MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Samantha-Anushka Shetty: ಅನುಷ್ಕಾ ಶೆಟ್ಟಿ ಹೆಸರಿನಲ್ಲಿದ್ದ ದಾಖಲೆ ಅಳಿಸಿಹಾಕಿ ಹೊಸ ದಾಖಲೆ ಬರೆದ ಸಮಂತಾ!

Samantha-Anushka Shetty: ಅನುಷ್ಕಾ ಶೆಟ್ಟಿ ಹೆಸರಿನಲ್ಲಿದ್ದ ದಾಖಲೆ ಅಳಿಸಿಹಾಕಿ ಹೊಸ ದಾಖಲೆ ಬರೆದ ಸಮಂತಾ!

ಸಮಂತಾ ರುತ್ ಪ್ರಭು ಅಭಿನಯದ 'ಮಾ ಇಂಟಿ ಬಂಗಾರಂ' ಸಿನಿಮಾ ಅತಿ ಹೆಚ್ಚು ಗಳಿಕೆ ಮಾಡಿದ ಮಹಿಳಾ ಪ್ರಧಾನ ತೆಲುಗು ಚಿತ್ರವಾಗಿ ಹೊಸ ದಾಖಲೆ ಬರೆದಿದೆ. ಈ ಚಿತ್ರವು ಅಧಿಕೃತವಾಗಿ ಅನುಷ್ಕಾ ಶೆಟ್ಟಿ ಅಭಿನಯದ 'ಅರುಂಧತಿ' ಸಿನಿಮಾವನ್ನು ಮೀರಿಸಿದೆ. ಎಲ್ಲಿ ಎಷ್ಟು ಕಲೆಕ್ಷನ್?

2 Min read
Author : Shriram Bhat
Published : Jul 03 2026, 12:52 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : others

Samantha Ruth Prabhu: ದಕ್ಷಿಣಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ನಟಿ ಅನುಷ್ಕಾ ಶೆಟ್ಟಿ ಹೆಸರಿನಲ್ಲಿದ್ದ 17 ವರ್ಷ ಹಳೆಯ ದಾಖಲೆಯನ್ನು ಅಳಿಸಿಹಾಕಿದ್ದಾರೆ. ತೆಲುಗಿನ 'ಮಾ ಇಂಟಿ ಬಂಗಾರಂ' ಹೆಸರಿನ ಮಹಿಳಾ ಪ್ರಧಾನ ಸಿನಿಮಾದಲ್ಲಿ ಈ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ.

ಸಮಂತಾ ರುತ್ ಪ್ರಭು ಅಭಿನಯದ 'ಮಾ ಇಂಟಿ ಬಂಗಾರಂ' ಸಿನಿಮಾ ಅತಿ ಹೆಚ್ಚು ಗಳಿಕೆ ಮಾಡಿದ ಮಹಿಳಾ ಪ್ರಧಾನ ತೆಲುಗು ಚಿತ್ರವಾಗಿ ಹೊಸ ದಾಖಲೆ ಬರೆದಿದೆ. ಈ ಚಿತ್ರವು ಅಧಿಕೃತವಾಗಿ ಅನುಷ್ಕಾ ಶೆಟ್ಟಿ ಅಭಿನಯದ 'ಅರುಂಧತಿ' ಸಿನಿಮಾವನ್ನು ಮೀರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : Asianet News

ಸಿಕ್ಕ ಮಾಹಿತಿ ಪ್ರಕಾರ, 'ಮಾ ಇಂಟಿ ಬಂಗಾರಂ'ನ ಜಾಗತಿಕ ಗಳಿಕೆ 12ನೇ ದಿನಕ್ಕೆ 83.12 ಕೋಟಿ ರೂ.ಗಳನ್ನು ತಲುಪಿದೆ. 16 ವರ್ಷಗಳಿಂದ ಇದ್ದಂತಹ ಅರುಂಧತಿಯ ಜಾಗತಿಕ ಗಳಿಕೆ 70 ಕೋಟಿ ರೂ.ಗಳನ್ನು ಈ ಹೊಸ ಕಲೆಕ್ಷನ್ ಮೀರಿಸಿದೆ.

ಮಾ ಇಂಟಿ ಬಂಗಾರಂ ಚಿತ್ರದ 10ನೇ ದಿನದಂದು ಚಿತ್ರದ ಜಾಗತಿಕ ಗಳಿಕೆ 78.71 ಕೋಟಿ ರೂ.ಗಳನ್ನು ದಾಟಿದ್ದು, ಮೊದಲ ಬಾರಿಗೆ ಈ ಮೈಲಿಗಲ್ಲು ತಲುಪಿದೆ. ಈ ಮೂಲಕ 17 ವರ್ಷಗಳಿಂದ ಇದ್ದ ಅನುಷ್ಕಾ ಶೆಟ್ಟಿ ದಾಖಲೆ ಧೂಳೀಪಟವಾಗಿದ್ದು, ಸಮಂತಾ ಹೊಸ ದಾಖಲೆ ಬರೆಯಲಿದೆ.

Related Articles

Related image1
Samantha Pregnant Secret: 'ಸಮಂತಾ ಗರ್ಭಿಣಿ' ಗಾಸಿಪ್ ಬೆನ್ನಲ್ಲೇ ನಂದಿನಿ ರೆಡ್ಡಿ ಹೇಳಿಕೆ ಸಖತ್ ವೈರಲ್; ಗೆಳತಿ ಹೇಳಿದ್ದೇನು ಗೊತ್ತಾ?
Related image2
Now Playing
Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
37
Image Credit : others

10ನೇ ದಿನದಂದು, ಚಿತ್ರವು ಜಾಗತಿಕವಾಗಿ ಹೆಚ್ಚುವರಿಯಾಗಿ 1 ಕೋಟಿ ರೂ.ಗಳನ್ನು ಸಂಗ್ರಹಿಸಿತು. ಇದರಿಂದಾಗಿ ವಿಶ್ವಾದ್ಯಂತ ಒಟ್ಟು ಗಳಿಕೆ 22.85 ಕೋಟಿ ರೂ.ಗಳಿಗೆ ತಲುಪಿತು. 12ನೇ ದಿನದ ವೇಳೆಗೆ ಚಿತ್ರದ ಜಾಗತಿಕ ಒಟ್ಟು ಸಂಗ್ರಹ 83.12 ಕೋಟಿ ರೂ.ಗಳಿಗೆ ಏರಿತು. ಭಾರತದಲ್ಲಿ ನಿವ್ವಳ ಗಳಿಕೆ 50 ಕೋಟಿ ರೂ.ಗಳನ್ನು ಮೀರಿದೆ.

47
Image Credit : instagram/@samantharuthprabhuoffl

'ಮಾ ಇಂಟಿ ಬಂಗಾರಂ' ಚಿತ್ರವು 2009 ರಲ್ಲಿ ತೆರೆಗೆ ಬಂದಿದ್ದ ಕೋಡಿ ರಾಮಕೃಷ್ಣ ನಿರ್ದೇಶನದ ಹಾರರ್ ಫ್ಯಾಂಟಸಿ ಚಿತ್ರ ಅರುಂಧತಿ ಹೆಸರಿನಲ್ಲಿದ್ದ ದಾಖಲೆಯನ್ನು ಅಧಿಕೃತವಾಗಿ ಮುರಿದಿದೆ. ಅನುಷ್ಕಾ ಶೆಟ್ಟಿ ನಟಿಸಿದ ಈ ಚಿತ್ರವು ತನ್ನ ಜೀವಿತಾವಧಿಯಲ್ಲಿ ವಿಶ್ವದಾದ್ಯಂತ 70 ಕೋಟಿ ರೂ. ಗಳಿಸಿತ್ತು.

57
Image Credit : others

ಸಮಂತಾ ನಟನೆ ಹಾಗೂ ನಿರ್ಮಾಣದ ತೆಲುಗು 'ಮಾ ಇಂಟಿ ಬಂಗಾರಂ' ಸಿನಿಮಾ ಮಹಿಳಾ ಪ್ರಧಾನ ಸಿನಿಮಾದ ಅತಿದೊಡ್ಡ ಕಮರ್ಷಿಯಲ್ ಹಿಟ್ ಅಗಿ ಹೊರಹೊಮ್ಮಿದೆ. ಜೊತೆಗೆ, ಈ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಬೇರೆ ಸಿನಿಮಾಗಳಿಂದ ಟಫ್ ಕಾಂಪಿಟೀಷನ್ ಎದುರಿಸಿದೆ.

67
Image Credit : Instagram

ನಟಿ ಸಮಂತಾ ಅವರ ಈ ಗೆಲುವು ಮಹಿಳಾ ಪ್ರಧಾನ ಸಿನಿಮಾಗಳ ನಿರ್ಮಾಣ, ಕಥೆ ಹೇಳುವಿಕೆ, ಬಂಡವಾಳ ಹೂಡುವ ವಿಚಾರದಲ್ಲಿ ಭವಿಷ್ಯದಲ್ಲಿ ದೊಡ್ಡ ಪುಶ್ ನೀಡಬಹುದು. ಬಾಹುಬಲಿ, ಪುಷ್ಪ, ಕೆಜಿಎಫ್, ಮತ್ತು ಕಲ್ಕಿಯಂತಹ ಬ್ಲಾಕ್‌ ಬಸ್ಟರ್‌ ಸಿನಿಮಾಗಳಿಂದಾಗಿ ಹದಿನಾರು ವರ್ಷಗಳಲ್ಲಿ ತೆಲುಗು ಬಾಕ್ಸ್ ಆಫೀಸ್ ಗಳಿಕೆ ಗಮನಾರ್ಹವಾಗಿ ಬೆಳೆದಿದ್ದರೂ, ಯಾವುದೇ ಮಹಿಳಾ ನೇತೃತ್ವದ ತೆಲುಗು ಸಿನಿಮಾ ದೊಡ್ಡ ದಾಖಲೆ ಮಾಡಿರಲಿಲ್ಲ. ಈಗ ಇದು ಸಂಭವಿಸಿದೆ.

77
Image Credit : Instagram

20 ಕೋಟಿ ರೂಪಾಯಿ ಬಜೆಟ್‌ನಲ್ಲಿ 'ಮಾ ಇಂಟಿ ಬಂಗಾರಂ' ಸಿನಿಮಾವನ್ನು ಬಿ.ವಿ. ನಂದಿನಿ ರೆಡ್ಡಿ ನಿರ್ದೇಶಿಸಿದ್ದಾರೆ. ಸಮಂತಾ ಅವರ ಸ್ವಂತ ಕಂಪನಿಯಾದ ತ್ರಲಾಲ ಮೂವಿಂಗ್ ಪಿಕ್ಚರ್ಸ್ ಅಡಿಯಲ್ಲಿ ರಾಜ್ ನಿಡಿಮೋರು ಮತ್ತು ಹಿಮಂಕ್ ದುವ್ವುರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

19 ಜೂನ್ 2026 ರಂದು ಬಿಡುಗಡೆಯಾಗುವ ಮೊದಲು, ಈ ಚಿತ್ರವು ಒಟಿಟಿ ರೈಟ್ಸ್ ಮೂಲಕ ತನ್ನ ಬಂಡವಾಳದ ಗಣನೀಯ ಮೊತ್ತವನ್ನು ಪಡೆದುಕೊಂಡಿತ್ತು. ಇದೀಗ ಸಿನಿಮಾ ಕೂಡಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಸದ್ಯಕ್ಕೆ ಈ ಸಿನಿಮಾದ ಓಟ ಮುಂದುವರೆದಿದ್ದು, ಎಲ್ಲಿಯವರೆಗೆ ಈ ಓಟ ಮುಂದುವರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಮನರಂಜನಾ ಸುದ್ದಿ
ಬಾಕ್ಸ್ ಆಫೀಸ್ ಕಲೆಕ್ಷನ್
ಸಮಂತಾ ರುತ್ ಪ್ರಭು
ಅನುಷ್ಕಾ ಶೆಟ್ಟಿ

Latest Videos
Recommended Stories
Recommended image1
ಪುತ್ರಿ ಜೊತೆ ನಟ ಗಣೇಶ್​: ಅಪರೂಪದ ಕ್ಯೂಟ್​ ಫೋಟೋಸ್​ ವೈರಲ್​- ಮಗಳಿಗೆ ಡಾನ್ಸ್​ ಹೇಳಿಕೊಟ್ಟ ಅಪ್ಪ
Recommended image2
Vicky-Katrina: ಮುಂಬೈ ಮಳೆಯಲ್ಲಿ ವಿಕ್ಕಿ-ಕತ್ರಿನಾ ಮಾಡಿದ ಕೆಲಸ ಏನು? ವೈರಲ್ ಆಯ್ತು ಫೋಟೋ!
Recommended image3
Dhurandhar: ಜಪಾನ್‌ನಲ್ಲೂ ಧೂಳೆಬ್ಬಿಸಲಿದೆ ಧುರಂಧರ್! 3000 ಕೋಟಿ ಬಾಚಿದ ಚಿತ್ರದ ಮತ್ತೊಂದು ದಾಖಲೆ!
Related Stories
Recommended image1
Samantha Pregnant Secret: 'ಸಮಂತಾ ಗರ್ಭಿಣಿ' ಗಾಸಿಪ್ ಬೆನ್ನಲ್ಲೇ ನಂದಿನಿ ರೆಡ್ಡಿ ಹೇಳಿಕೆ ಸಖತ್ ವೈರಲ್; ಗೆಳತಿ ಹೇಳಿದ್ದೇನು ಗೊತ್ತಾ?
Recommended image2
Now Playing
Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved