Katrina Kaif Wedding: ಮದುವೆ ಸುದ್ದಿ ಎಲ್ಲವೂ ಸುಳ್ಳಾ ? ಸತ್ಯ ತಿಳಿಸಿದ ವಿಕ್ಕಿ ಕುಟುಂಬಸ್ಥರು
Katrina Kaif Wedding: ಬಾಲಿವುಡ್ ಜೋಡಿಯ ಮದುವೆ ಸುದ್ದಿಗಳೆಲ್ಲಾ ಸುಳ್ಳಾ ? ವಿಕ್ಕಿ ಕೌಶಲ್ ಕುಟುಂಬಸ್ಥರಿಂದ ಸತ್ಯ ರಿವೀಲ್ ಆಗಿದ್ದೇನು ? ಮದುವೆ ಬಗ್ಗೆ ಲೇಟೆಸ್ಟ್ ಅಪ್ಡೇಟ್
ಕತ್ರಿನಾ ಕೈಫ್(Katrina Kaif) ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ ತಿಂಗಳಿನಲ್ಲಿ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಕೆಲ ದಿನಗಳಿಂದ ಕೇಳಿ ಬರುತ್ತಿವೆ. ಅವರ ಮದುವೆಯ ಸ್ಥಳ, ಮದುವೆಯ ಬಟ್ಟೆಗಳು ಕತ್ರಿನಾ ಅವರ ಮೆಹೆಂದಿಯ ವೆಚ್ಚದವರೆಗೆ ಎಲ್ಲವೂ ಚರ್ಚೆಯಾಗುತ್ತಿದೆ. ಆದರೆ ಮದುವೆಯೇ ನಡೆಯುತ್ತಿಲ್ವಾ ?
ಈ ಸೆಲೆಬ್ರಿಟಿ ವಿವಾಹದ ಅತಿಥಿ ಪಟ್ಟಿಯ ಸುತ್ತಲಿನ ವದಂತಿಗಳು ಸಾಕಷ್ಟು ಚರ್ಚೆಯಾಗುತ್ತಿದೆ. ವಿಕ್ಕಿ ಕೌಶಲ್ ಅವರ ಸೋದರ ಸಂಬಂಧಿ ಯಾವುದೇ ಮದುವೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಇದು ವಿಕ್ಕಿ-ಕತ್ರೀನಾ ಫ್ಯಾನ್ಸ್‌ಗೆ ಬಿಗ್ ಶಾಕ್.
ದೈನಿಕ್ ಭಾಸ್ಕರ್ ವರದಿ ಮಾಡಿರುವಂತೆ ನಟನ ಸಹೋದರಿ ವಿಕ್ಕಿ ಕೌಶಲ್ ಕತ್ರಿನಾ ಕೈಫ್ ಅವರನ್ನು ಮದುವೆಯಾಗುತ್ತಿಲ್ಲ ಎಂದು ಖಚಿತಪಡಿಸಿದ್ದಾರೆ. ಅವರು ತನ್ನ ಸಹೋದರನೊಂದಿಗೆ ಮಾತನಾಡಿದ್ದು ಈ ಬಗ್ಗೆ ಆಹ್ವಾನ ಪತ್ರಿಕೆಯೂ ಮಾಡಿಲ್ಲ ಎಂದು ತಿಳಿಸಿದ್ದಾರೆ.
ವಿಕ್ಟ್ರಿನಾ ಅವರ ಮದುವೆಯ ಬಗ್ಗೆ ಮಾಧ್ಯಮಗಳು ಹರಡಿದ ಎಲ್ಲಾ ವದಂತಿಗಳನ್ನು ಅವರು ಸುಳ್ಳು ಎಂದು ಹೇಳಿದ್ದಾರೆ. ಆದರೆ ಈ ವಿಚಾರದ ಬಗ್ಗೆ ಮತ್ತಷ್ಟು ಮಾಹಿತಿ ನೀಡಲು ಅವರು ನಿರಾಕರಿಸಿದ್ದರು.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರನ್ನು ವಧು ಮತ್ತು ವರನ ಅವತಾರದಲ್ಲಿ ನೋಡಲು ಕಾಯುತ್ತಿರುವ ಅವರ ಅಭಿಮಾನಿಗಳಿಗೆ ಈ ಸುದ್ದಿಯು ಆಘಾತಕಾರಿಯಾಗಿದೆ. ಕತ್ರೀನಾ ಮತ್ತು ವಿಕ್ಕಿ ತಮ್ಮ ಮದುವೆಯ ಸುದ್ದಿ ಮರೆಮಾಚಲು ಹೀಗೆ ಮಾಡಿದ್ದಾರೆಯೇ ಎಂಬ ಸಂದೇಹವೂ ವ್ಯಕ್ತವಾಗಿದೆ.
ಡಿಸೆಂಬರ್ 7 ರಿಂದ ಡಿಸೆಂಬರ್ 9 ರ ನಡುವೆ ರಾಜಸ್ಥಾನದ ಸವಾಯಿ ಮಾಧೋಪುರ್‌ನಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್‌ನಲ್ಲಿ ಅವರ ವಿವಾಹ ನಡೆಯಲಿದೆ ಎಂದು ವರದಿಯಾಗಿದೆ. ದಂಪತಿ ತಮ್ಮ ಮದುವೆಯಲ್ಲಿ 'ಫೋನ್‌ಗಳಿಗೆ ಅವಕಾಶವಿಲ್ಲ' ಎಂಬ ಕಟ್ಟುನಿಟ್ಟಿನ ನಿಯಮವನ್ನು ಹಾಕಿದ್ದಾರೆ ಎನ್ನಲಾಗಿದೆ.