ವೀರಪ್ಪನ್‌ನಿಂದ ಗಬ್ಬರ್ ಸಿಂಗ್ ವರೆಗೆ; ಭಯಾನಕ ಡಕಾಯಿತ ಪಾತ್ರಗಳಲ್ಲಿ ಮಿಂಚಿದ ಸ್ಟಾರ್ಸ್
ರಣಬೀರ್ ಕಪೂರ್ (Ranbir kapoor), ಸಂಜಯ್ ದತ್ (Sanjay Dutt) ಮತ್ತು ವಾಣಿ ಕಪೂರ್ (Vaani kapoor) ಅಭಿನಯದ 'ಶಂಶೇರಾ' (Shamshera) ಚಿತ್ರದ ಟ್ರೈಲರ್ ಶುಕ್ರವಾರ ಹೊರಬಂದಿದೆ. ಸುಮಾರು ಮೂರು ವರ್ಷಗಳ ನಂತರ ಮತ್ತೊಮ್ಮೆ ದರೋಡೆಕೋರ ಪಾತ್ರದ ಸಿನಿಮಾ ಹಿರಿತೆರೆಯಲ್ಲಿ ಬರಲಿದೆ. ಆದರೆ ಈ ರೀತಿಯ ಕಥೆಯನ್ನು ಆಗಾಗ ತೆರೆಯ ಮೇಲೆ ನೋಡುತ್ತಿದ್ದ ಕಾಲವೊಂದಿತ್ತು. ಸಿನಿಮಾಗಳ ಅನೇಕ ಭಯಾನಕ ಡಕಾಯಿತರ ಪಾತ್ರಗಳು ಇಂದಿಗೂ ಜನರ ನೆನಪಿನಲ್ಲಿವೆ. ಅವುಗಳಲ್ಲಿ ಕೆಲವು ಇಲ್ಲಿದೆ.
ಪಾತ್ರ: ಗಬ್ಬರ್ ಸಿಂಗ್
ನಟ: ಅಮ್ಜದ್ ಖಾನ್
ಚಿತ್ರ: ಶೋಲೆ
1975ರಲ್ಲಿ ತೆರೆಕಂಡ ‘ಶೋಲೆ’ ಚಿತ್ರದಲ್ಲಿ ಅಮ್ಜದ್ ಖಾನ್ ನಿರ್ವಹಿಸಿದ ಗಬ್ಬರ್ ಪಾತ್ರ ಇಂದಿಗೂ ಜನರ ಮನಸ್ಸಿನಲ್ಲಿದೆ. ಚಿತ್ರದಲ್ಲಿ ಅಮ್ಜದ್ ಅವರ ಲುಕ್ ಜೊತೆಗೆ ಅವರ ಡೈಲಾಗ್‌ಗಳು ಸಹ ಸಖತ್ ಫೇಮಸ್ ಆಗಿದ್ದವು ಹಾಗೂ ಎವರ್‌ಗ್ರೀನ್ ಕೂಡ ಹೌದು.
ಪಾತ್ರ: ಜಾಗೀರ
ನಟ: ಮುಖೇಶ್ ತಿವಾರಿ
ಚಿತ್ರ: ಚೀನಾ ಗೇಟ್
ಈ ಚಿತ್ರ ಫ್ಲಾಪ್ ಆಗಿರಬಹುದು. ಆದರೆ ಜಾಗೀರ ಡಾಕುವಿನ ಪಾತ್ರ ಎಲ್ಲರ ಗಮನ ಸೆಳೆಯುವಲ್ಲಿ ಹಿಂದೆ ಬಿಳಲಿಲ್ಲ. ಈ ಪಾತ್ರಕ್ಕೆ ಮುಖೇಶ್ ತಿವಾರಿ ಜೀವ ತುಂಬಿದ್ದಾರೆ. ಹಲವು ಡೈಲಾಗ್‌ಗಳು ಇಂದಿಗೂ ಜನಪ್ರಿಯವಾಗಿ ಉಳಿದಿದೆ.
ಪಾತ್ರ: ಪುರ್ಖಿಯಾ
ನಟ: ಅಮರೀಶ್ ಪುರಿ
ಚಿತ್ರ: ಯತೀಮ್
'ಯತೀಂ' ಚಿತ್ರದಲ್ಲಿ ಅಮರೀಶ್ ಪುರಿ ಡಕಾಯಿತ ಪುರ್ಖಿಯಾ ಪಾತ್ರವನ್ನು ನಿರ್ವಹಿಸಿದ್ದಾರೆ. ಅಮರೀಶ್ ಪುರಿ ಅವರ ಧ್ವನಿಯಲ್ಲಿ ಡೈಲಾಗ್‌ಗಳು ಪುರ್ಖಿಯಾ ಪಾತ್ರದ ಭಯಾನಕತೆಯನ್ನು ತೆರೆಯ ಮೇಲೆ ಯಶಸ್ವಿಯಾಗಿ ಬರುವಂತೆ ಮಾಡಿತ್ತು.
ಪಾತ್ರ: ಶೇರಾ
ನಟ: ಅಮರೀಶ್ ಪುರಿ
ಚಿತ್ರ: ಲೋಹಾ
ಡೈಲಾಗ್ ಗಳ ಮೂಲಕ ಭಯದ ವಾತಾವರಣ ಸೃಷ್ಟಿಸಿದ್ದ ‘ಲೋಹ’ ಚಿತ್ರದ ಶೇರಾ ಡಾಕು ಪಾತ್ರವನ್ನು ಸಹ ಯಾರು ಮರೆಯಲು ಸಾಧ್ಯವಿಲ್ಲ. ಅಮರೀಶ್ ಪುರಿ ಈ ಪಾತ್ರವನ್ನು ಎಷ್ಟು ಅದ್ಭುತವಾಗಿ ನಿರ್ವಹಿಸಿದ್ದಾರೆ ಎಂದರೆ ಇಂದಿಗೂ ಜನರು ಇದನ್ನು ಅವರ ಅತ್ಯಂತ ಜನಪ್ರಿಯ ಪಾತ್ರವೆಂದು ಪರಿಗಣಿಸುತ್ತಾರೆ.
ಪಾತ್ರ: ವೀರಪ್ಪನ್
ನಟ: ಸಂದೀಪ್ ಭಾರದ್ವಾಜ್
ಚಿತ್ರ: ವೀರಪ್ಪನ್
ದಕ್ಷಿಣ ಭಾರತದ ಕುಖ್ಯಾತ ಶ್ರೀಗಂಧದ ಸ್ಮಗ್ಲರ್ ವೀರಪ್ಪನ್ ಪಾತ್ರವನ್ನು ಸಂದೀಪ್ ಭಾರದ್ವಾಜ್ ಅವರಿಗಿಂತ ಉತ್ತಮವಾಗಿ ಯಾರೂ ನಿರ್ವಹಿಸಲಾರರು. ವೀರಪ್ಪನ್ ಭಯವನ್ನು ತೆರೆ ಮೇಲೆ ಇಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತಿತ್ತು.