MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • OTTಗೆ ಎಂಟ್ರಿ ಕೊಟ್ಟ Varun Dhawan; Priyanka Chopra ಜೊತೆ ನಟನೆ

OTTಗೆ ಎಂಟ್ರಿ ಕೊಟ್ಟ Varun Dhawan; Priyanka Chopra ಜೊತೆ ನಟನೆ

ಹಲವು ತಾರೆಯರು ಬಾಲಿವುಡ್‌ನಲ್ಲಿ ಸದ್ದು ಮಾಡಿದ ನಂತರ ಒಟಿಟಿಗೆ ಪದಾರ್ಪಣೆ ಮಾಡಿದ್ದಾರೆ. ಇದೀಗ ಈ ಪಟ್ಟಿಗೆ ಮತ್ತೊಬ್ಬ ಹೆಸರು ಸೇರ್ಪಡೆಯಾಗಲಿದೆ. ಆ ಹೆಸರು ವರುಣ್ ಧವನ್ (Varun Dhwan) ಶೀಘ್ರದಲ್ಲೇ ನಟ ದೊಡ್ಡ ವೆಬ್‌ ಸೀರಿಸ್‌ ಭಾಗವಾಗಲಿದ್ದಾರೆ. ಪ್ರಿಯಾಂಕಾ ಚೋಪ್ರಾ ಅಥವಾ ಸಮಂತಾ ರುತ್ ಪ್ರಭು ಅವರೊಂದಿಗೆ ವರಣ್ OTT ಡೆಬ್ಯೂ ಮಾಡಲಿದ್ದಾರೆ ಎನ್ನಲಾಗುತ್ತಿದೆ. 

1 Min read
Rashmi Rao
Published : Mar 30 2022, 05:02 PM IST| Updated : Mar 30 2022, 06:32 PM IST
Share this Photo Gallery
  • FB
  • TW
  • Linkdin
  • Whatsapp
19

ವರುಣ್ ಧವನ್ OTT ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರೇ ಸುಳಿವು ನೀಡಿದ್ದಾರೆ. ಶೀಘ್ರದಲ್ಲೇ ಒಟಿಟಿಯಲ್ಲಿ ದೊಡ್ಡ ಶೋನಲ್ಲಿ ಕೆಲಸ ಮಾಡಲಿದ್ದೇನೆ ಎಂದು ವರುಣ್ ಧವನ್ ಹೇಳಿದ್ದಾರೆ.

29

ಮಾಧ್ಯಮಗಳ ಜೊತೆಗಿನ ಸಂವಾದದಲ್ಲಿ ಡೇವಿಡ್ ಧವನ್ ಪುತ್ರ ವರುಣ್ ಧವನ್, 'ನನಗೆ ಒಟಿಟಿ ಪ್ಲಾಟ್‌ಫಾರ್ಮ್ ಇಷ್ಟ. ಈ ಕುರಿತು ಶೀಘ್ರದಲ್ಲೇ ಕೆಲವು ದೊಡ್ಡ ಮತ್ತು ಆಸಕ್ತಿದಾಯಕ ಕಾರ್ಯಕ್ರಮಗಳು ಬರಲಿವೆ. ನಾನು ಅದರ ಬಗ್ಗೆ ಉತ್ಸುಕನಾಗಿದ್ದೇನೆ' ಎಂದಿದ್ದಾರೆ.

39

ಮಾಧ್ಯಮ ವರದಿಗಳ ಪ್ರಕಾರ  ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ನಟಿಸಿರುವ ಆಕ್ಷನ್-ಪ್ಯಾಕ್ಡ್ ಅಮೇರಿಕನ್ ಸ್ಪೈ ಥ್ರಿಲ್ಲರ್ 'ಸಿಟಾಡೆಲ್' ನ ಭಾರತೀಯ ಸ್ಪಿನ್-ಆಫ್ ನಲ್ಲಿ ವರುಣ್ ಕಾಣಿಸಿಕೊಳ್ಳಬಹುದು. 

49

ಆದರೆ ವರುಣ್ ಅಭಿಮಾನಿಗಳು OTT ನಲ್ಲಿ ಅವರನ್ನು ನೋಡಲು ಕಾಯಬೇಕಾಗಿದೆ. ಏಕೆಂದರೆ ಈ ವರ್ಷ ಈ ಶೋ ಬಿಡುಗಡೆಯಾಗುವುದಿಲ್ಲ. ವರುಣ್ ಧವನ್ 'ಸಿಟಾಡೆಲ್'ನ ಭಾರತೀಯ ಸ್ಪಿನ್-ಆಫ್‌ನಲ್ಲಿ ನಟಿಸಲಿದ್ದಾರೆ.

59

ಒಟಿಟಿ ಶೋ ಬಗ್ಗೆ ವರುಣ್ ಯಾವುದೇ ವಿವರಗಳನ್ನು ಮಾಧ್ಯಮಗಳಿಗೆ ನೀಡಿಲ್ಲ. ಅದೇ ಸಮಯದಲ್ಲಿ, ಈ ಸರಣಿಯಲ್ಲಿ, ದಕ್ಷಿಣ ಚಲನಚಿತ್ರೋದ್ಯಮದ ಖ್ಯಾತ ನಟಿ ಸಮಂತಾ ರುತ್ ಪ್ರಭು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

69

ಈ ವೆಬ್ ಸೀರಿಸ್ ಗಾಗಿ ವರುಣ್ ಧವನ್ ಶ್ರಮಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಮಾರ್ಷಲ್ ಆರ್ಟ್ಸ್ ನಲ್ಲಿ ವಿಶೇಷ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಈ ಸರಣಿಯಲ್ಲಿ ನಟ ಆಕ್ಷನ್ ಮಾಡುವುದನ್ನು ಕಾಣಬಹುದು.  

79

ಇತ್ತೀಚೆಗೆ ವರುಣ್ ಧವನ್ ರಶ್ಮಿಕಾ ಮಂದಣ್ಣ 'ಅರೇಬಿಕ್ ಕುತ್ತು ಚಾಲೆಂಜ್' ಅನ್ನು ಪೂರ್ಣಗೊಳಿಸಿದರು. ಇವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ. ಮುಂದಿನ ದಿನಗಳಲ್ಲಿ ಇಬ್ಬರೂ ಸಿನಿಮಾದ ಭಾಗವಾಗಲಿದ್ದಾರೆ ಎಂಬ ಊಹಾಪೋಹಗಳಿವೆ.

89

ಮತ್ತೊಂದೆಡೆ, ನಾವು ವರುಣ್ ಧವನ್ ಅವರ ಕೆಲಸದ  ಬಗ್ಗೆ ಹೇಳುವುದಾದರೆ ಮುಂಬರುವ ದಿನಗಳಲ್ಲಿ ಅವರ ಎರಡು ಚಿತ್ರಗಳು ಬಿಡುಗಡೆಯಾಗಲಿವೆ. ಅವರು 'ಜಗ್ ಜಗ್ ಜಿಯೋ' ಮತ್ತು 'ಭೇಲಿಯಾ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 

99

ಕೃತಿ ಸನನ್ 'ಭೇಲಿಯಾ' ಚಿತ್ರದಲ್ಲಿ ವರುಣ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ನೀತು ಕಪೂರ್, ಕಿಯಾರಾ ಅಡ್ವಾಣಿ ಮತ್ತು ಅನಿಲ್ ಕಪೂರ್ ಅವರೊಂದಿಗೆ 'ಜಗ್ ಜಗ್ ಜಿಯೋ' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

About the Author

RR
Rashmi Rao
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved