ಗರ್ಭಿಣಿ Body Shame ಮಾಡಿದ ನೆಟ್ಟಿಗರಿಗೆ ಉತ್ತರಿಸಿದ ಕಾಜಲ್ ಅಗರ್ವಾಲ್!
ಬಾಲಿ ಶೇಮಿಂಗ್‌ಗೆ ಒಳಗಾದ ನಟಿ ಕಾಜಲ್ ಅಗರ್ವಾಲ್. ಯಾವ ಫೋಟೋ ನೋಡಿದರೂ ಹೊಟ್ಟೆ ಬಗ್ಗೆ ಕಾಮೆಂಟ್ ಮಾಡುತ್ತಿರುವವರಿಗೆ ಕ್ಲಾಸ್....
ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಮಿಂಚಿರುವ ನಟಿ ಕಾಜಲ್ ಅಗರ್ವಾಲ್ ಅಮ್ಮನಾಗುತ್ತಿರುವ ವಿಚಾರವನ್ನು, ಪತಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡ ದಿನದಿಂದಲೂ ಇಡೀ ಪ್ಯಾಪರಾಜಿಗಳ ಕ್ಯಾಮೆರಾ ಅವರನ್ನು ಹುಡುಕುತ್ತಿದೆ. ನಟಿಯಾದಾಗ ಇದ್ದ ಕಾಜಲ್‌ಗೂ ಮದುವೆಯಾದ ಮೇಲೆ ಇರುವ ಕಾಜಲ್‌ಗೂ ವ್ಯತ್ಯಾಸವಿದೆ. ಈಗ ತಾಯಿಯಾಗುತ್ತಿದ್ದಾರೆ. ಅಂದ್ಮೇಲೆ ಹೇಹದಲ್ಲಿ ಇನ್ನೂ ಹೆಚ್ಚಿನ ಬದಲಾವಣೆ ಸಹಜವಾಗಿಯೇ ಗಮನಿಸಬಹುದು. ಈ ಬದಲಾವಣೆಯನ್ನು ಕೆಟ್ಟಾಗಿ ನೋಡುತ್ತಿರುವವರಿಗೆ, ಕಾಮೆಂಟ್ ಮಾಡುತ್ತಿರುವವರಿಗೆ ಕಾಜಲ್ ಉತ್ತರ ಕೊಟ್ಟಿದ್ದಾರೆ.
ಕಾಜಲ್ ಮಾತು:
'ನನ್ನ ಜೀವನದಲ್ಲಿ ಕೆಲವೊಂದು ಅದ್ಭುತ ಬದಲಾವಣೆಗಳನ್ನು ಎದುರಿಸುತ್ತಿರುವೆ. ನನ್ನ ದೇಹದಲ್ಲಿ, ನನ್ನ ಮನೆಯಲ್ಲಿ ಮತ್ತು ನಾನು ಕೆಲಸ ಮಾಡುವ ಸ್ಥಳದಲ್ಲಿ. ನಿಜ ಹೇಳಬೇಕು ಅಂದ್ರೆ ಬಾಡಿ ಶೇಮಿಂಗ್ ಮೆಸೇಜ್, ನನ್ನನ್ನು ಬಳಸಿಕೊಂಡು ಮಾಡುತ್ತಿರುವ ಮೀಮ್ಸ್ ಮತ್ತು ಕೆಟ್ಟ ಕಾಮೆಂಟ್ ಯಾವುದೇ ರೀತಿಯೂ ನನ್ನ ಮೇಲೆ ಪರಿಣಾಮ ಬೀರುತ್ತಿಲ್ಲ. ನಾವು ಮತ್ತೊಬ್ಬರ ಜೊತೆ ಕೈಂಡ್ ಆಗಿ ಇರೋಣ. ಇರಲು ಆಗದಿದ್ದರೆ ಬದುಕಿ, ಬೇರೆಯವರಿಗೂ ಬದುಕಲು ಬಿಡಿ,' ಎಂದು ಕಾಜಲ್ ಬರೆದುಕೊಂಡಿದ್ದಾರೆ.
ತನ್ನಂತೆ ಈ ರೀತಿ ಕಾಮೆಂಟ್‌ಗಳನ್ನು ಎದುರಿಸುತ್ತಿರುವವರಿಗೆ ಸಲಹೆ ಕೊಟ್ಟಿದ್ದಾರೆ. 'ನನ್ನಂತೆ ಜೀವನದಲ್ಲಿ ಇವೆಲ್ಲವನ್ನೂ ಎದುರಿಸುತ್ತಿರುವವರಿಗೆ ನನ್ನದೊಂದು ಯೋಚನೆಯನ್ನು ಹಂಚಿಕೊಳ್ಳುತ್ತಿರುವೆ. ನೀವು ಜೀವನದಲ್ಲಿ ಇದೇ ಸ್ಥಾನದಲ್ಲಿದ್ದರೆ ಈ ಫೋಸ್ಟ್ ಅನ್ನು ಓದಿ,' ಎಂದು ವಿನಂತಿಸಿಕೊಂಡಿದ್ದಾರೆ.
'ಗರ್ಭಿಣಿಯಾದಾಗ ನಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಅದರಲ್ಲಿಯೂ ಪ್ರಮುಖವಾದದ್ದು ತೂಕ ಹೆಚ್ಚಾಗುವುದು. ಹಾರ್ಮೋನ್ ಬದಲಾವಣೆಯಿಂದ ನಮ್ಮ ಹೊಟ್ಟೆ ಮತ್ತು ಸ್ತನ ದೊಡ್ಡದಾಗುತ್ತದೆ. ಮಗು ದೊಡ್ಡದಾಗುತ್ತಿದ್ದಂತೆ ಅದೂ ದೊಡ್ಡದಾಗುತ್ತವೆ. ಮಗುವಿನ ಆರೈಕೆ ಮಾಡಲು ದೇಹ ತನಗೆ ತಾನೇ ಪ್ರಿಪೇರ್ ಆಗುತ್ತದೆ. ಈ ವೇಳೆ ದಪ್ಪ ಅಗುತ್ತಿದ್ದಂತೆ, ಕೆಲವರಿಗೆ ಸ್ಟ್ರೆಜ್ ಮಾರ್ಕ್ ಕೂಡ ಬರುತ್ತದೆ. ಇನ್ನೂ ಕೆಲವರಿಗೆ ಮುಖದಲ್ಲಿ ಮೊಡವೆ ಆಗುತ್ತವೆ. ಬೇಡ ಅಂದುಕೊಂಡರೂ ಪದೇ ಪದೇ ಮೂಡ್ ಸ್ವಿಂಗ್ ಆಗುತ್ತದೆ. ನೆಗೆಟಿವ್ ಮೂಡ್ ಇದ್ದರೆ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ನೆಗೆಟಿವ್ ಯೋಚನೆಗಳು ಮಗುವಿನ ಮೇಲೆ ಪರಿಣಾಮ ಬೀರುತ್ತದೆ,' ಎಂದಿದ್ದಾರೆ ಕಾಜಲ್.
ಕಾಜಲ್ ಅಗರ್ವಾಲ್ -ತಮನ್ನಾ ಭಾಟಿಯಾ: ಬಿಕಿನಿಯಲ್ಲಿ ದಕ್ಷಿಣದ ಚೆಲುವೆಯರು!'ಮಗುವಿಗೆ ಜನ್ಮ ನೀಡಿದ ನಂತರ ದೇಹ ಮೊದಲಿನಿನ ಸ್ಥಿತಿ ಬರಲು ಸಮಯ ತೆಗೆದುಕೊಳ್ಳುತ್ತದೆ. ಕೆಲವರು ಅದೇ ಸ್ಥಿತಿಯಲ್ಲಿ ಉಳಿದು ಕೊಳ್ಳುತ್ತಾರೆ. ಆದರೂ ಓಕೆ. ತಲೆ ಕೆಡಿಸಿಕೊಳ್ಳಬೇಡಿ. ಈ ಬದಲಾವಣೆಗಳು ತುಂಬಾನೇ ನ್ಯಾಚುರಲ್ ಆಗಿರುತ್ತವೆ. ಜೀವನಕ್ಕೆ ಹೊಸ ವ್ಯಕ್ತಿ ಸೇರಿಕೊಳ್ಳುತ್ತಿದ್ದಾರೆ ಅಂದಾಗ ಇವೆಲ್ಲವನ್ನೂ ಒಪ್ಪಿಕೊಳ್ಳಬೇಕು. ನಾವು ಅಸಹಜವಾಗಿರಬೇಕಾಗಿಲ್ಲ, ಒಂದು ಚೌಕಟ್ಟಿನೊಳಗೆ ಇರಬೇಕೆಂದಿಲ್ಲ. ಅನ್‌ಕಂಫರ್ಟ್ ಆಗಬೇಕೇಂದಿಲ್ಲ. ಒತ್ತಡ ಹೇರಿಕೊಂಡಿರಬೇಕು ಅಂತಾನೂ ಇಲ್ಲ. ಒಂದು ಪುಟ್ಟ ಮಗುವನ್ನು ಹುಟ್ಟಿಸಿ, ಅದಕ್ಕೆ ಜೀವನ ರೂಪಿಸಬೇಕು ಅಂದ್ರೆ ಹೇಗಿರುತ್ತದೆ ಹೇಳಿ? ಇದನ್ನು ಎಂಜಾಯ್ ಮಾಡಬೇಕು, ಸಂಭ್ರಮಿಬೇಕು. ಇದು ನಾವು ಪಡೆದುಕೊಂಡು ಬಂದಿರುವ ಪುಣ್ಯ. ನಿಮಗೆ ತಿಳಿಸುವ ವಿಚಾರಗಳನ್ನು ನಾನೇ ಪಾಲಿಸಿಕೊಂಡು ಬಂದಿರುವುದು. ಹೀಗಾಗಿ ನನ್ನ ಮಾತುಗಳು ನಿಮಗೆ ಸಹಾಯ ಮಾಡಿರಬೇಕು ಅಂದುಕೊಳ್ಳುವೆ,' ಎಂದು ಕಾಜಲ್ ಬರೆದಿದ್ದಾರೆ.
ಕಾಜಲ್ ಬರೆದುಕೊಂಡಿರುವ ಪೋಸ್ಟ್‌ಗೆ 'ನೀವು ಇಂದು ಎಂದಿಗೂ ಸದಾ ಬ್ಯೂಟಿಫುಲ್ ಆಗಿರುವೆ' ಎಂದು ಸಮಂತಾ ಕಾಮೆಂಟ್ ಮಾಡಿದ್ದಾರೆ. 'ಜೀವನದ ಪ್ರತಿಯೊಂದು ಹಂತದಲ್ಲಿಯೂ ನೀನು ಸುಂದರವಾಗಿರುವೆ. ಆ ಮಗುವಿನ ಸುತ್ತ ಪ್ರೀತಿಯೇ ತುಂಬಿರುತ್ತದೆ'ಎಂದು ಲಕ್ಷ್ಮಿ ಮಂಚು ಕಾಮೆಂಟ್ ಮಾಡಿದ್ದಾರೆ.
ಕಾಮೆಂಟ್‌ನಲ್ಲೂ ಕಾಜಲ್ ಬರೆದುಕೊಂಡಿದ್ದಾರೆ:
'ಪ್ರೆಗ್ನೆನ್ಸಿ ಸಮಯದಲ್ಲಿ ದೇಹ ಬದಲಾಗುತ್ತದೆ. ಆದರೆ ಅದು ಶಾಶ್ವತವಲ್ಲ. ನಿಮ್ಮ ದೇಹ ಮಾಡುತ್ತಿರುವ ಪಾಸಿಟಿವ್ ಕೆಲಸಗಳ ಬಗ್ಗೆ ಮಾತ್ರ ಥಿಂಕ್ ಮಾಡಿ. ಒಂದು ಮಗು, ಒಂದು ಜೀವ ಹುಟ್ಟಿಸಲು ನಿಮ್ಮ ದೇಹದಲ್ಲಿ ಬದಲಾವಣೆಗಳಾಗುತ್ತವೆ. ಇವೆಲ್ಲವೂ ತುಂಬಾನೇ ನಾರ್ಮಲ್. ನಿಮ್ಮ ಭಾವನೆಗಳನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳಿ. ಭಾವನೆಗಳನ್ನು ಮುಚ್ಚಿಟ್ಟು ಕೊಂಡರೆ ಮಾತ್ರ ಸಮಸ್ಯೆ ಆಗುವುದು. ಯಾವುದಾದರೂ ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳಿ. ಕೆಲವು ನಿಮಿಷಗಳ ವಾಕಿಂಗ್, ಸ್ವಲ್ಪ ಪ್ರೆಗ್ನೆನ್ಸಿ ಸ್ವಿಮಿಂಗ್ ನಿಮ್ಮ ಮೈಂಡ್ ಬದಲಾಯಿಸುತ್ತದೆ. ನಿಮ್ಮ ವೈದ್ಯರ ಸಲಹೆ ತೆಗೆದುಕೊಂಡು, ಯೋಗ ಮಾಡಿದರೆ ದೇಹ ರಿಲ್ಯಾಕ್ಸ್ ಆಗುತ್ತದೆ. ನಿಮ್ಮ ದೇಹಕ್ಕೆ ಮತ್ತು ಹೊಟ್ಟೆ ಭಾಗದಲ್ಲಿ ಸಿಂಪಲ್ ಮಸಾಜ್ ಮಾಡಿ. ಒತ್ತಡ ಕಡಿಮೆ ಆದರೆ ಮಾತ್ರ ನೀವು ನಿಮ್ಮ ಬದಲಾವಣೆ ಆಗುವ ಸಮಯದಲ್ಲಿ ನಿಮ್ಮ ತ್ವಚೆ ಕಾಂತಿಯುತವಾಗಿರುವುದು. ಮಾನಸಿಕವಾಗಿ ತೊಂದರೆ ಆಗುತ್ತಿದೆ ಅನಿಸಿದರೆ, ಯಾರ ಬಗ್ಗೆಯೂ ಚಿಂತಿಸದೇ ವೈದ್ಯರನ್ನು ಅಥವಾ ಸ್ನೇಹಿತರನ್ನು ಸಂಪರ್ಕಿಸಿ,' ಎಂದು ಕಾಮೆಂಟ್‌ನಲ್ಲಿ ಕಾಜಲ್ ಬರೆದುಕೊಂಡಿದ್ದಾರೆ.