- Home
- Entertainment
- Cine World
- ಬಾತ್‌ರೂಮ್ ಒಳಕ್ಕೆ ಹೋಗಿ.. ನಟ ಸೂರ್ಯಂಗೆ ಅದೊಂದು ಕೆಟ್ಟ ಅಭ್ಯಾಸ ಇದ್ಯಂತೆ; ಜ್ಯೋತಿಕಾಗೆ ಅದಕ್ಕೇ ಸಿಟ್ಟು ಬರುತ್ತಂತೆ!
ಬಾತ್‌ರೂಮ್ ಒಳಕ್ಕೆ ಹೋಗಿ.. ನಟ ಸೂರ್ಯಂಗೆ ಅದೊಂದು ಕೆಟ್ಟ ಅಭ್ಯಾಸ ಇದ್ಯಂತೆ; ಜ್ಯೋತಿಕಾಗೆ ಅದಕ್ಕೇ ಸಿಟ್ಟು ಬರುತ್ತಂತೆ!
ಸಿನಿಮಾ ತಾರೆಯರ ಮದುವೆಗಳು ಇತ್ತೀಚೆಗೆ ಹೆಚ್ಚಾಗಿ ಡಿವೋರ್ಸ್ ಮೂಲಕ ಸುದ್ದಿಯಾಗುತ್ತವೆ. ಆದರೆ ಸೂರ್ಯ-ಜ್ಯೋತಿಕಾ ಜೋಡಿ ಸುಂದರ, ಸುಖ-ಸಂಸಾರದ ನಡೆಸುವ ಮೂಲಕ ಸದ್ಯಕ್ಕೆ ಇತರರಿಗೆ ಮಾದರಿಯಾಗಿದ್ದಾರೆ. ಆದರೆ, ಈ ಸುದ್ದಿ ಯಾರಿಗೂ ಗೊತ್ತಿಲ್ಲ!

Suriya - Jyothika: ತಮಿಳು ಸ್ಟಾರ್ ನಟ ಸೂರ್ಯ (Suriya) ಮತ್ತು ಸ್ಟಾರ್ ನಟಿ ಜ್ಯೋತಿಕಾ (Jyothika) ದಂಪತಿ ಯಾರಿಗೆ ಗೊತ್ತಿಲ್ಲ. ಒಟ್ಟೊಟ್ಟಿಗೆ ಸಿನಿಮಾ ಮಾಡಿ, ಪ್ರೀತಿಸಿ ಮದುವೆಯಾದ ಈ ಜೋಡಿಗೆ ದಿಯಾ ಎಂಬ ಮಗಳು ಮತ್ತು ದೇವ್ ಎಂಬ ಮಗನಿದ್ದಾನೆ.
ಸದ್ಯಕ್ಕೆ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಮುಂಬೈನಲ್ಲಿರುವ ಈ ಜೋಡಿ ಮಾದ್ಯಮಗಳಲ್ಲಿ ಆಗಾಗ ಸುದ್ದಿಯಾಗುತ್ತಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಬಗೆಗಿನ ಅದೊಂದು ಸುದ್ದಿ ವೈರಲ್ ಆಗ್ತಿದೆ. ಅದೇನೆಂದು ನೋಡಿ..
ಸಿನಿಮಾ ತಾರೆಯರ ಮದುವೆಗಳು ಇತ್ತಿಚೆಗೆ ಹೆಚ್ಚಾಗಿ ಡಿವೋರ್ಸ್ ಮೂಲಕ ಸುದ್ದಿಯಾಗುತ್ತವೆ. ಆದರೆ ಸೂರ್ಯ-ಜ್ಯೋತಿಕಾ ಜೋಡಿ ಸುಂದರ, ಸುಳ-ಸಂಸಾರದ ನಡೆಸುವ ಮೂಲಕ ಸದ್ಯಕ್ಕೆ ಇತರರಿಗೆ ಮಾದರಿಯಾಗಿದ್ದಾರೆ.
ನಟಿ ಜ್ಯೋತಿಕಾ 90ರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿ ಹೊರಹೊಮ್ಮಿದರು. ಕನ್ನಡದಲ್ಲಿ ಉಪೇಂದ್ರ ಅಭಿನಯದ ನಾಗರಹಾವು ಸಿನಿಮಾದಲ್ಲಿ ನಟಿಸಿದ್ದಾರೆ. 'ಕಾಕ'ಕಾಕ' ಸಿನಿಮಾದಲ್ಲಿ ಸೂರ್ಯ ಮತ್ತು ಜ್ಯೋತಿಕಾ ಒಟ್ಟಿಗೆ ನಟಿಸಿದ್ದು, ಅದರ ಚಿತ್ರೀಕರಣದ ವೇಳೆ ಇಬ್ಬರೂ ಲವ್‌ನಲ್ಲಿ ಬಿದ್ದು ಮದುವೆಯಾಗಿದ್ದಾರೆ. ಇಬ್ಬರೂ ಸಂಸಾರದ ಸಂಸಾರದ ಜೊತೆಗೇ ಸಿನಿಮಾಗಳಲ್ಲೂ ಜ್ಯೋತಿಕಾ ಬಿಜಿಯಾಗಿದ್ದಾರೆ.
ಜ್ಯೋತಿಕಾ ಮತ್ತು ಸೂರ್ಯ ಸದ್ಯ ಮುಂಬೈನಲ್ಲಿಯೇ ನೆಲೆಸಿದ್ದು, ಇತ್ತೀಚೆಗಷ್ಟೇ ಇಬ್ಬರು ತಮ್ಮ 18ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.
ಈ ವೇಳೆ ಸೂರ್ಯ ಪತ್ನಿ ಜ್ಯೋತಿಕಾ ಹಿಂದೆ ಮಾಧ್ಯಮದಲ್ಲಿ ಮಾತನಾಡಿದ್ದ ಸಂದರ್ಶನವೊಂದರ ಭಾಗ ಸಖತ್ ವೈರಲ್ ಆಗುತ್ತಿದೆ. 'ನನ್ನ ಪತಿ ಸೂರ್ಯ ನನ್ನೊಂದಿಗೆ ಸ್ನೇಹದಿಂದ ಇರುತ್ತಾನೆ. ನನಗೆ ಬಹಳ ಗೌರವವನ್ನು ಕೊಡುತ್ತಾನೆ. ನನಗೆ ಅದು ತುಂಬಾ ಇಷ್ಟ.
ಆದರೆ, ಸೂರ್ಯನಿಗೆ ಅದೊಂದು ಕೆಟ್ಟ ಅಭ್ಯಾಸವಿದೆ.. ಆ ಒಂದು ಅಭ್ಯಾಸ ನನಗೆ ಇಷ್ಟವಾಗುವುದಿಲ್ಲ. ಅದೇನು ಅಂದ್ರೆ, ಆತ ಬಾತ್‌ರೂಂನಲ್ಲಿ ತುಂಬಾ ಸಮಯ ಕಳೆಯುತ್ತಾನೆ. ಈ ಅಭ್ಯಾಸ ಮಾತ್ರ ನನ್ನಿಂದ ಸಹಿಸಲಾಗದು. ಈ ವಿಚಾರಕ್ಕೆ ಮಾತ್ರ ನಾವಿಬ್ಬರೂ ಜಗಳವಾಡುತ್ತೇವೆ' ಎಂದಿದ್ದರು ಜ್ಯೋತಿಕಾ. ಆ ಮಾತೀಗ ಅದ್ಯಾಕೋ ಮತ್ತೆ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

