- Home
- Entertainment
- Cine World
- Aarti Ravi: ಬೀದಿಗೆ ಬಂತು ಖ್ಯಾತ ನಟನ ಸಂಸಾರದ ಗುಟ್ಟು; ಅವಳಿಂದಾಗೇ ಡಿವೋರ್ಸ್ ಅಪ್ಲೈ ಮಾಡಿದ್ವಿ ಎಂದ ಪತ್ನಿ!
Aarti Ravi: ಬೀದಿಗೆ ಬಂತು ಖ್ಯಾತ ನಟನ ಸಂಸಾರದ ಗುಟ್ಟು; ಅವಳಿಂದಾಗೇ ಡಿವೋರ್ಸ್ ಅಪ್ಲೈ ಮಾಡಿದ್ವಿ ಎಂದ ಪತ್ನಿ!
ನಟ ಜಯಂ ರವಿ ಅಕಾ ರವಿ ಮೋಹನ್ ಹಾಗೂ ಅವರ ಪತ್ನಿ ಆರತಿ ರವಿ ಸಂಸಾರದ ವಿಷಯ ಈಗ ಕೋರ್ಟ್ ಮೆಟ್ಟಿಲೇರಿದೆ. ಕೆಲ ತಿಂಗಳುಗಳ ಹಿಂದೆಯೇ ಇವರಿಬ್ಬರ ಮಧ್ಯೆ ಮನಸ್ತಾಪ ಇರೋದು ಬಯಲಾಗಿತ್ತು. ಕೆನಿಷಾ ಫ್ರಾನ್ಸಿಸ್ ಜೊತೆ ರವಿ ಮೋಹನ್ ಸಂಬಂಧ ಹೊಂದಿದ್ದಾರೆ ಎಂದು ಆರತಿ ಆರೋಪ ಮಾಡಿದ್ದರು. ಈಗ ಆರತಿ ರವಿ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಯಾಕೆ ಡಿವೋರ್ಸ್ ಫೈಲ್ ಮಾಡಿದೆವು ಎಂದು ಹೇಳಿದ್ದಾರೆ.

"ಡ್ರಾಮಾ ಆಚೆ ಪ್ರತಿಷ್ಠೆಯನ್ನು ಆಯ್ಕೆ ಮಾಡಿಕೊಳ್ಳುವಾಗ ಒಂದು ಸಣ್ಣ ಜಾಗ ಇರುವುದು. ಇತ್ತೀಚೆಗೆ ಮಾಡಿದಂತಹ ಒಂದಷ್ಟು ಆರೋಪಗಳು ನಾನು ಮಾತನಾಡುವ ಹಾಗೆ ಮಾಡಿದೆ. ಸತ್ಯವನ್ನು ಹೇಳಲೇಬೇಕಿದೆ. ಹಣ, ಅಧಿಕಾರ, ಹಸ್ತಕ್ಷೇಪ, ಅಥವಾ ನಿಯಂತ್ರಣ ಇವೆಲ್ಲವೂ ನಮ್ಮ ಮದುವೆಗೆ ತೊಂದರೆ ಕೊಟ್ಟಿಲ್ಲ. ನಮ್ಮ ಮದುವೆಯಲ್ಲಿ ಮೂರನೇಯವರ ಎಂಟ್ರಿ ಆಯ್ತು. ನಮ್ಮ ಜೀವನಕ್ಕೆ “ನಿಮ್ಮ ಬದುಕಿನ ಬೆಳಕು” ಕತ್ತಲೆಯನ್ನು ತಂದಿತು. ಅದೇ ಸತ್ಯ. ವಿಚ್ಛೇದನ ಆಗುವ ಮುಂಚೆಯೇ ಆ ವ್ಯಕ್ತಿ ಫೋಟೋದಲ್ಲಿದ್ದರು. ಈ ಬಗ್ಗೆ ನನ್ನ ಬಳಿ ಸಾಕ್ಷಿಯೂ ಇದೆ" ಎಂದು ಆರತಿ ಹೇಳಿದ್ದಾರೆ.
"ನಾನು ಕಂಟ್ರೋಲ್ ಮಾಡುವ ಹೆಂಡ್ತಿ ಅಂತ ಹೇಳಲಾಗಿದೆ. ಗಂಡನನ್ನು ಕಾಳಜಿ ಮಾಡಿ, ಅವನನ್ನು ಕಾಪಾಡಿ, ಚಟಗಳಿಂದ ದೂರವಿಡಲು ಟ್ರೈ ಮಾಡಿದರೆ ಅದು ಕಂಟ್ರೋಲ್ ಎಂಬ ಅರ್ಥ ಪಡೆಯುತ್ತದೆ. ಗಂಡನ ಆರೋಗ್ಯ, ಒಳ್ಳೆಯದಕ್ಕಾಗಿ ಯಾರೇ ಆಗಲಿ ಹೀಗೆಯೇ ಮಾಡಿರುತ್ತಿದ್ದರು. ಈ ರೀತಿ ಮಾಡದ ಹೆಣ್ಣಿಗೆ ಸಮಾಜದಲ್ಲಿ ಬೇರೆ ಟೈಟಲ್ ಕೊಡಲಾಗುತ್ತದೆ. ಕಷ್ಟದ ದಿನಗಳಲ್ಲಿ ನಾವಿಬ್ಬರೂ ಫ್ಯಾಮಿಲಿಯವರಾಗಿ ಅತ್ತೆ-ಮಾವನ ಜೊತೆಯಲ್ಲಿ ಇದ್ದೆವು, ಅದಿಕ್ಕೆ ಸೋಶಿಯಲ್ ಮೀಡಿಯಾದಲ್ಲಿಯೂ ಸಾಕ್ಷಿ ಇದೆ. ಕೊನೆಯ ದಿನವೂ ಕೂಡ ನಾನು ಪ್ರೀರಿ, ಭಿನ್ನಾಭಿಪ್ರಾಯ, ಹೋರಾಟಗಳು, ಕನಸುಗಳು ಇರುವ ಜೋಡಿ ಎಂದು ನಂಬಿಕೊಂಡಿದ್ದೆ" ಎಂದು ಹೇಳಿದ್ದಾರೆ.
"ಬ್ರ್ಯಾಂಡೆಡ್ ಚಪ್ಪಲಿ ಹಾಕಿಕೊಂಡು, ಫುಲ್ ಬಟ್ಟೆ ಧರಿಸಿ, ವಾಲೆಟ್‌ನಲ್ಲಿ ಎಲ್ಲವನ್ನು ಇಟ್ಟುಕೊಂಡು ಅವರು ಮನೆಯಿಂದ ಹೊರಗಡೆ ಹೋಗಿದ್ದಾರೆ. ಪ್ಲ್ಯಾನ್ ಮಾಡಿಕೊಂಡು ಮನೆಯಿಂದ ಹೊರಗಡೆ ಬಂದಿದ್ದಾರೆ. ದೌರ್ಜನ್ಯ ಆಯ್ತು, ಮನೆಯಲ್ಲಿ ಕೂಡಿ ಹಾಕಿದ್ರು ಎಂದು ಆರೋಪ ಮಾಡ್ತಾರೆ ಅಂದ್ರೆ ಇಷ್ಟು ವರ್ಷ ಯಾಕೆ ಅವರು ನಮ್ಮ ಜೊತೆ ಇದ್ದರು? ಯಾಕೆ ವಾರ್ಷಿಕೋತ್ಸವ ಆಚರಣೆ ಮಾಡಬೇಕಿತ್ತು? ಯಾಕೆ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗಿ ಆಗಬೇಕಿತ್ತು? ಇರಲು ಯೋಗ್ಯ ಅಲ್ಲ ಅಂದ್ಮೇಲೆ ಯಾಕೆ ಇಲ್ಲಿ ಇರಬೇಕಿತ್ತು? ಅವನ ರಹಸ್ಯ ಬಯಲಾಯ್ತು ಎಂದಾಗಲೇ ಮನೆಯಿಂದ ಹೊರಗಡೆ ಹೋಗಿದ್ದಾನೆ" ಎಂದು ಹೇಳಿದ್ದಾರೆ.
"ನಾನು ಹಣಕ್ಕೋಸ್ಕರ, ಲಕ್ಷುರಿ ಜೀವನಕ್ಕೆ ಈ ರೀತಿ ಮಾಡುವ ಅವಶ್ಯಕತೆ ಇಲ್ಲ. ಇಂಗ್ಲೆಂಡ್‌ನಿಂದ ಡಿಗ್ರಿ ಪಡೆದಿರುವ ನಾನು ಕುಟುಂಬಕ್ಕೋಸ್ಕರ ಉದ್ಯೋಗ ಬಿಟ್ಟೆ" ಎಂದಿದ್ದಾರೆ.
"ಹದಿನೆಂಟು ವರ್ಷಗಳಿಂದ ನಾವು ಜೊತೆಗಿದ್ದೆವು. ನೀವು ಪ್ರತಿಷ್ಠಿಯಿಂದ ಹೊರಗಡೆ ಹೋಗಬಹುದಿತ್ತಯ. ನೀನು ನನ್ನನ್ನು ಬೆಂಕಿಗೆ ತಳ್ಳಿದೆ. ಸಾರ್ವಜನಿಕರ ಕಣ್ಣಿನಲ್ಲಿ ನನ್ನ ಪ್ರತಿಷ್ಠೆ ಮಣ್ಣಾಗಿದೆ. ಸತ್ಯವನ್ನು ತಿಳಿದ ನನ್ನ ಗಂಡನೇ ಇಂದು ನನ್ನ ಜೊತೆಗೆ ಇಲ್ಲ" ಎಂದಿದ್ದಾರೆ.
"ನನ್ನ ಗಂಡನ ಮೌನಕ್ಕೂ ಕಾರಣವಿದೆ. ನನ್ನ ಗಂಡನಿಗೆ ಒಳ್ಳೆಯದಾಗಲಿ. ನಾನು ವೀಕ್ ಅಲ್ಲ, ನಾನು ಬೇಡಿಕೊಳ್ಳೋದೂ ಇಲ್ಲ. ನನ್ನ ಪ್ರೀತಿ ಪಾತ್ರರಿಗೋಸ್ಕರ ನಾನು ನಿಂತುಕೊಳ್ತೀನಿ. ಕಾನೂನಿನಲ್ಲಿ ನನಗೆ ನಂಬಿಕೆ ಇದೆ" ಎಂದಿದ್ದಾರೆ.
ಆರಂಭದಲ್ಲಿ ನಾನು, ಕೆನಿಷಾ ಫ್ರಾನ್ಸಿಸ್ ಸ್ನೇಹಿತರು ಎಂದು ರವಿ ಹೇಳಿದ್ದರು. "ನನಗೂ, ರವಿಗೂ ಯಾವ ಸಂಬಂಧವೂ ಇಲ್ಲ. ನಾವಿಬ್ಬರೂ ವೃತ್ತಿ ವಿಚಾರಕ್ಕೆ ಮಾತನಾಡಿದ್ದೇವೆ ಅಷ್ಟೇ. ಆರತಿ ಮಾಡಿದ ಆರೋಪವು ನನ್ನ ತಂದೆ-ತಾಯಿಯನ್ನು ಕಳೆದುಕೊಂಡದ್ದಕ್ಕಿಂತ ಜಾಸ್ತಿ ದುಃಖವನ್ನು ನೀಡಿದೆ" ಎಂದು ಕೆನಿಷಾ ಈ ಹಿಂದೆ ಹೇಳಿದ್ದರು.
ತಿಂಗಳುಗಳ ಹಿಂದೆ ರವಿ ಮೋಹನ್, ಕೆನಿಷಾ ಅವರು ಒಂದೇ ಥರದ ಬಟ್ಟೆ ಧರಿಸಿ ನಿರ್ಮಾಪಕರ ಮನೆಯ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಇದಾದ ಬಳಿಕ ಆರತಿ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದಾದ ಬಳಿಕ ರವಿ ಅವರು ನಾನು, ಕೆನಿಷಾ ಪ್ರೀತಿಯಲ್ಲಿ ಇರೋದು ಸತ್ಯ ಎಂದಿದ್ದಾರೆ. ಆ ಬಳಿಕ ಆರೋಪ, ಪ್ರತ್ಯಾರೋಪ ಜಾಸ್ತಿ ಆಗಿದೆ.