- Home
- Entertainment
- Cine World
- ಬೆ*ತ್ತಲಾಗಿ ಮಲಗಿದ್ದೆ, ಕಟ್ ಕಟ್ ಹೇಳಿದ ಮೇಲೂ ನಟ... ಶೂಟಿಂಗ್ನ ಕರಾಳತೆ ತೆರೆದಿಟ್ಟ ಬಾಲಿವುಡ್ ನಟಿ Sayani Gupta
ಬೆ*ತ್ತಲಾಗಿ ಮಲಗಿದ್ದೆ, ಕಟ್ ಕಟ್ ಹೇಳಿದ ಮೇಲೂ ನಟ... ಶೂಟಿಂಗ್ನ ಕರಾಳತೆ ತೆರೆದಿಟ್ಟ ಬಾಲಿವುಡ್ ನಟಿ Sayani Gupta
ಬಾಲಿವುಡ್ ನಟಿ ಸಯಾನಿ ಗುಪ್ತಾ, ನಗ್ನ ಮತ್ತು ಅರೆನಗ್ನ ದೃಶ್ಯಗಳ ಚಿತ್ರೀಕರಣದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ಗೋಪ್ಯತೆ ಕಾಪಾಡಿ ಚಿತ್ರೀಕರಣ ನಡೆಸಿದರೆ, ಸಹ-ನಟರಿಂದ ಅನುಚಿತ ವರ್ತನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮುಜುಗರದಂತಹ ಘಟನೆ ಎದುರಿಸಿದ್ದಾಗಿ ಅವರು ವಿವರಿಸಿದ್ದಾರೆ.

ಯಾವ ಹಂತಕ್ಕೂ ಸಿದ್ಧ
ಚಿತ್ರತಾರೆಯರು ಎಂದರೆ ಇದೀಗ ಪೈಪೋಟಿಗೆ ಬಿದ್ದವರಂತೆ ಬಟ್ಟೆ ಕಳಚುವುದು ಮಾಮೂಲಾಗಿಬಿಟ್ಟಿದೆ. ಇದೇ ಕಾರಣಕ್ಕೆ ಇಂಥವರ ಸಂಖ್ಯೆ ಹೆಚ್ಚಾಗಿರುವ ಕಾರಣ, ಚಿತ್ರರಂಗದಲ್ಲಿ ತಮ್ಮ ಸ್ಥಾನ ಭದ್ರವಾಗಿಸಿಕೊಳ್ಳಲು ಸಂಪೂರ್ಣವಾಗಿ ನಗ್ನ ಆಗಲು ಮುಂದಾಗುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಬಾಲಿವುಡ್ ನಟಿ ಸಯಾನಿ ಗುಪ್ತಾ
ಗೋಪ್ಯತೆ ಕಾಪಾಡ್ತಾರೆ
ನಟಿ ಸಯಾನಿ ಗುಪ್ತಾ ಇಂಥ ನಗ್ನ, ಅರೆನಗ್ನ ದೃಶ್ಯಗಳನ್ನು (intimate scenes) ಚಿತ್ರೀಕರಿಸುವ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದಾರೆ. ಫಿಲ್ಮಿಗ್ಯಾನ್‌ಗೆ ನೀಡಿದ ಸಂದರ್ಶನದಲ್ಲಿ, ನಟಿ, ಇಂಥ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ಗೋಪ್ಯತೆ ಕಾಪಾಡಲಾಗುತ್ತದೆ. ಎರಡು ಕ್ಯಾಮೆರಾಗಳ ಮುಂದೆ ಸಂಪೂರ್ಣ ನಗ್ನವಾಗಿ ಮಲಗಿದ್ದರೂ ಅಲ್ಲಿರುವ ಇಬ್ಬರು ಪುರುಷ ಸಿಬ್ಬಂದಿ ಬಿಟ್ಟು ಬೇರೆ ಯಾರಿಗೂ ಅವಕಾಶ ನೀಡುವುದಿಲ್ಲ. ತುಂಬಾ ಕಂಫರ್ಟ್ ಆಗಿರುತ್ತದೆ ಎಂದಿದ್ದಾರೆ. ಛಾಯಾಗ್ರಹಣ ನಿರ್ದೇಶಕರು ಮತ್ತು ಇನ್ನೊಬ್ಬ ಸಹಾಯಕ ಮಾತ್ರ ಇರುತ್ತಾರೆ. ಅವರೆಲ್ಲರೂ ವೃತ್ತಿಪರವಾಗಿ ನಡೆದುಕೊಳ್ಳುತ್ತಾರೆ ಎಂದಿದ್ದಾರೆ.
ಕಟ್ ಕಟ್ ಎಂದರೂ
ಇದೇ ನಟಿ ಈಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ತಾವು ಅನುಭವಿಸಿದ್ದ ಕಿರಿಕಿರಿ ಬಗ್ಗೆ ಮಾತನಾಡಿದ್ದರು. ನಾನು ಸಂಪೂರ್ಣವಾಗಿ ನಗ್ನವಾಗಿ ಮಲಗಿದ್ದಾಗ ನಾಯಕ ನನ್ನನ್ನು ಚುಂಬಿಸುವ ದೃಶ್ಯವಿತ್ತು. ನಿರ್ದೇಶಕರು ಕಟ್ ಕಟ್ ಎಂದರೂ ಆತ ನನ್ನನ್ನು ಚುಂಬಿಸುವುದನ್ನು ಮುಂದುವರೆಸಿದ್ದ. ಇದರಿಂದ ನನಗೆ ತುಂಬಾ ಹಿಂಸೆಯಾಗಿತ್ತು ಎಂದಿದ್ದಾರೆ.
ಅನುಚಿತ ವರ್ತನೆ
ಕೆಲವು ಸಂದರ್ಭದಲ್ಲಿ, ನಟರು ಇಂಥ ದೃಶ್ಯಗಳ ಲಾಭ ಪಡೆದುಕೊಳ್ಳಲು ನೋಡುತ್ತಾರೆ, ಅನುಚಿತವಾಗಿ ವರ್ತಿಸುತ್ತಾರೆ. ದೃಶ್ಯಮುಗಿದ ಮೇಲೂ ಅದನ್ನು ಮುಂದುವರೆಸುತ್ತಾರೆ. ಇದರಿಂದ ತುಂಬಾ ಸಮಸ್ಯೆ ಎದುರಾಗುವುದೂ ಇದೆ ಎಂದಿದ್ದಾರೆ.
ಕಡಲ ತೀರದ ಮರಳು
ಇನ್ನೊಂದು ದೃಶ್ಯದ ಬಗ್ಗೆ ಮಾತನಾಡಿರೋ ನಟಿ ಸಯಾನಿ ಗುಪ್ತಾ, ಆ ದೃಶ್ಯದಲ್ಲಿ ಅತ್ಯಂತ ಚಿಕ್ಕ ಉಡುಪಿನಲ್ಲಿ ನಾನು ಕಡಲತೀರದ ಮರಳಿನ ಮೇಲೆ ಮಲಗಬೇಕಾಗಿತ್ತು. ಗೋವಾದಲ್ಲಿ "ಫೋರ್ ಮೋರ್ ಶಾಟ್ಸ್ ಪ್ಲೀಸ್" ನ ಮೊದಲ ಸೀಸನ್ ಚಿತ್ರೀಕರಣದಲ್ಲಿ ಈ ಘಟನೆ ನಡೆದಿತ್ತು ಎನ್ನುತ್ತಾ ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.
ತುಂಡುಡುಗೆಯಲ್ಲಿ ಗೋವಾ ಬೀಚ್ನಲ್ಲಿ
"ನಾನು ಸಣ್ಣ ಉಡುಪಿನಲ್ಲಿ ಬೀಚ್ ಮರಳಿನ ಮೇಲೆ ಮಲಗಬೇಕಾಯಿತು, ನನ್ನ ಮುಂದೆ ಸಿಬ್ಬಂದಿ ಸೇರಿದಂತೆ ಸುಮಾರು 70 ಜನರು ಇದ್ದರು. ಆ ಸಮಯದಲ್ಲಿ ನನಗೆ ತುಂಬಾ ಅಸುರಕ್ಷಿತ ಅನಿಸಿತು. ಸೆಟ್‌ನಲ್ಲಿ ನನ್ನ ಪಕ್ಕದಲ್ಲಿ ಒಬ್ಬ ವ್ಯಕ್ತಿಯೂ ಇರಲಿಲ್ಲ, ಮುಖ್ಯ ಸಿಬ್ಬಂದಿಯೂ ಇರಲಿಲ್ಲ. ಸ್ವಲ್ಪ ಸಮಯದಲ್ಲಿಯೇ 800ಕ್ಕೂ ಅಧಿಕ ಮಂದಿ ಅಲ್ಲಿ ಜವಾಯಿಸಿದ್ದರು. ನನಗೆ ಯಾರಾದರೂ ಹೊದ್ದುಕೊಳ್ಳಲು ಬಟ್ಟೆ ನೀಡುತ್ತಾರೆಯೇ ಎಂದು ಹುಡುಕಿದರೂ ಒಬ್ಬರ ಬಳಿಯೂ ಬಟ್ಟೆ ಇರಲಿಲ್ಲ. ಆ ತುಂಡುಡುಗೆಯಲ್ಲಿಯೇ ತುಂಬಾ ಮುಜುಗರ ಅನುಭವಿಸಿದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

