Uday Chopra: ಸಿನಿಮಾಗಳಿಂದ ದೂರವಿರೋ ಉದಯ್ ಚೋಪ್ರಾ ಈಗೇನ್ ಮಾಡ್ತಿದ್ದಾರೆ ?
ರಾಣಿ ಮುಖರ್ಜಿ (Rani Mukerji) ಪತಿಯ ಸಹೋದರ ಮತ್ತು ಬಾಲಿವುಡ್ ನಟ ಉದಯ್ ಚೋಪ್ರಾ (Uday Chopra) 49 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಜನವರಿ 5, 1973 ರಂದ ಮುಂಬೈನಲ್ಲಿ ಜನಿಸಿದ ಉದಯ್ ಚೋಪ್ರಾ ಸೂಪರ್‌ಹಿಟ್ ಚಲನಚಿತ್ರ ಮೊಹಬ್ಬತೇನ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ, ಈ ಚಿತ್ರದ ನಂತರವೂ ಉದಯ್ ಚೋಪ್ರಾ ಅವರ ವೃತ್ತಿಜೀವನ ಹೆಚ್ಚು ಹೆಸರು ಮಾಡಲಿಲ್ಲ. 'ಮೇರೆ ಯಾರ್ ಕಿ ಶಾದಿ ಹೈ' ಮತ್ತು 'ಧೂಮ್' ಹೊರತುಪಡಿಸಿ, ಉದಯ್ ಚೋಪ್ರಾ ಅವರ ಖಾತೆಯಲ್ಲಿ ಯಾವುದೇ ಹಿಟ್‌ಗಳಿಲ್ಲ. ಈ ಚಿತ್ರಗಳಲ್ಲೂ ಉದಯ್ ಚೋಪ್ರಾ ಸೈಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು, ನಾಯಕನಾಗಿ ಅಲ್ಲ. ಉದಯ್ ಚೋಪ್ರಾ ತಮ್ಮ ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಗೆ ಹೆಸರುವಾಸಿಯಾಗಿದ್ದಾರೆ. ಒಮ್ಮೆ ಉದಯ್ ಚೋಪ್ರಾ ಆತ್ಮಹತ್ಯೆಯ ಬಗ್ಗೆ ಮಾತನಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಉದಯ್ ಚೋಪ್ರಾ ಖಿನ್ನತೆಗೆ ಒಳಗಾಗಿದ್ದರು.
ಮೂರು ವರ್ಷಗಳ ಹಿಂದೆ, ಉದಯ್ ಚೋಪ್ರಾ ಅವರು ಖಿನ್ನತೆಗೆ ಒಳಗಾಗಿದ್ದರು. ಅವರು ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಬರೆದಿದ್ದಾರೆ. ಇದರಲ್ಲಿ, ಉದಯ್ ಚೋಪ್ರಾ ಅವರು ತನಗೆ ಆರೋಗ್ಯ ಸರಿಯಿಲ್ಲ ಮತ್ತು ನಿರಂತರವಾಗಿ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಇನ್ನೂ ಯಶಸ್ವಿಯಾಗುತ್ತಿಲ್ಲ ಎಂದು ಹೇಳಿದ್ದರು.
ಉದಯ್ ಚೋಪ್ರಾ ತಮ್ಮ ಟ್ವಿಟರ್ ಖಾತೆಯನ್ನು ಕೆಲವು ಗಂಟೆಗಳ ಕಾಲ ಡಿ-ಆಕ್ಟಿವೇಟ್ ಮಾಡಿದ್ದರು ಇದರ ನಂತರ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಇದು ಉತ್ತಮ ಆಯ್ಕೆಯಾಗಿದೆ ಎಂದು ತೋರುತ್ತದೆ ಮತ್ತು ಶೀಘ್ರದಲ್ಲೇ ಅವರು ಅದನ್ನು ಶಾಶ್ವತವಾಗಿ ಮಾಡಬಹುದು ಎಂದು ಸಹ ಟ್ವೀಟ್ ಮಾಡಿದ್ದರು.
Uday Chopra
'ನಾನು ಇತ್ತೀಚೆಗೆ ಕೆಲವು ಟ್ವೀಟ್‌ಗಳನ್ನು ಮಾಡಿದ್ದೇನೆ, ಇದರಿಂದಾಗಿ ಜನರು ತುಂಬಾ ಗಾಬರಿ ಆಗಿದ್ದರು. ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಇದು ಕೇವಲ ಜೋಕ್ ಆಗಿತ್ತು, ಅದನ್ನು ತಪ್ಪಾಗಿ ಅರ್ಥೈಸಲಾಗಿದೆ. ಈಗಲೂ ನನ್ನ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು' ಎಂದು ಉದಯ್ ಚೋಪ್ರಾ ನಂತರ ಟ್ವೀಟ್‌ಗಳಿಗೆ ಸ್ಪಷ್ಟನೆ ನೀಡಿ ಹೊಸ ಟ್ವೀಟ್ ಮಾಡಿದ್ದರು.
2006 ರಲ್ಲಿ 'ಧೂಮ್ 2' ಚಿತ್ರದಲ್ಲಿ ಕಾಣಿಸಿಕೊಂಡ ನಂತರ, ಸುಮಾರು 7 ವರ್ಷಗಳ ಕಾಲ ಅವರ ಯಾವುದೇ ಸಿನಿಮಾ ಬಿಡುಗಡೆಯಾಗಲಿಲ್ಲ. ಇದರಿಂದಾಗಿ ಉದಯ್ ಚೋಪ್ರಾ ತೀವ್ರ ಖಿನ್ನತೆಗೆ ಒಳಗಾಗಿದ್ದರು.
ಆದಾಗ್ಯೂ, 2013 ರಲ್ಲಿ, ಅವರು ಧೂಮ್ 3 ಸಿನಿಮಾದಲ್ಲಿ ಕಾಣಿಸಿಕೊಂಡರು. ಧೂಮ್ 3 ನಂತರ ಉದಯ್ ಚೋಪ್ರಾ ಅವರ ಯಾವುದೇ ಫಿಲ್ಮ್ ಇದುವರೆಗೂ ಬಂದಿಲ್ಲ. ಉದಯ್ ಚೋಪ್ರಾ ಖಿನ್ನತೆಗೆ ಒಳಗಾಗಿದ್ದರು.
ಉದಯ್ ಚೋಪ್ರಾ ನಟಿ ನರ್ಗೀಸ್ ಫಕ್ರಿ (Nargis Fakhri) ಜೊತೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದರು. ಆದರೆ ಅವರ ಸಂಬಂಧವು ಹದಗೆಡುತ್ತಲೇ ಇತ್ತು. ಮತ್ತು ನಂತರ ಈ ಜೋಡಿ ಬೇರ್ಪಟ್ಟರು.
ನರ್ಗೀಸ್ ಮತ್ತು ಉದಯ್ ಮದುವೆಗೆ ಉದಯ್ ತಾಯಿ ಪಮೇಲಾ ಚೋಪ್ರಾ ಸಹ ಒಪ್ಪಿಗೆ ಸೂಚಿಸಿದ್ದರು. ನರ್ಗೀಸ್ ಫಕ್ರಿ ಶೀಘ್ರದಲ್ಲೇ ಉದಯ್ ಜೊತೆಗಿನ ಮದುವೆಯ ದಿನಾಂಕವನ್ನು ಬಹಿರಂಗಪಡಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು.
ಆದರೆ ಉದಯ್ ಇದ್ದಕ್ಕಿದ್ದಂತೆ ಸಂಬಂಧದಿಂದ ಒಂದು ಹೆಜ್ಜೆ ಹಿಂದೆ ಸರಿದರು. ಇದರಿಂದ ನರ್ಗೀಸ್ ತೀವ್ರ ಆಘಾತಕ್ಕೊಳಗಾಗಿದ್ದರು ಮತ್ತು ಈ ಕಾರಣದಿಂದ ಅವರೂ ಮುಂಬೈ ಬಿಟ್ಟು ವಿದೇಶಕ್ಕೆ ಸಹ ಹೋಗಿದ್ದರು.
ನಂತರ ಉದಯ್ ನರ್ಗೀಸ್ ನನ್ನು ಮದುವೆಯಾಗಲು ಹತಾಶನಾಗಿದ್ದ ಕಾಲವೊಂದಿತ್ತು. ಅವರು ನರ್ಗೀಸ್ ಅವರನ್ನು ಮದುವೆಗೆ ಸಹ ಪ್ರಪೋಸ್ ಮಾಡಿದ್ದರು. ಆದರೆ ಆಗ ನರ್ಗಿಸ್ ತನ್ನ ವೃತ್ತಿಜೀವನದತ್ತ ಗಮನ ಹರಿಸಲು ಬಯಸಿದ್ದರು.
ಉದಯ್ ಚೋಪ್ರಾ 1991 ರ ಲಮ್ಹೆ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕೆಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ನಂತರ, ಉದಯ್ ತಮ್ಮ ನಟನಾ ವೃತ್ತಿಯನ್ನು 'ಮೊಹಬ್ಬತೇನ್' (2000) ಸಿನಿಮಾದ ಮೂಲಕ ಪ್ರಾರಂಭಿಸಿದರು.
Uday Chopra
ಅವರು 'ಮೇರೆ ಯಾರ್ ಕಿ ಶಾದಿ ಹೈ' (2002), 'ಧೂಮ್' (2004), 'ನೀಲ್ & ನಿಕ್ಕಿ' (2005), 'ಧೂಮ್ 2' (2006), 'ಧೂಮ್ 3' (2013) ಸೇರಿದಂತೆ ಕೆಲವು ಫಿಲ್ಮಂಗಳಲ್ಲಿ ಕೆಲಸ ಮಾಡಿದ್ದಾರೆ.