Shilpa Shetty ನಿಜ ರೂಪ ನೋಡಿದ್ರೆ ಗುರುತಿಸೋಕ್ಕೆ ಆಗೋಲ್ಲ!
ಬಾಲಿವುಡ್‌ನಲ್ಲಿ ಸೌಂದರ್ಯದ ಜೊತೆಗೆ ಫಿಟ್‌ನೆಸ್‌ಗ ಬೆಸ್ಟ್ ಉದಾಹರಣೆ ನಟಿ ಶಿಲ್ಪಾ ಶೆಟ್ಟಿ (Shilpa Shetty).ಪತಿ ರಾಜ್ ಕುಂದ್ರಾ ವಿರುದ್ಧದ ಆರೋಪಗಳು, ಭೂಗತ ಜಗತ್ತಿನ ಸಂಪರ್ಕ ಮತ್ತು ಕೆಲವೊಮ್ಮೆ ಹಾಲಿವುಡ್ ನಟ ರಿಚರ್ಡ್ ಗೇರ್ ಅವರ ಕಿಸ್ ಬಗ್ಗೆ ವಿವಾದಗಳಿಂದ ಶಿಲ್ಪಾ ಹಲವು ಬಾರಿ ಸುದ್ದಿಯಾಗಿದ್ದಾರೆ. ಇಷ್ಟೆಲ್ಲಾ ವಿವಾದಗಳ ನಡುವೆಯೂ ಶಿಲ್ಪಾ ಅವರ ಜನಪ್ರಿಯತೆಗೆ ಕೊರತೆ ಇರಲಿಲ್ಲ. ಶಿಲ್ಪಾ ಶೆಟ್ಟಿ ಸೌಂದರ್ಯದ ಗುಟ್ಟು ಏನು ಗೊತ್ತಾ?
ಜೂನ್ 8 ರಂದು ಶಿಲ್ಪಾ 47 ನೇ ವರ್ಷಕ್ಕೆ ಕಾಲಿಡುತ್ತಾರೆ, ಆದರೆ ಇನ್ನೂ ಸೌಂದರ್ಯ ಮತ್ತು ಫಿಟ್ನೆಸ್ ಕಾರಣದಿಂದ ಅವರ ವಯಸ್ಸನ್ನು ಊಹಿಸಲು ಕಷ್ಟ. ಆದರೆ ಈ ಬಾಲಿವುಡ್ ಬೆಡಗಿಯ ಸೌಂದರ್ಯಕ್ಕೆ ಸಂಬಂಧಿಸಿದ ರಹಸ್ಯ ತಿಳಿದರೆ ಆಶ್ಚರ್ಯವಾಗುತ್ತದೆ.
ಬಾಲಿವುಡ್‌ನಲ್ಲಿ ಬ್ಯೂಟಿ ಕ್ವೀನ್ ಆಗುವ ಕನಸನ್ನು ಹೊತ್ತು ಬಂದ ಶಿಲ್ಪಾ ಅವರ ಚರ್ಮದ ಬಣ್ಣವು ಕಪ್ಪಾಗಿತ್ತು ಅದನ್ನು ಡೀಪ್ ಡಸ್ಕಿ ಎಂದೂ ಕರೆಯುತ್ತಾರೆ. ಆದರೆ ನಟಿ ತನ್ನ ಚರ್ಮದ ಬಣ್ಣವನ್ನು ಸಂಪೂರ್ಣವಾಗಿ ಬದಲಾಯಿಸಲು ನಿರ್ಧರಿಸಿದರು.ಇದಕ್ಕೆ ಪ್ಲಾಸ್ಟಿಕ್ ಸರ್ಜರಿ ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ. ಶಿಲ್ಪಾ ಧೈರ್ಯ ಮಾಡಿ ಸೌಂದರ್ಯಕ್ಕಾಗಿ ಶಸ್ತ್ರಚಿಕಿತ್ಸೆಯ ಸಹಾಯ ಪಡೆದರು.
ಕಪ್ಪು ಮೈ ಬಣ್ಣದ ಹೊರತಾಗಿ, ನಟಿಯ ಅವರ ಮೂಗಿನ ಬಗ್ಗೆ ಸಮಾಧಾನ ಹೊಂದಿರಲಿಲ್ಲ. ಮೊದಲು ಅವರು ಮೂಗು ತುಂಬಾ ಉದ್ದವಾಗಿತ್ತು ಮತ್ತು ಗಿಣಿಯಂತೆ ಇತ್ತು. ಇದರಿಂದ ಶಿಲ್ಪಾ ತೀವ್ರ ಅಸಮಾಧನಗೊಂಡಿದ್ದರು. ಆದ್ದರಿಂದ, ಪ್ಲಾಸ್ಟಿಕ್ ಸರ್ಜರಿ ಮೂಲಕ, ಒಂದು ಕಡೆ, ಅವರು ತಮ್ಮ ಚರ್ಮಕ್ಕೆ ಹೊಸ ಬಣ್ಣ ನೀಡಿದ ಶಿಲ್ಪಾ ಮೂಗಿನ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದಾರೆ.
ವಿಶೇಷವೆಂದರೆ ಒಂದಲ್ಲ ಎರಡು ಬಾರಿ ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಆದರೆ ನಟಿ ಶಸ್ತ್ರ ಚಿಕಿತ್ಸೆಯ ಸತ್ಯವನ್ನು ಎಂದಿಗೂ ಮರೆಮಾಚಲಿಲ್ಲ. ಸಿನಿಮಾ ತಾರೆಯರಿಗೆ ಪ್ಲಾಸ್ಟಿಕ್ ಸರ್ಜರಿ ಹೊಸದೇನಲ್ಲ. ಈ ಸತ್ಯವನ್ನು ಕ್ಯಾಮೆರಾದಲ್ಲಿ ಬಹಿರಂಗವಾಗಿ ಹೇಳಿದ ನಟರು ಬಹಳ ಕಡಿಮೆ. ಆದರೆ ಶಿಲ್ಪಾರ ವಿಚಾರ ಹಾಗಲ್ಲ. ತನಗೆ ಮೂಗುದಾರ ಬಂದಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.
ಈ ಬಗ್ಗೆ ಪ್ರಶ್ನೆ ಕೇಳಿದಾಗಲೆಲ್ಲ ಹೌದು, ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿದ್ದೇನೆ ಮತ್ತು ಅದರಲ್ಲಿ ತಪ್ಪೇನಿದೆ ಎಂದು ಶಿಲ್ಪಾ ಶೆಟ್ಟಿ ಅವರು ಸ್ಪಷ್ಟವಾಗಿ ಉತ್ತರ ನೀಡುತ್ತಾರೆ.
ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಟಿಯರಲ್ಲಿ ಶಿಲ್ಪಾ ಶೆಟ್ಟಿ ಮೊದಲಲ್ಲ ಮತ್ತು ನಂತರವೂ ಅನೇಕ ದೊಡ್ಡ ಬಾಲಿವುಡ್ ಸೆಲೆಬ್ರಿಟಿಗಳು ಶಸ್ತ್ರ ಚಿಕಿತ್ಸೆಯ ಮೂಲಕ ತಮ್ಮ ನೋಟವನ್ನು ಬದಲಾಯಿಸಿದ್ದಾರೆ. ಈ ಪಟ್ಟಿಯಲ್ಲಿ ಬ್ಯೂಟಿ ಕ್ವೀನ್ ಶ್ರೀದೇವಿ ಹೆಸರು ಕೂಡ ಬರುತ್ತದೆ ಮತ್ತು ವಿಶ್ವ ಸುಂದರಿ ಐಶ್ವರ್ಯಾ ರಾಯ್ ಕೂಡ ಇದೆ.
ಅಂದಹಾಗೆ ಅಂದ ಹೆಚ್ಚಿಸಿಕೊಳ್ಳಲು ಹಾಗೂ ಕಾಪಾಡಿಕೊಳ್ಳಲು 20ಕ್ಕೂ ಹೆಚ್ಚು ಬಗೆಯ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ ಎಂದು ಶ್ರೀದೇವಿ ಬಗ್ಗೆ ಹೇಳಲಾಗಿದೆ. ವರದಿಯ ಪ್ರಕಾರ, ಐಶ್ವರ್ಯಾ ರಾಯ್ ತನ್ನ ತುಟಿಗಳು, ಮೂಗು ಮತ್ತು ಕೆನ್ನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಆದರೆ ಅದರ ಬಗ್ಗೆ ಎಂದಿಗೂ ಮಾತನಾಡಲಿಲ್ಲ.
ನಂತರದ ದಿನಗಳಲ್ಲಿ ಪ್ರಿಯಾಂಕಾ ಚೋಪ್ರಾ, ಆಯೇಷಾ ಟಾಲ್ಕಿಯಾ, ರಾಖಿ ಸಾವಂತ್, ವಾಣಿ ಕಪೂರ್ ಮತ್ತು ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಕೂಡ ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಶಸ್ತ್ರಚಿಕಿತ್ಸೆಯನ್ನು ಆಶ್ರಯಿಸಿದ್ದಾರೆ.