ನಟಿ ಸಮಂತಾ ಬಗ್ಗೆ ಶೋಭಿತಾ ಧೂಲಿಪಾಲ ಹೇಳಿಕೆ ವೈರಲ್!
ಅಕ್ಕಿನೇನಿ ನಾಗ ಚೈತನ್ಯ ಮತ್ತು ಶೋಭಿತಾ ದೂಳಿಪಾಳ ಅವರ ಮದುವೆ ಸಂಭ್ರಮ ಶುರುವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ಈ ಮದುವೆಯ ಬಗ್ಗೆ ಕುತೂಹಲ ಮನೆ ಮಾಡಿದೆ.
ಅಕ್ಕಿನೇನಿ ನಾಗ ಚೈತನ್ಯ ಮತ್ತು ಶೋಭಿತಾ ದೂಳಿಪಾಳ ಅವರ ಮದುವೆ ಸಂಭ್ರಮ ಶುರುವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ಈ ಮದುವೆಯ ಬಗ್ಗೆ ಕುತೂಹಲ ಮನೆ ಮಾಡಿದೆ. ಯಾಕಂದ್ರೆ ಇದು ನಾಗ ಚೈತನ್ಯ ಅವರ ಎರಡನೇ ಮದುವೆ. ಸಮಂತಾ ಜೊತೆ ಬೇರ್ಪಟ್ಟ ನಂತರ ಚೈತನ್ಯ ಶೋಭಿತಾಳನ್ನ ಪ್ರೀತಿಸಿದ್ರು.
ಎರಡು ವರ್ಷಗಳ ಪ್ರೇಮದ ನಂತರ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಶೋಭಿತಾ ನಟಿ ಮತ್ತು ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ಚೈತನ್ಯ ಜೊತೆ ಪ್ರೀತಿ ಬಹಿರಂಗವಾಗುವ ಮೊದಲು ಶೋಭಿತಾ ನೀಡಿದ್ದ ಕೆಲವು ಆಸಕ್ತಿಕರ ಹೇಳಿಕೆಗಳು ಈಗ ವೈರಲ್ ಆಗುತ್ತಿವೆ.
ಒಂದು ಸಂದರ್ಶನದಲ್ಲಿ, ಶೋಭಿತಾ ಸಮಂತಾ ಬಗ್ಗೆ ಮಾತನಾಡುತ್ತಾ, ಸಮಂತಾಳ ಸಿನಿ ಜರ್ನಿ ಅದ್ಭುತ. ಅವರು ಪ್ರಾಜೆಕ್ಟ್ ಆಯ್ಕೆ ಮಾಡಿಕೊಳ್ಳೋ ರೀತಿ ನನಗೆ ತುಂಬ ಇಷ್ಟ ಅಂದಿದ್ರು. ರಶ್ಮಿಕಾ ಬಗ್ಗೆ, ಸಿಂಪಲ್ ಲುಕ್ ನಲ್ಲೂ ಅವರು ತುಂಬಾ ಚೆನ್ನಾಗಿ ಕಾಣ್ತಾರೆ ಅಂತ ಶೋಭಿತಾ ಮೆಚ್ಚುಗೆ ವ್ಯಕ್ತಪಡಿಸಿದ್ರು.
ನಾಗ ಚೈತನ್ಯ ಅವರ ಕೂಲ್ ಮತ್ತು ಕಾಮ್ ನೆಸ್ ನನಗೆ ಇಷ್ಟ ಅಂತ ಹೇಳಿದ್ರು. ಪ್ರಭಾಸ್ ಬಗ್ಗೆ ಮಾತನಾಡುತ್ತಾ, ನನ್ನ ನೆಚ್ಚಿನ ನಟರಲ್ಲಿ ಪ್ರಭಾಸ್ ಒಬ್ಬರು. ಛತ್ರಪತಿಯಿಂದ ಆರಂಭಿಸಿ ಅವರ ಎಲ್ಲಾ ಸಿನಿಮಾ ನೋಡಿದ್ದೀನಿ ಅಂತ ಹೇಳಿದ್ರು. ರಾಣಾ ಬಗ್ಗೆ, ಅವರು ಯಾವಾಗಲೂ ಹೊಸತನಕ್ಕೆ ಪ್ರಯತ್ನಿಸುತ್ತಾರೆ ಅಂತ ಶೋಭಿತಾ ಹೇಳಿದ್ರು.