ಇಂಜಿನಿಯರ್ to ಸೂಪರ್ ಸ್ಟಾರ್… ವಿಕ್ಕಿ ಕೌಶಲ್ ಲೈಫ್ ಸ್ಟೋರಿ ಸಖತ್ ಇಂಟ್ರೆಸ್ಟಿಂಗ್
Vicky Kaushal Birthday: ಅಪ್ಪ ಅಮ್ಮ ಮಗ ಇಂಜಿನಿಯರ್ ಆಗಿ ಜೀವನ ನಡೆಸ್ತಾನೆ ಎಂದು ಅಂದುಕೊಂಡಿದ್ರೆ, ಮಗ ಮಾತ್ರ 9-5 ಕೆಲಸವೇ ಬೇಡ ಎನ್ನುತ್ತಾ, ಅಪ್ಪನ ಮಾತನ್ನು ಮೀರಿ ಸಿನಿಮಾಕ್ಕಾಗಿ ಐದು ವರ್ಷ ಕಷ್ಟಪಟ್ಟು, ಇಂದು ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಇವರು ಬೇರೆ ಯಾರೂ ಅಲ್ಲ, ವಿಕ್ಕಿ ಕೌಶಲ್.

ವಿಕ್ಕಿ ಕೌಶಲ್ ಹುಟ್ಟುಹಬ್ಬ
ಬಾಲಿವುಡ್ ಸ್ಟಾರ್ ನಟ ವಿಕಿ ಕೌಶಲ್ ಮೇ 16 ರಂದು ಮುಂಬೈನ ಚೆಂಬೂರಿನಲ್ಲಿ ಜನಿಸಿದರು. ಇವತ್ತು ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ, ಲಕ್ಸುರಿ ಕಾರುಗಳಲ್ಲಿ ಓಡಾಡುವ, ಕೋಟ್ಯಾಂತರ ಹಣ ಗಳಿಸುವ ಈ ನಟ ಒಂದು ಕಾಲದಲ್ಲಿ 10x10 ಸಾಧಾರಣ ಕೋಣೆಯಲ್ಲಿ ವಾಸಿಸುತ್ತಿದ್ದರು. ಈ ನಟನಿಗೆ ಬಾಲ್ಯದಲ್ಲಿ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ವಿಕಿ ಮುಂಬೈನ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಪದವಿ ಪಡೆದರು., ಕಾಲೇಜು ದಿನಗಳಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ನಂತರ, ನಟನಿಗೆ ತಾನು ಎಂಜಿನಿಯರ್ ಆಗುವುದಿಲ್ಲ ಎಂದೆನಿಸಿ, ನಟನೆಯತ್ತ ಮುಖ ಮಾಡಿದರು.

ಎಂಜಿನಿಯರಿಂಗ್ ಬಿಟ್ಟು ಸಿನಿಮಾ ಹಾದಿ ಹಿಡಿದ ವಿಕ್ಕಿ ಕೌಶಲ್
ಇಂಜಿನಿಯರಿಂಗ್ ಬಿಟ್ಟ ವಿಕ್ಕಿ ಕೌಶಲ್ ಬಳಿಕ ಸಿನಿಮಾ ಇಂಡಷ್ಟ್ರಿ ಪ್ರವೇಶಿಸಲು ನಿರ್ಧರಿಸಿದರು. ಯಾವುದೇ ಸಂದರ್ಭದಲ್ಲೂ 9 ರಿಂದ 5 ರವರೆಗಿನ ಕೆಲಸವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ವಿಕ್ಕಿ ಅರ್ಥಮಾಡಿಕೊಂಡರು. ಅವರು ನಟನೆಯಲ್ಲಿ ಕರಿಯರ್ ನಿರ್ಮಿಸಲು ನಿರ್ಧರಿಸಿದರು ಮತ್ತು ಆ ಗುರಿಯತ್ತ ಶ್ರಮಿಸಲು ಪ್ರಾರಂಭಿಸಿದರು. ಪ್ರಸಿದ್ಧ ಸ್ಟಂಟ್‌ಮ್ಯಾನ್ ಆಗಿದ್ದ ತನ್ನ ತಂದೆ ಶಾಮ್ ಕೌಶಲ್ ಅವರೊಂದಿಗೆ ವಿಕ್ಕಿ ಸಿನಿಮಾ ಸೆಟ್‌ಗಳಲ್ಲಿ ಸಮಯ ಕಳೆಯಲು ಪ್ರಾರಂಭಿಸಿದರು.
‘ಮಸಾನ್’ ಚಿತ್ರ ಹೇಗೆ ಸಿಕ್ಕಿತು?
ಒಂದು ಸಂದರ್ಶನದಲ್ಲಿ ವಿಕ್ಕಿ, ಪ್ರತಿದಿನ ಬೆಳಿಗ್ಗೆ ಆಡಿಷನ್‌ಗೆ ಹೋಗುತ್ತಿದ್ದೆ, ಆದರೆ ರಿಜೆಕ್ಟ್ ಆಗಿ ಮನೆಗೆ ಮರಳುತ್ತಿದ್ದೆ. ಈ ದಿನಚರಿ ಐದು ವರ್ಷಗಳ ಕಾಲ ಮುಂದುವರೆಯಿತು. ನಂತರ, 2015 ರಲ್ಲಿ, ನೀರಜ್ ಘಯ್ವಾನ್ ಅವರ *ಮಸಾನ್* ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು ಎಂದಿದ್ದಾರೆ. ಆದರೆ, ಆರಂಭದಲ್ಲಿ ರಾಜ್‌ಕುಮಾರ್ ರಾವ್ ಅವರನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಲಾಗಿತ್ತು; ಅವರು ರಿಜೆಕ್ಟ್ ಆದ ನಂತರವೇ ಚಿತ್ರ ವಿಕ್ಕಿ ಕೌಶಲ್ ಪಾಲಾಯಿತು
‘ಉರಿ’ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ
ಉರಿ ಚಿತ್ರದಲ್ಲಿನ ಅಭಿನಯಕ್ಕಾಗಿ ವಿಕ್ಕಿ ಕೌಶಲ್ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿತು. ಆ ಮೂಲಕ ವಿಕ್ಕಿ ಅದೃಷ್ಟವೇ ಬದಲಾಯಿತು. ಅಂದಿನಿಂದ, ವಿಕ್ಕಿ ಎಂದಿಗೂ ಹಿಂತಿರುಗಿ ನೋಡಲಿಲ್ಲ. 2019 ರಲ್ಲಿ, ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಅವರನ್ನು ಸೂಪರ್‌ಸ್ಟಾರ್ ಮಾಡಿತ್ತು. ಚಿತ್ರದಲ್ಲಿ ಮೇಜರ್ ವಿಪಿನ್ ರಾವತ್ ಪಾತ್ರವು ಇಡೀ ರಾಷ್ಟ್ರವನ್ನು ರೋಮಾಂಚನಗೊಳಿಸಿತು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಂಚಲನವನ್ನು ಸೃಷ್ಟಿಸಿತು ಮತ್ತು ವಿಕ್ಕಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ತಂದು ಕೊಟ್ಟಿತ್ತು.
ಪ್ರತಿಯೊಂದು ಪಾತ್ರಕ್ಕೂ ಕಠಿಣ ಪರಿಶ್ರಮ
ವಿಕ್ಕಿಗೆ ಒಂದೇ ಸಲ ಸ್ಟಾರ್ ಡಮ್ ಸಿಕ್ಕಿತು ಎಂದು ಬೀಗಿದವರು ಅಲ್ಲ. ಅವರು ಯಾವುದೇ ಪಾತ್ರ ಸಿಕ್ಕರೂ ಸಹ ಅದಕ್ಕೆ ಸರಿಯಾಗಿ ತಯಾರಿ ನಡೆಸುತ್ತಾರೆ. ಅದಕ್ಕಾಗಿ ಕಠಿಣ ಪರಿಶ್ರಮ ಪಡುತ್ತಾರೆ. ಅವರ ಚಲನಚಿತ್ರಗಳು ಸಾಮಾಜಿಕ ಸಮಸ್ಯೆಗಳು, ಇತಿಹಾಸ ಮತ್ತು ರಾಷ್ಟ್ರೀಯತೆಯ ಪರವಾಗಿಯೇ ಇರುತ್ತದೆ.
ಕತ್ರೀನಾ ಕೈಫ್ ಜೊತೆ ವಿವಾಹ
ವಿಕ್ಕಿ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, 2021 ರಲ್ಲಿ ಬಾಲಿವುಡ್‌ನ 'ಗ್ಲಾಮರ್ ಕ್ವೀನ್' ಕತ್ರಿನಾ ಕೈಫ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ವಿಹಾನ್ ಎಂಬ ಪುತ್ರ ಕೂಡ ಇದ್ದಾರೆ. ಇಂದು ಈ ಜೋಡಿ ಬಾಲಿವುಡ್ ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾಗಿದೆ.
ವಿಕ್ಕಿ ಕೌಶಲ್ ಅಭಿನಯದ ಸಿನಿಮಾಗಳು
ಮಣಿಕರ್ಣಿಕಾ, ಸರ್ದಾರ್ ಉಧಮ್, ಸಾಮ್ರಾಟ್ ಅಶೋಕ್, ಸಾಮ್ ಬಹದ್ದೂರ್ ಮತ್ತು ಇತ್ತೀಚೆಗೆ ಛಾವ ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ನಟನಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಸದ್ಯ ಯುವ ಜನತೆಯ ಫೇವರಿಟ್ ನಟನಾಗಿಯೂ ವಿಕ್ಕಿ ಕೌಶಲ್ ಹೊರಹೊಮ್ಮಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

