- Home
- Entertainment
- Cine World
- ಆತ 'ಐ ಲವ್ ಯೂ' ಎನ್ನುತ್ತಿದ್ದಂತೆ ತಲೆ ಅಲ್ಲಾಡಿಸಿ 'ಓಕೆ' ಅಂದೆ ಎಂದ ಅನುಷ್ಕಾ ಶೆಟ್ಟಿ; ಕೊನೆಗೂ ಲವ್ ಸ್ಟೋರಿ ಹೊರಬಿತ್ತು!
ಆತ 'ಐ ಲವ್ ಯೂ' ಎನ್ನುತ್ತಿದ್ದಂತೆ ತಲೆ ಅಲ್ಲಾಡಿಸಿ 'ಓಕೆ' ಅಂದೆ ಎಂದ ಅನುಷ್ಕಾ ಶೆಟ್ಟಿ; ಕೊನೆಗೂ ಲವ್ ಸ್ಟೋರಿ ಹೊರಬಿತ್ತು!
ತೆಲುಗು ಚಿತ್ರರಂಗ ಸೇರಿದಂತೆ, ಭಾರತದ ತುಂಬೆಲ್ಲಾ ನಟಿ ಅನುಷ್ಕಾ ಶೆಟ್ಟಿಗೆ ಬಹಳಷ್ಟು ಅಭಿಮಾನಿಗಳು ಇದ್ದಾರೆ. ಅದರಲ್ಲೂ, ಅರುಂಧತಿ ಸಿನಿಮಾ ಬಳಿಕವಂತೂ ಸ್ಟಾರ್ ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಜೊತೆಗೆ, ಸಾಕಷ್ಟು ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೂ ನಟಿಸಿ ಬಾಕ್ಸ್ ಆಫೀಸ್ ಕ್ವೀನ್ ಎನಿಸಿದ್ದಾರೆ.

ಭಾರತದ ಸುರ ಸುಂದರಿ, ಮಂಗಳೂರಿನ ಕನ್ನಡತಿ, ಸ್ವೀಟಿ ಖ್ಯಾತಿಯ ಬೇಬಿ ಅನುಷ್ಕಾ ಶೆಟ್ಟಿ (Anushka Shetty) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅನುಷ್ಕಾ ಶೆಟ್ಟಿ ತಮ್ಮ ಮೊದಲ 'ಲವ್' ಬಗ್ಗೆ ಹೇಳಿ ಕೆನ್ನೆ ಕೆಂಪಗೆ ಮಾಡಿಕೊಂಡಿದ್ದಾರೆ. ಅರುಂಧತಿ, ಸಿಂಗಂ ಹಾಗೂ ಬಾಹುಬಲಿ ಸೇರಿದಂತೆ ಹಲವಾರು ಸೂಪರ್ ಹಿಟ್ ಸಿನಿಮಾಗಳ ಖ್ಯಾತಿಯ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ತಮ್ಮ ಅದ್ಭುತ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡು ಮನೆಮಾತಾಗಿರುವ ನಟಿ.
ತೆಲುಗು ಚಿತ್ರರಂಗ ಸೇರಿದಂತೆ, ಭಾರತದ ತುಂಬೆಲ್ಲಾ ನಟಿ ಅನುಷ್ಕಾ ಶೆಟ್ಟಿಯವರಿಗೆ ಬಹಳಷ್ಟು ಅಭಿಮಾನಿಗಳು ಇದ್ದಾರೆ. ಅದರಲ್ಲೂ, ಅರುಂಧತಿ ಸಿನಿಮಾ ಬಳಿಕವಂತೂ ಅನುಷ್ಕಾ ಶೇಟ್ಟಿಯವರು ಕೇಬಲ ನಟಿಯಾಗಿ ಅಲ್ಲ, ಸ್ಟಾರ್ ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಜೊತೆಗೆ, ಅನುಷ್ಕಾ ಶೆಟ್ಟಿಯವರು ಸಾಕಷ್ಟು ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೂ ನಟಿಸಿ ಹೆಸರು ಮಾಡಿದ್ದಾರೆ, ಬಾಕ್ಸ್ ಆಫೀಸ್ ಕ್ವೀನ್ ಎನಿಸಿದ್ದಾರೆ. ಅರುಂಧತಿ ಬಳಿಕ ಅವರು 'ಝೀರೋ ಸೈಜ್' ಹೆಸರಿನ ಮಹಿಳಾ ಪ್ರಧಾನ ಸಿನಿಮಾದಲ್ಲಿ ಕೂಡ ನಟಿಸಿ, ನಟರಂತೆ ಸ್ಟಾರ್‌ಡಮ್ ಸಂಪಾದಿಸಿಕೊಂಡಿದ್ದಾರೆ.
ಸ್ಲಿಮ್ ಅಂಡ್ ಫಿಟ್ ಆಗಿದ್ದ ಅನುಷ್ಕಾ ಶೇಟ್ಟಿಯವರು 'ಜೀರೋ ಸೈಜ್' ಸಿನಿಮಾಗಾಗಿ ತನ್ನ ದೇಹದ ತೂಕವನ್ನು ನೈಸರ್ಗಿಕ ರೀತಿಯಲ್ಲೇ ಹೆಚ್ಚಿಸಿಕೊಂಡಿದ್ದು ಈ ಹಿಂದೆ ದೊಡ್ಡ ಸುದ್ದಿ ಯಾಗಿತ್ತು. ಹೀಗಾಗಿ ಅವರ ತೂಕ ಇಳಿಕೆ ಕಷ್ಟವಾಗಿದ್ದು ಅದೆ ಕಾರಣಕ್ಕೆ ಅವರಿಗೆ ಸಿನಿಮಾ ಅವಕಾಶ ಅಷ್ಟಾಗಿ ಸಿಗುತ್ತಿಲ್ಲ ಎಂಬ ಮಾತು ಕೂಡ ಕೇಳಿ ಬಂದಿತ್ತು.
ಆದರೆ, ಸಿನಿಮಾ ಅಷ್ಟಾಗಿ ಅನುಷ್ಕಾ ಶೆಟ್ಟಿಗೆ ಸಿಗದಿರುವುದಕ್ಕೆ ಹಲವಾರು ಕಾರಣಗಳು ಇವೆ. ಮೊಟ್ಟಮೊದಲಬೆಯದಾಗಿ ಅವರಿಗೆ ಈಗ 43 ವರ್ಷ ವಯಸ್ಸು. ಮೊದಲಿನಂತೆ ಗ್ಲಾಮರ್ ಓರಿಯಂಟೆಡ್ ರೋಲ್ ಮಾಡುವುದು ಸಾಧ್ಯವಿಲ್ಲ.
ನಟಿ ಅನುಷ್ಕಾ ಶೆಟ್ಟಿ ಅವರಿಗೀಗ 43 ವರ್ಷ ವಯಸ್ಸಾಗಿದ್ದರೂ ಇನ್ನು ಯಾಕೆ ಮದುವೆಯಾಗಿಲ್ಲ ಎಂಬುದು ಹಲವರ ಪ್ರಶ್ನೆ. ಮದುವೆ ಎಂಬುದು ತೀರಾ ಪರ್ಸನಲ್ ಸಂಗತಿ ಎಂದು ಅದೆಷ್ಟೋ ಜನರು ಅದೆಷ್ಟೋ ಸಾರಿ ಹೇಳಿದರೂ ಯಾಕೋ ಸಮಾಜದಲ್ಲಿ ಹಲವರಿಗೆ ಅರ್ಥವೇ ಆಗುತ್ತಿಲ್ಲ.
ಮತ್ತೆಮತ್ತೆ 'ಅದೇ ರಾಗ ಅದೇ ಹಾಡು' ಎಂಬಂತೆ, ಅನುಷ್ಕಾ ಶೆಟ್ಟಿಗೆ ವಯಸ್ಸಾಯ್ತು, ಇನ್ನೂ ಮದುವೆ ಆಗಿಲ್ಲ ಎಂದ ಮಾತುಗಳು ಕೇಳಿಬರುತ್ತಲೇ ಇವೆ. ನಟ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಲವ್ ಮಾಡುತ್ತಿರಹುದು ಎಂಬುದು ಹಲವರ ಸಂದೇಶ, ಊಹೆ.
ಆದರೆ, ಆ ಬಗ್ಗೆ ಇ ಇಬ್ಬರೂ ಆವತ್ತೇ ಕ್ಲಿಯರ್ ಕಟ್ ಆಗಿ ಹೇಳಿದ್ದಾರೆ. 'ನಾವಿಬ್ಬರೂ ಜಸ್ಟ್ ಫ್ರೆಂಡ್ಸ್, ಸಹಕಲಾವಿದರು ಅಷ್ಟೇ, ಲವ್ ಏನೂ ಇಲ್ಲ' ಎಂದು ಸ್ಪಷ್ಟವಾಗಿ ಆ ಗಾಸಿಪ್‌ಗೆ ಉತ್ತರ ಕೊಟ್ಟಿದ್ದಾರೆ. ಆದರೂ ಕೂಡ ಈ ಸುದ್ದಿ ಗಾಸಿಪ್ ನಿಲ್ಲುತ್ತಲೆ ಇಲ್ಲ. ಆದರೆ, ಇದೀಗ ಅನುಷ್ಕಾ ತಮ್ಮ ಹಳೆ ಲವ್ ಸ್ಟೋರಿ ಒಂದನ್ನು ರಿವಿಲ್ ಮಾಡಿದ್ದಾರೆ. 'ನಾನು 6ನೇ ತರಗತಿಯಲ್ಲಿದ್ದಾಗ, ಒಬ್ಬ ಹುಡುಗ ನನ್ನ ಬಳಿಗೆ ಬಂದು, 'ಐ ಲವ್ ಯೂ' ಎಂದ.
ಆದರೆ ಆ ಸಮಯದಲ್ಲಿ, 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದರೆ ಏನು ಎಂದು ನನಗೆ ತಿಳಿದಿರಲಿಲ್ಲ. ಆದ್ದರಿಂದ 'ಓಕೆ, ಸರಿ' ಅಂದೆ. ಈಗಲೂ ಅದು ನನ್ನ ಜೀವನದಲ್ಲಿ ಒಂದು ಸುಂದರ ನೆನಪಾಗಿ ಉಳಿದಿದೆ' ಎಂದು ಅನುಷ್ಕಾ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಟಿಯಾಗುವ ಮೊದಲು ಅನುಷ್ಕಾ ಶೆಟ್ಟಿಯವರು 'ಯೋಗ ತರಬೇತಿ' ನೀಡುವ ಶಿಕ್ಷಕಿಯಾಗಿದ್ದರು. ಮುಂಬೈನಲ್ಲಿ ಅವರು ತಮ್ಮ ತರಗತಿಗಳನ್ನು ನಡೆಸುತ್ತಿದ್ದರು. ಬಳಿಕ ಸಿನಿಮಾ ರಂಗದಲ್ಲಿ ಅವಕಾಶ ಸಿಕ್ಕಿ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದರು. ಸೂಪರ್ ಸ್ಟಾರ್ ನಟ ರಜನಿಕಾಂತ್ ಜೊತೆಗೆ ಲಿಂಗಾ, ವಿಜಯ್ ಜೊತೆ ವೆಟ್ಟೆಕಾರನ್ ಮತ್ತು ಸೂರ್ಯ ಜೊತೆ ಸಿಂಗಂ ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾದಲ್ಲಿ ಅವರು ಅಭಿನಯಿಸಿದ್ದಾರೆ. ಬಾಹುಬಲಿ ಚಿತ್ರದ ಮೂಲಕ ಅನುಷ್ಕಾ ಶೆಟ್ಟಿಯವರು ಜಗದ್ವಿಖ್ಯಾತಿ ಪಡೆದರು.
ದಕ್ಷಿಣ ಭಾರತದಲ್ಲಿ ಟಾಪ್ ಹೀರೋಯಿನ್ ಆಗಿ ಬೆಳೆದ ಅನುಷ್ಕಾ, 'ಸೂಪರ್' ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದರು, ಬಳಿಕ ಅವರು ಮಹಿಳಾ ಪ್ರಧಾನ ಚಿತ್ರ ಭಾರೀ ಅರುಂಧತಿಯೊಂದಿಗೆ ಸಂಚಲನ ಮೂಡಿಸಿದರು.
ಆ ಯಶಸ್ಸಿನೊಂದಿಗೆ ಅನುಷ್ಕಾಗೆ ಸಾಕಷ್ಟು ಅವಕಾಶಗಳು ಸಿಕ್ಕವು. ಅವರು ನಟಿಯಾಗಿ ವಿಶೇಷ ಮನ್ನಣೆ ಗಳಿಸಿದರು. ಅನುಷ್ಕಾ ಇತ್ತೀಚೆಗೆ ನಟಿಸಿದ್ದ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಸಾಧಾರಣ ಯಶಸ್ಸು ಕಂಡಿತು. ನಂತರ ತೆರೆಕಂಡ 'ಘಾಟಿ' ಫ್ಲಾಪ್ ಆಗಿದೆ.
'ನಾನು ಅವನನ್ನೇ ಮದುವೆಯಾಗೋದು'
ನಟಿ ಅನುಷ್ಕಾ ಶೆಟ್ಟಿಯವರು ಇತ್ತೀಚೆಗೆ 'ನಾನು ಯಾವುದೇ ಕ್ರಿಕೆಟಿಗನ ಜೊತೆ ಡೇಟಿಂಗ್ ಮಾಡುತ್ತಿಲ್ಲ. ಇಂತಹ ವದಂತಿಗಳನ್ನು ಬರೆಯುವ ಮೊದಲು ಪರಸ್ಪರ ಪರಿಶೀಲಿಸುವುದು ಉತ್ತಮ' ಎಂದು ಕೆಲವು ದಿನಗಳ ಹಿಂದಷ್ಟೇ ಹೇಳಿದ್ದಾರೆ.
ಜೊತೆಗೆ, 'ಮಾಧ್ಯಮದ ಕೃಪೆಯಿಂದಾಗಿ ನಾನು ಈಗಾಗಲೇ ಹಲವು ಬಾರಿ ಮದುವೆಯಾಗಿದ್ದೇನೆ. ನನ್ನ ಮದುವೆಯ ವಿಷಯವನ್ನು ನನ್ನ ಹೆತ್ತವರಿಗೆ ಬಿಟ್ಟಿದ್ದೇನೆ. ಅವರು ಯಾರನ್ನು ಮದುವೆ ಮಾಡಲು ಬಯಸುತ್ತಾರೋ ಅವರನ್ನೇ ಮದುವೆಯಾಗುತ್ತೇನೆ. ದಯವಿಟ್ಟು ಈ ವದಂತಿಗಳನ್ನು ನಿಲ್ಲಿಸಿ' ಎಂದು ಅನುಷ್ಕಾ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.
ಆದರೂ ಕೂಡ ಅವರಿಗೆ ಮತ್ತೆಮತ್ತೆ ಮದುವೆಗಳು ನಡೆಯುತ್ತಲೇ ಇವೆ. ಇಂಥ ಸುದ್ದಿಗಳು ಜಾಸ್ತಿಯಾಗುತ್ತಲೇ ಇವೆ. ಸೋಷಿಯಲ್ ಮೀಡಿಯಾ ಮೂಲಕ ಇಂದ ಸುದ್ದಿಗಳು ಸೃಷ್ಟಿಯಾಗುತ್ತವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

