತಯಾರಕರು ವಿಕ್ಕಿ ಕೌಶಲ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಅದರ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.