ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ವಿರುದ್ಧ ಕೇಸ್ ದಾಖಲಿಸಿದ ಇಡಿ

  • ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಪ್ರಸಾರಕ್ಕೆ ಆಪ್
  • ಹಾಟ್‌ಶಾಟ್ಸ್  ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದ ಕುಂದ್ರಾ
  • ಯುಕೆ ಮೂಲದ ಕ್ರೆನಿನ್‌ಗೆ ಆಪ್‌ನ್ನು ಮಾರಿದ್ದ ಶಿಲ್ಪಾ ಪತಿ
  • 13 ಬ್ಯಾಂಕ್ ಖಾತೆಗಳೊಂದಿಗೆ ಕೋಟ್ಯಂತರ ರೂಪಾಯಿ ವಹಿವಾಟು
ED books shilpa shetty husband Raj Kundra for money laundering in porn racket case akb

ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಪ್ರಸಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವೂ ನಟಿ ಶಿಲ್ಪಾ ಶೆಟ್ಟಿ (Shilpa Shetty) ಪತಿ ಉದ್ಯಮಿ ರಾಜ್ ಕುಂದ್ರಾ (Raj Kundra) ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಕುಂದ್ರಾ ಅವರು ಫೆಬ್ರವರಿ 2019 ರಲ್ಲಿ ಆರ್ಮ್ಸ್ ಪ್ರೈಮ್ ಮೀಡಿಯಾ ಲಿಮಿಟೆಡ್ (Arms Prime Media Limited) ಎಂಬ ಕಂಪನಿಯನ್ನು ಸ್ಥಾಪಿಸಿದರು ಮತ್ತು ಹಾಟ್‌ಶಾಟ್ಸ್ (Hotshots) ಹೆಸರಿನ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದರು. ನಂತರ ಈ ಹಾಟ್‌ಶಾಟ್ಸ್ ಅಪ್ಲಿಕೇಶನ್ ಅನ್ನು ಯುಕೆ ಮೂಲದ ಕಂಪನಿ(UK based compan) ಕೆನ್ರಿನ್‌ಗೆ (Kenrin) ಮಾರಾಟ ಮಾಡಲಾಯಿತು. ಗಮನಾರ್ಹ ವಿಚಾರವೆಂದರೆ ಈ ಯುಕೆ ಮೂಲದ ಕಂಪನಿ ಕೆನ್ರಿನ್‌ನ ಸಿಇಒ ಪ್ರದೀಪ್ ಬಕ್ಷಿ (Pradeep Bakshi) ಅವರು ವಾಸ್ತವವಾಗಿ ರಾಜ್ ಕುಂದ್ರಾ ಅವರ ಸೋದರ ಮಾವ ಎಂದು ಇಡಿ ನಡೆಸಿದ ವಿಚಾರಣೆಯಿಂದ ತಿಳಿದು ಬಂದಿದೆ. 

ಇದಲ್ಲದೆ, ಹಾಟ್‌ಶಾಟ್ಸ್ ಅಪ್ಲಿಕೇಶನ್‌ನ ನಿರ್ವಹಣೆಗಾಗಿ, ಕುಂದ್ರಾ ಅವರ ಕಂಪನಿ ವಿಯಾನ್ ಇಂಡಸ್ಟ್ರೀಸ್ (Viaan Industries) ಕೆನ್ರಿನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಮತ್ತು ಇದಕ್ಕಾಗಿ ವಿಯಾನ್‌ನ 13 ಬ್ಯಾಂಕ್ ಖಾತೆಗಳೊಂದಿಗೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಟ್‌ಶಾಟ್ಸ್ ಅಪ್ಲಿಕೇಶನ್ ವಾಸ್ತವವಾಗಿ ಪೋರ್ನ್ ಚಲನಚಿತ್ರಗಳಿಗೆ ವೇದಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನು ಭಾರತದಲ್ಲಿ ನಿರ್ಮಿಸಲಾಗಿದೆ ಮತ್ತು ಚಂದಾದಾರಿಕೆ ನೀಡಲು ಹಾಟ್‌ಶಾಟ್ಸ್ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಹೀಗೆ ಚಂದಾದಾರರ ಮೂಲಕ ಗಳಿಸಿದ ಹಣದ ಮೊತ್ತವನ್ನು ಕುಂದ್ರಾ ಅವರ ಕಂಪನಿ ವಿಯಾನ್ ಇಂಡಸ್ಟ್ರೀಸ್ ಹೆಸರಿನಲ್ಲಿ ವಹಿವಾಟಿಗೆ ಬಳಸಲಾಗಿತ್ತು.

Raj Kundra ಅವರ ಫುಲ್‌ ಮಾಸ್ಕ್‌ ಆವತಾರ ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್‌

ಈ ಮೂಲಕ ಪೋರ್ನ್ ಚಿತ್ರಗಳಿಂದ ಗಳಿಸಿದ ಹಣವು ಯುಕೆ ಮೂಲಕ ಚಲಾವಣೆಯಲ್ಲಿರುವ ಕುಂದ್ರಾ ಕಂಪನಿಯ ಖಾತೆಗೆ ಬರುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅವರನ್ನು ಜುಲೈ 19, 2021 ರಂದು ಇತರ 11 ಜನರೊಂದಿಗೆ ಅಶ್ಲೀಲ ಚಿತ್ರಗಳನ್ನು ನಿರ್ಮಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಸೆಪ್ಟೆಂಬರ್ 20 ರಂದು ಮುಂಬೈ ನ್ಯಾಯಾಲಯವು ಈ ಪ್ರಕರಣದಲ್ಲಿ 50,000 ರೂಪಾಯಿಗಳ ಶ್ಯೂರಿಟಿಯ ಮೇಲೆ ಕುಂದ್ರಾ ಅವರಿಗೆ ಜಾಮೀನು ನೀಡಿತು. ಹಾಟ್‌ಶಾಟ್ಸ್ ಎಂಬ  ಚಾಲಿತ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಅಶ್ಲೀಲ ಚಲನಚಿತ್ರಗಳನ್ನು ನಿರ್ಮಿಸಲು ಮತ್ತು ವಿತರಿಸಿದ ಆರೋಪವನ್ನು ಕುಂದ್ರಾ ವಿರುದ್ಧ ಹೊರಿಸಲಾಗಿತ್ತು. ಈ ಮಧ್ಯೆ ಕುಂದ್ರಾ ಪ್ರಕರಣದಲ್ಲಿ ನನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಹೇಳುವ ಮೂಲಕ ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದರು. 

ಕಳೆದ ವರ್ಷ ಜುಲೈನಲ್ಲಿ ಪೋರ್ನ್ ದಂಧೆಗೆ ಸಂಬಂಧಿಸಿದಂತೆ ರಾಜ್ ಅವರನ್ನು ಬಂಧಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಜಾಮೀನು ಮೇಲೆ  ಬಿಡುಗಡೆ ಮಾಡಲಾಗಿತ್ತು.  ಮಂಗಳೂರು ಸುಂದರಿ, ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ, ಪತಿ ಅಶ್ಲೀಲ ಸಿನಿಮಾ ದಂಧೆಯಲ್ಲಿ ಸಿಲುಕಿಕೊಂಡ ನಂತರ ಸಾಮಾಜಿಕ ಜಾಲತಾಣದಿಂದ ದೂರ ಉಳಿದುಕೊಂಡಿದ್ದು, ಸಾರ್ವಜನಿಕವಾಗಿಯೂ ಕಾಣಿಸಿಕೊಳ್ಳುತ್ತಿಲ್ಲ.ಈ ನಡುವೆ ಕಳೆದ ಏಪ್ರಿಲ್‌ನಲ್ಲಿ ರಾಜ್‌ ಕುಂದ್ರಾ ಅವರು ತನ್ನ ಮುಖವನ್ನು ಸಂಪೂರ್ಣವಾಗಿ ಮುಚ್ಚುವ ಔಟ್‌ಫಿಟ್‌ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ರಾಜ್‌ ಕುಂದ್ರ ಅವರ ಈ ಲುಕ್‌ ಅನ್ನು ಜನ ಗೇಲಿ ಮಾಡಿದ್ದರು. ಜೈಲಿನಿಂದ ರಾಜ್ ಹೊರ ಬಂದ ನಂತರ ಮಾಸ್ಕ್‌ ಮಾತ್ರವಲ್ಲ ಕಣ್ಣುಗಳನ್ನು ಮುಚ್ಚಿಕೊಂಡು ಓಡಾಡಿದ್ದರು. ಬಟ್ಟೆಗೆ ಮ್ಯಾಚ್ ಆಗುವಂತ ಕಲರ್‌ನ ಮಾಸ್ಕ್‌ನಲ್ಲಿ ಮುಖ ಮುಚ್ಚಿಕೊಂಡು ಅವರು ಓಡಾಡುತ್ತಿದ್ದರು. ರಾಜ್‌ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಆದರೆ ಕೆಲಸದ ಮೇಲೆ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡುತ್ತಿದ್ದಾರೆ, ಹೀಗಾಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು

Latest Videos
Follow Us:
Download App:
  • android
  • ios