ವೈ ಭದ್ರತೆಯಲ್ಲಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಾಕಿಂಗ್; ಹಿಗ್ಗಾಮುಗ್ಗಾ ಟ್ರೋಲ್
ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವೈ ಭದ್ರತೆಯಲ್ಲಿ ವಾಕಿಂಗ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಇನ್ನೂ ಸದ್ದು ಮಾಡುತ್ತಿದೆ. ಮಾರ್ಚ್ 11 ರಂದು ಬಿಡುಗಡೆಯಾದ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿತ್ತು. ಕೆಲವರು ಈ ಸಿನಿಮಾದ ಬಗ್ಗೆ ಅಸಮಾಧಾನ ಹೊರಹಾಕಿದ್ರು. ಆದರೂ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು.
ಅಂದಹಾಗೆ ಕಾಶ್ಮೀರ್ ಫೈಲ್ಸ್ ಸಿನಿಮಾ 1990ರ ದಶಕದ ಕಾಶ್ಮೀರಿ ಪಂಡಿತರ ಮೇಲಾದ ಹತ್ಯೆ ಮತ್ತು ವಲಸೆ ಬಗ್ಗೆ ಇದೆ. ಈ ಸಿನಿಮಾ ರಿಲೀಸ್ ಬಳಿಕ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಬೆದರಿಕೆ ಕರೆಗಳು ಬಂದಿತ್ತು. ಹಾಗಾಗಿ ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿತ್ತು. ನಾಲ್ಕರಿಂದ ಐದು ಸಶಸ್ತ್ರ ಕಮಾಂಡೋಗಳನ್ನು ನಿಯೋಜಿಸಲಾಗುವುದು.
ವಿವೇಕ ಅಗ್ನಿಹೋತ್ರಿ ಎಲ್ಲೇ ಹೋದರೂ ಭದ್ರತಾ ಸಿಬ್ಬಂದಿ ಜೊತೆಯಲ್ಲೇ ಇರುತ್ತಾರೆ. ಇಂದು (ಡಿಸೆಂಬರ್ 24) ಬೆಳಗ್ಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ವಾಕಿಂಗ್ ಮಾಡುವಾಗಲೂ ವೈ ಭದ್ರತೆ ಸಿಬ್ಬಂದಿ ಜೊತೆಯಲ್ಲಿ ಇದ್ದಾರೆ. ವೈ ಭದ್ರತೆ ಜೊತೆ ವಾಕಿಂಗ್ ಮಾಡುತ್ತಿರುವ ವಿವೇಕ್ ಅಗ್ನಿಹೋತ್ರಿ ವಿಡಿಯೋ ವೈರಲ್ ಆಗಿದೆ.
ವಿಡಿಯೋ ಶೇರ್ ಮಾಡಿ ವಿವೇಕ್ ಅಗ್ನಿಹೋತ್ರಿ, ಕಾಶ್ಮೀರದಲ್ಲಿ ಹಿಂದೂಗಳ ನರಮೇಧವನ್ನು ತೋರಿಸಿದ್ದಕ್ಕೆ ತೆರಬೇಕಾದ ಬೆಲೆ. ಅದೂ ಹಿಂದೂ ಬಹುಸಂಖ್ಯಾತ ದೇಶದಲ್ಲಿ' ಎಂದು ಹೇಳಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರ ವಿಡಿಯೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಸಖತ್ ಟ್ರೋಲ್ ಮಾಡುತ್ತಿದ್ದಾರೆ. ನೆಗೆಟಿವ್ ಕಾಮೆಂಟ್ ಮಾಡಿ, ಅಂತಹ ಕೆಲಸ ಏನು ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.
ಇದು ತೆರಿಗೆ ಪಾವತಿದಾರರ ಹಣವನ್ನು ವ್ಯರ್ಥಮಾಡಲಾಗುತ್ತಿದೆ. ಬಿಲ್ಡ್ ಅಪ್ ಎಂದು ಹೇಳುತ್ತಿದ್ದಾರೆ. ಸಾಮಾನ್ಯ ಜನರು ಕಟ್ಟುವ ತೆರಿಗೆಯಲ್ಲಿ ನಿಮಗೆ ಯಾಕೆ ಭದ್ರತೆ ಕೊಡಬೇಕು, ನೀವೆ ಖಸಾಗಿ ಭದ್ರತೆ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ.