MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Valentine's Day 2022- ವಿದೇಶಿಯರ ಮದುವೆಯಾದ ನಟಿಯರು!

Valentine's Day 2022- ವಿದೇಶಿಯರ ಮದುವೆಯಾದ ನಟಿಯರು!

Valentine's Day 2022 ಅನ್ನು ಫೆಬ್ರವರಿ 14 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಬಾಲಿವುಡ್‌ನಿಂದ ಟಿವಿ ಸೆಲೆಬ್ರಿಟಿಗಳವರೆಗೆ, ಈ ದಿನವನ್ನು ತಮ್ಮದೇ ಆದ ಶೈಲಿಯಲ್ಲಿ ಆಚರಿಸುತ್ತಾರೆ. ಮನೋರಂಜನಾ ಉದ್ಯಮಕ್ಕೆ ಸಂಬಂಧಿಸಿದ ಅನೇಕ ನಾಯಕಿಯರು ತಮ್ಮ ಹೃದಯವನ್ನು ವಿದೇಶಿಯರಿಗೆ ನೀಡಿದ್ದಾರೆ. ಮೊದಲು ಜೋಡಿಗಳು ಪ್ರೀತಿಸಿ ನಂತರ ಮದುವೆಯಾದರು. ಇವರಲ್ಲಿ ಕೆಲವರು ಮದುವೆಯ ನಂತರ ವಿದೇಶಕ್ಕೆ ಹೋಗಿ ನೆಲೆಸಿದ್ದರೆ, ಕೆಲವರು ದೇಶಕ್ಕೆ ಮರಳಿದವರೂ ಇದ್ದಾರೆ. ಪ್ರೇಮಿಗಳ ದಿನದ ಸಮಯದಲ್ಲಿ, ವಿದೇಶಿಯರಿಗೆ ಮನಸೋತ ಬಾಲಿವುಡ್‌ (Bollywood) ಚೆಲುವೆಯರ ಬಗ್ಗೆ ಮಾಹಿತಿ ಇಲ್ಲಿದೆ. 

2 Min read
Author : Suvarna News | Asianet News
Published : Feb 14 2022, 07:23 PM IST
Share this Photo Gallery
  • FB
  • TW
  • Linkdin
  • Whatsapp
111

ಯಾರಿಗೂ ತಿಳಿಸದೆ ಮದುವೆಯಾದ ಹಲವು ಬಾಲಿವುಡ್‌ ನಟಿಯರಿದ್ದಾರೆ. ಅಷ್ಟೇ ಅಲ್ಲ ವಿದೇಶಿಯರ ಜೊತೆಗಿನ ಸಂಬಂಧದ ವಿಷಯವನ್ನು ಎಲ್ಲರಿಂದ ಮುಚ್ಚಿಟ್ಟಿದ್ದರು. ನಂತರ ಇವರು ಇದ್ದಕ್ಕಿದ್ದಂತೆ ಮದುವೆಯಾಗಿ ಎಲ್ಲರನ್ನು ಅಚ್ಚರಿಗೊಳಿಸಿದರು

211

ಮಾಧುರಿ ದೀಕ್ಷಿತ್:
ಮಾಧುರಿ ದೀಕ್ಷಿತ್ 1999 ರಲ್ಲಿ ಯುಎಸ್ (US) ನಲ್ಲಿರುವ ಹಾರ್ಟ್‌ ಸರ್ಜನ್‌ ಕ ಡಾ. ಶ್ರೀರಾಮ್ ನೆನೆ ಅವರನ್ನು ವಿವಾಹವಾದರು. ಮದುವೆಯ ನಂತರ ಮಾಧುರಿ ಅಮೆರಿಕಕ್ಕೆ ಹೋದರು. ಹಾಗಂಥ ಮುಂಬೈ ನಂಟನ್ನೇನೂ ಬಿಟ್ಟಿಲ್ಲ. ಕೆಲವು ಚಿತ್ರಗಳಿಯೂ ನಟಿಸಿರುವ ಮಾಧುರಿ, ತಮ್ಮ ಡ್ಯಾನ್ಸ್ ಕ್ಲಾಸನ್ನೂ ಮುಂದುವರಿಸಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿವೆ. ನೆನೆ ಮಾಧುರಿ ಅವರನ್ನು ಭೇಟಿಯಾದಾಗ ಆಕೆ ಬಾಲಿವುಡ್ ಸೂಪರ್‌ಸ್ಟಾರ್ ಎಂದೇ ಗೊತ್ತಿರಲಿಲ್ಲವಂತೆ.
 

311

ಶಿಲ್ಪಾ ಶೆಟ್ಟಿ:
ಶಿಲ್ಪಾ ಶೆಟ್ಟಿ ಲಂಡನ್ ಮೂಲದ ಉದ್ಯಮಿ ರಾಜ್ ಕುಂದ್ರಾ ಅವರನ್ನು 2009 ರಲ್ಲಿ ವಿವಾಹವಾದರು. ಮದುವೆಯ ನಂತರ, ರಾಜ್ ತನ್ನ ಹೆಂಡತಿಯೊಂದಿಗೆ ಮುಂಬೈನಲ್ಲಿ ನೆಲೆಸಿದರು. ದಂಪತಿಗೆ 2 ಮಕ್ಕಳಿವೆ

411

ಪ್ರೀತಿ ಜಿಂಟಾ:
ಪ್ರೀತಿ ಜಿಂಟಾ ಹಿಂದೆ ನೆಸ್ ವಾಡಿಯಾ ಅವರೊಂದಿಗೆ ಸಂಬಂಧ ಹೊಂದಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಇಬ್ಬರೂ ಬೇರ್ಪಟ್ಟರು. ಇದಾದ ನಂತರ ಪ್ರೀತಿ ಅಮೆರಿಕದ ಉದ್ಯಮಿ ಜೀನ್ ಗುಡೆನಾಫ್ ಅವರನ್ನು 2016 ರಲ್ಲಿ ರಹಸ್ಯವಾಗಿ ವಿವಾಹವಾದರು. ಮದುವೆಯಾದ 6 ತಿಂಗಳ ನಂತರ ಅವರು ಇದನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಪ್ರೀತಿ-ಜೀನ್ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ಪೋಷಕರಾಗಿದ್ದಾರೆ.

511

ಪ್ರಿಯಾಂಕಾ ಚೋಪ್ರಾ:
ಪ್ರಿಯಾಂಕಾ ಚೋಪ್ರಾರ ಹೃದಯ ತಮ್ಮಗಿಂತ ಕಿರಿಯ ಹಾಲಿವುಡ್ ಗಾಯಕ ನಿಕ್ ಜೋನಾಸ್‌ಗೆ ಸೋತಿತು. ಇಬ್ಬರೂ 2018 ರಲ್ಲಿ ವಿವಾಹವಾದರು. ಆದರೆ, ಪ್ರಿಯಾಂಕಾ ತನ್ನ ಅಫೇರ್ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ಕೆಲ ದಿನಗಳ ಹಿಂದೆ ಬಾಡಿಗೆ ತಾಯ್ತನದ ಮೂಲಕ ದಂಪತಿ ಮಗಳ ಪೋಷಕರಾಗಿದ್ದರು.

611

ಶ್ರಿಯಾ ಸರನ್:
ಸೌತ್ ನಟಿ ಶ್ರಿಯಾ ಸರನ್ ಅವರು ಟೆನಿಸ್ ಆಟಗಾರ ಆಂಡ್ರೇ ಕೊಶೆವ್ ಅವರನ್ನು ವಿವಾಹವಾಗಿದ್ದಾರೆ. ಇಬ್ಬರೂ ಮಾಲ್ಡೀವ್ಸ್‌ನಲ್ಲಿ ಭೇಟಿಯಾದರು ಮತ್ತು ನಂತರ  ಪ್ರೀತಿಗೆ ತಿರುಗಿತು. 2018 ರಲ್ಲಿ, ಶ್ರಿಯಾ ಮತ್ತು ಆಂಡ್ರೇ ಉದಯಪುರದಲ್ಲಿ ವಿವಾಹವಾದರು. ದಂಪತಿಗೆ ಒಬ್ಬ ಮಗಳಿದ್ದಾಳೆ.

711

ರಾಧಿಕಾ ಆಪ್ಟೆ :
ನಟಿ ರಾಧಿಕಾ ಆಪ್ಟೆ 2012 ರಲ್ಲಿ  ಸಂಗೀತಗಾರ ಬೆನೆಡಿಕ್ಟ್ ಟೇಲರ್ ಅವರನ್ನು ರಹಸ್ಯವಾಗಿ ವಿವಾಹವಾದರು. ಇವರ ಮದುವೆಯ ಆರತಕ್ಷತೆ 2013ರಲ್ಲಿ ನೆರವೇರಿತು.

 

811

ಸೆಲಿನಾ ಜೇಟ್ಲಿ:
ಸೆಲಿನಾ ಜೇಟ್ಲಿ 2011 ರಲ್ಲಿ ಆಸ್ಟ್ರೇಲಿಯಾದ ಹೋಟೆಲ್ ಉದ್ಯಮಿ ಪೀಟರ್ ಹಾಗ್ ಅವರನ್ನು ವಿವಾಹವಾದರು. ಪೀಟರ್ ಅವರನ್ನು ಮದುವೆಯಾದ ನಂತರ, ಸೆಲಿನಾ ಬಾಲಿವುಡ್‌ನಿಂದ ದೂರವಾಗಿದ್ದರು. ದಂಪತಿಗೆ 3 ಮಕ್ಕಳಿವೆ,

911

ಲಿಸಾ ರೇ:
ಲಿಸಾ ರೇ 2012 ರಲ್ಲಿ ಕ್ಯಾಲಿಫೋರ್ನಿಯಾ ಮೂಲದ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್  (Management Consultant) ಜೇಸನ್ ಡೆಹ್ನಿ ಅವರನ್ನು ವಿವಾಹವಾದರು. ಲಿಸಾ ಕೆನಡಾದಲ್ಲಿ  ಮೊದಲು ಜೇಸನ್ ಅವರನ್ನು ಭೇಟಿಯಾದರು. ದಂಪತಿಗೆ ಅವಳಿ ಹೆಣ್ಣು ಮಕ್ಕಳವೆ.

1011

ಮಧು ಸಪ್ರೆ:
ಸೂಪರ್ ಮಾಡೆಲ್ ಮಧು ಸಪ್ರೆ  2001 ರಲ್ಲಿ ಇಟಾಲಿಯನ್ (Italian) ಉದ್ಯಮಿ ಗಿಯಾನ್ ಮಾರಿಯಾ ಅವರನ್ನು ವಿವಾಹವಾದರು. ಮದುವೆಯಾದ ನಂತರ ಮಧು ವಿದೇಶದಲ್ಲಿ ನೆಲೆಸಿದ್ದಾರೆ. ಈ ದಂಪತಿಗೆ ಒಬ್ಬ ಮಗಳಿದ್ದಾಳೆ.


 

1111

ಆಶ್ಕಾ ಗೊರಾಡಿಯಾ :
ಟಿವಿ ನಟಿ ಆಶ್ಕಾ ಗೊರಾಡಿಯಾ ಅವರು ಡಿಸೆಂಬರ್ 2017 ರಲ್ಲಿ ಅಮೆರಿಕನ್ ಗೆಳೆಯ ಬ್ರೆಂಟ್ ಗೋಬಲ್ ಅವರನ್ನು ವಿವಾಹವಾದರು. ಬ್ರೆಂಟ್‌ನೊಂದಿಗಿನ ಆಶ್ಕಾ ಅವರ ಮೊದಲ ಭೇಟಿಯು ಯುಎಸ್‌ಎಯ ಲಾಸ್ ವೇಗಾಸ್‌ನಲ್ಲಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ವಿದೇಶಿಯರು
ಬಾಲಿವುಡ್
ಮಾಧುರಿ ದೀಕ್ಷಿತ್
ಪ್ರಿಯಾಂಕಾ ಚೋಪ್ರಾ

Latest Videos
Recommended Stories
Recommended image1
Viral Pics: ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ಭಾವುಕಳಾಗಿ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ!
Recommended image2
ಮುಂಬೈನಲ್ಲಿ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮೊದಲ ಬೀಚ್ ಕ್ಲಬ್ ಶುರು; ದೇವಲೋಕವೋ ಪ್ರೇಮಲೋಕವೋ ಎಂಬಂತಿದೆ!
Recommended image3
ಸಂಭ್ರಮದಿಂದ ಪತಿ ಪರಿಚಯಿಸುತ್ತಲೇ ಒಂದೇ ಪೋಸ್ಟ್‌ನಲ್ಲಿ ಟೀಕೆಗೂ ಉತ್ರರಿಸಿದ್ರಾ ರಶ್ಮಿಕಾ ಮಂದಣ್ಣ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved