- Home
- Entertainment
- Cine World
- Sara Ali Khan White Outfit: ವೈಟ್ ನೆಟ್ ಡ್ರೆಸ್‌ನಲ್ಲಿ ಮಿಂಚಿದ ಸಾರಾ, ಫ್ಯಾನ್ಸ್ ಫುಲ್ ಫಿದಾ!
Sara Ali Khan White Outfit: ವೈಟ್ ನೆಟ್ ಡ್ರೆಸ್‌ನಲ್ಲಿ ಮಿಂಚಿದ ಸಾರಾ, ಫ್ಯಾನ್ಸ್ ಫುಲ್ ಫಿದಾ!
ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali khan) ಯೂನಿಕ್ ಫ್ಯಾಶನ್ ಸೆನ್ಸ್ ಹೊಂದಿದ್ದಾರೆ. ಅವರು ಎಕ್ಸ್‌ಫೋಸ್ ಮಾಡುವ ಡ್ರೆಸ್‌ಗಳನ್ನು ಧರಿಸುವುದಿಲ್ಲ. ನಟಿ ನಿರಂತರವಾಗಿ ತಮ್ಮ ಫೋಟೊಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಸಾರಾ ಅಲಿ ಖಾನ್ ಇನ್ಸ್ಟಗ್ರಾಮ್‌ನಲ್ಲಿ ಹಲವು ಫೋಟೋಳನ್ನು ಹಂಚಿಕೊಂಡಿದ್ದಾರೆ. ಆ ಫೋಟೋಗಳು ಸಖತ್ ವೈರಲ್ ಆಗಿವೆ.

ಸಾರಾ ಅಲಿ ಖಾನ್ ಇತ್ತೀಚೆಗೆ ಬಿಳಿ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿದ್ದಾರೆ. ಅದರ ಐದು ಫೋಟೊಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
ಸಾರಾ ಬಿಳಿಯ ನೆಟ್ ಟಾಪ್ ಮತ್ತು ಸ್ಕರ್ಟ್ ಧರಿಸಿದ್ದಾರೆ. ಫುಲ್ ಸ್ಲೀವ್ ಡ್ರೆಸ್ ನಲ್ಲಿ ಸುಂದರವಾಗಿ ಕಾಣಿಸುತ್ತಿರುವ ಸಾರಾ ಅವರು ತಮ್ಮ ಕೂದಲನ್ನು ಕಟ್ಟದೆ ಹಾಗೇ ಬಿಟ್ಟಿದ್ದಾರೆ. ಲೈಟ್ ಮೇಕಪ್‌ನೊಂದಿಗೆ ತಮ್ಮ ಲುಕ್ ಕಂಪ್ಲೀಟ್ ಮಾಡಿದ್ದಾರೆ.
'ಮೇರಿಯ ಬಳಿ ಒಂದು ಪುಟ್ಟ ಕುರಿಮರಿ ಇತ್ತು. ಅದರ ಉಣ್ಣೆಯು ಹಿಮದಂತೆ ಬಿಳಿಯಾಗಿತ್ತು. ಸಾರಾ ಲಕ್ಷ್ಮಿ ಮತ್ತು ಫ್ಲೋ ಅನ್ನು ತೆಗೆದುಕೊಂಡರು. ಬಟ್ಟೆಯನ್ನು ತಯಾರಿಸಲಾಯಿತು ಮತ್ತು ನಂತರ ಕ್ಯಾಮೆರಾ ರೋಲ್ ಆಯಿತು ಎಂದು ಫೋಟೋ ಜೊತೆ ಸಾರಾ ಬರೆದಿದ್ದಾರೆ.
ಸಾರಾರ ಈ ಫೋಟೋ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅಭಿಮಾನಿಯೊಬ್ಬರು ಸಾರಾ ಅಲಿ ಖಾನ್ ಅವರನ್ನು 'ಹುಣ್ಣಿಮೆಯ ಚಂದ್ರ' ಎಂದು ಕರೆದರು. 'ನಿಮ್ಮ ಹೊಳೆಯುವ ಮುಖದ ರಹಸ್ಯವೇನು' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಫೋಟೋದಲ್ಲಿ ಅವರ ಮುಖವು ಬಿಸಿಲಿನಲ್ಲಿ ಹೊಳೆಯುತ್ತಿರುವುದು ಕಂಡುಬರುತ್ತದೆ. ಸಾರಾ ಅವರ ಬಿಳಿ ಡ್ರೆಸ್ ಸುಂದರ, ಮನಮೋಹ ಲುಕ್‌ಗೆ ಫ್ಯಾನ್ಸ್ ಅನ್ನು ಬೆರಗುಗೊಳಿಸುತ್ತದೆ ಹಾಗೂ ಫೋಟೋಗಳು ಭಾರೀ ಲೈಕ್ ಗಳಿಸಿದೆ.
ಸಾರಾ ಅಲಿ ಖಾನ್ ಅವರ ಇತ್ತೀಚೆಗಷ್ಟೇ ಬಿಡುಗಡೆಯಾದ 'ಅತ್ರಂಗಿ ರೇ' ಸಿನಿಮಾಲ್ಲಿನ ನಟಿಯ ರಿಂಕು ಪಾತ್ರವನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಧನುಷ್ ಅವರೊಂದಿಗೆ ಸಾರಾ ಕಾಣಿಸಿಕೊಂಡಿದ್ದಾರೆ. ಇದರ ‘ಚಕ ಚಕ್’ ಹಾಡು ಕೂಡ ಹವಾ ಕ್ರಿಯೇಟ್ ಮಾಡಿದೆ.
ಸಾರಾ ಅಲಿ ಖಾನ್ ಅವರು ತಮ್ಮ ಮುಂದಿನ ಚಿತ್ರ 'ಲುಕಾ ಚುಪ್ಪಿ 2' ಚಿತ್ರೀಕರಣವನ್ನು ಇಂದೋರ್‌ನಲ್ಲಿ ನಡೆಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸಾರಾ ಮೊದಲ ಬಾರಿಗೆ ವಿಕ್ಕಿ ಕೌಶಲ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.