MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಸುದೀಪ್ ಗೂಳಿ ಸಿನಿಮಾ ಹೀರೋಯಿನ್‌ಗೆ ಹಾರ್ಟ್ ಬ್ರೇಕ್: ಎಂಗೇಜ್ಮೆಂಟ್ ಆದವನೊಂದಿಗೆ ಅದೆಲ್ಲಾ ಮಾಡ್ಬಿಟ್ಟೆ-ನಟಿ ಮಮತಾ!

ಸುದೀಪ್ ಗೂಳಿ ಸಿನಿಮಾ ಹೀರೋಯಿನ್‌ಗೆ ಹಾರ್ಟ್ ಬ್ರೇಕ್: ಎಂಗೇಜ್ಮೆಂಟ್ ಆದವನೊಂದಿಗೆ ಅದೆಲ್ಲಾ ಮಾಡ್ಬಿಟ್ಟೆ-ನಟಿ ಮಮತಾ!

ಬಹುಭಾಷಾ ನಟಿ ಮಮತಾ ಮೋಹನ್‌ದಾಸ್ ತಮ್ಮ ನೋವಿನ ಡೇಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್‌ನಿಂದ ಗುಣಮುಖರಾದ ನಂತರ, ಅವರು ಚಿತ್ರರಂಗದ ನಟನೊಬ್ಬನೊಂದಿಗೆ ಡೇಟಿಂಗ್ ಮಾಡಿದ್ದರು, ಆದರೆ ಆತ ತನ್ನ ನಿಶ್ಚಿತಾರ್ಥವನ್ನು ಮುಚ್ಚಿಟ್ಟು ನಂಬಿಕೆ ದ್ರೋಹ ಮಾಡಿದ್ದನು ಎಂದು ಬಹಿರಂಗಪಡಿಸಿದ್ದಾರೆ.

2 Min read
Author : Sathish Kumar KH
Published : Feb 14 2026, 12:07 PM IST
Share this Photo Gallery
  • FB
  • TW
  • Linkdin
  • Whatsapp
15
ಎಂಗೇಜ್ಮೆಂಟ್ ಆದವನಿಂದ ಹಾರ್ಟ್ ಬ್ರೇಕ್
Image Credit : our own

ಎಂಗೇಜ್ಮೆಂಟ್ ಆದವನಿಂದ ಹಾರ್ಟ್ ಬ್ರೇಕ್

ಸಿನಿಮಾ ರಂಗದ ಗ್ಲಾಮರ್ ಪ್ರಪಂಚದ ಹಿಂದೆ ಎಷ್ಟೋ ನೋವುಗಳು ಅಡಗಿರುತ್ತವೆ. ಅದರಲ್ಲೂ ನಟಿಯರ ವೈಯಕ್ತಿಕ ಜೀವನದ ಏರಿಳಿತಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಇದೀಗ ಬಹುಭಾಷಾ ನಟಿ ಮಮತಾ ಮೋಹನ್‌ದಾಸ್ ತಮ್ಮ ಜೀವನದ ಅತ್ಯಂತ ನೋವಿನ ಮತ್ತು ಕಹಿ ಡೇಟಿಂಗ್ ಅನುಭವವೊಂದನ್ನು ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದು ಬಂದ ಹೊಸ ಭರವಸೆಯಲ್ಲಿ ಪ್ರೀತಿಯ ಹುಡುಕಾಟಕ್ಕೆ ಹೊರಟಿದ್ದ ನಟಿಗೆ ಎದುರಾಗಿದ್ದು ಮಾತ್ರ ನಂಬಿಕೆ ದ್ರೋಹದ ಆಘಾತ!

25
ಕ್ಯಾನ್ಸರ್ ಬಳಿಕ ಶುರುವಾದ ಹೊಸ ಜೀವನ
Image Credit : Instagram

ಕ್ಯಾನ್ಸರ್ ಬಳಿಕ ಶುರುವಾದ ಹೊಸ ಜೀವನ

'ಮಯೂಖಂ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಮಮತಾ ಮೋಹನ್‌ದಾಸ್, ಮಲಯಾಳಂ ಮಾತ್ರವಲ್ಲದೆ ಕನ್ನಡದ 'ಗೂಳಿ' ಸೇರಿದಂತೆ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಆದರೆ, ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಅಂದರೆ 24ನೇ ವಯಸ್ಸಿನಲ್ಲಿ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಸಾವು ಬದುಕಿನ ನಡುವೆ ಹೋರಾಡಿ ಗೆದ್ದು ಬಂದ ಮಮತಾ, ಗುಣಮುಖರಾದ ಬಳಿಕ ತಮ್ಮ ಬದುಕಿನಲ್ಲಿ ಒಬ್ಬ ಸಂಗಾತಿ ಬೇಕೆಂದು ಬಯಸಿದ್ದರು. ಆದರೆ, ಸಿನಿಮಾ ರಂಗದ ವ್ಯಕ್ತಿಯೊಬ್ಬರ ಜೊತೆಗಿನ ಅವರ ಮೊದಲ ಡೇಟಿಂಗ್ ಅನುಭವವೇ ಅವರಿಗೆ ದೊಡ್ಡ ಆಘಾತ ನೀಡಿತ್ತು.

Related Articles

Related image1
ಗಂಡನಿಂದ ದೂರಾದ ನಟಿಗೆ ಡಿವೋರ್ಸ್‌ನಿಂದ ಸಿಕ್ಕಿದ್ದು ಮಾರಕ ಕ್ಯಾನ್ಸರ್; ಕಣ್ಣೀರಿನ ಕಥೆ ಬಿಚ್ಚಿಟ್ಟ ನಿರ್ಮಾಪಕ!
Related image2
ಎರಡು ಬಾರಿ ಕ್ಯಾನ್ಸರ್‌ ಗೆದ್ದಿರುವ ಈ ನಟಿ, ಕಿಚ್ಚ ಸುದೀಪ್‌ಗೆ ಹೀರೋಯಿನ್‌ ಆಗಿದ್ದರು!
35
ಎಂಗೇಜ್‌ಮೆಂಟ್ ಮುಚ್ಚಿಟ್ಟು ಡೇಟಿಂಗ್ ಮಾಡಿದ್ದ ನಟ
Image Credit : Instagram

ಎಂಗೇಜ್‌ಮೆಂಟ್ ಮುಚ್ಚಿಟ್ಟು ಡೇಟಿಂಗ್ ಮಾಡಿದ್ದ ನಟ

ಇತ್ತೀಚೆಗೆ ನಡೆದ 'ಜೋಸ್ ಆಲುಕ್ಕಾಸ್ ಪಾಡ್‌ಕ್ಯಾಸ್ಟ್'ನಲ್ಲಿ ಮಾತನಾಡಿದ ಮಮತಾ, 'ಕ್ಯಾನ್ಸರ್‌ನಿಂದ ಗುಣಮುಖಳಾದ ಮೇಲೆ ನಾನು ಸಿನಿಮಾ ಇಂಡಸ್ಟ್ರಿಯ ಒಬ್ಬ ವ್ಯಕ್ತಿಯ ಜೊತೆ ಡೇಟಿಂಗ್ ಮಾಡಿದ್ದೆ. ಸಿನಿಮಾ ರಂಗದಲ್ಲಿ ನಾನು ಡೇಟ್ ಮಾಡಿದ್ದು ಅವನೊಬ್ಬನ ಜೊತೆ ಮಾತ್ರ. ಅವನು ನನ್ನನ್ನು ಡೇಟಿಂಗ್‌ಗೆ ಕರೆದಾಗ ನಾನು ತುಂಬಾ ಖುಷಿಯಾಗಿದ್ದೆ. ನಮ್ಮ ಅಮ್ಮನ ಬಳಿ ಅನುಮತಿ ಪಡೆದು ಮೊದಲ ಬಾರಿಗೆ ಒಬ್ಬ ಹುಡುಗನ ಜೊತೆ ಡೇಟ್‌ಗೆ ಹೋಗಿದ್ದೆ. ಆದರೆ, ಆಮೇಲೆ ಗೊತ್ತಾಯಿತು ಆ ನಟನಿಗೆ ಆಗಲೇ ಎಂಗೇಜ್‌ಮೆಂಟ್ ಆಗಿತ್ತು ಎಂದು! ಈ ವಿಷಯ ನನಗೆ ಅವನ ಸಹೋದರನ ಮೂಲಕ ತಿಳಿಯಿತು' ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.

45
ಹೃದಯ ಒಡೆದ ಕ್ಷಣ
Image Credit : google

ಹೃದಯ ಒಡೆದ ಕ್ಷಣ

'ಈ ಸತ್ಯ ತಿಳಿದಾಗ ನನ್ನ ಹೃದಯವೇ ಒಡೆದುಹೋಯಿತು. ನಿನಗೆ ಆಗಲೇ ಮದುವೆ ನಿಶ್ಚಯವಾಗಿದ್ದರೆ ನನ್ನನ್ನು ಯಾಕೆ ಡೇಟ್‌ಗೆ ಕರೆದೆ ಎಂದು ಅವನನ್ನು ಪ್ರಶ್ನಿಸಿದೆ. ಸಮಾಜದಲ್ಲಿ ದೊಡ್ಡ ಹೆಸರು ಮಾಡಿರುವ ವ್ಯಕ್ತಿಗಳು ಹೀಗೆ ಮಾಡುತ್ತಾರೆ ಎಂದು ನಾನು ಊಹಿಸಿರಲಿಲ್ಲ' ಎಂದು ಮಮತಾ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಇನ್ನು ಮತ್ತೊಬ್ಬ ವ್ಯಕ್ತಿಯನ್ನು ಭೇಟಿಯಾದರಾದರೂ, ಅವನ ವರ್ತನೆಯಿಂದಾಗಿ ಆ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ ಎಂದು ವಿವರಿಸಿದರು.

55
ಕಾಲೇಜು ದಿನಗಳ ದುರಂತ
Image Credit : our own

ಕಾಲೇಜು ದಿನಗಳ ದುರಂತ

ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಮಮತಾ, ಕಾಲೇಜಿನ ಫೈನಲ್ ಇಯರ್‌ನಲ್ಲಿದ್ದಾಗ ಒಬ್ಬರ ಜೊತೆ ಡೇಟ್ ಮಾಡಿದ್ದರಂತೆ. ಆದರೆ, ಆತ ಅಕಾಲಿಕವಾಗಿ ಮರಣ ಹೊಂದಿದ್ದು ತಮಗೆ ದೊಡ್ಡ ಆಘಾತ ನೀಡಿತ್ತು ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಕ್ಯಾನ್ಸರ್ ಎಂಬ ರೋಗವನ್ನು ಧೈರ್ಯದಿಂದ ಎದುರಿಸಿ ಗೆದ್ದ ಮಮತಾ ಮೋಹನ್‌ದಾಸ್, ಪ್ರೀತಿ ಮತ್ತು ವಿಶ್ವಾಸದ ವಿಷಯದಲ್ಲಿ ಸತತವಾಗಿ ಹಿನ್ನಡೆ ಅನುಭವಿಸಿದ್ದಾರೆ. ಅವರ ಈ ಹೊಸ ಹೇಳಿಕೆಗಳು ಈಗ ಸಿನಿಮಾ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಆ 'ಅನಾಮಧೇಯ' ನಟ ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕನ್ನಡ ಚಲನಚಿತ್ರಗಳು
ಕಿಚ್ಚ ಸುದೀಪ್
ನಟಿ
ಕ್ಯಾನ್ಸರ್
ಪ್ರೀತಿ

Latest Videos
Recommended Stories
Recommended image1
ಮದುವೆ ಪರ್ಸನಲ್, ನೆಟ್ ಫ್ಲಿಕ್ಸ್ 60 ಕೋಟಿ ಆಫರ್ ನಿರಾಕರಿಸಿದ ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ
Recommended image2
ಪಾಕಿಸ್ತಾನದಲ್ಲಿ ಧುರಂಧರ್ ಮೇನಿಯಾ ಜೋರು! ಧುರಂಧರ್ DVD ಮಾರಿ ಬದುಕ್ತಾ ಇದ್ದಾರೆ ಪಾಕ್ ಮಂದಿ..!
Recommended image3
ಮನೆಗೆ ಬಂದವ್ರಿಗೆ ನಾನು ಇದ್ದರೂ ಊಟ ಹಾಕಲ್ಲ: ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಗೆ ಇಂಥ ಬುದ್ಧಿ ಯಾಕೆ?
Related Stories
Recommended image1
ಗಂಡನಿಂದ ದೂರಾದ ನಟಿಗೆ ಡಿವೋರ್ಸ್‌ನಿಂದ ಸಿಕ್ಕಿದ್ದು ಮಾರಕ ಕ್ಯಾನ್ಸರ್; ಕಣ್ಣೀರಿನ ಕಥೆ ಬಿಚ್ಚಿಟ್ಟ ನಿರ್ಮಾಪಕ!
Recommended image2
ಎರಡು ಬಾರಿ ಕ್ಯಾನ್ಸರ್‌ ಗೆದ್ದಿರುವ ಈ ನಟಿ, ಕಿಚ್ಚ ಸುದೀಪ್‌ಗೆ ಹೀರೋಯಿನ್‌ ಆಗಿದ್ದರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved