ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಮಾಡ್ತಿರೋದೇನು? ಆಸ್ತಿ ಮೌಲ್ಯ ಎಷ್ಟು?
ಪುಷ್ಪಾ-2 ಸಿನಿಮಾದಿಂದ ಎಲ್ಲೆಡೆ ಕ್ರೇಜ್ ಸೃಷ್ಟಿಸಿರುವ ತೆಲುಗು ನಟ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹ ರೆಡ್ಡಿಯವರು ಎಷ್ಟು ಓದಿದ್ದಾರೆ, ಅವರ ಆಸ್ತಿ ಮೌಲ್ಯವೇನು ಯಾವ ಉದ್ಯಮದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎಂಬ ಬಗ್ಗೆ ಈ ಲೇಖನದಲ್ಲಿದೆ ಮಾಹಿತಿ.
ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ರೆಡ್ಡಿ ಪ್ರಮುಖ ಮಹಿಳಾ ಉದ್ಯಮಿಯಾಗಿದ್ದು. ಅವರ ಅಂದಾಜು ನಿವ್ವಳ ಮೌಲ್ಯದ ಬಗ್ಗೆ ಇಲ್ಲಿ ತಿಳಿಯೋಣ
ಸ್ನೇಹಾ ರೆಡ್ಡಿ ಹೈದರಾಬಾದಿನ ಶ್ರೀಮಂತ ಕುಟುಂಬದಿಂದ ಬಂದವರು. ಅವರ ತಂದೆ, ಕಂಚರ್ಲ ಚಂದ್ರಶೇಖರ್ ರೆಡ್ಡಿ, ಉದ್ಯಮಿ ಮತ್ತು SCIENT ನ ಅಧ್ಯಕ್ಷರಾಗಿದ್ದಾರೆ.
ಸ್ನೇಹಾ ರೆಡ್ಡಿ ವಿದ್ಯಾಭ್ಯಾಸ: ಸ್ನೇಹಾ ರೆಡ್ಡಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್ ಪದವಿ ಮತ್ತು ಯುಎಸ್‌ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಸ್ನೇಹಾ ರೆಡ್ಡಿ ವ್ಯವಹಾರಗಳು: ಸ್ನೇಹಾ ರೆಡ್ಡಿ ವೈವಿಧ್ಯಮಯವಾದ ವ್ಯಾಪಾರ ಉದ್ಯಮಗಳನ್ನು ಹೊಂದಿದ್ದಾರೆ, ಇದರಲ್ಲಿ ಆನ್‌ಲೈನ್ ಫೋಟೋ ಸ್ಟುಡಿಯೊ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ಕೈಯಾಡಿಸಿದ್ದು, ಅವರ ನಿವ್ವಳ ಮೌಲ್ಯ ₹42 ಕೋಟಿ ಎಂದು ಅಂದಾಜಿಸಲಾಗಿದೆ.