- Home
- Entertainment
- Cine World
- ಯಾರೇ ನೀನು ಅಂತ ಕೇಳೋ ಹಾಗಿಲ್ಲ, ಹುಶಾರು.. ಯಾಕಂದ್ರೆ, ಈ ಹೂವೇ ಹೇಳಿದೆ 'ಯಾವ ಹೂ' ಅಂತ!
ಯಾರೇ ನೀನು ಅಂತ ಕೇಳೋ ಹಾಗಿಲ್ಲ, ಹುಶಾರು.. ಯಾಕಂದ್ರೆ, ಈ ಹೂವೇ ಹೇಳಿದೆ 'ಯಾವ ಹೂ' ಅಂತ!
ಸಿನಿಮಾರಂಗದಲ್ಲಿ ಒಬ್ಬ ಕಲಾವಿದೆಯಾಗಿಯೆ ಬೆಳೀಬೇಕು ಅಂದರೆ ಒಂದಷ್ಟು ಸಿದ್ಧತೆ ಬೇಕಾಗುತ್ತದೆ. ಅದಿನ್ನು ಚೆನ್ನಾಗಿ ಅರಿತಿರುವ ನಟಿ ಶ್ರುತಿ ಮಗಳು ಗೌರಿ, ಅಭಿನಯ ತರಬೇತಿ ಜೊತೆಗೆ ರಂಗುರಂಗಿನ ಫೋಟೋಶೂಟ್ ಕೂಡ ಮಾಡಿಕೊಳ್ಳುತ್ತಿದ್ದಾರೆ. ಹೇಗಿದೆ ನೋಡಿ ಗೌರಿ ಶ್ರುತಿಯ ಈ ಕಲರ್‌ಫುಲ್ ಫೋಟೋಸ್..!?

ಕನ್ನಡದ ಹಿರಿಯ ನಟಿ ಶ್ರುತಿ ಮಗಳು ಗೌರಿ ಹೊಸ ಫೋಟೋ ಶೂಟ್ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ. ಗ್ಲಾಮರ್ ಜೊತೆಗೆ ಸಂಪ್ರದಾಯವೂ ಮೇಳೈಸಿದಂತಿರುವ ಈ ಫೋಟೋಗಳು ಹಲವರ ಕಣ್ಣುಕುಕ್ಕುತ್ತಿವೆ.
ಈ ಮೊದಲು ಕೂಡ ಗೌರಿ ಶ್ರುತಿ ಮಗಳ ಸಾಕಷ್ಟು ಫೋಟೋಗಳು ಇತ್ತೀಚೆಗೆ ವೈರಲ್ ಆಗಿದ್ದವು. ಕಲೆವು ಅಪ್ಪಟ ಗ್ಲಾಮರ್ ಲುಕ್ ಹೊಂದಿದ್ದರೆ ಇನ್ನೂ ಕೆಲವು ‘ಗರತಿ ಗೌರಮ್ಮ’ ಲುಕ್ ಹೊಂದಿದ್ದು ಕಣ್ಮನ ಸೆಳೆದಿದ್ದವು.
ನಟಿ ಶ್ರುತಿ ಮಗಳು ಗೌರಿ ಅದ್ಭುತವಾಗಿ ಹಾಡಬಲ್ಲರು. ಅಮ್ಮನ ಬರ್ತ್‌ಡೇ ಸಂದರ್ಭದಲ್ಲಿ ಹಾಡಿ ಭಾವುಕರಾಗಿದ್ದ ಗೌರಿಯ ವಿಡಿಯೋಗಳು ವೈರಲ್ ಆಗಿದ್ದವು.
ಸದ್ಉ ಗೌರಿ ಅವರು ಚಿತ್ರರಂಗಕ್ಕೆ ಬರುವ ಸಿದ್ಧತೆಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿಯೇ ಹಲವು ಬಗೆಯ ಫೋಟೋಶೂಟ್‌ಗಳನ್ನು ಮಾಡಿದ್ದು, ಅವರುಗಳನ್ನು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಅಭಿನಯವು ಅಮ್ಮನಿಂದಲೇ ರಕ್ತಗತವಾಗಿ ಬಂದಿರಬಹುದು. ಆದರೂ ಸಹ ಡಾನ್ಸ್, ಆಕ್ಟಿಂಗ್ ಎಲ್ಲವನ್ನೂ ಕರಗತ ಮಾಡಿಕೊಳ್ಳುತ್ತಿದ್ದಾರೆ ಗೌರಿ ಎನ್ನಲಾಗುತ್ತಿದೆ.
ಗೌರಿ ನಟಿಸಲಿರುವ ಸಿನಿಮಾ ಯಾವುದು, ನಿರ್ದೇಶಕರು ಯಾರು ಎಂಬುದು ಸದ್ಯಕ್ಕೆ ರಿವೀಲ್ ಆಗಿಲ್ಲ. ಆದರೆ, ಅಮ್ಮನಂತೆ ಸಿನಿಮಾದಲ್ಲಿ ನಟಿಸಲು ಮನಸ್ಸಿದೆ, ಅದಕ್ಕಾಗಿ ಭಾರೀ ತಯಾರಿ ನಡೆಸುತ್ತಿದ್ದಾರೆ ಎಂಬ ಮಾತಂತೂ ಓಡಾಡುತ್ತಿದೆ.
ನಟಿ ಶ್ರುತಿ ಕೂಡ ತಮ್ಮ ಮಗಳು ಸಿನಿಮಾದಲ್ಲಿ ನಟಿಸುವ ಬಗ್ಗೆ ಆಸಕ್ತಿ ಹೊಂದಿದ್ದಾರೆ, ಮಗಳ ಆಸೆಯ ಗಿಡಕ್ಕೆ ನೀರು ಹಾಕುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಶ್ರುತಿ ಮಗಳು ಗೌರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುವ ಕ್ಷಣ ಸನ್ನಿಹಿತವಾಗುತ್ತಿದೆ ಎನ್ನಬಹುದು.
ಅಂದಹಾಗೆ, ಈ ಫೊಟೋಶೂಟ್‌ಗೆ ಸ್ವತಃ ಗೌರಿ ಅವರೇ ‘ಗುಲಾಬಿ ಎನ್ನಿಸಿದೆ’ (Felt like a 🌹) ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

