- Home
- Entertainment
- Cine World
- ನನ್ನ ಕಾನ್ಸ್ ಲುಕ್ ಮೆಚ್ಚಿದ ಲಿಯೊರ್ನಾಡೊ ಡಿಕಾಪ್ರಿಯೊ: ಸುಳ್ಳೇಳಿದ ಊರ್ವಶಿಗೆ ನೆಟ್ಟಿಗರಿಂದ ಕ್ಲಾಸ್
ನನ್ನ ಕಾನ್ಸ್ ಲುಕ್ ಮೆಚ್ಚಿದ ಲಿಯೊರ್ನಾಡೊ ಡಿಕಾಪ್ರಿಯೊ: ಸುಳ್ಳೇಳಿದ ಊರ್ವಶಿಗೆ ನೆಟ್ಟಿಗರಿಂದ ಕ್ಲಾಸ್
ಸಿಂಪಲ್ ವೈಟ್ ಗೌನ್ ಧರಿಸಿ ಹಾಲಿವುಡ್ ನಟನನ್ನು ಮೆಚ್ಚಿಸಿದ ನಟಿ ಊರ್ವಶಿ. ಇಷ್ಟೊಂದು ಸುಳ್ಳ ಹೇಳಬೇಡಿ ಎಂದ ನೆಟ್ಟಿಗರು..

ಐರಾವತ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿದ್ದರು.
ಒಂದು ದಿನ ಬ್ಲ್ಯಾಕ್ ಗೌನ್ (Black Gown) ಮತ್ತೊಂದು ದಿನ ವೈಟ್ ಗೌನ್‌ನಲ್ಲಿ (White Gown) ಬಾತು ಕೋಳಿ, ಹಂಸ ಎಂದೆಲ್ಲಾ ಟ್ರೋಲ್ ಆಗಿದ್ದರು.
'ಹಾಲಿವುಡ್ ನಟ ಲಿಯೊರ್ನಾಡೊ ಡಿಕಾಪ್ರಿಯೊ ನನ್ನ ಕೇನ್ಸ್ ಲುಕ್ ಮೆಚ್ಚಿದಾರೆ. ಅವರ ಮಾತುಗಳನ್ನು ಕೇಳಿ ನಾನು ಭಾವುಕಳಾದೆ ಆದರೂ ತುಂಬಾನೇ ಬ್ಲಷ್ ಮಾಡುತ್ತಿದ್ದೆ' ಎಂದು ಊರ್ವಶಿ IANSನಲ್ಲಿ ಹೇಳಿದ್ದಾರೆ.
'ನೀನು ಪ್ರತಿಭಾನ್ವಿತ ನಟಿ ಎಂದು ನನಗೆ ಹೇಳಿದ್ದರು. ಇದೆಲ್ಲಾ ಸತ್ಯನಾ ಎಂದು ನನ್ನನ್ನು ನಾನು ಗಿಂಟುಕೊಂಡೆ. ಕಾನ್ಸ್ ದಿನ ರಾತ್ರಿ ನಡೆದ ಘಟನೆ ಇದು'
'ಯಂಗ್ ಕಲಾವಿದರು ಚಿತ್ರರಂಗದಲ್ಲಿ ಮಿಂಚಬೇಕು ಎಂದು ಅವರಿಗೆ ಎಷ್ಟೆಲ್ಲಾ ಸಾಥ್ ಕೊಡುತ್ತಾರೆಂದು ನನಗೆ ಇವತ್ತು ತಿಳಿಯಿತ್ತು' ಎಂದು ಊರ್ವಶಿ ಹೇಳಿದ್ದಾರೆ.
ಲಿಯೊರ್ನಾಡೊ ಕಾನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ, ಊರ್ವಶಿ ನೋಡಿದರೆ ಲುಕ್ ಮೆಚ್ಚಿದ್ದರು ಎನ್ನುತ್ತಿದ್ದಾರೆ. ಯಾಕಿಷ್ಟೊಂದು ಸುಳ್ಳು ಹೇಳಬೇಕು? ಎಂದು ನೆಟ್ಟಿಗರು ಬೈಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.