Sara Ali Khan About Family: 'ಒಡೆದ ಮನೆಯಿಂದ ಬಂದವಳು'..! ಸಾರಾ ಹೇಳೋದಿಷ್ಟು
- ಒಡೆದ ಮನೆಯಿಂದ ಬಂದವಳು ಅಂದ್ರೆ ಏನಂತಾರೆ ಸಾರಾ ?
- ಅಪ್ಪ-ಅಮ್ಮನ ವಿಚ್ಚೇದನೆ, ಬಡವಾದ ಕುಟುಂಬ..!
ಲವ್ ಆಜ್ ಕಲ್ ನಂತರ ಸಾರಾ ಅಲಿ ಖಾನ್(Sara Ali Khan) ಫೇಮ್ ಸ್ವಲ್ಪ ಮಟ್ಟಿಗೆ ಡೌನ್ ಆಗಿತ್ತು. ಕಾರ್ತಿಕ್ ಆರ್ಯನ್ ಜೊತೆ ಮಾಡಿದ ಸಿನಿಮಾ ಅಷ್ಟಾಗಿ ಹಿಟ್ ಆಗದೆ ನಟಿಗೆ ಸ್ವಲ್ಪ ಹಿನ್ನಡೆಯಾಗಿತ್ತು. ಆದರೆ ಈಗ ಸಾರಾ ಮತ್ತೆ ಟ್ರ್ಯಾಕ್‌ಗೆ ಬಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅಟ್ರಾಂಗಿ ರೇ(Atrangi Rey) ಸಿನಿಮಾ ಮೂಲಕ ಮತ್ತೊಮ್ಮೆ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ. ಧನುಷ್, ಅಕ್ಷಯ್ ಕುಮಾರ್ (Akshay Kumar) ಅವರಂತಹ ಸೀನಿಯರ್ ನಟರ ಜೊತೆ ಸಮ ಸಮವಾಗಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ಒಡೆದ ಕುಟುಂಬದಿಂದ ಬಂದ ಹೆಣ್ಣುಮಗಳಾಗಿ ಕಾಣಿಸಿಕೊಂಡ ಸಾರಾ ಅಲಿ ಖಾನ್ ನಿಜ ಜೀವನದಲ್ಲೂ ಸಾಮಾನ್ಯ ಇದೇ ಪರಿಸ್ಥಿತಿಯ ಹಿನ್ನೆಲೆ ಹೊಂದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅಟ್ರಾಂಗಿ ಸಿನಿಮಾದ ರಿಂಕು ಪಾತ್ರ ಹಾಗೂ ತನ್ನ ನಿಜ ಜೀವನವು ಭಿನ್ನವಾಗಿದೆ, ಆದರೆ ಆ ದುರ್ಬಲತೆ ಮಾತ್ರ ಒಂದೇ ಆಗಿದೆ ಎಂದಿದ್ದಾರೆ ನಟಿ. ಸಂದರ್ಶನವೊಂದರಲ್ಲಿ ಈ ಫ್ಯಾಮಿಲಿ ಬ್ಯಾಗ್ರೌಂಡ್ ಬಗ್ಗೆ ನಟಿ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈಗಷ್ಟೇ ಮದ್ವೆಯಾದ ವಿಕ್ಕಿ ಕೌಶಲ್ ಮೇಲೆ ಸಾರಾಗೆ ಸ್ಪೆಷಲ್ ಇಂಟ್ರೆಸ್ಟ್
ಸಾರಾ ಒಂಬತ್ತು ವರ್ಷದವಳಿದ್ದಾಗ ಆಕೆಯ ಪೋಷಕರಾದ ಸೈಫ್ ಅಲಿ ಖಾನ್(Saif Ali Khan) ಮತ್ತು ಅಮೃತಾ ಸಿಂಗ್ ವಿಚ್ಛೇದನ ಪಡೆದರು. ಅವಳು ಮತ್ತು ಅವಳ ಕಿರಿಯ ಸಹೋದರ ಇಬ್ರಾಹಿಂ ಅಲಿ ಖಾನ್ ಅವರ ತಾಯಿಯ ಜೊತೆಗೆಯೇ ಬೆಳೆದರು. ಬಾಲಿವುಡ್ (Bollywood) ಹಂಗಾಮಾದೊಂದಿಗೆ ಮಾತನಾಡಿದ ಸಾರಾ, ನಾನು ಮತ್ತು ರಿಂಕು ಜೀವನ ವಿಭಿನ್ನವಾಗಿದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ನಾನು ಒಡೆದ ಮನೆಯಿಂದ ಬಂದಿದ್ದೇನೆ. ಇಲ್ಲದಿದ್ದರೂ ನನಗೆ ತುಂಬಾ ಬೆಂಬಲ ನೀಡುವ ಕುಟುಂಬವಿದೆ. ನನ್ನ ಪ್ರಕಾರ, ಒಡೆದ ಮನೆಗಿಂತ ಹೆಚ್ಚಾಗಿ, ನಾನು ಎರಡು ಮನೆಗಳಿಂದ ಬಂದಿದ್ದೇನೆ. ನಾನು ನಿಜವಾಗಿಯೂ ಒಂಟಿತನದ ಹೊರೆಯನ್ನು ಹೊತ್ತಿಲ್ಲ ಎಂದಿದ್ದಾರೆ.
ಸಾರಾ ಅವರು ರಿಂಕುಗಿಂತ 'ಹೆಚ್ಚು ಬಲವಾದ ಸಪೋರ್ಟಿಂಗ್ ವ್ಯವಸ್ಥೆಯನ್ನು' ಹೊಂದಿದ್ದಾರೆ ಎಂದಿದ್ದಾರೆ. ಆದರೆ ರಿಂಕು ಪಾತ್ರದ ದುರ್ಬಲತೆಯು ಅವರನ್ನು ಸಂಪರ್ಕಿಸುತ್ತದೆ ಎಂದಿದ್ದಾರೆ ನಟಿ. ನಾವಿಬ್ಬರೂ ಅಂತಿಮವಾಗಿ ದುರ್ಬಲ ವ್ಯಕ್ತಿಗಳು. ಆತ್ಮವಿಶ್ವಾಸದ ಸೋಗಿನಲ್ಲಿ ನಮ್ಮ ದುರ್ಬಲತೆಯನ್ನು ಮರೆಮಾಡುತ್ತೇವೆ ಎಂಬ ಅಂಶವು ನನಗೆ ಹೋಲುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಕುಟುಂಬದ ಬೆಂಬಲದ ಕೊರತೆ ಎಂದು ನಾನು ಭಾವಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಇಬ್ಬರೂ ಗಂಭೀರ ಸನ್ನಿವೇಶಗಳಿಗೆ ಹಾಸ್ಯದ ಮೂಲಕ ಪ್ರತಿಕ್ರಿಯಿಸಿದರೂ, ಅವರು ಕೂಡ ಕೆಲವೊಂದು ನೋವುಗಳನ್ನು ಅನುಭವಿಸುತ್ತಾರೆ ಎಂದಿದ್ದಾರೆ.
ಸಾರಾಳನ್ನು ನೋಡಿ ಚಕಾ ಚಕ್ ಆಂಟಿ ಅಂತಿದ್ದಾರೆ ಫ್ಯಾನ್ಸ್
ಸಾರಾ ಪಾತ್ರಧಾರಿ ರಿಂಕು ತನ್ನ ಅಜ್ಜಿ ಜೊತೆ ಬೆಳೆದ ಅನಾಥ ಹುಡುಗಿ. ಅವಳು ಆಘಾತಕಾರಿ ಬಾಲ್ಯವನ್ನು ಹೊಂದಿರುತ್ತಾಳೆ. ಅದು ಅವಳ ವಯಸ್ಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮನೋವಿಕಾರಕ್ಕೆ ಕಾರಣವಾಗುತ್ತದೆ. ಆನಂದ್ ಎಲ್ ರೈ ನಿರ್ದೇಶನದ ಮತ್ತು ಹಿಮಾಂಶು ಶರ್ಮಾ ಬರೆದಿರುವ ಅಟ್ರಾಂಗಿ ರೇ ಚಿತ್ರದಲ್ಲಿ ಧನುಷ್ ಮತ್ತು ಅಕ್ಷಯ್ ಕುಮಾರ್ ಕೂಡ ನಟಿಸಿದ್ದಾರೆ. ಚಿತ್ರವು ಕಳೆದ ತಿಂಗಳು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಯಿತು.
ಸಾರಾಳ ಸೋಲೋ ಡ್ಯಾನ್ಸ್ ಹಿಟ್
ಸಾರಾ ಅಲಿ ಖನ್‌ನನ್ನು ಅಭಿಮಾನಿಗಳು ಚಕಾ ಚಕ್ ಆಂಟಿ ಅಂತ ಕರೀತಿದ್ದಾರೆ. ಹೌದು. ಸೌತ್ ಇಂಡಿಯನ್ ಸ್ಟೈಲ್ ಸಾಂಗ್‌ನಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್ ಹಾಗೂ ಧನುಷ್ ಸಾಂಗ್ ನಿಜಕ್ಕೂ ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿದೆ. ಚಕಾ ಚಕ್ ಸಾಂಗ್‌ಗೆ ಸೀರೆಯುಟ್ಟು ಡ್ಯಾನ್ಸ್ ಮಾಡಿರೋ ಸಾರಾ ಡ್ಯಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
"
ಬಾಲಿವುಡ್ ಬಹುನಿರೀಕ್ಷಿತ ಸಿನಿಮಾ ಅಟ್ರಾಂಗಿ ರೇ ಸಖತ್ ಸದ್ದು ಮಾಡುತ್ತಿದೆ. ಸಾರಾ ಅಲಿ ಖಾನ್, ಅಕ್ಷಯ್ ಕುಮಾರ್, ಧನುಷ್ ಮುಖ್ಯ ಪಾತ್ರಗಳಲ್ಲಿ ನಟಿಸಿರೋ ಸಿನಿಮಾದ ಹಾಡು ರಿಲೀಸ್ ಆಗಿದೆ. ಚಕಾ ಚಕ್ ಸಾಂತ್ ಸೌತ್‌ನಲ್ಲೂ ಈಗ ಟ್ರೆಂಡ್ ಆಗಿದ್ದು ಸಾರಾ ಸ್ಟೆಪ್ಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.