Panvel Farmhouse: ಸಲ್ಲು ಫಾರ್ಮ್ ಹೌಸ್‌ನಲ್ಲಿ ಹೂಳಲಾಗಿದೆಯಂತೆ ನಟರ ಮೃತದೇಹ
- ಸಲ್ಲು ಫಾರ್ಮ್ ಹೌಸ್ ಬಗ್ಗೆ ನೆರೆಮನೆಯವನಿಂದ ಗಂಭೀರ ಆರೋಪ
- ನಟನ ಫಾರ್ಮ್ ಹೌಸ್‌ನಲ್ಲಿ ಸ್ಟಾರ್ ನಟರ ದೇಹ ಹೂಳಲಾಗಿದೆ ಎಂಬ ದೂರು
ಮಾನನಷ್ಟ ಮೊಕದ್ದಮೆಯ ಕುರಿತು ಸಲ್ಮಾನ್ ಖಾನ್ ಅವರು ತಮ್ಮ ನೆರೆಹೊರೆಯವರೊಂದಿಗೆ ಸಣ್ಣ ಕ್ಲಾಷ್‌ನಲ್ಲಿದ್ದಾರೆ. ಧರ್ಮವನ್ನು ಮಧ್ಯೆ ತಂದಿದ್ದಕ್ಕಾಗಿಯೂ ಸಲ್ಮಾನ್ ನೆರೆಮನೆಯವನನ್ನು ಟೀಕಿಸಿದ್ದಾರೆ.
ಆದರೆ ಅವರ ನೆರೆ ಮನೆಯವರು ನಟನ ವಿರುದ್ಧ ಕೆಲವು ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ. ಸಲ್ಮಾನ್ ಖಾನ್ ಅವರ ವಕೀಲರು ಕೇತನ್ ಕಕ್ಕಡ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಸಂದರ್ಶನಗಳ ಭಾಗಗಳನ್ನು ಓದಿದ್ದಾರೆ.
ಅವುಗಳಲ್ಲಿ ಅವರು ನಟ ಸಲ್ಮಾನ್ ಖಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ನಟರ ಶವಗಳನ್ನು ಹೂಳಲಾಗಿದೆ. ಮಕ್ಕಳ ಕಳ್ಳಸಾಗಣೆ ಕೂಡ ಅಲ್ಲಿ ನಡೆಯುತ್ತದೆ ಎಂದು ಕೇತನ್ ಕಕ್ಕಡ್ ಆರೋಪಿಸಿದ್ದಾರೆ ಎನ್ನಲಾಗಿದೆ.
ಯಾವುದೇ ಸಾಕ್ಷಿಗಳಿಲ್ಲದೆ ಈ ಆರೋಪಗಳನ್ನು ಮಾಡಲಾಗುತ್ತಿದೆ. ಉದ್ದೇಶಪೂರ್ವಕವಾಗಿ ನಟನ ಪ್ರತಿಷ್ಠೆಗೆ ಕಳಂಕ ತರುವ ಪ್ರಯತ್ನಗಳಾಗಿವೆ ಎಂದು ಸಲ್ಮಾನ್ ಖಾನ್ ಪರ ವಕೀಲ ಪ್ರದೀಪ್ ಗಾಂಧಿ ಅವರು ಹೇಳಿದ್ದಾರೆ.
ಸಲ್ಮಾನ್ ಖಾನ್ ತನ್ನ ಪನ್ವೇಲ್ ಫಾರ್ಮ್‌ಹೌಸ್ ನೆರೆಹೊರೆಯವರ ವಿರುದ್ಧ ಶಾರ್ಟ್ ಕಾಸ್ ಸಿವಿಲ್ ಮೊಕದ್ದಮೆ ಹೂಡಿದ್ದರು. 'ವಿಡಿಯೋಗಳು, ಪೋಸ್ಟ್‌ಗಳು ಅಥವಾ ಟ್ವೀಟ್‌ಗಳ ರೂಪದಲ್ಲಿ ಸುಳ್ಳು, ಅವಹೇಳನಕಾರಿ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡುವುದನ್ನು ತಡೆಯಲು ನಟ ಈ ತೀರ್ಮಾನ ತೆಗೆದುಕೊಂಡಿದ್ದರು.
ತಮ್ಮ ಆಸ್ತಿ ವಿವಾದದ ಭಾಗವಾಗಿ, ಅರ್ಪಿತಾ ಫಾರ್ಮ್ಸ್ ಪಕ್ಕದಲ್ಲಿರುವ ತನ್ನ ಪ್ಲಾಟ್‌ಗೆ ಸಲ್ಮಾನ್ ಖಾನ್ ಪ್ರವೇಶವನ್ನು ನಿರ್ಬಂಧಿಸಿದ್ದಾರೆ ಎಂದು ಕಕ್ಕಡ್ ಹೇಳಿದ್ದಾರೆ. ಆದರೆ ನಟನ ವಕೀಲರು ಇದನ್ನು ನಿರಾಕರಿಸಿದ್ದಾರೆ.
ಬಹುತೇಕ ಪ್ರತಿ ವರ್ಷವೂ ಸಲ್ಮಾನ್ ಖಾನ್ ತಮ್ಮ ಹುಟ್ಟುಹಬ್ಬವನ್ನು ಈ ಅದ್ದೂರಿ ಪನ್ವೆಲ್ ಫಾರ್ಮ್‌ಹೌಸ್‌ನಲ್ಲಿ ಆಚರಿಸುತ್ತಾರೆ. ಫಾರ್ಮ್ ಹೌಸ್‌ಗೆ ಅವರು ತಮ್ಮ ಸಹೋದರಿ ಅರ್ಪಿತಾ ಅವರ ಹೆಸರನ್ನು ಇಟ್ಟಿದ್ದಾರೆ.
2020 ರಲ್ಲಿ ಮೊದಲ ಲಾಕ್‌ಡೌನ್ ಸಮಯದಲ್ಲಿ, ಸಲ್ಮಾನ್ ಖಾನ್ ತಮ್ಮ ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ಫಾರ್ಮ್‌ಹೌಸ್‌ನಲ್ಲಿ ದೀರ್ಘಕಾಲ ಉಳಿದುಕೊಂಡಿದ್ದರು.