ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ಲಾಸ್ಟಿಕ್ ಕವರ್ ಜೊತೆ ಬಂದ ನಟಿ, ಇದರ ಬೆಲೆ ನೋಡಿ ದಂಗಾದ ಜನ, ಖ್ಯಾತ ನಟಿ, ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿರುವ ನಟಿ ಈ ಬ್ಯಾಗ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಇದು ನಮ್ಮ ಪ್ಲಾಸ್ಟಿಕ್ ಕವರ್ ಅಲ್ಲ. ಇದ್ರ ಬೆಲೆ ಬಲು ದುಬಾರಿ. 

ಬೀಜಿಂಗ್ (ಮಾ.14) ನಟ ನಟಿಯರು ಫಿಲ್ಮ್ ಫೆಸ್ಟ್ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಲ್ಲಿ ತಮ್ಮ ಡ್ರೆಸ್, ಫ್ಯಾಶನ್ ಡಿಸೈನ್ ಮೂಲಕ ಭಾರಿ ಗಮನ ಸೆಳೆಯುತ್ತಾರೆ. ಸೆಲೆಬ್ರೆಟಿಗಳು ಧರಿಸುವ ವಾಚ್, ವ್ಯಾನಿಟಿ ಬ್ಯಾಗ್, ಚಪ್ಪಲ್, ಆಭರಣ ಎಲ್ಲವೂ ಭಾರಿ ಚರ್ಚೆಯಾಗುತ್ತದೆ. ಅತೀ ದುಬಾರಿ, ಬ್ರಾಂಡೆಡ್ ವಸ್ತುಗಳ ಮೂಲಕ ಹಲವು ಬಾರಿ ಹೊಸ ಟ್ರೆಂಡ್ ಹುಟ್ಟುಹಾಕುತ್ತಾರೆ. ಹೀಗೆ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಟಿ ಪ್ಲಾಸ್ಟಿಕ್ ಕವರ್ ರೀತಿಯ ಬ್ಯಾಗ್ ಹಿಡಿದು ಆಗಮಿಸಿದ್ದಾರೆ. ಫೋಟೋಶೂಟ್, ಕಾರ್ಯಕ್ರಮದಲ್ಲಿ ಈ ಪ್ಲಾಸ್ಟಿಕ್ ಕವರ್ ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಬಹುತೇಕ ಕಡೆ ಬ್ಯಾನ್ ಆಗಿರುವ ಕೆಲ ಅಂಗಡಿಗಳಲ್ಲಿ ಈಗಲೂ ಈ ಪ್ಲಾಸ್ಟಿಕ್ ಕವರ್ ಮೂಲಕ ವಸ್ತುಗಳನ್ನು ನೀಡುತ್ತಾರೆ. ಈ ಕವರ್ ಹಿಡಿದು ನಟಿ ಯಾಕೆ ಬಂದಿದ್ದಾರೆ ಎಂದು ಆರಂಭದಲ್ಲಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಆದರೆ ಈ ನಟಿ ಕೈಯಲ್ಲಿರುವುದು ಸಾಮಾನ್ಯ ಪ್ಲಾಸ್ಟಿಕ್ ಕವರ್ ಅಲ್ಲ. ಇದು ಅತೀ ದುಬಾರಿ ಬ್ರಾಂಡೆಡ್ ಬ್ಯಾಗ್.

Add Asianetnews Kannada as a Preferred SourcegooglePreferred

ದಿನಸಿ ಅಂಗಡಿಯಲ್ಲಿ ಸಿಗುವ ಪ್ಲಾಸ್ಟಿಕ್ ಕವರ್ ಅಲ್ಲ

ಚೀನಾ ನಟಿ ಝಾನ್ ಜಿಂಗಿ ಇದೀಗ ಭಾರಿ ಚರ್ಚೆಯಾಗುತ್ತಿದ್ದಾರೆ. ಚೀನಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಖ್ಯಾತ ನಟಿ ಝಾನ್ ಜಿಂಗಿ ಕೈಯಲ್ಲೊಂದು ಪ್ಲಾಸ್ಟಿಕ್ ಕವರ್ ರೀತಿಯ ಬ್ಯಾಗ್ ಹಿಡಿದು ಆಗಮಿಸಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ನಟಿ ಆಗಮಿಸುವಾಗ ಎಲ್ಲರ ಕಣ್ಣು ಈಕೆ ಕೈಯಲ್ಲಿ ಹಿಡಿದ ಪ್ಲಾಸ್ಟಿಕ್ ಕವರ್ ಮೇಲೆ ಬಿದ್ದಿತ್ತು. ದಿನಸಿ ಅಂಗಡಿ, ಮೀನು ಅಂಗಡಿ, ತರಕಾರಿ ಸೇರಿದಂತೆ ಹಲೆವೆಡೆ ಈ ರೀತಿಯ ಪ್ಲಾಸ್ಟಿಕ್ ಕವರ್‌ನಲ್ಲಿ ವಸ್ತುಗಳನ್ನು ನೀಡುತ್ತಾರೆ. ಇದೇ ರೀತಿಯ ಹಳದಿ ಬಣ್ಣದ ಕವರ್ ಹಿಡಿದು ಆಗಮಿಸಿದ ನಟಿ ಭಾರಿ ವೈರಲ್ ಆಗಿದ್ದಾರೆ. ಆದರೆ ಇದು ಯೂಸ್ ಆ್ಯಂಡ್ ಥ್ರೋ ಪ್ಲಾಸ್ಟಿಕ್ ಕವರ್ ಅಲ್ಲ. ಇದು ಪ್ರತಿಷ್ಠಿತ ಲಕ್ಷುರಿ ಬ್ರ್ಯಾಂಡ್ ಬಲೆನ್ಸಿಯಾಗದ ಬ್ಯಾಗ್.

ಇದರ ಬೆಲೆ 1.65 ಲಕ್ಷ ರೂಪಾಯಿ

ನಟಿ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿದ್ದಂತೆ ಈಕೆ ಹಿಡಿದ ಬ್ಯಾಗ್ ಮಾಹಿತಿಗಳು ಹೊರಬದಿದೆ. ಈಕೆ ವಿಶ್ವದ ಪ್ರತಿಷ್ಠಿತ ಫ್ಯಾಶನ್ ಬ್ರ್ಯಾಂಡ್ ಬಲೆನ್ಸಿಯಾಗ ಬ್ಯಾಗ್ ಹಿಡಿದು ಫಿಲ್ಮ್ ಫೆಸ್ಟಿವಲ್‌ಗೆ ಆಗಮಸಿದ್ದರು. ಇದರ ಬೆಲೆ 1790 ಅಮೆರಿಕನ್ ಡಾಲರ್, ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 1,65,647 ರೂಪಾಯಿ. ಈ ದುಬಾರಿ ಬ್ಯಾಗ್ ಹಿಡಿದು ಫಿಲ್ಮ್ ಫೆಸ್ಟಿವಲ್‌ನಲ್ಲಿ ಝಾನ್ ಜಿಂಗಿ ಮಿಂಚಿದ್ದಾರೆ.

2022ರಲ್ಲಿ ಈ ಬ್ಯಾಗ್ ಮಾರುಕಟ್ಟೆಗೆ ಪರಿಚಯ ಮಾಡಲಾಗಿತ್ತು. ಡಿಸೈನರ್ ಡೆಮ್ನಾ ವಾಸಲಿಯಾ ಈ ಬ್ಯಾಗ್ ಡಿಸೈನ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಬಿಡುಗಡೆ ಕಾರ್ಯಕ್ರಮಲ್ಲಿ ಡೆಮ್ನಾ ಈ ಬ್ಯಾಗ್ ಕುರಿತು ಕೆಲ ಸ್ವಾರಸ್ಯಕ ವಿಚಾರ ಹೇಳಿದ್ದರು. ಇದು ವಿಶ್ವದ ಅತೀ ದುಬಾರಿ ಬಳಸಿ ಬಿಸಾಡುವ ಬ್ಯಾಗ್ ಎಂದಿದ್ದರು. ಪ್ಲಾಸ್ಟಿಕ್ ಯೂಸ್ ಆ್ಯಂಡ್ ತ್ರೋ ಕವರ್ ರೀತಿಯಲ್ಲೇ ಹೋಲುವ ಈ ಬ್ಯಾಗ್ ಪ್ಲಾಸ್ಟಿಕ್‌ನಿಂದ ಮಾಡಿದ್ದಲ್ಲ.

Scroll to load tweet…