MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Conversion: ಪ್ರಭುದೇವ್‌ಗಾಗಿ ಧರ್ಮ ಬದಲಾಯಿಸಿದ ನಯನತಾರಾ!

Conversion: ಪ್ರಭುದೇವ್‌ಗಾಗಿ ಧರ್ಮ ಬದಲಾಯಿಸಿದ ನಯನತಾರಾ!

ದಕ್ಷಿಣದ ಹಾಟ್ ನಟಿಯರಲ್ಲಿ ಒಬ್ಬರಾದ ನಯನತಾರಾ (Nayanthara)ಅವರಿಗೆ 37 ವರ್ಷಗಳ ಸಂಭ್ರಮ. ನವೆಂಬರ್ 18, 1984 ರಂದು ಬೆಂಗಳೂರಿನಲ್ಲಿ ಜನಿಸಿದ ನಯನತಾರಾ, ತಮ್ಮ ವೃತ್ತಿ ಜೀವನಕ್ಕಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದಿಂದ ಸುದ್ದಿಯಾಗುವುದೇ ಹೆಚ್ಚು.  ಅಂದಹಾಗೆ, ನಯನತಾರಾ ಎರಡು ಕಾರಣಗಳಿಗಾಗಿ ಬಹಳಷ್ಟು ಸುದ್ದಿ ಮಾಡಿದ್ದಾರೆ. ಮೊದಲ ಕಾರಣ ದಕ್ಷಿಣದ ಸೂಪರ್‌ಸ್ಟಾರ್ ಮತ್ತು ಡ್ಯಾನ್ಸರ್ ಪ್ರಭುದೇವ ಅವರನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು ಮತ್ತು ಎರಡನೆಯದು ಶಾರುಖ್ ಖಾನ್ ಅವರ 'ಚೆನ್ನೈ ಎಕ್ಸ್‌ಪ್ರೆಸ್' ಚಿತ್ರದಲ್ಲಿ ಐಟಂ ಸಾಂಗ್ ಮಾಡಲು ನಿರಾಕರಿಸಿದ್ದಕ್ಕಾಗಿ. 

2 Min read
Suvarna News | Asianet News
Published : Nov 20 2021, 02:22 PM IST
Share this Photo Gallery
  • FB
  • TW
  • Linkdin
  • Whatsapp
19

ದಕ್ಷಿಣದ ಲೇಡಿ ಸೂಪರ್‌ ಸ್ಟಾರ್‌  ನಯನತಾರಾ, ಪ್ರಭುದೇವ ಅವರನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ನಯನತಾರಾ ಮೂಲತಃ ಕ್ರಿಶ್ಚಿಯನ್ ಆಗಿದ್ದು, ಬೆಂಗಳೂರಿನಲ್ಲಿ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದವರು. ಅವರ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್.

29
nayanthara

nayanthara

ನಯನತಾರಾ ತಂದೆ ಕುರಿಯನ್ ಕೋಡಿಯಾಟ್ಟು ವಾಯುಸೇನೆಯಲ್ಲಿದ್ದರೆ, ತಾಯಿ ಓಮನಾ ಕುರಿಯನ್ ಗೃಹಿಣಿ. ವಾಯುಸೇನೆಯಲ್ಲಿದ್ದ ಅವರು ಅನೇಕ ನಗರಗಳಲ್ಲಿ ವಾಸಿಸುತ್ತಿದ್ದರು, ಇದರಿಂದಾಗಿ ನಯನತಾರಾ ದೇಶದ ಅನೇಕ ನಗರಗಳಾದ ಚೆನ್ನೈ, ಜಾಮ್‌ನಗರ, ತಿರುವಾಲ ಮತ್ತು ದೆಹಲಿಯಲ್ಲಿ ಅಧ್ಯಯನ ಮಾಡಿದ್ದಾರೆ.


 

39

ತಮಿಳಿನ 'ವಿಲ್ಲು' ಚಿತ್ರದಲ್ಲಿ ಪ್ರಭುದೇವ ನಯನತಾರಾ ಅವರಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಇದರ ಚಿತ್ರೀಕರಣದ ವೇಳೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ನಯನತಾರಾ 2008 ರಲ್ಲಿ ಪ್ರಭುದೇವ ಜೊತೆ ಡೇಟಿಂಗ್ ಪ್ರಾರಂಭಿಸಿದರು.

49

ಎರಡು ವರ್ಷಗಳ ನಂತರ, 2010 ರಲ್ಲಿ, ಪ್ರಭುದೇವ ನಯನತಾರಾ ಜೊತೆ ಲಿವ್ ಇನ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಪ್ರಭುದೇವ ಅವರ ಪತ್ನಿ ರಮ್ಲತಾ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.

59

ನಯನತಾರಾ ಅವರನ್ನು ಮದುವೆಯಾದರೆ, ಉಪವಾಸ ಸತ್ಯಾಗ್ರಹ ಮಾಡುವುದಾಗಿ ಪ್ರಭುದೇವ ಪತ್ನಿ ರಮಲತಾ ಬೆದರಿಕೆ ಸಹ ಹಾಕಿದ್ದರು. ಅವರ ಬೆಂಬಲವಾಗಿ, ಅನೇಕ ಮಹಿಳಾ ಸಂಘಟನೆಗಳು ನಯನತಾರಾ ಅವರ ಪ್ರತಿಕೃತಿಯನ್ನು ದಹಿಸಿ, ನಟಿ ತಮಿಳು ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
 


 

69

ನಯನತಾರಾ ಜೊತೆಗಿನ ಸಂಬಂಧದ ಕಾರಣ  ಪ್ರಭುದೇವ ಅವರು ತಮ್ಮ ಪತ್ನಿ ರಮಲತಾರಿಂದ ಬೇರೆಯಾಗಲು ನಿರ್ಧರಿಸಿದ್ದರು.16 ವರ್ಷಗಳ ದಾಂಪತ್ಯದ ಜೀವನವನ್ನು ಜುಲೈ 2011 ವಿಚ್ಛೇದನ ನೀಡಿ ಕೊನೆಗೊಳಿಸಿದರು. ಆದರೆ, 2012 ರಲ್ಲಿ ಒಂದು ವರ್ಷದ ನಂತರ, ನಯನತಾರಾ ಅವರು ಪ್ರಭುದೇವ ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಕೊನೆಗೊಳಿಸಿರುವುದಾಗಿ ಹೇಳಿ ಶಾಕ್ ಕೊಟ್ಟರು.

79

ನಯನತಾರಾ ಕಾರಣಕ್ಕೆ ಪತ್ನಿಗೆ ವಿಚ್ಛೇದನ ನೀಡಿ ಪ್ರಭುದೇವ ಭಾರಿ ಮೊತ್ತ ತೆತ್ತಬೇಕಾಯಿತು. ಪತ್ನಿಗೆ ಕೋಟಿ ರೂ.  ನೀಡಿದ್ದಲ್ಲದೆ, ಆಸ್ತಿಯನ್ನೂ ನೀಡಬೇಕಿತ್ತು. ಇದರ ಬೆಲೆ 20-25 ಕೋಟಿ. ಇದರೊಂದಿಗೆ ಪ್ರಭುದೇವ್‌ ರಾಮಲತಾ ಅವರಿಗೆ ಎರಡು ಕಾರು ಹಾಗೂ ಇತರೆ ಆಸ್ತಿಯನ್ನೂ ನೀಡಿದ್ದರು.


 

89

ಶಾರುಖ್ ಅಭಿನಯದ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರದಲ್ಲಿ ಐಟಂ ಸಾಂಗ್ ಮಾಡಲು ನಯನತಾರಾ ನಿರಾಕರಿಸಿದ್ದರು. ಶಾರುಖ್ ಜೊತೆ ಕೆಲಸ ಮಾಡಲು ನಿರಾಕರಿಸಿದ ಮೊದಲ ನಟಿ ಬಹುಶಃ ನಯನತಾರಾ ಎಂದು ಹೇಳಲಾಗಿದೆ. ನಯನತಾರಾ ಸಿನಿಮಾದಿಂದ ಹಿಂದೆ ಸರಿದಿದ್ದು  ಪ್ರಭುದೇವ ಕಾರಣದಿಂದ ಎಂದು ಹೇಳಲಾಗುತ್ತಿದೆ.


 

99
Nayanthara

Nayanthara

ಅಂದಹಾಗೆ, ನಯನತಾರಾ ಈಗ ಅವರ ಬಾಯ್‌ಫ್ರೆಂಡ್‌ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆಗಸ್ಟ್ 2021 ರಲ್ಲಿ, ನಯನತಾರಾ ತಮ್ಮ 'ನೆಟ್ರಿಕನ್' ಚಿತ್ರದ ಪ್ರಚಾರಕ್ಕಾಗಿ ಟಾಕ್ ಶೋ
ಒಂದರಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ವೇಳೆ ನಿರೂಪಕರು ನಯನತಾರಾ ಅವರ ಬಾಯ್‌ಫ್ರೆಂಡ್, ಎಂಗೇಜ್‌ಮೆಂಟ್ ಮತ್ತು ಉಂಗುರದ ಬಗ್ಗೆ ಕೇಳಿದಾಗ, ಅವರು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ನಟಿ ಹೇಳಿದರು.

About the Author

SN
Suvarna News
ವಿಚ್ಛೇದನ
ನಯನತಾರ
ಸಂಬಂಧಗಳು
ತಮಿಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved