- Home
- Entertainment
- Cine World
- ಆಮೀರ್ ಖಾನ್‌ಗೆ ಮಿ. ಪರ್ಫೆಕ್ಷನಿಸ್ಟ್ ಬಿರುದು ನೀಡಿದ್ದು ಈಕೆ; ತಮಾಷೆಗೆ ಹೇಳಿದ್ದೇ ಗಂಭೀರವಾಗಿ ತಗೊಂಡ್ರು ಜನ!
ಆಮೀರ್ ಖಾನ್‌ಗೆ ಮಿ. ಪರ್ಫೆಕ್ಷನಿಸ್ಟ್ ಬಿರುದು ನೀಡಿದ್ದು ಈಕೆ; ತಮಾಷೆಗೆ ಹೇಳಿದ್ದೇ ಗಂಭೀರವಾಗಿ ತಗೊಂಡ್ರು ಜನ!
ಆಮೀರ್ ಖಾನ್ ಎಂದರೆ ಮಿ. ಪರ್ಫೆಕ್ಷನಿಸ್ಟ್ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಈ ಬಿರುದನ್ನು ಬಾಲಿವುಡ್‌ನ ನಟಿಯೊಬ್ಬರು ತಮಾಷೆಗಾಗಿ ಕೊಟ್ಟಿದ್ದು, ಆದರೆ, ಅದೇ ನಟನ ಹೆಸರಿನ ಜೊತೆ ಟ್ಯಾಗ್ ಆಗಿ ಹೋಯಿತು!

ಬಾಲಿವುಡ್‌ನ ಸುಂದರ ಸಿನಿಮಾಗಳ ಸರದಾರ ಆಮೀರ್ ಖಾನ್ ಎಂದರೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂಬ ಮಾತು ಎಲ್ಲೆಡೆ ಕೇಳಿಬರುತ್ತದೆ. ಆತ ಎಲ್ಲದರಲ್ಲೂ ಪರ್ಫೆಕ್ಷನಿಸಂ ಹುಡುಕ್ತಾರೆ, ಅದಕ್ಕೇ ಹಾಗಂತಾರೆ ಎಂದುಕೊಂಡಿದ್ದಾರೆ ಎಲ್ಲರೂ.
ಆದರೆ ನಿಜ ಅದಲ್ಲ, ತನಗೆ ಈ ಹೆಸರನ್ನು ನೀಡಿದ್ದು ಬಾಲಿವುಡ್‌ನ ನಟಿ. ಆಕೆ ತಮಾಷೆಗೆ ಹೇಳಿದ್ದೇ ತನ್ನ ಹೆಸರ ಹಿಂದೆ ಟ್ಯಾಗ್ ಆಗಿ ಹೋಯ್ತು ಎಂದು ಸ್ವತಃ ಅಮೀರ್ ಖಾನ್ ಹೇಳಿದ್ದಾರೆ.
ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ವೇದಿಕೆಯನ್ನು ಅಲಂಕರಿಸಿದ ನಟ, ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂಬುದು ತಮ್ಮ ಹೆಸರಿನ ಬಾಲವಾಗಿ ಸೇರಿಕೊಂಡಿದ್ದು ಹೇಗೆಂದು ವಿವರಿಸಿದ್ದಾರೆ.
ತನಗೆ ಪರ್ಫೆಕ್ಷನಿಸ್ಟ್ ಎಂದು ಹೆಸರಿಸಿದ್ದು ಬೇರೆ ಯಾರೂ ಅಲ್ಲ, ಹಿರಿಯ ನಟಿ ಶಬಾನಾ ಅಜ್ಮಿ ಎಂದು ಅಮೀರ್ ಹಂಚಿಕೊಂಡಿದ್ದಾರೆ.
ಇದು ಇಂದ್ರ ಕುಮಾರ್ ನಿರ್ದೇಶನದ 'ದಿಲ್' ಚಿತ್ರೀಕರಣದ ಸಮಯಕ್ಕೂ ಹಿಂದಿನ ಘಟನೆ. ಚಿತ್ರಕ್ಕೆ ಶಬಾನಾ ಪತಿ ಬಾಬಾ ಅಜ್ಮಿ ಕ್ಯಾಮರಾಮನ್.
ಅಮೀರ್ ಖಾನ್ ಅವರು ಬಾಬಾ ಅಜ್ಮಿ ಅವರ ಮನೆಯಲ್ಲಿ ಚಲನಚಿತ್ರಗಳ ಬಗ್ಗೆ ಆಳವಾದ ಚರ್ಚೆ ನಡೆಸುತ್ತಿದ್ದಾಗ ಶಬಾನಾ ಅಜ್ಮಿ ಅವರು ಅಮೀರ್‌ಗೆ ಚಹಾವನ್ನು ಹೊತ್ತು ಬಂದರು. ಮತ್ತು ಅವರ ಚಹಾಗೆ ಎಷ್ಟು ಸಕ್ಕರೆ ಹಾಕಲಿ ಎಂದು ಕೇಳಿದರು.
tea
ಸಂಭಾಷಣೆಯಲ್ಲಿ ಮುಳುಗಿದ್ದ ಅಮೀರ್ ಯಾವುದೋ ಯೋಚನೆಯಲ್ಲಿ ಅವರ ಕಡೆಗೆ ತಿರುಗಿ ಕಪ್ ಎಷ್ಟು ದೊಡ್ಡದಾಗಿದೆ? ಎಂದು ಕೇಳಿದರಂತೆ.
ಅವರು ಕಪ್ ಗಾತ್ರ ತೋರಿಸಿದಾಗ, ನಡೆಯುತ್ತಿರುವ ಸಂಭಾಷಣೆಯಲ್ಲಿ ಮುಳುಗಿರುವ ಅಮೀರ್, ಅವಳಿಗೆ ನಿಖರವಾಗಿ ಉತ್ತರಿಸಲು ಪ್ರಯತ್ನಿಸುತ್ತಾ, ಚಮಚ ಎಷ್ಟು ದೊಡ್ಡದು ಕೇಳಿದರು.
ಆಕೆ ಚಮಚವನ್ನೂ ತೋರಿಸಿದ ಮೇಲೆ, 'ಹಾಗಿದ್ದರೆ 1 ಚಮಚ ಸಕ್ಕರೆ ಹಾಕಿ' ಎಂದರಂತೆ. ಇದರ ನಂತರ ಶಬಾನಾ ಅಜ್ಮಿ ಹೋದಲ್ಲೆಲ್ಲ ಈ ಘಟನೆ ವಿವರಿಸಲಾರಂಭಿಸಿದರು.
ಆಮೀರ್ ಖಾನ್ ಎಂದರೆ ಪರ್ಫೆಕ್ಷನಿಸ್ಟ್. ಅವರು ಚಹಾಕ್ಕೆ ಹಾಕುವ ಸಕ್ಕರೆಯಲ್ಲೂ ಅಂಥಾ ನಿಖರತೆ ಹೊಂದಿದ್ದಾರೆ ಎಂದು ಅಜ್ಮಿ ಚಟಾಕಿ ಹಾರಿಸುತ್ತಿದ್ದರು. ಅವರ ಈ ತಮಾಷೆಯೇ ನಟನಿಗೆ ಬಿರುದಾಗುತ್ತಾ ಹೋಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.