ಐಶ್ವರ್ಯಾ ಕಾಸ್ಟ್ಯೂಮ್ ಸಹಾಯಕರಿಗೆ 'ಗುಲಾಮರು' ಎಂದು ಅಗ್ನಿಹೋತ್ರಿ ಕಿಡಿ; ನಿರ್ದೇಶಕರ ವಿರುದ್ಧ ಫ್ಯಾನ್ಸ್ ಗರಂ
ಐಶ್ವರ್ಯಾ ಕಾಸ್ಟ್ಯೂಮ್ ಸಹಾಯಕರಿಗೆ 'ಗುಲಾಮರು' ಎಂದು ಅಗ್ನಿಹೋತ್ರಿ ಕಿಡಿ ಕಾರಿದ್ದಾರೆ. ನಿರ್ದೇಶಕರ ವಿರುದ್ಧ ಫ್ಯಾನ್ಸ್ ಗರಂ ಆಗಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಸದ್ಯ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿದ್ದಾರೆ. ಐಶ್ವರ್ಯಾ ಪ್ರತಿ ಬಾರಿ ಕೂಡ ತನ್ನ ಸ್ಟೈಲಿಶ್ ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಈ ಬಾರಿ ಕೂಡ ಐಶ್ವರ್ಯಾ ಕಾನ್ ಫೆಸ್ಟಿವಲ್‌ನಲ್ಲಿ ವಿಭಿನ್ನ ಲುಕ್ ಮೂಲಕ ಅಭಿಮಾನಿಗಳ ಹೃದಯ ಗೆದಿದ್ದಾರೆ.
ಐಶ್ವರ್ಯಾ ರೈ ಸಿಲ್ವರ್ ಮತ್ತು ಬ್ಲ್ಯಾಕ್ ಗೌನ್ನಲ್ಲಿ ಐಶ್ವರ್ಯಾ ಮಿಂಚಿದ್ದಾರೆ. ಉದ್ದವಾದ ಗೌನ್ ಇದಾಗಿದ್ದು ಸಂಪೂರ್ಣವಾಗಿ ಬಾಡ್ ಕವರ್ ಆಗಿತ್ತು, ಐಶ್ವರ್ಯಾ ಮುಖ ಮಾತ್ರ ಕಾಣುತ್ತಿತ್ತು.
ಐಶ್ವರ್ಯಾ ಅವರ ರೆಡ್ ಕಾರ್ಪೆಟ್ ವಾಕ್ ಅನ್ನು ಬಾಲಿವುಡ್ ಖ್ಯಾತ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಅಣಕಿಸಿದ್ದಾರೆ. ಸಾಮಾನ್ಯವಾಗಿ ಉದ್ದವಾದ ಗೌನ್ ಹಾಕಿದ್ರೆ ವಾಕ್ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಕಾಸ್ಟ್ಯೂಮ್ ಡಿಸೈನರ್ ಪಕ್ಕದಲ್ಲೇ ಇದ್ದು ಸಹಾಯ ಮಾಡುತ್ತಾರೆ. ಇದನ್ನು ನೋಡಿ ವಿವೇಕ್ ಅಗ್ನಿಹೋತ್ರಿ ಗುಲಾಮರು ಎಂದು ಹೇಳಿದ್ದಾರೆ.
ಐಶ್ವರ್ಯಾ ರೈ ಅವರ ಫೋಟೋ ಶೇರ್ ಮಾಡಿ ಅಗ್ನಿಹೋತ್ರಿ, ಕಾಸ್ಟ್ಯೂಮ್ ಗುಲಾಮರು ಎಂದು ಹೇಳಿದ್ದಾರೆ. 'ನೀವು ಕಾಸ್ಟ್ಯೂಮ್ ಗುಲಾಮರು ಎನ್ನುವ ಪದ ಕೇಳಿದ್ದೀರಾ? ಅದರಲ್ಲೂ ಹೆಚ್ಚಾಗಿ ಹುಡುಗಿಯರು. ನೀವು ಈಗ ಅವರನ್ನು ಭಾರತದಲ್ಲಿಯೂ ಸಹ ಪ್ರತಿಯೊಬ್ಬ ಮಹಿಳಾ ಸೆಲೆಬ್ರಿಟಿಗಳೊಂದಿಗೆ ನೋಡಬಹುದು. ಇಂತಹ ಅಹಿತಕರ ಫ್ಯಾಷನ್‌ಗಾಗಿ ನಾವು ಏಕೆ ಮೂರ್ಖರಾಗುತ್ತಿದ್ದೇವೆ ಮತ್ತು ದಬ್ಬಾಳಿಕೆ ಮಾಡುತ್ತಿದ್ದೇವೆ?' ಎಂದು ಅಗ್ನಿಹೋತ್ರಿ ಪ್ರಶ್ನೆ ಮಾಡಿದ್ದಾರೆ.
ಅಗ್ನಿಹೋತ್ರಿ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಐಶ್ವರ್ಯಾ ಅಭಿಮಾನಿಗಳು ನಿಮಗೆ ಯಾಕೆ ಅಸೂಯೆ ಎಂದು ಕೇಳುತ್ತಿದ್ದಾರೆ. ಕಾನ್ ನಿಮ್ಮನ್ನು ಆಹ್ವಾನಿಸಿಲ್ಲ' ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ಇದು ಅವರ ವೈಯಕ್ತಿಕ ಆಯ್ಕೆ ನಿಮ್ಮ ತೀರ್ಪು ಅಗತ್ಯವಿಲ್ಲ' ಎಂದು ಹೇಳಿದ್ದಾರೆ.
ಯಾರು ಉಡುಗೆ, ವೇಷಭೂಷಣ ಧರಿಸಿರುತ್ತಾರೋ ಅದು ಅವರ ಸ್ವಂತ ಜವಾಬ್ದಾರಿ. ಇದು ನಿಲ್ಲಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ಇಂತಹ ಕಾಸ್ಟ್ಯೂಮ್ ಅಥವ ಧಿರಿಸಿನಿಂದ ಎಲ್ಲರೂ ಸಿನಿಮಾ ನೋಡುತ್ತಾರಾ ಎಂದು ಕೇಳಿದ್ದಾರೆ.
ಒಟ್ನಲ್ಲಿ ಐಶ್ವರ್ಯಾ ಯಾವುದೇ ಕಾಸ್ಟ್ಯೂಮ್ ಅಥವಾ ಡ್ರೆಸ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರೂ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಕೂಡ ವಿಭಿನ್ನವಾದ ಗೌನ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.