- Home
- Entertainment
- Cine World
- ಶೂಟಿಂಗ್ ವೇಳೆ ಸಹನಟಿ ಮದುವೆ ಆಯ್ತು, ಗರ್ಭಿಣಿಯೂ ಆದ್ಲು, ನಾನಿನ್ನೂ ಒಂಟಿ ಎಂದು ನೊಂದ ಬಾಲಿವುಡ್ ಖ್ಯಾತ ನಟಿ!
ಶೂಟಿಂಗ್ ವೇಳೆ ಸಹನಟಿ ಮದುವೆ ಆಯ್ತು, ಗರ್ಭಿಣಿಯೂ ಆದ್ಲು, ನಾನಿನ್ನೂ ಒಂಟಿ ಎಂದು ನೊಂದ ಬಾಲಿವುಡ್ ಖ್ಯಾತ ನಟಿ!
ಶೂಟಿಂಗ್ ವೇಳೆ ಸಹನಟಿ ಮದುವೆ ಆಯ್ತು, ಗರ್ಭಿಣಿಯೂ ಆದ್ಲು ನಾನಿನ್ನೂ ಒಂಟಿ, ಮದುವೆಯಾಗೋಕೆ ಕಾಯ್ತುದೀನಿ ಎಂದು ಈ ಖ್ಯಾತ ಬಾಲಿವುಡ್ ನಟಿ ಗೋಳು ಹೇಳಿಕೊಂಡಿದ್ದಾಳೆ.

ಪ್ರಸ್ತುತ ಸಂಜಯ್ ಲೀಲಾ ಬನ್ಸಾಲಿಯವರ ಹೀರಾಮಂಡಿಯಲ್ಲಿ ಕಾಣಿಸಿಕೊಂಡಿರುವ ಮನೀಶಾ ಕೊಯಿರಾಲಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸೋನಾಕ್ಷಿ ಸಿನ್ಹಾ, ಸಂಜೀದಾ ಶೇಖ್ ಮತ್ತು ಶರ್ಮಿನ್ ಸೆಗಲ್ ಅವರು ಇತ್ತೀಚೆಗೆ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಕಾಣಿಸಿಕೊಂಡರು.
ನಟಿಯರು ಬನ್ಸಾಲಿ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಸರದಿಯಲ್ಲಿ ವಿವರಿಸಿದರು. ಆತಿಥೇಯ ಕಪಿಲ್ ಶರ್ಮಾ ಅವರ ಪಂಚ್‌ಗಳಿಗೆ ಸೋನಾಕ್ಷಿ ಸಿನ್ಹಾ ಕೂಡಾ ತಮಾಷೆಯ ಉತ್ತರಗಳನ್ನೇ ನೀಡಿದರು.
ಸೋನಾಕ್ಷಿ ಅವರ ವಿವಾಹದ ಬಗ್ಗೆ ಪ್ರಶ್ನಿಸಲು ಕಪಿಲ್, ಆಲಿಯಾ ಭಟ್ ಮತ್ತು ಕಿಯಾರಾ ಅಡ್ವಾಣಿ ಅವರ ಮದುವೆಯ ವಿಷಯವನ್ನು ಪ್ರಸ್ತಾಪಿಸಿದು. ಆಗ, ಸೋನಾಕ್ಷಿ ಪ್ರಾಮಾಣಿಕ ಉತ್ತರವನ್ನು ನೀಡಿದರು.
ಇದಕ್ಕೆ ಸೋನಾಕ್ಷಿ 'ನೀವು ಗಾಯದ ಮೇಲೆ ಉಪ್ಪು ಸುರಿಯುತ್ತಿದ್ದೀರಿ' ಎನ್ನುತ್ತಲೇ ತಾನು ಮದುವೆಯಾಗಲು 'ಹತಾಶವಾಗಿ' ಬಯಸುತ್ತಿರುವುದಾಗಿ ಹೇಳಿದರು.
'ನಾವು ಹೀರಾಮಂಡಿ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ ಮತ್ತು ನಾನು ಇನ್ನೂ ಮದುವೆಯಾಗಿಲ್ಲ' ಎಂದು ನೊಂದು ನುಡಿದಿದ್ದಾರೆ ದಬಾಂಗ್ ನಟಿ.
ಶೂಟಿಂಗ್ ಶುರುವಾದ ಮೇಲೆ ಶರ್ಮಿನ್ ಕೂಡ ಮದುವೆಯಾದಳು, ರಿಚಾ ಮದುವೆಯಾಗಿ ಗರ್ಭಿಣಿಯೂ ಆದಳು. ಆದರೆ ನಾನು ಮಾತ್ರ ಒಂಟಿಯಾಗೇ ಉಳಿದಿದ್ದೇನೆ' ಎಂದು ಸೋನಾಕ್ಷಿ ಹೇಳಿದ್ದಾರೆ.
ರಿಚಾ ಚಡ್ಡಾ ಮತ್ತು ಅಲಿ ಫಜಲ್ ಅವರು 2020 ರಲ್ಲಿ ಕಾನೂನುಬದ್ಧವಾಗಿ ವಿವಾಹವಾಗಿದ್ದರು ಮತ್ತು 2022ರಲ್ಲಿ ವಿವಾಹವನ್ನು ಆಚರಿಸಿದರು. ಫೆಬ್ರವರಿ 2024ರಲ್ಲಿ, ದಂಪತಿಗಳು ತಮ್ಮ ಮೊದಲ ಮಗುವಿಗೆ ಕಾಯುತ್ತಿರುವುದಾಗಿ ಹೇಳಿದ್ದರು.
ಬನ್ಸಾಲಿಯ ಅಕ್ಕನ ಮಗಳಾಗಿರುವ ಶರ್ಮಿನ್ ಸೆಗಲ್ ಅವರು ನವೆಂಬರ್ 2023ರಲ್ಲಿ ಅಮನ್ ಮೆಹ್ತಾ ಅವರೊಂದಿಗೆ ವಿವಾಹವಾದರು. ಹೀರಾಮಂಡಿ ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.