- Home
- Entertainment
- Cine World
- ಕನ್ನಡದ ಈ 5 ಹಾರರ್ ಚಿತ್ರಗಳನ್ನು ರಾತ್ರಿ ನೋಡಲು ಧೈರ್ಯ ಬೇಕು! ಸೂಪರ್ ಹಿಟ್ ಸಿನಿಮಾಗಳು
ಕನ್ನಡದ ಈ 5 ಹಾರರ್ ಚಿತ್ರಗಳನ್ನು ರಾತ್ರಿ ನೋಡಲು ಧೈರ್ಯ ಬೇಕು! ಸೂಪರ್ ಹಿಟ್ ಸಿನಿಮಾಗಳು
ಈ ಲೇಖನವು ಕನ್ನಡದ ಕೆಲವು ಅತ್ಯುತ್ತಮ ಹಾರರ್ ಸಿನಿಮಾಗಳ ಪಟ್ಟಿಯನ್ನು ನೀಡುತ್ತದೆ. 'ನಾ ನಿನ್ನ ಬಿಡಲಾರೆ', 'ದುರ್ಗಾಶಕ್ತಿ', ಮತ್ತು 'ಸಂಯುಕ್ತ' ದಂತಹ ಕ್ಲಾಸಿಕ್ ಚಿತ್ರಗಳ ಕಥೆಯನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಹಾರರ್ ಸಿನಿಮಾ
ಕೆಲವರಿಗೆ ಹಾರರ್ ಸಿನಿಮಾ ಅಂದ್ರೆ ಹೆಚ್ಚು. ಹಾಲಿವುಡ್ ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡುತ್ತಿದ್ರೆ, ಒಮ್ಮೆ ನಮ್ಮ ಕನ್ನಡ ಚಲನಚಿತ್ರಗಳನ್ನು ನೋಡಿದ್ರೆ ರೋಮಾಂಚನವಾಗುತ್ತದೆ. ಹಾರರ್ ಅಂದ್ರೆ ಏನು ಎಂಬುದನ್ನು ಸ್ಯಾಂಡಲ್‌ವುಡ್ ಸಿನಿಮಾಗಳು ನಿಮಗೆ ತೋರಿಸುತ್ತವೆ. ಈ ಲೇಖನದಲ್ಲಿ ಕನ್ನಡದ ಬೆಸ್ಟ್ ಹಾರರ್ ಸಿನಿಮಾಗಳ ಹೆಸರು ಹೇಳುತ್ತಿದ್ದೇವೆ.
ನಾ ನಿನ್ನ ಬಿಡಲಾರೆ
ಅನಂತನಾಗ್ ಮತ್ತು ಜೂಲಿ ಲಕ್ಷ್ಮೀ ನಟನೆಯ "ನಾ ನಿನ್ನ ಬಿಡಲಾರೆ" ಕನ್ನಡದ ಐಕಾನಿಕ್ ಸಿನಿಮಾ. ಚಿತ್ರದಲ್ಲಿ ಪ್ರೀತಿಸಿದ ನಾಯಕ ಸಿಗದೇ ಸಾಯುವ ಯುವತಿ, ನಂತರ ಆಕೆಯ ಆತ್ಮದ ಕಾಟ ಶುರುವಾಗುತ್ತದೆ. ಈ ಸಿನಿಮಾದ ವಿಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಇಂದಿಗೂ ವೈರಲ್ ಆಗುತ್ತಿರುತ್ತವೆ. ದುಷ್ಟಶಕ್ತಿಯಿಂದ ಗಂಡನನ್ನು ಉಳಿಸಿಕೊಳ್ಳುವ ಪಾತ್ರದಲ್ಲಿ ಲಕ್ಷ್ಮೀ ಅವರು ಅಮೋಘವಾಗಿ ನಟಿಸಿದ್ದಾರೆ.
ದುರ್ಗಾಶಕ್ತಿ
ಡೈನಾಮಿಕ್ ಕಿಂಗ್ ದೇವರಾಜ್, ಶ್ರುತಿ, ತಾರಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ದುರ್ಗಾಶಕ್ತಿ ಸಿನಿಮಾದ ಗಟ್ಟಿಕಥೆ ನಿಮ್ಮನ್ನು ಕ್ಷಣ ಕ್ಷಣಕ್ಕೂ ಚಕಿತಗೊಳಿಸುತ್ತದೆ. ಮದುವೆಯಾಗುವ ಯುವತಿ ಮನೆಗೆ ಬರುವ ನಾಯಕ ಹಲವು ಸವಾಲುಗಳನ್ನು ಎದುರಿಸುತ್ತಾನೆ. ಇದು ನಾಯಕನ ಪುನರ್ಜನ್ಮ ಆಗಿದ್ರೆ, ಹಿಂದಿನ ಜನ್ಮದಲ್ಲಿ ಅತನಿಂದ ದೌರ್ಜನ್ಯಕ್ಕೊಳಗಾದ ಯುವತಿಯ ಆತ್ಮ ಎಚ್ಚರಗೊಳ್ಳುತ್ತದೆ. ಈ ಚಿತ್ರದ ಕೆಲವೊಂದು ಗ್ರಾಫಿಕ್ಸ್, ಬಿಜಿಎಂ ಮತ್ತು ದೇವರಾಜ್ ಹೇಳುವ "ರಾಜ ರಾಜ ವರ್ಮಾ" ಡೈಲಾಗ್ ಇಂದಿಗೂ ಟ್ರೆಂಡಿಂಗ್‌ನಲ್ಲಿರುತ್ತದೆ.
ಸಂಯುಕ್ತ
ಇದು ಮಲ್ಟಿಸ್ಟಾರ್ ಸಿನಿಮಾ ಆಗಿದ್ದು, ರಹಸ್ಯದ ಬೆನ್ನಟ್ಟುವ ಯುವಕರ ತಂಡ ಹಲವು ಅಚ್ಚರಿ ಮತ್ತು ಭಯಾನಕ ಸವಾಲುಗಳನ್ನು ಎದುರಿಸುತ್ತದೆ. ಪ್ರಮುಖ ಪಾತ್ರದಲ್ಲಿ ಶಿವರಾಜ್‌ಕುಮಾರ್, ಬಾಲರಾಜ್, ಗುರುದತ್, ಅವಿನಾಶ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ರಹಸ್ಯ ದೇವಾಲಯದ ಸುತ್ತ ಚಿತ್ರದ ಕಥೆ ಸಾಗುತ್ತದೆ. 1988ರಲ್ಲಿ ಸಂಯುಕ್ತ ಸಿನಿಮಾ ಬಿಡುಗಡೆಯಾಗಿತ್ತು.
ನೀಲಾಂಬರಿ
ತನ್ನ ಅಪೂರ್ವ ಸೌಂದರ್ಯದ ಮೂಲಕವೇ ನಟಿ ರಮ್ಯಾಕೃಷ್ಣ ನೋಡುಗರನ್ನು ಸೆರೆ ಹಿಡಿಯುತ್ತಾರೆ. ಮಾಧ್ಯಮ ತಂಡವೊಂದು ಪ್ರತಿ ಪೌರ್ಣಿಮೆಯಂದು ನೀಲಗಿರಿ ಬೆಟ್ಟದಲ್ಲಿ ಅಚ್ಚರಿಯನ್ನು ತಿಳಿದುಕೊಳ್ಳಲು ಬರುತ್ತದೆ. ಈ ಸಿನಿಮಾ ತಂಡ ರಹಸ್ಯವನ್ನು ತಿಳಿದುಕೊಳ್ಳುತ್ತಾ ಎಂಬುವುದೇ ಸಿನಿಮಾದ ಕಥೆಯಾಗಿದೆ. ದೇವರಾಜ್, ಪ್ರೇಮಾ, ವಿನೋದ್ ಆಳ್ವಾ, ತಾರಾ, ಮೈಕಲ್ ಮಧು ಸೇರಿದಂತೆ ಹಲವು ಕಲಾವಿದರು ನೀಲಾಂಬರಿ ಸಿನಿಮಾದಲ್ಲಿ ನಟಿಸಿದ್ದಾರೆ.
ಕನಕಾಂಬರಿ
ಗಂಡು ಮಗು ವ್ಯಾಮೋಹದ ಜನರಿಂದ ಸಾಯುವ ಸೊಸೆ ಕಥೆಯೇ ಕನಕಾಂಬರಿ. ಸತ್ತು ಹೋದ ಮಗಳಿಗಾಗಿ ಮತ್ತೆ ಬರುವ ತಾಯಿ, ತನ್ನ ಮೇಲಾದ ದೌರ್ಜನ್ಯಕ್ಕೆ ಪ್ರತಿಕಾರ ತೆಗೆದುಕೊಳ್ಳುವ ಕಥೆಯನ್ನು ಕನಕಾಂಬರಿ ಸಿನಿಮಾ ಹೊಂದಿದೆ. ಈ ಚಿತ್ರದಲ್ಲಿ ವಿಜಯಲಕ್ಷ್ಮೀ, ಅನು ಪ್ರಭಾಕರ್, ಓಂ ಪ್ರಕಾಶ್ ರಾವ್, ಸತ್ಯಜಿತ್, ದತ್ತಣ್ಣ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

