- Home
- Entertainment
- Cine World
- ಚಿತ್ರರಂಗಕ್ಕೇ ಗುಡ್ಬೈ ಹೇಳಿ, ದಾಖಲೆಯನ್ನೂ ಸೃಷ್ಟಿಸಿದ ಬೆನ್ನಲ್ಲೇ ಕುಸಿದು ಬಿದ್ದ Thalapathy Vijay! ಏನಿದು ಘಟನೆ
ಚಿತ್ರರಂಗಕ್ಕೇ ಗುಡ್ಬೈ ಹೇಳಿ, ದಾಖಲೆಯನ್ನೂ ಸೃಷ್ಟಿಸಿದ ಬೆನ್ನಲ್ಲೇ ಕುಸಿದು ಬಿದ್ದ Thalapathy Vijay! ಏನಿದು ಘಟನೆ
ನಟ ದಳಪತಿ ವಿಜಯ್ 33 ವರ್ಷಗಳ ಸಿನಿ ಪಯಣಕ್ಕೆ ವಿದಾಯ ಹೇಳಿದ್ದಾರೆ. ಮಲೇಷ್ಯಾದಲ್ಲಿ ದಾಖಲೆಯ ಕಾರ್ಯಕ್ರಮದ ನಂತರ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ನೂಕುನುಗ್ಗಲಿಗೆ ಸಿಲುಕಿ ಕುಸಿದುಬಿದ್ದರು.

33 ವರ್ಷಗಳ ಸಿನಿ ಪಯಣಕ್ಕೆ ವಿದಾಯ
51 ವರ್ಷ ವಯಸ್ಸಿನ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) 33 ವರ್ಷಗಳ ಸಿನಿ ಪಯಣಕ್ಕೆ ವಿದಾಯ ಹೇಳಿದ್ದಾರೆ. ತಮ್ಮ ಕೊನೆಯ ಸಿನಿಮಾ ‘ಜನ ನಾಯಗನ್’ ಆಡಿಯೋ ಲಾಂಚ್ ಕಾರ್ಯಕ್ರಮ ಮಲೇಷ್ಯಾದ ಬುಕಿಟ್ ಜಲಿಲ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಸಿದ ಬೆನ್ನಲ್ಲೇ ಅವರು ಚಿತ್ರರಂಗದಿಂದ ನಿವೃತ್ತರಾಗುವ ಬಗ್ಗೆ ಘೋಷಿಸಿದರು.
ಲಕ್ಷಕ್ಕೂ ಅಧಿಕ ಅಭಿಮಾನಿಗಳು
‘ತಲಪತಿ ತಿರುವಿಳಾ’ ಎಂದು ಹೆಸರಿನ ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಕೂಡಿದ್ದರು. ವಿಶೇಷ ಎಂದರೆ, ಮಲೇಷ್ಯಾದಲ್ಲಿ ನಡೆದ ಇಲ್ಲಿಯವರೆಗಿನ ಕಾರ್ಯಕ್ರಮದ ರಿಕಾರ್ಡ್ ಇದಂತೆ. ಇದೇ ಕಾರಣಕ್ಕೆ ಇಷ್ಟೊಂದು ಜನ ಕೂಡಿದ ಹಿನ್ನೆಲೆಯಲ್ಲಿ ಮಲೇಷ್ಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ.
ದಾಖಲೆ ಬರೆದ ವಿಜಯ್
ಇಂಥದ್ದೊಂದು ದಾಖಲೆಯನ್ನು ಬರೆದಿರುವ ಬೆನ್ನಲ್ಲೇ ಒಂದು ಅನಾಹುತವು ಅಲ್ಲಿ ಸಂಭವಿಸಿದೆ. ಅದೇನೆಂದರೆ, ಅವರು ಈ ಕಾರ್ಯಕ್ರಮವನ್ನು ಮುಗಿಸಿ ಮಲೇಷ್ಯಾದಿಂದ ವಾಪಸ್ ತವರು ಚೆನ್ನೈಗೆ ಬರುತ್ತಿರುವ ಸಂದರ್ಭದಲ್ಲಿ ಅವರ ಅಭಿಮಾನಿಗಳ ನೂಕುನುಗ್ಗಲು ಉಂಟಾಗಿದೆ. ವಿಜಯ್ ಅವರನ್ನು ಸ್ವಾಗತಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಗಿ ವಿಜಯ್ ಅವರು ಕುಸಿದು ಬಿದ್ದ ಘಟನೆಯೂ ನಡೆದಿದೆ.
ಸುರಕ್ಷತೆಯ ಪ್ರಶ್ನೆ
ವಿಜಯ್ ತಮ್ಮ ಕಾರಿನ ಕಡೆಗೆ ಹೋಗುತ್ತಿದ್ದಾಗ, ಅಭಿಮಾನಿಗಳು ಅವರನ್ನು ಮುಂದಕ್ಕೆ ತಳ್ಳಿದಾಗ ಅವರು ಜಾರಿ ಬಿದ್ದರು. ಭದ್ರತಾ ಸಿಬ್ಬಂದಿ ತಕ್ಷಣ ಅವರಿಗೆ ಸಹಾಯ ಮಾಡಲು ಧಾವಿಸಿದರು. ಇದು ಕೆಲ ಕ್ಷಣ ಭಾರಿ ಆತಂಕದ ವಾತಾವರಣವನ್ನು ಸೃಷ್ಟಿಸಿದರು. ಸೆಲೆಬ್ರಿಟಿಗಳ ಸುರಕ್ಷತೆ ಬಗ್ಗೆ ಮತ್ತೆ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ಈ ಹಿಂದೆ ಕೂಡ ಇಂಥ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ, ಸುರಕ್ಷತೆಯ ಪ್ರಶ್ನೆ ಮಾಡಲಾಗುತ್ತದೆ.
ರಾಜಕೀಯದಲ್ಲಿ ನಿರತ
ಅಂದಹಾಗೆ ವಿಜಯ್ ಅವರು ಇದಾಗಲೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥರಾಗಿದ್ದಾರೆ. ಇದೀಗ ಅವರು ಸಿನಿಮಾವನ್ನು ಬಿಟ್ಟು ರಾಜಕೀಯದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಗುರುತಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

