Sanah Kapur Marriage: ಬಾಲಿವುಡ್‌ನಲ್ಲಿ ಮತ್ತೊಂದು ಮದುವೆ ಸಂಭ್ರಮ.. ಹೊಸ ಜೋಡಿಯ ಪೋಟೋ!
ಮುಂಬೈ(ಮಾ. 03) ಬಾಲಿವುಡ್ ನಲ್ಲಿ(Bolluywood) ಮದುವೆ ಸಂಭ್ರಮ, ನಟ ಶಾಹೀದ್ ಕಪೂರ್ (Shahid Kapoor) ಸಹೋದರಿ ಸನಾ ಕಪೂರ್ ಮಹಾಬಲೇಶ್ವರದಲ್ಲಿ ವೈವಾಹಿಕ ಜೀವನಕ್ಕೆ (Marriage) ಕಾಲಿಟ್ಟಿದ್ದಾರೆ. ಪಂಕಜ್ ಕಪೂರ್ ಹಾಗೂ ಸುಪ್ರಿಯಾ ಪಾಠಕ್ ಮಗಳು ಸನಾ ಕಪೂರ್. ಸೀಮಾ ಹಾಗೂ ಮನೋಜ್ ಪಹ್ವಾ ಪುತ್ರ ಮಯಾಂಕ್ ಜೊತೆ ಸನಾ ಕಲ್ಯಾಣ ದೊಡ್ಡ ಸುದ್ದಿ.
ಈಗಾಗಲೇ ಕುಟುಂಬವು ಮಹಾಬಲೇಶ್ವರಕ್ಕೆ ತಲುಪಿದೆ. ಈಗಾಗಲೇ ಸಂಗೀತ, ಮೆಹೆಂದಿ ಕಾರ್ಯಕ್ರಮ ಕೂಡ ನಡೆದಿದೆ. ಕೆಲವೇ ಜನ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಕೊರೋನಾ ನಿಯಮ ಪಾಲನೆ ಮಾಡಿಕೊಂಡೇ ಕಾರ್ಯಕ್ರಮ ನಡೆಯುತ್ತದೆ ಎಂದು ಕುಟುಂಬ ತಿಳಿಸಿದೆ.
Radhe Shyam: ಟ್ರೇಲರ್ ಕಂಡು ದಂಗಾದ ಫ್ಯಾನ್ಸ್.. ಮದುವೆ ಗುಟ್ಟು ಕೊಟ್ಟ ಬಾಹುಬಲಿ!
ಶಾಹೀದ್ ಕಪೂರ್, ಅಲಿಯಾ ಭಟ್ ನಟನೆಯ 'ಶಾಂದಾರ್' ಚಿತ್ರದಲ್ಲಿ ಸನಾ ನಟಿಸಿದ್ದರು. ಆ ಚಿತ್ರದಲ್ಲಿ ಪಂಕಜ್ ಕಪೂರ್ ಕೂಡ ಸಹ ಇದ್ದರು. ಅಲ್ಲಿಯೇ ಇಬ್ಬರ ನಡುವೆ ಗೆಳೆತನ ಶುರುವಾಗಿತ್ತು.
1979ರಲ್ಲಿ ನಟಿ ನೀಲಿಮಾ ಅಜೀಮ್ ಅವರನ್ನು ಪಂಕಜ್ ಕಪೂರ್ ಮದುವೆಯಾಗಿ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದರು. 1981ರಲ್ಲಿ ಶಾಹೀದ್ ಕಪೂರ್ ಜನಿಸಿದ್ದರು. 1984ರಲ್ಲಿ ಇವರಿಬ್ಬರು ವಿಚ್ಛೇದನ ಪಡೆದುಕೊಂಡ ನಂತರ ಸುಪ್ರಿಯಾ, ನಟ ಪಂಕಜ್ ಕಪೂರ್‌ರನ್ನು 1988ರಲ್ಲಿ ಮದುವೆಯಾದರು. ಪಂಕಜ್ ಹಾಗೂ ಸುಪ್ರಿಯಾ ದಂಪತಿಗೆ ಸನಾ, ರುಹಾನ್ ಕಪೂರ್ ಮಕ್ಕಳು.
ಎರಡು ಕುಟುಂಬಗಳ ನಡುವೆ ಬಾಂಧವ್ಯ ಚೆನ್ನಾಗಿದೆ. ಇದೇ ಕಾರಣಕ್ಕೆ ಮದುವೆ ಸಂಭ್ರಮದಲ್ಲಿ ಶಾಹೀದ್ ಭಾಗಿಯಾಗಿದ್ದಾರೆ. ಎರಡು ಕುಟುಂಬಗಳು ಒಟ್ಟಾಗಿಯೇ ಸಂಭ್ರಮದಲ್ಲಿ ಪಾಲ್ಗೊಂಡಿವೆ.
ರಜಪೂತ್ ಸಂಪ್ರದಾಯದಂತೆ ಸಂಭ್ರಮ ಮನೆ ಮಾಡಿತ್ತು. ಮುಂದಿನ ಕಾರ್ಯಕ್ರಮಗಳಲ್ಲಿ ಬಾಲಿವುಡ್ ನ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಕೊರೋನಾ ಲಕ್ ಡೌನ್ ಸಂದರ್ಭದಲ್ಲಿಯೂ ಬಾಲಿವುಡ್ ಅನೇಕ ವಿವಾಹಗಳಿಗೆ ಸಾಕ್ಷಿಯಾಗಿತ್ತು .