ಸಿಂಗಮ್‌ನ ಕಾಜಲ್ Baby Shower ಫೋಟೋ ವೈರಲ್!
'ಸಿಂಗಮ್' ನಟಿ ಕಾಜಲ್ ಅಗರ್ವಾಲ್ (Kajal Aggarwal) ಗರ್ಭಿಣಿಯಾಗಿದ್ದು, ಶೀಘ್ರದಲ್ಲಿಯೇ ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಇತ್ತೀಚೆಗೆ ಕಾಜಲ್ ಅವರ ಬೇಬಿ ಶವರ್ (Baby Shower) ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಕಾಜಲ್ ಅಗರ್ವಾಲ್ ಕೆಂಪು ಬಣ್ಣದ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದರು. ಆಕೆಯ ಮುಖದಲ್ಲಿ ಪ್ರೆಗ್ನೆಂಸಿ ಗ್ಲೋ ಗೋಚರಿಸುತ್ತದೆ. ಈ ಸಮಯದಲ್ಲಿ, ಆಕೆಯ ಪತಿ ಗೌತಮ್ ಕಿಚ್ಲು (Gautam Kitchlu) ಕೂಡ ಆಕೆಯ ಪಕ್ಕದಲ್ಲಿಯೇ ಕುಳಿತಿರುವುದು ಕಂಡುಬರುತ್ತದೆ. ಕಾಜಲ್ ಅವರ ಬೇಬಿ ಶವರ್‌ನಲ್ಲಿ ಅವರ ಕುಟುಂಬ ಸದಸ್ಯರನ್ನು ಹೊರತುಪಡಿಸಿ, ಕೆಲವು ಆಪ್ತರು ಮಾತ್ರ ಭಾಗವಹಿಸಿದ್ದರು.
ಈ ವರ್ಷದ ಜನವರಿಯಲ್ಲಿ ಪತಿ ಗೌತಮ್ ಕಿಚ್ಲು ಅವರು ಕಾಜಲ್ ಅವರ ಮುದ್ದಾದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಪತ್ನಿಯ ಪ್ರೆಗ್ನೆಂಸಿ ಘೋಷಿಸಿದರು. ಶೀರ್ಷಿಕೆಯೊಂದಿಗೆ ಗರ್ಭಿಣಿ ಮಹಿಳೆ ಮತ್ತು ಕುಟುಂಬದ ಎಮೋಜಿಯನ್ನು ಗೌತಮ್ ಹಂಚಿಕೊಂಡಿದ್ದರು.
ಅದೇ ಸಮಯದಲ್ಲಿ, ಕಾಜಲ್ ಅಗರ್ವಾಲ್ ಸಹೋದರಿ ನಿಶಾ ಕೆಲವು ತಿಂಗಳ ಹಿಂದೆ ಚಿಕ್ಕಮ್ಮ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದರು. ಕಾಜಲ್‌ಗೆ ಶೀಘ್ರದಲ್ಲೇ ಮಗುವಾಗಲಿದೆ ಮತ್ತು ಅದರ ಹಿಂದೆ ನನ್ನದೇ ಆದ ವೈಯಕ್ತಿಕ ಸ್ವಾರ್ಥವಿದೆ ಎಂದು ನಾನು ಭಾವಿಸುತ್ತೇನೆ. ಮದುವೆಯಾದಾಗಿನಿಂದ ಅವಳಿಗೆ ಇದನ್ನೇ ಹೇಳುತ್ತಿದ್ದೇನೆ. ಏಕೆಂದರೆ ಅವಳು ತಡ ಮಾಡಿದರೆ, ನನ್ನ ಮಗನಿಗೆ ವಯಸ್ಸಿನ ಅಂತರದಿಂದ ಅವನೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ ಎಂದು ಸಂದರ್ಶನವೊಂದರಲ್ಲಿ, ನಿಶಾ ಹೇಳಿದ್ದರು.
ಕಾಜಲ್ ಅಗರ್ವಾಲ್ ತನ್ನ ದೀರ್ಘ ಕಾಲದ ಗೆಳೆಯ ಗೌತಮ್ ಕಿಚ್ಲು ಅವರನ್ನು 30 ಅಕ್ಟೋಬರ್ 2020 ರಂದು ವಿವಾಹವಾದರು. ಕಾಜಲ್ ಅಗರ್ವಾಲ್ ಅವರ ಪತಿ ಗೌತಮ್ ಕಿಚ್ಲೂ ಅವರು ವೃತ್ತಿಯಲ್ಲಿ ಉದ್ಯಮಿಯಾಗಿದ್ದಾರೆ.
ಗೌತಮ್ ಕಿಚ್ಲು ಅವರು ಡಿಸರ್ನ್ ಲಿವಿಂಗ್ ಡಿಸೈನ್ ಶಾಪ್‌ನ ಸಂಸ್ಥಾಪಕ ಮತ್ತು ಒಳಾಂಗಣ ವಿನ್ಯಾಸಗಾರರಾಗಿದ್ದಾರೆ. ಮನೆ ವಿನ್ಯಾಸದ ಹೊರತಾಗಿ, ಅವರ ಕಂಪನಿ ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳು, ವರ್ಣಚಿತ್ರಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತದೆ.
ನಾನು ಮತ್ತು ಗೌತಮ್ 3 ವರ್ಷಗಳ ಕಾಲ ಪರಸ್ಪರ ಡೇಟಿಂಗ್ (Dating) ಮಾಡಿದ್ದೇವೆ. ನಾವು ಸ್ನೇಹಿತರಂತೆ ಪ್ರತಿ ಹೆಜ್ಜೆಯಲ್ಲೂ ಪರಸ್ಪರರ ಪಕ್ಕದಲ್ಲಿಯೇ ಇದ್ದೇವೆ, ಇದು ಇಬ್ಬರ ಜೀವನಕ್ಕೆ ಬಹಳಷ್ಟು ಸಹಾಯವಾಗಿದೆ ಎಂದು ಸಂದರ್ಶನವೊಂದರಲ್ಲಿ ಕಾಜಲ್ ಹೇಳಿದ್ದರು. ಮದುವೆಯ ಘೋಷಣೆಯ ನಂತರ ಮೊದಲ ಬಾರಿಗೆ ದಸರಾ ಪೂಜೆಯ ಸಮಯದಲ್ಲಿ ಕಾಜಲ್ ಅಗರ್ವಾಲ್ ಅವರು ಗೌತಮ್ ಕಿಚ್ಲು ಅವರನ್ನು ಜನರಿಗೆ ಪರಿಚಯಿಸಿದರು.
ಸಾಮಾಜಿಕ ಕೂಟವಾಗಲಿ ಅಥವಾ ಯಾವುದೇ ವೃತ್ತಿಪರ ಕೆಲಸವಾಗಲಿ ನಾವಿಬ್ಬರೂ ಆಗಾಗ ಭೇಟಿಯಾಗುತ್ತಿದ್ದೆವು. . ಅಂತಹ ಪರಿಸ್ಥಿತಿಯಲ್ಲಿ, ಕರೋನಾದಿಂದಾಗಿ ಲಾಕ್‌ಡೌನ್ ನಡುವೆ ಕೆಲವು ವಾರಗಳವರೆಗೆ ನಾವು ಒಬ್ಬರನ್ನೊಬ್ಬರು ಭೇಟಿಯಾಗಲು ಸಾಧ್ಯವಾಗದಿದ್ದಾಗ, ಈಗ ನಾವು ಜೀವನಕ್ಕಾಗಿ ಒಂದಾಗಬೇಕು ಎಂದು ಅರಿವಾಯಿತು ಎಂದ ಕಾಜಲ್.
'ರೋಮ್ಯಾನ್ಸ್ (Romance) ವಿಷಯಕ್ಕೆ ಬಂದಾಗ, ಗೌತಮ್ ನಾಚಿಕೆ ಪಡುತ್ತಾನೆ ಮತ್ತು ಮೌನವಾಗಿರುತ್ತಾನೆ. ಅವರು ಫಿಲ್ಮಿ ಅಲ್ಲ. ಆದರೆ ನಾವು ತುಂಬಾ ಹೃತ್ಪೂರ್ವಕ, ಭಾವನಾತ್ಮಕ ಸಂಭಾಷಣೆ ನಡೆಸಿದ್ದೇವೆ. ಗೌತಮ್ ತನ್ನ ಭಾವನೆಗಳ ಬಗ್ಗೆ ತುಂಬಾ ಪ್ರಾಮಾಣಿಕನಾಗಿದ್ದನು ಮತ್ತು ಅವನು ನನ್ನೊಂದಿಗೆ ಯಾವ ರೀತಿಯ ಭವಿಷ್ಯವನ್ನು ಬಯಸಬೇಕೆಂದು ಅವನು ಹೇಳಿದ ರೀತಿ, ನಾನು ಕೂಡ ಅವನೊಂದಿಗೆ ನನ್ನ ಜೀವನವನ್ನು ಕಳೆಯಲು ಒಪ್ಪಿಕೊಂಡೆ' ಎಂದು ಸಂದರ್ಶನದಲ್ಲಿ ಕಾಜಲ್ ಹೇಳಿದ್ದರು
‘ಕ್ಯುಂ ಹೋ ಗಯಾ ನಾ’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಕಾಜಲ್ ಕಳೆದ 17 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಾದ ನಂತರ ದಕ್ಷಿಣ ಇಂಡಸ್ಟ್ರಿಯತ್ತ ಮುಖ ಮಾಡಿದರು. ಅವರು ದಕ್ಷಿಣದ ಜನಪ್ರಿಯ ನಟಿಯರಲ್ಲಿ ಒಬ್ಬರು. ಈಗ ಹಿಂದಿ ಚಿತ್ರಗಳಲ್ಲೂ ಗುರುತಿಸಿಕೊಂಡಿದ್ದಾರೆ.
ಕಾಜಲ್ ಅಗರ್ವಾಲ್ ಚಿರಂಜೀವಿ ಮತ್ತು ರಾಮ್ ಚರಣ್ ತೇಜ ಅವರ ಆಚಾರ್ಯ (Acharya) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಚಾರ್ಯ ಚಿತ್ರಮಂದಿರಗಳಲ್ಲಿ ಏಪ್ರಿಲ್ 29 ರಂದು ಬಿಡುಗಡೆಯಾಗಲಿದೆ. ಕಾಜಲ್ ಅಗರ್ವಾಲ್ ತನ್ನ ಎಲ್ಲಾ ಕೆಲಸದ ಕಮಿಟ್‌ಮೆಂಟ್‌ಗಳನ್ನು ಪೂರ್ಣಗೊಳಿಸಿದ್ದಾರೆ ಮತ್ತು ಮಗು ಆರೋಗ್ಯಕರವಾಗಿರಲು ಪ್ರೆಗ್ನೆಂಸಿ ಸಮಯದಲ್ಲಿ ತನಗಾಗಿ ಸಮಯವನ್ನು ನೀಡಲು ಬಯಸುತ್ತಾರೆ.