ಯಂಗ್ ಆಗಿ ಕಾಣಲು ಶ್ರೀದೇವಿ ಮಾಡಿಸಿಕೊಂಡ ಕಾಸ್ಮೇಟಿಕ್ ಸರ್ಜರಿಗಳೆಷ್ಟು?
ಇಂದು ಬಾಲಿವುಡ್ ಮೊದಲಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ (Sridevi )ಅವರ ನಾಲ್ಕನೇ ಪುಣ್ಯತಿಥಿ. ಫೆಬ್ರವರಿ 24, 2018 ರಂದು 54ನೇ ವಯಸ್ಸಿನಲ್ಲಿ, ಶ್ರೀದೇವಿ ದುಬೈನ ಹೋಟೆಲ್‌ನ ಬಾತ್‌ಟಬ್‌ನಲ್ಲಿ ಮುಳುಗಿ ಕೊನೆಯುಸಿರೆಳೆದರು. ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಶ್ರೀದೇವಿ ಅವರ ಸೌಂದರ್ಯದ ಬಗ್ಗೆ ಮಾತನಾಡುತ್ತಾ, ಅವರು ತಮ್ಮ 50ನೇ ವಯಸ್ಸಿನಲ್ಲೂ ತುಂಬಾ ಸುಂದರವಾಗಿ ಮತ್ತು ಯಂಗ್ ಆಗಿ ಕಾಣುತ್ತಿದ್ದರು. ಇದಕ್ಕಾಗಿ ನಟಿ ತುಂಬಾ ಪ್ರಯತ್ನಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಕೆಲವು ವರದಿಗಳು ಅವರು ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು, ಇದರಿಂದಾಗಿ ಅವರು ಸೋಂಕಿಗೆ ಒಳಗಾಗಿದ್ದರು ಮತ್ತು ಸತ್ತರು ಎಂದು ಹೇಳಿವೆ. ಶ್ರೀದೇವಿ ಅವರ ಜೀವನ ಮತ್ತು ಅವರ ಸೌಂದರ್ಯಕ್ಕೆ ಸಂಬಂಧಿಸಿದ ಕೆಲವು ಕೇಳಿರದ ಸಂಗತಿಗಳು ಇಲ್ಲಿವೆ.
ಯಂಗ್ ಆಗಿ ಕಾಣಲು ಶ್ರೀದೇವಿ ಆಗಾಗ ಸರ್ಜರಿ ಮಾಡಿಸಿಕೊಳ್ಳುತ್ತಿದ್ದರು. ಅವರು 29 ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿದ್ದಾರೆ. ಅವರ ಸಾವಿಗೆ ಸ್ವಲ್ಪ ಮೊದಲು ಸಹ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರಂತೆ.
ಈ ವಯಸ್ಸಿನಲ್ಲೂ ಅವರ ತೂಕ ತುಂಬಾ ಕಡಿಮೆ ಇತ್ತು ಮತ್ತು ಅವರ ಮುಖದಲ್ಲಿ ಒಂದು ಸುಕ್ಕೂ ಇರಲಿಲ್ಲ. ಶ್ರೀದೇವಿಯ ಅವರನ್ನು ಭೇಟಿಯಾದಾಗ ಅವರ ಸೌಂದರ್ಯವನ್ನು (Beuty) ಕಂಡು ಬೆರಗಾಗಿದ್ದೆ ಎಂದು ಹಿರಿಯ ಪತ್ರಕರ್ತರೊಬ್ಬರು ಹೇಳಿದ್ದರು.
ಇದಕ್ಕೆಲ್ಲಾ ಕಾರಣ ಕಾಸ್ಮೆಟಿಕ್ ಸರ್ಜರಿ. ಶ್ರೀದೇವಿ ತನ್ನ ಸೌಂದರ್ಯದ ಬಗ್ಗೆ ಬಹಳ ಜಾಗೃತಳಾಗಿದ್ದರು. ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು. ಇಷ್ಟೇ ಅಲ್ಲ, ಈ ಸುದ್ದಿಯನ್ನು ನಂಬುವುದಾದರೆ, ಅವರು ತಮ್ಮ ಇಬ್ಬರು ಪುತ್ರಿಯರಾದ ಜಾನ್ವಿ ಮತ್ತು ಖುಷಿಗೆ ಸಹ ಸರ್ಜರಿಯನ್ನೂ ಮಾಡಿಸಿದ್ದಾರಂತೆ.
ಶ್ರೀದೇವಿ ಆಗಾಗ್ಗೆ ಚಿಕಿತ್ಸೆಗಾಗಿ ಅಮೆರಿಕದ ಸೌತ್ ಕೆರೊಲಿನಾಗೆ ಹೋಗುತ್ತಿದ್ದರು ಎಂದು ಸಹ ವರದಿಗಳು ಹೇಳುತ್ತವೆ. ಆದರೆ ಅವರ ಒಂದು ಸರ್ಜರಿಯಲ್ಲಿ ಎಡವಟ್ಟಾಗಿತ್ತು. ಇದರಿಂದಾಗಿ ಅವರ ತುಟಿಗಳ ಆಕಾರವೇ ಹಾಳಾಗಿತ್ತು. ದಕ್ಷಿಣ ಕೆರೊಲಿನಾದಲ್ಲಿನ ಅವರ ವೈದ್ಯರು ಶಸ್ತ್ರಚಿಕಿತ್ಸೆಯು ಹದಗೆಟ್ಟಿದ್ದರಿಂದ ಹಲವಾರು ಆಹಾರ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರು.
ಆ್ಯಂಟಿ ಏಜಿಂಗ್ (Anti Aging) ಔಷಧಗಳನ್ನೂ ತೆಗೆದುಕೊಂಡರು. ವರದಿಗಳ ಪ್ರಕಾರ, ಅವರು ಕಡಿಮೆ ಆಹಾರ ಸೇವಿಸುತ್ತಿದ್ದರು. ಶ್ರೀದೇವಿ ಅವರು ಲೇಸರ್ ಸ್ಕಿನ್ ಸರ್ಜರಿ (Laster Skin Surgery), ಸಿಲಿಕೋನ್ ಸ್ತನ ತಿದ್ದುಪಡಿ, ಬೊಟಾಕ್ಸ್ ಮತ್ತು ಆಕ್ಸಿ ಪೀಲ್, ಫೇಸ್ ಲಿಫ್ಟ್ ಅಪ್ಸ್, ಬಾಡಿ ಟಕಿಂಗ್ ಮಾಡಿಸಿ ಕೊಂಡಿದ್ದರು ಎಂದು ವರದಿಗಳು ಬಂದಿದ್ದವು. ಇದರೊಂದಿಗೆ, ಅವರು ಹೊಟ್ಟೆಯ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಚಿಕಿತ್ಸೆಗೆ ಒಳಗಾದರು.
ಅಂದಹಾಗೆ, ಶ್ರೀದೇವಿ ಬಾಲಿವುಡ್‌ನಲ್ಲಿ ರಾಣಿ ಮೇರಾ ನಾಮ್ ಮತ್ತು ಜೂಲಿ ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಕೆಲಸ ಮಾಡಿದ್ದಾರೆ. 1983ರಲ್ಲಿ ತೆರೆಕಂಡ ಹಿಮ್ಮತ್‌ವಾಲಾ ಚಿತ್ರದಿಂದ ಅವರಿಗೆ ಮನ್ನಣೆ ಸಿಕ್ಕಿತು. ಈ ಚಿತ್ರದಲ್ಲಿ ಜಿತೇಂದ್ರ ಅವರ ನಾಯಕರಾಗಿದ್ದರು. ಇವರಿಬ್ಬರ ಜೋಡಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿತ್ತು.
ಬೋನಿ ಕಪೂರ್ ಅವರನ್ನು ಮದುವೆ ಯಾಗುವ ಮುನ್ನವೇ ನಟಿ ಗರ್ಭಿಣಿಯಾಗಿದ್ದರು ಎನ್ನಲಾಗಿದೆ. ಅವರಿಗೆ ಜಾನ್ವಿ ಮತ್ತು ಖುಷಿ ಕಪೂರ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಜಾನ್ವಿ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದು, ಖುಷಿ ಚೊಚ್ಚಲ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ.
ಶ್ರೀದೇವಿ ಮಾವಲಿ, ಮಕಿಶ್, ಶಾಕ್, ಹಿಮ್ಮಲವಾಲಾ, ಚಾಲ್ಬಾಜ್, ರಾಮ್ ಅವತಾರ್, ಜೋಶಿಲೆ, ಕರ್ಮ, ಬಂಜಾರನ್, ನಗೀನಾ, ನಿಘೈನ್, ಮಾಸ್ಟರ್ಜಿ, ಚಾಂದಿನಿ, ಲಮ್ಹೆ, ಮಿ. ಇಂಡಿಯಾ, ಲಾಡ್ಲಾ, ಖುದಾ ಗವಾ, ಆಖ್ರಿ ರಾಸ್ತಾ, ಔಲಾದ್, ಗುಮ್ರಾ, ಆರ್ಮಿ, ರೂಪ್ ಕಿ ರಾಣಿ ಚೋರೋನ್ ಕಾ ರಾಜಾ, ತೋಹ್ಫಾ, ಚಾಂದ್ ಕಾ ತುಕ್ಡಾ, ಮಿಸ್ಟರ್ ಬೇಚಾರ, ವಕ್ತ್ ಕಿ ಆವಾಜ್ ಮುಂತಾದ ಇನ್ನೂ ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.