- Home
- Entertainment
- Cine World
- ಮತ್ತೊಂದು ಚಿತ್ರದಿಂದಲೂ ಔಟ್.. ವಿಜಯ್ ದೇವರಕೊಂಡ ಟೈಮ್ ಕೆಟ್ಟಿದ್ಯಾ? ಏನು ಆಟ ಆಡ್ತಿದೆ..?
ಮತ್ತೊಂದು ಚಿತ್ರದಿಂದಲೂ ಔಟ್.. ವಿಜಯ್ ದೇವರಕೊಂಡ ಟೈಮ್ ಕೆಟ್ಟಿದ್ಯಾ? ಏನು ಆಟ ಆಡ್ತಿದೆ..?
ವಿಜಯ್ ದೇವರಕೊಂಡ ನಟಿಸಬೇಕಿದ್ದ ಮತ್ತೊಂದು ಸಿನಿಮಾ ಇದೀಗ ನಿಂತು ಹೋಗಿದೆ. ಈ ಹಿಂದೆ ವಿಜಯ್ ನಟಿಸಬೇಕಿದ್ದ ಮೂರು ಸಿನಿಮಾಗಳು ನಿಂತು ಹೋಗಿದ್ದವು ಇದೀಗ ಈ ಸಿನಿಮಾ ಸೇರಿ ಸಂಖ್ಯೆ ಒಟ್ಟೂ ನಾಲ್ಕಕ್ಕೆ ಏರಿದೆ. ಏನಾಗ್ತಿದೆ ನಟನ ಬಾಳಲ್ಲಿ?

ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Devarakonda) ತೆಲುಗು ಚಿತ್ರರಂಗದಲ್ಲಿ ಕೇವಲ ಒಂದೇ ದೊಡ್ಡ ಹಿಟ್ ಸಿನಿಮಾ ಮೂಲಕ ಸ್ಟಾರ್ ನಟ ಎನಿಸಿಕೊಂಡರು. 'ಅರ್ಜುನ್ ರೆಡ್ಡಿ' ಸಿನಿಮಾ ವಿಜಯ್ ದೇವರಕೊಂಡ ವೃತ್ತಿಜೀವನವನ್ನೇ ಬದಲಾಯಿಸಿತು. ಅದಕ್ಕೆ ಮುನ್ನ ಕೆಲವು ಸಿನಿಮಾಗಳಲ್ಲಿ ವಿಜಯ್ ನಟಿಸಿದ್ದರಾದರೂ ಸ್ಟಾರ್ ಆಗಿದ್ದು 'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕವೇ ಎಂಬುದು ವಿಶೇಷ.
ಅರ್ಜುನ್ ರೆಡ್ಡಿ (Arjun Reddy) ಸಿನಿಮಾದ ಬಳಿಕ, ನಟಿ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ನಟಿಸಿದ 'ಗೀತ ಗೋವಿಂದಂ' ಸಹ ಸೂಪರ್ ಹಿಟ್ ಆಯ್ತು. ಆದರೆ ಬಳಿಕ ವಿಜಯ್ ನಟನೆಯ ಯಾವೊಂದು ಸಿನಿಮಾ ಸಹ ಹಿಟ್ ಆಗಿಲ್ಲ.
ಈಗಂತೂ ಪರಸ್ಥಿತಿ ಯಾವ ಮಟ್ಟಿಗೆ ಹದಗೆಟ್ಟಿದೆ ಎಂದರೆ, ವಿಜಯ್ ದೇವರಕೊಂಡ ಜೊತೆಗೆ ಘೋಷಣೆ ಮಾಡಿದ್ದ ಸಿನಿಮಾ ನಿರ್ಮಾಪಕರು ಒಬ್ಬೊಬ್ಬರಾಗಿ ಹಿಂದೆ ಸರಿಯುತ್ತಿದ್ದಾರೆ.
ಇತ್ತೀಚೆಗೆ ಬಂದ ಸುದ್ದಿ ಪ್ರಕಾರ, ವಿಜಯ್ ದೇವರಕೊಂಡ ನಟಿಸಬೇಕಿದ್ದ ಮತ್ತೊಂದು ಸಿನಿಮಾ ಇದೀಗ ನಿಂತು ಹೋಗಿದೆ. ಈ ಹಿಂದೆ ವಿಜಯ್ ನಟಿಸಬೇಕಿದ್ದ ಮೂರು ಸಿನಿಮಾಗಳು ನಿಂತು ಹೋಗಿದ್ದವು ಇದೀಗ ಈ ಸಿನಿಮಾ ಸೇರಿ ಸಂಖ್ಯೆ ಒಟ್ಟೂ ನಾಲ್ಕಕ್ಕೆ ಏರಿದೆ.
ವಿಜಯ್ ನಟನೆಯ 'ಕಿಂಗ್‌ಡಮ್' ಸಿನಿಮಾ ಜುಲೈ ತಿಂಗಳಲ್ಲಿ ಬಿಡುಗಡೆ ಆಗಿತ್ತು. I KINGDOM ಸಿನಿಮಾಕ್ಕೆ ಭಾರಿ ಪ್ರಚಾರ ಮಾಡಲಾಗಿತ್ತು, ಸಿನಿಮಾದ ನಿರ್ಮಾಣವೂ ವಿಭಿನ್ನವಾಗಿತ್ತು. ಆದರೆ 'ಕಿಂಗ್ಲಮ್' ಸಿನಿಮಾ ಫ್ಲಾಪ್ ಆಗಿತ್ತು. 130 ಕೋಟಿ ಬಜೆಟ್‌ನ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದ್ದು ಕೇವಲ 80 ಕೋಟಿ ರೂಪಾಯಿ.
'ಕಿಂಗ್‌ಡಮ್' ಸಿನಿಮಾ ಬಿಡುಗಡೆಗೆ ಮುಂಚೆಯೇ ಸಿನಿಮಾದ ಸೀಕ್ವೆಲ್ ಸಹ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ 'ಕಿಂಗ್‌ಡಮ್' ಸಿನಿಮಾದ ಸೀಕ್ವೆಲ್ ನಿಂತು ಹೋಗಿದೆ.
ನಿರ್ಮಾಪಕ ನಾಗವಂಶಿ, ತಾವು 'ಕಿಂಗ್ಲಮ್' ಸಿನಿಮಾದ ಸೀಕ್ವೆಲ್ ನಿರ್ಮಿಸುವುದಿಲ್ಲ ಎಂದು ಹೇಳಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆ ಮೂಲಕ ವಿಜಯ್ ನಟಿಸಬೇಕಿದ್ದ ನಾಲ್ಕನೇ ಸಿನಿಮಾ ನಿಂತು ಹೋಗಿದೆ ಎನ್ನಬಹುದೇ?
ಈ ಮೊದಲು ಬಂದ ಸುದ್ದಿಯ ಪ್ರಕಾರ, ವಿಜಯ್ ಅವರು 'ಹೀರೋ' ಹೆಸರಿನ ಸಿನಿಮಾನಲ್ಲಿ ನಟಿಸಬೇಕಿತ್ತು. ಆ ಸಿನಿಮಾ ನಿಂತು ಹೋಯ್ತು. ಬಳಿಕ ಪುರಿ ಜಗನ್ನಾಥ್ ನಿರ್ದೇಶನದಲ್ಲಿ 'ಜನ ಗಣ ಮನ' ಹೆಸರಿನ ಸಿನಿಮಾ ಘೋಷಿಸಿದ್ದರು, ಟೀಸರ್ ಸಹ ಬಿಡುಗಡೆ ಆಗಿತ್ತು. ಆದರೆ 'ಲೈಗರ್' ಫ್ಲಾಪ್ ಬಳಿಕ ಆ ಸಿನಿಮಾ ಕೂಡ ನಿಂತು ಹೋಯ್ತು.
ನಿರ್ದೇಶಕ ಸುಕುಮಾರ್ ಅವರು ವಿಜಯ್ ದೇವರಕೊಂಡ ಅವರಿಗಾಗಿ ಸಿನಿಮಾ ನಿರ್ದೇಶಿಸುವುದಾಗಿ ಹೇಳಿದ್ದರು, ಸಿನಿಮಾಕ್ಕೆ ಅಲ್ಲು ಅರ್ಜುನ್ ಬಂಡವಾಳ ಹೂಡುವುದು ಸಹ ಖಾತ್ರಿ ಆಗಿತ್ತು. ಆದರೆ ಆ ಸಿನಿಮಾ ಸಹ ನಿಂತು ಹೋಯ್ತು.
ಇದೀಗ ವಿಜಯ್ ನಟನೆಯ ಮತ್ತೊಂದು ಸಿನಿಮಾ ಸಹ ನಿಂತು ಹೋಗಿದೆ. ಏನಾಗ್ತಿದೆ ವಿಜಯ್ ವೃತ್ತಿಬದುಕಿನಲ್ಲಿ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ.
ವಿಜಯ್ ದೇವರಕೊಂಡ ಪ್ರಸ್ತುತ 'ರೌಡಿ ಜನಾರ್ಧನ' ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾನಲ್ಲಿ ಸಖತ್ ವೈಯಲೆಂಟ್ ಆಗಿ ವಿಜಯ್ ದೇವರಕೊಂಡ ಕಾಣಿಸಿಕೊಳ್ಳುತ್ತಿದ್ದಾರೆ.
ಇದರ ಬಳಿಕ ಹಲವು ವರ್ಷಗಳ ಬಳಿಕ ಮತ್ತೆ ರಶ್ಮಿಕಾ ಮಂದಣ್ಣ ಜೊತೆಗೆ 'ಗೀತ ಗೋವಿಂದಂ 2' ಸಿನಿಮಾದಲ್ಲಿ ವಿಜಯ್ ನಟಿಸಲಿದ್ದಾರೆ.
ಆದರೂ ಕೂಡ ರಶ್ಮಿಕಾಗೆ ಸಿಕ್ಕಂತ ಗೆಲುವು ವಿಜಯ್ ದೇವರಕೊಂಡಗೆ ಸಿಗಲೇ ಇಲ್ಲ. ಆದರೆ, ರಶ್ಮಿಕಾ ಮಂದಣ್ಣ ಅವರೇ ಸಿಕ್ಕಿದಾರಲ್ಲ! ಸೋ, ಹೀ ಈಸ್ ಹ್ಯಾಪಿ ಎನ್ನಬಹುದು.
ಅಂದಹಾಗೆ, ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಜೋಡಿಯ ಮದುವೆ ನಿಶ್ಚಯವಾಗಿದೆ, ಅವರಿಬ್ಬರೂ ಉದಯಪುರದಲ್ಲಿ ಮದುವೆ ಆಗಲಿದ್ದಾರೆ ಎನ್ನಲಾಗಿದೆ.
ಆದರೆ, ನಿಶ್ಚಿತಾರ್ಥ ಹಾಗೂ ಮದುವೆ ಎರಡೂ ಕೂಡ ಸುದ್ದಿಯಾಗಿದ್ದರೂ ಕೂಡ, ಇನ್ನೂ ರಶ್ಮಿಕಾ ಆಗಲೀ ಅಥವಾ ವಿಜಯ್ ಆಗಲೀ ಈ ಸುದ್ದಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ.
ಸಿಕ್ಕೆ ಮಾಹಿತಿ ಪ್ರಕಾರ, ರಶ್ಮಿಕಾ-ವಿಜಯ್ ಮದುವೆ 26 ಫೆಬ್ರವರಿ 2026ರಂದು ಉದಯಪುರದ ಅರಮನೆಯಲ್ಲಿ ನಡೆಯಲಿದ್ದು, ಅದಕ್ಕಾಗಿ ಈಗಾಗಲೇ ಸಿದ್ಧತೆ ನಡೆಸಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

