ಮದುವೆಗೂ ಮುನ್ನ ಶಾರೀರಿಕ ಸಂಬಂಧ ಬೆಳೆಸೋದು ಸರೀನಾ? ಐಶ್ವರ್ಯ ರೈ ಹೇಳಿದ್ದೇನು
ಅಂತಾರಾಷ್ಟ್ರೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ಬಾಲಿವುಡ್‌ನ ಸುಂದರ ನಟಿ ಐಶ್ವರ್ಯಾ ರೈ ಮದುವೆಗೂ ಮುನ್ನ ದೈಹಿಕ ಸಂಬಂಧ ಬೆಳೆಸುವ ಬಗ್ಗೆ ಏನು ಹೇಳಿದ್ರು ಗೊತ್ತಾ?

ಬಾಲಿವುಡ್‌ನ ಸುಂದರ ನಟಿ ಐಶ್ವರ್ಯಾ ರೈ (Aishwarya Rai) ಎಲ್ಲವನ್ನೂ ಜನರ ಮುಂದೆ ಸಭ್ಯ ರೀತಿಯಲ್ಲಿ ಹೇಳುತ್ತಾರೆ. ಬಹುಶಃ ಇದೇ ಕಾರಣಕ್ಕೆ ಅವರನ್ನು ಬ್ಯೂಟಿ ವಿತ್ ಬ್ರೈನ್ ಎನ್ನುತ್ತಾರೆ. ಐಶ್ವರ್ಯಾ ಯಾವಾಗಲೂ ತಮ್ಮ ವೈಯಕ್ತಿಕ ವಿಷಯಗಳನ್ನು ವೈಯಕ್ತಿಕವಾಗಿ ಇಟ್ಟುಕೊಳ್ಳುತ್ತಾರೆ. ಅಭಿಷೇಕ್ ಬಚ್ಚನ್ ಅವರೊಂದಿಗಿನ ವಿಚ್ಛೇದನದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದ್ದರೂ, ಐಶ್ವರ್ಯ ಈ ಬಗ್ಗೆ ಎಂದಿಗೂ ಬಹಿರಂಗವಾಗಿ ಮಾತನಾಡಲಿಲ್ಲ.
ಹಳೆಯ ಸಂದರ್ಶನವೊಂದರಲ್ಲಿ, ಐಶ್ವರ್ಯಾ ರೈ ವಿವಾದಾತ್ಮಕ ಪ್ರಶ್ನೆಗೆ (conttroversial question)ಎಷ್ಟು ಗೌರವಾನ್ವಿತ ಮತ್ತು ಸಭ್ಯ ರೀತಿಯಲ್ಲಿ ಉತ್ತರಿಸಿದ್ದರು ಎಂದರೆ ಜನರು ಅವರ ಮಾತನ್ನು ಕೇಳಿ ಶಾಕ್ ಆಗಿದ್ದರು. ದೈಹಿಕ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ಐಶ್ವರ್ಯ ರೈ ಏನ್ ಹೇಳಿದ್ರು ನೊಡಿ.
ಭಾರತದಲ್ಲಿ ಪ್ರೀತಿ ಮತ್ತು ಅಫೆಕ್ಷನ್ (affection) ಸಾರ್ವಜನಿಕವಾಗಿ ಏಕೆ ತೋರಿಸಲಾಗುವುದಿಲ್ಲ ಎಂದು ಐಶ್ವರ್ಯಾ ಅವರನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಐಶ್ವರ್ಯ ಪ್ರೀತಿ ಅನ್ನೋದು ಫೀಲಿಂಗ್, ಅದನ್ನು ಸಾರ್ವಜನಿಕವಾಗಿ ತೋರಿಸಲು ಸಾಧ್ಯವಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಅದನ್ನು ಬಹಿರಂಗವಾಗಿ ತೋರಿಸುವುದು ಸರಿ ಎಂದು ಪರಿಗಣಿಸಲಾಗುವುದಿಲ್ಲ ಎಂದಿದ್ದರು.
ಐಶ್ವರ್ಯ ಇದರ ಬಗ್ಗೆ ಮಾತನಾಡುತ್ತಾ, ಇದು ನಮ್ಮ ಖಾಸಗಿ ಭಾವನೆ , ಬೀದಿಗಳಲ್ಲಿ ಜನರು ಕಿಸ್ ಮಾಡೋದನ್ನು ನೀವು ನೋಡೋದಿಲ್ಲ. ನಮ್ಮ ಜೀವನವನ್ನು ಚಲನಚಿತ್ರಗಳಲ್ಲಿಯೂ ತೋರಿಸಲಾಗುತ್ತದೆ. ಅದಕ್ಕಾಗಿಯೇ ಅದನ್ನು ಅಷ್ಟು ಬಹಿರಂಗವಾಗಿ ತೋರಿಸಲಾಗುವುದಿಲ್ಲ ಎಮ್ದಿದ್ದಾರೆ.
ಅದೇ ಸಂದರ್ಶನದಲ್ಲಿ, ಐಶ್ವರ್ಯಾ ಅವರನ್ನು ಭಾರತದಲ್ಲಿ ಮದುವೆಗೆ ಮುನ್ನ ದೈಹಿಕ ಸಂಬಂಧ ಬೆಳೆಸೋದನ್ನು ನಿಷಿದ್ಧವೆಂದು ತೋರಿಸಲಾಗಿದೆ ಯಾಕೆ ಎಂದು ಕೇಳಿದಾಗ, ಐಶ್ವರ್ಯ ಇದರ ಬಗ್ಗೆ ಮಾತನಾಡುತ್ತಾ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಮುನ್ನ ದೈಹಿಕ ಸಂಬಂಧವನ್ನು (physical relationship)ಬೆಳೆಸೋದು ಸರಿ ಎಂದು ಪರಿಗಣಿಸಲಾಗೋದಿಲ್ಲ ಎಂದಿದ್ದಾರೆ.
ಐಶ್ವರ್ಯ ಅವರ ಈ ಉತ್ತರವನ್ನು ಕೇಳಿ ಜನ ಶಾಕ್ ಆಗಿದ್ದರು. ಆಧುನಿಕ ನಟಿಯೊಬ್ಬರು ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಈ ರೀತಿ ವ್ಯಕ್ತಪಡಿಸುತ್ತಾರೆಂದು ಯಾರೂ ಕೂಡ ಯೋಚನೆ ಮಾಡಿರಲಿಲ್ಲ.
ಈ ಸಂದರ್ಶನದಲ್ಲಿ ಐಶ್ವರ್ಯ ಅವರು ಕುಟುಂಬದ ಬಗ್ಗೆ ಮತ್ತು ಜನರು ತಮ್ಮ ಕುಟುಂಬಕ್ಕೆ ಹೇಗೆ ಪ್ರಾಮುಖ್ಯತೆ ನೀಡುತ್ತಾರೆ ಮತ್ತು ಅವಕುಟುಂಬದ ಜೊತೆ ಇರಲು ಯಾಕೆ ಇಷ್ಟಪಡುತ್ತಾರೆ ಎಂಬುದರ ಬಗ್ಗೆಯೂ ಮಾತನಾಡಿದರು. ಕುಟುಂಬ ಸದಸ್ಯರು ಸಂತೋಷ ಮತ್ತು ದುಃಖ ಎರಡೂ ಸಮಯದಲ್ಲೂ ಪರಸ್ಪರ ಬೆಂಬಲವಾಗಿ ನಿಲ್ಲುತ್ತಾರೆ. ಇದನ್ನು ನೀವು ನಮ್ಮ ದೇಶದ ವಿಶೇಷತೆ ಎಂದೂ ಕರೆಯಬಹುದು ಎಂದು ಹೆಮ್ಮೆಯಿಂದ ಹೇಳಿದ್ದಾರೆ ಐಶ್ವರ್ಯ ರೈ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

