- Home
- Entertainment
- Cine World
- ಇಂದು ರಾತ್ರಿ ಅಡ್ಜ್‌ಜೆಸ್ಟ್ ಮಾಡಿಕೋ, ಬಾಲಿವುಡ್ ತೆರೆ ಹಿಂದಿನ ಘಟನೆ ಬಿಚ್ಚಿಟ್ಟ ನಟಿ ಸೋಫಿ ಚೌಧರಿ
ಇಂದು ರಾತ್ರಿ ಅಡ್ಜ್‌ಜೆಸ್ಟ್ ಮಾಡಿಕೋ, ಬಾಲಿವುಡ್ ತೆರೆ ಹಿಂದಿನ ಘಟನೆ ಬಿಚ್ಚಿಟ್ಟ ನಟಿ ಸೋಫಿ ಚೌಧರಿ
ಬ್ರಿಟಿಷ್ ಗಾಯಕಿ ಮತ್ತು ನಟಿ ಸೋಫಿ ಚೌಧರಿ ಈಗ ಬಾಲಿವುಡ್‌ನಲ್ಲಿ ಒಂದಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡು ಮಿಂಚುತ್ತಿದ್ದಾರೆ. ಆದರೆ ಆರಂಭಿಕ ದಿನಗಳಲ್ಲಿ ಬಾಲಿವುಡ್‌ನಲ್ಲಿ ಆಗಿರುವ ಕಹಿ ಘಟನೆ ಹೇಳಿದ್ದಾರೆ. ಬಾಲಿವುಡ್‌ನಲ್ಲಿ ತೆರೆ ಹಿಂದೆ ನಡೆಯುವ ಹಲವು ಗೌಪ್ಯ ಮಾಹಿತಿಗಳನ್ನು ಸೋಫಿ ಚೌಧರಿ ಹೇಳಿದ್ದಾರೆ.

ಸೋಫಿ ಚೌಧರಿ ಶಾದಿ ನಂ. 1, ಪ್ಯಾರ್ ಕೆ ಸೈಡ್ ಎಫೆಕ್ಟ್ಸ್ ಮತ್ತು ವನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ಚಿತ್ರಗಳಲ್ಲಿ ನಟಿಸಿದ್ದಾರೆ. ಸೋಫಿ ಚೌಧರಿ ಇತ್ತೀಚೆಗೆ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಒಂದು ಪಾತ್ರಕ್ಕಾಗಿ ಅಡ್ಜೆಸ್ಟ್‌ಮಾಡಿಕೊಳ್ಳಿ ಎಂದು ಹೇಳಿದ್ದರು. ಈ ಕುರಿತು ನಟಿ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.
ನಾನು ಮೊದಲು ಗಾಯಕಿಯಾಗಿ ಬಂದಿದ್ದೆ. ನನಗೆ ಈಗಾಗಲೇ 2-3 ಹಿಟ್ ಆಲ್ಬಮ್‌ಗಳಿದ್ದವು. ನಟನೆಯಲ್ಲಿ ಆಸಕ್ತಿ ಇತ್ತು. ಹಲವು ಪ್ರೊಡಕ್ಷನ್ ಹೌಸ್‌ಗಳಿಗೆ ಹೋಗಿದ್ದೆ. ಕೆಲವರು ಒಳ್ಳೆಯವರಾಗಿದ್ದರು, ಆದರೆ ಕೆಲವರು 'ಅಡ್ಜಸ್ಟ್ಮೆಂಟ್' ಬಗ್ಗೆ ಮಾತನಾಡಿದರು.ಅವರು ಹೇಳುತ್ತಿದ್ದ ಮಾತುಗಳನ್ನು ನನ್ನ ತಾಯಿಗೆ ಅರ್ಥವಾಗುತ್ತಿರಲಿಲ್ಲ. ಬಾಲಿವುಡ್‌ಗೆ ಬಂದಾಗ ಕೆಲವು ವಿಚಿತ್ರ ಅನುಭವಗಳಾದವು ಎಂದಿದ್ದಾರೆ.
'ಅಡ್ಜಸ್ಟ್ ಮಾಡ್ಕೊಳ್ಳಿ, ಕಾಂಪ್ರಮೈಸ್ ಮಾಡ್ಕೊಳ್ಳಿ' ಅಂತ ಹೇಳ್ತಿದ್ರು. ನನ್ನ ತಾಯಿ, 'ನನ್ನ ಮಗಳು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾಳೆ, 15 ಗಂಟೆಗಳ ಕಾಲ ಕೆಲಸ ಮಾಡಬಹುದು' ಅಂತ ಹೇಳುತ್ತಿದ್ದರು. ಆದರೆ ಇಲ್ಲಿ ಹೇಳುತ್ತಿದ್ದ ಮಾತುಗಳ ಅರ್ಥಗಳೇ ಬೇರೆಯಾಗಿತ್ತು. ಪಾತ್ರ ಬೇಕಾದರೆ ಸ್ವಲ್ಪ ಹೊತ್ತು, ಒಂದು ರಾತ್ರಿ ಹೀಗೆ ಹೇಳುತ್ತಿದ್ದರು. ನಾವು ಈ ಅಡ್ಜ್‌ಜೆಸ್ಟ್ ಮಾಡಿದರೆ ಪಾತ್ರ ಸಿಗುತ್ತಿತ್ತು. ಇಲ್ಲಾ ಅಂದರೆ ಪಾತ್ರ ಬೇರೆಯವರ ಪಾಲಾಗುತ್ತಿತ್ತು.
ನಾನು ವಿದೇಶದಿಂದ ಬಂದಿದ್ದೆ. ವಿದೇಶದವರು ಸುಲಭವಾಗಿ ಈ ರೀತಿ ಅಡ್ಜ್‌ಜೆಸ್ಟ್ ಮಾಡಿಕೊಳ್ಳುತ್ತಾರೆ ಅನ್ನೋ ಭಾವನೆ ಹಲವರಲ್ಲಿತ್ತು. ಮೊದಲು ಸುಳಿವುಗಳನ್ನು ನೀಡುತ್ತಾರೆ. 'ಜನರನ್ನು ಖುಷಿಪಡಿಸಬೇಕು' ಅಂತ ಹೇಳ್ತಾರೆ. 'ನಿಮ್ಮ ಜೊತೆ ಹೆಚ್ಚು ಸಮಯ ಕಳೆಯಬೇಕು' ಅಂತಾರೆ. 'ನನ್ನ ಮದುವೆ ಸರಿಯಿಲ್ಲ, ನಿಮ್ಮ ಜೊತೆ ಇರಬೇಕು' ಅಂತಾರೆ. ಅವರ ಮಾತಿಕೆ ಒಕೆ ಎಂದರೆ ನಿಮಗೆ ಒಂದಲ್ಲ ಹತ್ತು ಸಿನಿಮಾ ಅವಕಾಶಗಳು ಸಿಗುತ್ತಿತ್ತು. ಆದರೆ ಇದನ್ನು ವಿರೋಧಿಸಿದರೆ, ಅವಕಾಶಕ್ಕಾ ಕಾಯಬೇಕು ಎಂದು ಸೋಫಿಯಾ ಚೌಧರಿ ಹೇಳಿದ್ದಾರೆ.
ಒಬ್ಬರು ನನಗೆ ಸಿನಿಮಾದಲ್ಲಿ ಆಫರ್ ಕೊಟ್ಟಿದ್ದರು. ಬಳಿಕ ನೀವು ಕೇವಲ ಹೀರೋಯಿನ್ ಮಾತ್ರವಲ್ಲ, ಎಂಜೆಲ್, ಅಪ್ಸರೆ ಎಂದೆಲ್ಲಾ ಹೊಗಳಿದ್ದರು. ಬಳಿಕ ಅದೇನೋ ಗೊತ್ತಿಲ್ಲ. ಯಾವ ಹೀರೋಯಿನ್ ಜೊತೆಗೂ ನನಗೆ ಈ ರೀತಿಯ ಫೀಲಿಂಗ್ ಇರಲಿಲ್ಲ. ನಿಮ್ಮ ಮೇಲೆ ಆತ್ಮೀಯತೆ ಫೀಲ್ ಆಗುತ್ತಿದೆ. ನಿನ್ನ ಜೊತೆ ಹೆಚ್ಚು ಕನೆಕ್ಟ್ ಆಗಲು ಬಯಸುತ್ತಿದ್ದೇನೆ ಎಂದೆಲ್ಲಾ ಹೇಳಿದ್ದರು. ಅವರ ಮಾತು ಕೇಳಿಸಿಕೊಂಡು ನಯವಾಗಿ ನಿರಾಕರಿಸಿ ಸಿನಿಮಾ ಬೇಡ ಎಂದು ಹೊರಬಂದೆ ಎಂದು ಸೋಫಿಯಾ ಚೌಧರಿ ಹೇಳಿದ್ದರೆ.