ಇವರಿಬ್ಬರು ಬಾಲಿವುಡ್‌ನ ನೊಂದ ಜೀವಗಳು: ಕಾರಣ ಒಂದೇ ಮನೆಯಂತೆ!
ಬಾಲಿವುಡ್ ಅಂಗಳ ಅಂದ್ರೆ ಅದು ಕಲರ್‌ಫುಲ್ ದುನಿಯಾ. ಮೋಜು ಮಸ್ತಿಗೆ ಇಲ್ಲಿ ಯಾವುದೇ ಕಡಿಮೆ ಇಲ್ಲ. ಆದರೆ ಈ ಇಬ್ಬರು ಕಲಾವಿದರು ನೊಂದ ಜೀವಗಳಂತೆ.
ಬಾಲಿವುಡ್ ಎಂಬ ಬಣ್ಣದ ಲೋಕದಲ್ಲಿ ಮೋಜು, ಪ್ರೀತಿ, ಪ್ರೇಮ, ಬ್ರೇಕಪ್ ಎಲ್ಲವೂ ಇದೆ. ಕೆಲ ಜೋಡಿಗಳು ಕೈ ಕೈ ಹಿಡಿದುಕೊಂಡು ಸುತ್ತಾಡಿ ಕೊನೆಗೆ ಬ್ರೇಕಪ್ ಮಾಡಿಕೊಳ್ಳುತ್ತಾರೆ. ಒಂದಿಷ್ಟು ಮಂದಿ ಬ್ರೇಕಪ್ ನಂತರ ಹೊಸ ಜೀವನ ಕಟ್ಟಿಕೊಂಡಿರುತ್ತಾರೆ.
Salman Khan
ಆದ್ರೆ ಬಾಲಿವುಡ್ ಭಾಯಿಜಾನ್ ಅಂತಾನೇ ಫೇಮಸ್ ಆಗಿರೋ ಸಲ್ಮಾನ್ ಖಾನ್ ಇನ್ನು ಮದುವೆ ಬಂಧನದಲ್ಲಿ ಬಂಧಿಯಾಗಿಲ್ಲ. ಇತ್ತ ಹಿರಿಯ ನಟಿ ರೇಖಾ ಮದುವೆಯಾಗದೇ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್ ಮತ್ತು ರೇಖಾ ಫೋಟೋ ಸೇರಿಸಿ ಇವರಿಬ್ಬರು ಬಾಲಿವುಡ್‌ನ ನೊಂದ ಜೀವಗಳು. ಇದಕ್ಕೆ ಕಾರಣ ಒಂದೇ ಮನೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಟ್ರೋಲ್‌ಗೆ ಕಾರಣವಾದ ಮನೆಯ ಹೆಸರನ್ನು ಕಮೆಂಟ್ ಮಾಡುತ್ತಿದ್ದಾರೆ.
ಹಿರಿಯ ನಟ ಅಮಿತಾಬ್ ಬಚ್ಚನ್ ಮತ್ತು ನಟಿ ರೇಖಾ ಇಬ್ಬರು ಮದುವೆ ಆಗ್ತಾರೆ ಎಂಬೆಲ್ಲಾ ಮಾತುಗಳು ಕೇಳಿ ಬಂದಿದ್ದವು. ತಮ್ಮ ಒಂಟಿ ಜೀವನಕ್ಕೆ ಅಮಿತಾಬ್ ಬಚ್ಚನ್ ಕಾರಣ ಎಂದು ಹಲವು ವೇದಿಕೆಗಳಲ್ಲಿ ರೇಖಾ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಆದ್ರೆ ನಟಿ ಜಯಪ್ರದಾ ಅವರನ್ನು ಅಮಿತಾಬ್ ಬಚ್ಚನ್ ಮದುವೆಯಾಗಿದ್ದಾರೆ.,
ಇತ್ತ ಸಲ್ಮಾನ್ ಖಾನ್ ಹೆಸರು ಐಶ್ವರ್ಯಾ ರೈ ಜೊತೆ ಕೇಳಿ ಬಂದಿತ್ತು. ತೆರೆಯ ಮೇಲೆ ಮೋಡಿ ಮಾಡಿದ್ದ ಸಲ್ಮಾನ್ ಮತ್ತು ಐಶ್ವರ್ಯಾ ನಿಜ ಜೀವನದಲ್ಲಿಯೂ ಒಂದಾಗ್ತಾರೆ ಅಂತ ಹೇಳಲಾಗಿತ್ತು. ಆದ್ರೆ ಕಾರಣಾಂತರಗಳಿಂದ ಸಲ್ಮಾನ್ ಖಾನ್‌ನಿಂದ ದೂರವಾದ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದರು.
ರೇಖಾ ಪ್ರೀತಿಸಿದ ಅಮಿತಾಬ್ ಬಚ್ಚನ್ ಸೊಸೆಯಾಗಿ ಐಶ್ವರ್ಯಾ ರೈ ಬಿಗ್‌ಬಿ ಕುಟುಂಬದಲ್ಲಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ಮತ್ತು ರೇಖಾ ನೋವಿಗೆ ಕಾರಣ ಒಂದೇ ಮನೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಐಶ್ವರ್ಯಾ ರೈ ಬಳಿಕ ಕತ್ರಿನಾ ಕೈಫ್, ಜರೀನ್ ಖಾನ್ ಜೊತೆಯಲ್ಲಿಯೂ ಸಲ್ಮಾನ್ ಹೆಸರು ಕೇಳಿ ಬಂದಿತ್ತು. ಸಲ್ಮಾನ್ ಖಾನ್ ಅವರರನ್ನು ಮೋಸ್ಟ್ ಬ್ಯಾಚೂಲರ್ ಹೀರೋ ಎಂದು ಕರೆಯಲಾಗುತ್ತದೆ.