ಪಾಶ್ಚಿಮಾತ್ಯರೇ ಹುಬ್ಬೇರಿಸಿ ನೋಡುವಂತೆ ಮಾಡಿದ್ದ ಐಶ್ವರ್ಯ ರೈ 2002ರ ಕಾನ್ಸ್ ಲುಕ್
2002 ರಲ್ಲಿ, ಐಶ್ವರ್ಯಾ ರೈ ಕಾನ್ಸ್ ನಲ್ಲಿ ಮೊದಲ ಬಾರಿ ಸಾಂಪ್ರದಾಯಿಕ ಹಳದಿ ಸೀರೆಯುಟ್ಟು ರೆಡ್ ಕಾರ್ಪೆಟ್ ನಲ್ಲಿ ನಡೆಯುವ ಮೂಲಕ, ಪಾಶ್ಚಿಮಾತ್ಯ ದೇಶಗಳು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದರು.

ಬಾಲಿವುಡ್ ಸೆಲೆಬ್ರಿಟಿಗಳು ಸ್ಟೈಲಿಶ್ ಗೌನ್ ಧರಿಸಿ ಜಾಗತಿಕ ಫ್ಯಾಷನ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಹಳ ಹಿಂದೆಯೇ, ಐಶ್ವರ್ಯಾ ರೈ ಕಾನ್ಸ್ ಫಿಲಂ ಫೆಸ್ಟಿವಲ್ (Cannes film festival)ತಮ್ಮ ಚೊಚ್ಚಲ ಎಂಟ್ರಿ ನೀಡಿದ್ದರು. ಅದು ಕೂಡ ಯಾರೂ ಊಹಿಸಿರದ ಲುಕ್ ನಲ್ಲಿ ಐಶ್ವರ್ಯ ರೈ ಕಾಣಿಸಿಕೊಳ್ಳುವ ಮೂಲಕ, ಜಗತ್ತೆ ಭಾರತದೆಡೆಗೆ ನೋಡುವಂತೆ ಮಾಡಿದ್ದರು.
ಇಂದಿನಂತೆಯೇ, ಆಗಲೂ ಕ್ಯಾನೆಸ್‌ನಲ್ಲಿ ಗ್ರ್ಯಾಂಡ್ ಲಾಂಗ್ ಗೌನ್, ಏಕವರ್ಣದ ಪ್ಯಾಲೆಟ್‌ಗಳು ಮತ್ತು ಹೊಸ ಹೊಸ ಟ್ರೆಂಡ್ ಗಳಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುತ್ತಿದ್ದರು. ಆದರೆ ವಿಶ್ವ ಸುಂದರಿ ಐಶ್ವರ್ಯಾ ರೈ (Miss world Aishwarya Rai) ಎಲ್ಲವನ್ನೂ ಬಿಟ್ಟು ಸಾಂಪ್ರದಾಯಿಕ ಹಳದಿ ಸೀರೆಯನ್ನು ಧರಿಸಿ , ನೀತಾ ಲುಲ್ಲಾ ವಿನ್ಯಾಸಗೊಳಿಸಿದ ಡ್ರೆಪ್, ಕ್ಯಾಪ್ ಸ್ಲೀವ್ಸ್ ಹೊಂದಿರುವ ಕಸೂತಿ ವಕ್ ಮಾಡಿದ ಬ್ಲೌಸ್ ಹಾಗೂ ಸ್ಟೇಟ್‌ಮೆಂಟ್ ಗೋಲ್ಡ್ ಜ್ಯುವೆಲ್ಲರಿ ಜೊತೆಗೆ ಕಾನ್ಸ್ ಗೆ ರೆಟ್ರೋ ಗಾಡಿಯ ಮೂಲಕ ಎಂಟ್ರಿ ಕೊಟ್ಟಿದ್ದರು.
ಐಶ್ವರ್ಯ ರೈ ದೇವದಾಸ್ ಸಿನಿಮಾಕ್ಕಾಗಿ ಕಾನ್ಸ್ ಫಿಲಂ ಫೆಸ್ಟಿವಲ್ ಗೆ ಚೊಚ್ಚಲ್ ಎಂಟ್ರಿ ಕೊಟ್ಟಿದ್ದರು. ಹಳದಿ ಸೀರೆಯುಟ್ಟು ಐಶ್ವರ್ಯ ಕಾರಿನಿಂದ ಇಳಿಯುತ್ತಿದ್ದರೆ, ಶಾರುಖ್ ಖಾನ್ (Shahrukh Khan), ಕೈ ಹಿಡಿದು ವಿಶ್ವಸುಂದರಿಯನ್ನು ಕೆಳಗಿಳಿಸಿದ ಫೋಟೊಗಳು ಇವತ್ತಿಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಐಶ್ವರ್ಯಾ ರೈ ಅವರ ಕಾನ್ಸ್ ಎಂಟ್ರಿ ಕೇವಲ ಸುಂದರವಾದ ಬಟ್ಟೆಗಳ ಪ್ರದರ್ಶನ ಮಾತ್ರ ಆಗಿರಲಿಲ್ಲ. ಇದು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಅದ್ಭುತ ಕ್ಷಣ ಕೂಡ ಆಗಿತ್ತು. ಆ ಮೂಲಕ ಐಶ್ವರ್ಯ ರೈ (Aishwarya Rai), ವಿದೇಶದ ಮಾಧ್ಯಮಗಳು ಭಾರತದ ಸಂಸ್ಕೃತಿಯತ್ತ ತಿರುಗಿ ನೋಡುವಂತೆ ಮಾಡಿದರು. ಫ್ಯಾಷನ್ ಅಂದ್ರೆ ಕೇವಲ ಗೌನ್ ಅಲ್ಲ, ಸೀರೆ ಕೂಡ ಫ್ಯಾಷನ್ ಅನ್ನೋದನ್ನು ಇವರು ತೋರಿಸಿಕೊಟ್ಟರು.
ಐಶ್ವರ್ಯಾ ಅವರ ಕಾನ್ಸ್ ಎಂಟ್ರಿ ದಕ್ಷಿಣ ಏಷ್ಯಾದ ಫ್ಯಾಷನ್ ಅನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಮಾಡಲು ಇಟ್ಟ ದಿಟ್ಟ ಹೆಜ್ಜೆಯಾಗಿತ್ತು. ಮೊದಲ ಬಾರಿಗೆ, ಮುಖ್ಯವಾಹಿನಿಯ ಪಾಶ್ಚಿಮಾತ್ಯ ಮಾಧ್ಯಮಗಳು ಭಾರತೀಯ ರೆಡ್ ಕಾರ್ಪೆಟ್ ಫ್ಯಾಷನ್ (Indian Red Carpet Fashion) ಅನ್ನು ಗಂಭೀರವಾಗಿ ಗಮನಿಸಿದವು. ಇದರ ಜೊತೆಗೆ ಭಾರತೀಯ ಉಡುಗೆಗಳತ್ತಲೂ ಹೆಚ್ಚಿನ ಗಮನ ಹರಿಸಲಾಯಿತು.
ಅಷ್ಟೇ ಅಲ್ಲ , ನಮ್ಮ ಕರಕುಶಲತೆ, ಸ್ಟೈಲಿಂಗ್, ಫ್ಯಾಷನ್ ಎಲ್ಲವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದುಕೊಳ್ಳಲು ಆರಂಭವಾಯಿತು. ಇದೆಲ್ಲವೂ ಐಶ್ವರ್ಯಾ ರೈ ಮಾಡಿದ ಒಂದು ಸರಳ ಆಯ್ಕೆಯಿಂದ ಸಾಧ್ಯವಾಯಿತು.
2002 ರ ಆ ಕ್ಷಣವು ವಿದೇಶಿಯರು ಮಾತ್ರವಲ್ಲ, ಭಾರತೀಯರಿಗೂ ಅಚ್ಚರಿಯನ್ನುಂಟು ಮಾಡಿತ್ತು. ಆದರೆ ಐಶ್ವರ್ಯ ರೈ ಆ ಕ್ಷಣದಲ್ಲಿ ಜಾಗತಿಕ ಫ್ಯಾಷನ್ ಐಕಾನ್ (Global Fashion Icon) ಆಗಿದ್ದಂತೂ ನಿಜಾ. ಐಶ್ವರ್ಯಾ ರೈ ಭಾರತದಲ್ಲಿ ಫ್ಯಾಷನ್‌ನ ಬ್ಲೂ ಪ್ರಿಂಟ್ ಅಂತ ಹೆಮ್ಮೆಯಿಂದ ಹೇಳಿಕೊಳ್ಳಬಹುದು.