- Home
- Entertainment
- Cine World
- ಸೂಪರ್ ಸ್ಟಾರ್ ನಟನ ಜೊತೆ 130 ಸಿನಿಮಾಗಳಲ್ಲಿ ನಟಿಸಿದ ಸೌತ್ ನಟಿ; 50 ಚಿತ್ರಗಳು ಹಿಟ್
ಸೂಪರ್ ಸ್ಟಾರ್ ನಟನ ಜೊತೆ 130 ಸಿನಿಮಾಗಳಲ್ಲಿ ನಟಿಸಿದ ಸೌತ್ ನಟಿ; 50 ಚಿತ್ರಗಳು ಹಿಟ್
ದಕ್ಷಿಣ ಭಾರತದ ಖ್ಯಾತ ನಟಿ ಕಳೆದ 60 ವರ್ಷಗಳಿಂದ ಚಿತ್ರರಂಗದಲ್ಲಿದ್ದು, 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೂಪರ್ ಸ್ಟಾರ್ ನಟನ ಜೊತೆ 130 ಚಿತ್ರಗಳಲ್ಲಿ ನಟಿಸುವ ಮೂಲಕ ಇವರು ಗಿನ್ನೆಸ್ ದಾಖಲೆ ಬರೆದಿದ್ದಾರೆ.

60 ವರ್ಷಗಳಿಂದ ಚಿತ್ರರಂಗದಲ್ಲಿರುವ ನಟಿ
ಇಂದು ನಾವು ಹೇಳುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿ ಕಳೆದ 60 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಈ ನಟಿ ತಮ್ಮ ಹೆಸರಿನಲ್ಲಿ ಅತ್ಯಂತ ಅಪರೂಪದ ದಾಖಲೆಯನ್ನು ಹೊಂದಿದ್ದಾರೆ. ಬಹುಶಃ ಇಂದು ಈ ದಾಖಲೆಯನ್ನು ಯಾವ ನಟಿಯಿಂದಲೂ ಬ್ರೇಕ್ ಮಾಡಲು ಸಾಧ್ಯವಿಲ್ಲ.
ಓರ್ವ ನಟನೊಂದಿಗೆ ಬರೋಬ್ಬರಿ 130 ಚಲನಚಿತ್ರಗಳಲ್ಲಿ ನಟನೆ
ಕಳೆದ 60 ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರಿಯವಾಗಿರುವ ಇವರು, ಓರ್ವ ನಟನೊಂದಿಗೆ ಬರೋಬ್ಬರಿ 130 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು, ಅಂದಿನ ಕಾಲದ ಅತ್ಯಧಿಕ ಸಂಭಾವನೆ ಪಡೆಯೋ ನಟಿ ಎಂದು ಗುರುತಿಸಿಕೊಂಡಿದ್ದರು. ನಟಿಯ ಹೆಸರಿನಲ್ಲಿ ಗಿನ್ನೆಸ್ ದಾಖಲೆ ಇದೆ.
ನಟಿ ಶೀಲಾ
ಈ ವಿಶೇಷ ದಾಖಲೆಯನ್ನು ಹೊಂದಿರುವ ನಟಿ ಹೆಸರು ಶೀಲಾ. ಸುಮಾರು 40-50 ವರ್ಷಗಳ ಹಿಂದೆಯೇ ಕಥೆ ಬರೆದು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಮಲಯಾಳಂ ಸೂಪರ್ಸ್ಟಾರ್, ನಟ ಪ್ರೇಮ್ ನಜೀರ್ ಜೊತೆ 130 ಚಿತ್ರಗಳಲ್ಲಿ ಶೀಲಾ ನಟಿಸಿದ್ದು, ಇವುಗಳಲ್ಲಿ 50 ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಮಲಯಾಳಂ ಕುಟುಂಬದಲ್ಲಿ ಜನಿಸಿದ ಶೀಲಾ ಅವರ ಮೊದಲ ಹೆಸರು ಸೆಲೀನ್.
ಪಾಸಮ್ ಸಿನಿಮಾದ ಮೂಲಕ ಎಂಟ್ರಿ
ಶೀಲಾ ಅವರ ರೈಲ್ವೆ ಉದ್ಯೋಗಿಯಾಗಿದ್ದರಿಂದ ವಿವಿಧ ಸ್ಥಳಗಳಲ್ಲಿ ಶಿಕ್ಷಣ ಪೂರೈಸಿದ್ದಾರೆ. 17ನೇ ವಯಸ್ಸಿನಲ್ಲಿ ತಮಿಳಿನ ಪಾಸಮ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. 1962ರಲ್ಲಿ ಬಿಡುಗಡೆಯಾದ ಪಾಸಮ್ ಸಿನಿಮಾದಲ್ಲಿ ಎಂ.ಜಿ. ರಾಮಚಂದ್ರನ್ ಹೀರೋ ಆಗಿ ನಟಿಸಿದ್ದರು. ಆರಂಭದಲ್ಲಿ ಶೀಲಾದೇವಿ ಎಂದು ಪರಿಚಯಿಸಿಕೊಂಡಿದ್ದ ಇವರನ್ನು ಅಭಿಮಾನಿಗಳು ದೇವಿ ಎಂದು ಕರೆಯುತ್ತಿದ್ದರು. ನಂತರ ಅಂತಿಮವಾಗಿ ಶೀಲಾ ಎಂದು ಬದಲಿಸಿಕೊಂಡರು.
ಜನಪ್ರಿಯ ನಟಿ
ಮಲಯಾಳಂ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ ಸುಮಾರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ಶೀಲಾ ನಟಿಸಿದ್ದಾರೆ. ಚೆಮ್ಮೀನ್, ಕಳ್ಳಿಚೇಲಮ್ಮ, ವೇಲುತ ಕಥರಿನ ಆಕಾಲೆ, ಒರು ಪೆನ್ನಿಂತೆ ಕಡ, ಸರಸೈಯ್ಯ, ಯಕ್ಷಗಾನಂ, ಕುಟ್ಟಿ ಕುಪ್ಪಯಂ, ಸ್ಥಾನಾರ್ಥಿ ಸಾರಮ್ಮ, ಕಡತುನಾಟ್ಟು ಮಕ್ಕನ್, ಕಣ್ಣಪ್ಪನ್ ಉನ್ನಿ, ಜ್ವಾಲಾ, ಮತ್ತು ವಜ್ವೆ ಮಾಯಂ ಅವರ ಜನಪ್ರಿಯ ಚಿತ್ರಗಳು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.















