- Home
- Entertainment
- Cine World
- ಆಫರ್ ಇದೆ ಬನ್ನಿ ಅಂತ ಕರೆದು, ಆಮೇಲೆ ಕೈ ಕೊಡ್ತಾರೆ; ನಟಿಯರ ಕಡೆಗಣನೆ ಬಗ್ಗೆ ಸುಪ್ರೀತಾ ಹೀಗಂದಿದ್ದೇಕೆ?
ಆಫರ್ ಇದೆ ಬನ್ನಿ ಅಂತ ಕರೆದು, ಆಮೇಲೆ ಕೈ ಕೊಡ್ತಾರೆ; ನಟಿಯರ ಕಡೆಗಣನೆ ಬಗ್ಗೆ ಸುಪ್ರೀತಾ ಹೀಗಂದಿದ್ದೇಕೆ?
ತೆಲುಗು ಚಿತ್ರರಂಗದಲ್ಲಿ ಸ್ಥಳೀಯ ನಟಿಯರಿಗೆ ಅವಕಾಶ ಸಿಗುತ್ತಿಲ್ಲ ಎಂದು ನಟಿ ಸುರೇಖಾ ವಾಣಿ ಪುತ್ರಿ ಸುಪ್ರೀತಾ ಬೇಸರ ವ್ಯಕ್ತಪಡಿಸಿದ್ದಾರೆ. ಭಾಷೆ, ಭಾವನೆ ಗೊತ್ತಿಲ್ಲದ ಬೇರೆ ಭಾಷೆಯ ನಟಿಯರಿಗೆ ಮಣೆ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ನಟಿಯರ ಕಡೆಗಣನೆ ಮಾಡುತಿದೆಯಾ ಟಾಲಿವುಡ್?
ಸುರೇಖಾ ವಾಣಿ ಮಗಳು ಅಂತ ಆಫರ್ ಕೊಡುತ್ತಿಲ್ಲ
ಹಿರಿಯ ನಟಿ ಸುರೇಖಾ ವಾಣಿ ಅವರ ಮಗಳಾದ ಸುಪ್ರೀತಾ, ತಮ್ಮ ನೋವನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. 'ಆಫರ್ ಕೊಡುತ್ತೇವೆ ಎಂದು ಕರೆದು ನಂತರ ಕೈಕೊಡುತ್ತಾರೆ' ಎಂದು ಅವರು ಹೇಳಿದ್ದಾರೆ. 'ಸುರೇಖಾ ವಾಣಿ ಮಗಳು ಎಂಬ ಕಾರಣಕ್ಕೆ ನನಗೆ ಅವಕಾಶ ಬಂದಿಲ್ಲ. ಈಗ ಮಾಡುತ್ತಿರುವ ಮೂರು ಸಿನಿಮಾಗಳು ಕೂಡ ನನ್ನ ಮೇಲೆ ನಂಬಿಕೆ ಇಟ್ಟು ಬಂದ ಅವಕಾಶಗಳೇ. ಎಲ್ಲ ಕಡೆ ನೆಪೊಟಿಸಂ ಕೆಲಸ ಮಾಡುವುದಿಲ್ಲ. ಸುರೇಖಾ ವಾಣಿ ಮಗಳು ಎಂಬ ನೆಗೆಟಿವಿಟಿಯಿಂದ ನನಗೆ ಅವಕಾಶಗಳನ್ನು ನೀಡುತ್ತಿಲ್ಲ' ಎಂದು ಸುಪ್ರೀತಾ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೇವೆ ಎಂದು ಹೇಳಿ ಆಫರ್ ಕೊಡುತ್ತಿಲ್ಲ
ತೆಲುಗಿನ ಹುಡುಗಿಯರಿಗೆ ಚಾನ್ಸ್ ಕೊಡಿ ಎಂದ ಸುಪ್ರಿತಾ
ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ ಅವರು, 'ಮುಂಬೈನಿಂದ ನಟಿಯರನ್ನು ಕರೆತರುತ್ತಾರೆ, ಅವರಿಗೆ ಭಾಷೆ, ನಟನೆ, ಭಾವನೆ ಯಾವುದೂ ಬರುವುದಿಲ್ಲ. ಕೇವಲ ಗ್ಲಾಮರ್ ಇದ್ದರೆ ಸಾಕೇ? ನಮಗೆ ಎಲ್ಲವೂ ಇದ್ದರೂ, ಆಫರ್ ಕೊಡುತ್ತೇವೆ ಎಂದು ಕರೆದು ಕೊನೆಗೆ ಕೈಕೊಡುತ್ತಾರೆ. ಇನ್ನಾದರೂ ಈ ಮುಂಬೈ ಮೇಲಿನ ವ್ಯಾಮೋಹ ಬಿಟ್ಟು ತೆಲುಗು ಹುಡುಗಿಯರಿಗೆ ಅವಕಾಶ ಕೊಡಿ' ಎಂದು ಸುಪ್ರೀತಾ ಮನವಿ ಮಾಡಿದ್ದಾರೆ.
ಅಮ್ಮ ನನಗಾಗಿ ಎಂದಿಗೂ ಆಫರ್ ಕೇಳಿಲ್ಲ
'ಅಮ್ಮನಿಗೆ ಚಿತ್ರರಂಗದಲ್ಲಿ ಒಳ್ಳೆಯ ಹೆಸರು, ಪರಿಚಯಗಳಿದ್ದರೂ, ಅವರು ನನಗಾಗಿ ಎಂದಿಗೂ ಅವಕಾಶ ಕೇಳಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯ ಸುಪ್ರೀತಾ ಅವರ ಈ ಮಾತುಗಳು ವೈರಲ್ ಆಗುತ್ತಿವೆ.
'ಅಮರಾವತಿಕಿ ಆಹ್ವಾನಂ' ಚಿತ್ರದಲ್ಲಿ ಮಿಂಚಿದ ಸುಪ್ರೀತಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

