- Home
- Entertainment
- Cine World
- ಲೈಫ್ ಕೊಟ್ಟ ಸೆಕೆಂಡ್ ಚಾನ್ಸ್: 2ನೇ ಬಾರಿಗೆ ಲವ್ ಮಾಡಿ ಮದುವೆಯಾದ ದಕ್ಷಿಣ ಭಾರತದ ಸೆಲೆಬ್ರಿಟಿಗಳು
ಲೈಫ್ ಕೊಟ್ಟ ಸೆಕೆಂಡ್ ಚಾನ್ಸ್: 2ನೇ ಬಾರಿಗೆ ಲವ್ ಮಾಡಿ ಮದುವೆಯಾದ ದಕ್ಷಿಣ ಭಾರತದ ಸೆಲೆಬ್ರಿಟಿಗಳು
South Indian Celebrity Second Marriage: ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಕೆಲ ನಟ, ನಟಿಯರು ತಮ್ಮ ಮೊದಲನೇ ವೈವಾಹಿಕ ಜೀವನದಲ್ಲಿ ಸೋತಿದ್ದರು, ಆಮೇಲೆ ಅವರು ಎರಡನೇ ಮದುವೆ ಆಗಿ ಖುಷಿಯಿಂದ ಬದುಕುತ್ತಿದ್ದಾರೆ.

ಪ್ರಕಾಶ್ ರಾಜ್
ನಟ ಪ್ರಕಾಶ್ ರಾಜ್ ಹಾಗೂ ಲಲಿತಾ ಕುಮಾರಿ ಮದುವೆಯಾಗಿದ್ದರು. ಆ ಬಳಿಕ 2010 ರಲ್ಲಿ ಪೋನಿ ವರ್ಮಾ ಜೊತೆ ಮದುವೆಯಾದರು. ಇವರಿಗೆ ವೇದಾಂತ್ ಎಂಬ ಮಗನಿದ್ದಾನೆ. ಮೊದಲ ಮದುವೆಯಿಂದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಲಕ್ಷ್ಮೀ
ಖ್ಯಾತ ನಟಿ ಲಕ್ಷ್ಮೀ ಅವರು 2 ಡಿವೋರ್ಸ್ ಪಡೆದ ಬಳಿಕ ನಟ ಶಿವಚಂದ್ರನ್ ಅವರನ್ನು ಮದುವೆಯಾಗಿ ಚೆನ್ನಾಗಿದ್ದಾರೆ.
ಪವನ್ ಕಲ್ಯಾಣ್
ನಟ ಪವನ್ ಕಲ್ಯಾಣ್ ಅವರು ಎರಡು ಬಾರಿ ಡಿವೋರ್ಸ್ ಪಡೆದ ಬಳಿಕ, ರಷ್ಯಾದ ಮಾಡೆಲ್ ಅನ್ನಾ ಲೆಜ್ನೆವಾ ಜೊತೆ ಮದುವೆಯಾದರು. ಸದ್ಯ ಅವರು ರಾಜಕೀಯ, ಸಿನಿಮಾ ಎರಡರಲ್ಲೂ ಸಕ್ರಿಯವಾಗಿದ್ದಾರೆ.
ನಟ ದಿಲೀಪ್, ಕಾವ್ಯಾ ಮಾಧವನ್
ಮಲಯಾಳಂ ನಟ ದಿಲೀಪ್ ಮೊದಲು ನಟಿ ಮಂಜು ವಾರಿಯರ್ ಜೊತೆ ಮದುವೆಯಾಗಿದ್ದರು. ಆಮೇಲೆ ನಟಿ ಕಾವ್ಯಾ ಮಾಧವನ್ ಜೊತೆ ಮದುವೆಯಾದರು. ಕಾವ್ಯಾಗೆ ಇದು ಎರಡನೇ ಮದುವೆಯಾಗಿತ್ತು.
ಪ್ರಭುದೇವ
ಮೊದಲ ಪತ್ನಿಯಿಂದ ಡಿವೋರ್ಸ್ ಪಡೆದ ಬಳಿಕ, ಇತ್ತೀಚೆಗೆ ವೈದ್ಯೆ ಹಿಮಾನಿ ಸಿಂಗ್ ಜೊತೆ ಮದುವೆಯಾಗಿ ಸುಖವಾಗಿದ್ದಾರೆ. ಇವರಿಗೆ ಓರ್ವ ಮಗಳು ಕೂಡ ಇದ್ದಾರೆ.
ನಟಿ ರಾಧಿಕಾ ಶರತ್‌ಕುಮಾರ್
ರಾಧಿಕಾ ಅವರು ಎರಡು ಬಾರಿ ಡಿವೋರ್ಸ್ ಪಡೆದ ಬಳಿಕ, 2001 ರಲ್ಲಿ ನಟ ಶರತ್‌ಕುಮಾರ್ ಜೊತೆ ಮದುವೆಯಾದರು. ಇಂದು ಈ ಜೋಡಿಯು ದಕ್ಷಿಣ ಭಾರತದ ಅತ್ಯಂತ ಶಕ್ತಿಶಾಲಿ, ಅನ್ಯೋನ್ಯ ದಂಪತಿಗಳಾಗಿದ್ದಾರೆ. ಶರತ್‌ಕುಮಾರ್ ಅವರಿಗೂ ಇದು 2ನೇ ಮದುವೆಯಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

