Top Bollywood films 2023: ಕಡಿಮೆ ಬಜೆಟ್, ಯಾವ್ದೇ ಸೂಪರ್‌ಸ್ಟಾರ್ ಅಭಿನಯಿಸದ ಈ ಸಿನ್ಮಾ ನಂ.1
ಈ ವರ್ಷ ಅತೀ ಹೆಚ್ಚು ಸದ್ದು ಮಾಡಿದ ಬಾಲಿವುಡ್ ಸಿನಿಮಾಗಳೆಂದರೆ ಜವಾನ್, ಪಠಾಣ್, ಗದರ್-2, ಓ ಮೈ ಗಾಡ್-2 ಮೊದಲಾದವು. ಈ ಎಲ್ಲಾ ಚಿತ್ರಗಳು ಬಾಕ್ಸಾಫೀಸಿನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಆದ್ರೆ, 2023ರಲ್ಲಿ ಜನರು ಹೆಚ್ಚು ಇಷ್ಟಪಟ್ಟ ಸಿನಿಮಾಗಳಲ್ಲಿ ಅತೀ ಕಡಿಮೆ ಬಜೆಟ್‌ನ, ಯಾವುದೇ ಸ್ಟಾರ್ ನಟರಿಲ್ಲದ ಈ ಸಿನಿಮಾ ಕೂಡಾ ಸೇರಿದೆ.
ಇಂಡಸ್ಟ್ರಿ ಟ್ರ್ಯಾಕರ್ ಓರ್ಮ್ಯಾಕ್ಸ್ ಮೀಡಿಯಾ, '2023ರಲ್ಲಿ ಜನರು ಹೆಚ್ಚು ಇಷ್ಟಪಟ್ಟ ಹಿಂದಿ ಚಲನಚಿತ್ರಗಳ' ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಈ ವರ್ಷ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಕೆಲವು ಜನಪ್ರಿಯ ಮತ್ತು ಉತ್ತಮ ಪ್ರದರ್ಶನದ ಬಾಲಿವುಡ್ ಚಲನಚಿತ್ರಗಳನ್ನು ಒಳಗೊಂಡಿದೆ. ಅಚ್ಚರಿಯ ವಿಚಾರವೆಂದರೆ ಇದರಲ್ಲಿ ಯಾವುದೇ ಸೂಪರ್‌ಸ್ಟಾರ್ ಕೂಡಾ ನಟಿಸದ ಈ ಸಾಮಾನ್ಯ ಸಿನಿಮಾ ಕೂಡಾ ಸೇರಿದೆ.
Ormax 2023ರ ತನ್ನ ಟಾಪ್ 5 ಸಿನಿಮಾಗಳ ಹೆಸರನ್ನು ಹಂಚಿಕೊಂಡಿದೆ. ಈ ಪಟ್ಟಿಯಲ್ಲಿ ಶಾರುಖ್ ಖಾನ್-ನ ಅಭಿನಯದ ಜವಾನ್, ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವೆಂದು ಗುರುತಿಸಿಕೊಂಡು ಅಗ್ರಸ್ಥಾನದಲ್ಲಿದೆ. ವಿಶ್ವಾದ್ಯಂತ 1100 ಕೋಟಿ ರೂ. ಗಳಿಸಿದೆ. ಎರಡನೇ ಸ್ಥಾನವು ಸುದೀಪ್ತೋ ಸೇನ್ ಅವರ ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ'ಗೆ ಸೇರಿದೆ.
20 ಕೋಟಿ ರೂ.ಗಳ ಸಣ್ಣ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಲನಚಿತ್ರವು ರಾಜಕೀಯವಾಗಿ ಚರ್ಚೆಗೆ ಕಾರಣವಾಯಿತು. ನಿಷೇಧ ಮತ್ತು ಬಹಿಷ್ಕಾರವನ್ನು ಎದುರಿಸಿತು. ಬಿಡುಗಡೆಯ ಮೊದಲೇ ಹಲವಾರು ನ್ಯಾಯಾಲಯದ ಪ್ರಕರಣಗಳನ್ನು ಎದುರಿಸಿತು. ಇದರ ಹೊರತಾಗಿಯೂ, ಚಿತ್ರವು ವಿಶ್ವಾದ್ಯಂತ 304 ಕೋಟಿ ರೂ . ಗಳಿಸುವಲ್ಲಿ ಯಶಸ್ವಿಯಾಯಿತು.
ಕೇರಳ ಸ್ಟೋರಿ, ಶಾರೂಕ್ ಅವರ ವರ್ಷದ ಮತ್ತೊಂದು ಹಿಟ್ ಪಠಾಣ್ ಸಿನಿಮಾವನ್ನು ಸಹ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಸನ್ನಿ ಡಿಯೋಲ್ ಹಿಟ್ ಗದರ್ 2, ಮೂರನೇ ಸ್ಥಾನದಲ್ಲಿದೆ. ಅಕ್ಷಯ್ ಕುಮಾರ್ ಅವರ OMG 2, ಆಗಸ್ಟ್‌ನಲ್ಲಿ ಬಿಡುಗಡೆಯಾದಾಗಿನಿಂದ 220 ಕೋಟಿ ರೂಪಾಯಿಗಳನ್ನು ಗಳಿಸಿದೆ.
20 ಕೋಟಿ ರೂ.ಗಳ ಸಣ್ಣ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಲನಚಿತ್ರವು ರಾಜಕೀಯವಾಗಿ ಚರ್ಚೆಗೆ ಕಾರಣವಾಯಿತು. ನಿಷೇಧ ಮತ್ತು ಬಹಿಷ್ಕಾರವನ್ನು ಎದುರಿಸಿತು. ಬಿಡುಗಡೆಯ ಮೊದಲೇ ಹಲವಾರು ನ್ಯಾಯಾಲಯದ ಪ್ರಕರಣಗಳನ್ನು ಎದುರಿಸಿತು. ಇದರ ಹೊರತಾಗಿಯೂ, ಚಿತ್ರವು ವಿಶ್ವಾದ್ಯಂತ 304 ಕೋಟಿ ರೂ . ಗಳಿಸುವಲ್ಲಿ ಯಶಸ್ವಿಯಾಯಿತು.
ವಿಪುಲ್ ಷಾ ನಿರ್ಮಿಸಿದ ಮತ್ತು ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ISIS ಉಗ್ರಗಾಮಿಗಳಿಂದ ಬಲವಂತವಾಗಿ ಅಫ್ಘಾನಿಸ್ತಾನದಲ್ಲಿ ಸೆರೆಯಾಗಿರುವ ಕೇರಳದ ಮಹಿಳೆಯರ ಕಥಾಹಂದರವನ್ನು ಹೊಂಡಿದೆ. ರಾಜ್ಯದ 3000 ಮಹಿಳೆಯರು ಈ ಸಮಸ್ಯೆಯನ್ನು ಎದುರಿಸಿದ್ದಾರೆ ಎಂದು ಹೇಳಿದಾಗ ಚಲನಚಿತ್ರದ ಕುರಿತಾದ ವಿವಾದವು ಹೆಚ್ಚಿತು.
ನ್ಯಾಯಾಲಯದ ಮೊಕದ್ದಮೆಯ ನಂತರ, ಚಿತ್ರ ಮತ್ತು ಟೀಸರ್‌ನಿಂದ ಆ ಹೇಳಿಕೆಯನ್ನು ತೆಗೆದುಹಾಕಲು ತಯಾರಕರನ್ನು ಒತ್ತಾಯಿಸಲಾಯಿತು. ಸಾಕಷ್ಟು ವಿವಾದಗಳು ಉಂಟಾಗಿದ್ದರೂ ಚಿತ್ರವೂ ಬಾಕ್ಸಾಫೀಸಿನಲ್ಲಿ ಫುಲ್ ಸಕ್ಸಸ್‌ಫುಲ್ ಆಗಿತ್ತು.