MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • 2022 Bollywood Release: ಮೂರು ಖಾನ್‌ಗಳ ಸಿನಿಮಾ ಹೊಸ ವರ್ಷಕ್ಕೆ ಬಿಡುಗಡೆ!

2022 Bollywood Release: ಮೂರು ಖಾನ್‌ಗಳ ಸಿನಿಮಾ ಹೊಸ ವರ್ಷಕ್ಕೆ ಬಿಡುಗಡೆ!

2021ರಲ್ಲಿ  ಬಾಲಿವುಡ್‌  ಅನೇಕ ಸೂಪರ್‌ಸ್ಟಾರ್‌ಗಳ ಚಿತ್ರಗಳು ಬಿಡುಗಡೆಯಾಗಿದ್ದರೂ ಅವುಗಳಿಗೆ ಸಿಗಬೇಕಾದ ಪ್ರತಿಕ್ರಿಯೆ ಸಿಗಲಿಲ್ಲ. ಇದಕ್ಕೆ ಕಾರಣವೆಂದರೆ ಈ ವರ್ಷವೂ ಹೆಚ್ಚಿನ ಸಮಯ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದವು ಮತ್ತು ಸಿನಿಮಾಗಳು OTT ನಲ್ಲಿ ಮಾತ್ರ ಬಿಡುಗಡೆಯಾದವು. ಆದರೆ 2022 ರಲ್ಲಿ ಅನೇಕ ಬಾಲಿವುಡ್‌ ಸಿನಿಮಾಗಳು ಬಿಡುಗಡೆಯಾಗಲಿವೆ,  ಇದರಲ್ಲಿ ಸಲ್ಮಾನ್ ಖಾನ್ (Salman Khan), ಶಾರುಖ್ ಖಾನ್ (Shahrukh Khan) ಮತ್ತು ಆಮೀರ್ ಖಾನ್ (Aamir Khan) ಮೂವರೂ ಖಾನ್‌ಗಳ ಸಿನಿಮಾಗಳು ಇವೆ. ಜೊತೆಗೆ ಇತರ ತಾರೆಯರ ಸಿನಿಮಾಗಳು  ಸಹ ಥಿಯೇಟರ್‌ಗಳಲ್ಲಿ ಅಬ್ಬರಿಸಲು ಸಿದ್ಧವಾಗಿವೆ. 2022 ರ ಹೊಸ ವರ್ಷದಲ್ಲಿ ಯಾವ ಸಿನಿಮಾಗಳು ಬಿಡುಗಡೆಯಾಗಲಿದೆ ಎಂಬುದು ಇಲ್ಲಿವೆ. 

3 Min read
Suvarna News | Asianet News
Published : Dec 28 2021, 07:23 PM IST
Share this Photo Gallery
  • FB
  • TW
  • Linkdin
  • Whatsapp
116

ಹೊಸ ವರ್ಷದಲ್ಲಿ ಅಕ್ಷಯ್ ಕುಮಾರ್ (Akshay Kumar), ಆಲಿಯಾ ಭಟ್ (Alia Bhatt), ಕರೀನಾ ಕಪೂರ್ (Kareena Kapoor), ರಣಬೀರ್ ಕಪೂರ್(Ranbir Kapoor), ರಣವೀರ್ ಸಿಂಗ್ (Ranveer Singh), ಟೈಗರ್ ಶ್ರಾಫ್ ಸೇರಿ ಅನೇಕ ಸ್ಟಾರ್‌ಗಳ ಚಿತ್ರಗಳು ಥಿಯೇಟರ್‌ಗಳಲ್ಲಿ ಬರಲಿವೆ.  
 

216

2018 ರ ನಂತರ ಸಿನಿಮಾದಿಂದ ದೂರವಿದ್ದ  ಶಾರುಖ್ ಖಾನ್ ಹೊಸ ವರ್ಷದಲ್ಲಿ  ಪಠಾಣ್ ಸಿನಿಮಾ ಮೂಲಕ ಥಿಯೇಟರ್‌ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿ. 2022 ರಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾದ ದಿನಾಂಕವನ್ನು ಇನ್ನೂ ನಿರ್ಧರಿಸಿಲ್ಲ.

316

ಅಕ್ಷಯ್ ಕುಮಾರ್ ಅವರ ಚಿತ್ರ ಪೃಥ್ವಿರಾಜ್  (Prithviraj) 21 ಜನವರಿ 2022 ರಂದು ಬಿಡುಗಡೆಯಾಗಲಿದೆ. ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಸಿನಿಮಾದ ಮೂಲಕ ಮಾನುಷಿ ಛಿಲ್ಲರ್ (Manushi Chhillar) ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

416

ಸಂಜಯ್ ಲೀಲಾ ಬನ್ಸಾಲಿಯವರ (Sanjay Leela Bhansali)  ಬಹು ನಿರೀಕ್ಷಿತ ಚಿತ್ರ ಗಂಗೂಬಾಯಿ ಕಥಿವಾಡಿ 18 ಫೆಬ್ರವರಿ 2022 ರಂದು ಬಿಡುಗಡೆಯಾಗಲಿದೆ. ಆಲಿಯಾ ಭಟ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

516

ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಜಯೇಶ್ ಭಾಯ್ ಜೋರ್ದಾರ್ ಚಿತ್ರ ಫೆಬ್ರವರಿ 25 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಶಾಲಿನಿ ಪಾಂಡೆ  (Shalini Pandey) ನಾಯಕಿಯಾಗಿ ನಟಿಸುತ್ತಿದ್ದಾರೆ.

616

ರಣಬೀರ್ ಕಪೂರ್ ಅಭಿನಯದ Action Drama Movie ಶಂಶೇರಾ ಮಾರ್ಚ್ 18 ರಂದು ಬಿಡುಗಡೆಯಾಗಲಿದೆ.  ಕರಣ್ ಮಲ್ಹೋತ್ರಾ  ಅವರ ಈ ಸಿನಿಮಾದಲ್ಲಿ ರಣಬೀರ್ ಜೊತೆಗೆ ಸಂಜಯ್ ದತ್ (Sanjay Dutt) ಮತ್ತು ವಾಣಿ ಕಪೂರ್  (Vaani Kapoor) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

716

ಆಮೀರ್ ಖಾನ್ ಅವರ ಚಿತ್ರ ಲಾಲ್ ಸಿಂಗ್ ಚಡ್ಡಾ ಏಪ್ರಿಲ್ 14, 2022 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಕರೀನಾ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಆಮೀರ್ ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನು ಹಲವು ಬಾರಿ ಮುಂದೂಡಿದ್ದಾರೆ.

816

ಟೈಗರ್ ಶ್ರಾಫ್  (Tiger Shroff) ಅವರ ಸಿನಿಮಾ  'ಹೀರೋಪಂತಿ 2' 29 ಏಪ್ರಿಲ್ 2022 ರಂದು ಬಿಡುಗಡೆಯಾಗಲಿದೆ. ಅಹ್ಮದ್ ಖಾನ್ ಅವರ ಈ ಫಿಲ್ಮ್‌ನಲ್ಲಿ ಕೃತಿ ಸನೋನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು  2014 ರ ಹೀರೋಪಂತಿ ಸಿನಿಮಾದ ಮುಂದುವರಿದ ಭಾಗವಾಗಿದೆ.

 

916

ಅಜಯ್ ದೇವಗನ್  (Ajay Devgn) ಅವರ ಚಿತ್ರ ಮೈದಾನ್‌ 3 ಜೂನ್ 2022 ರಂದು ಬಿಡುಗಡೆಯಾಗಲಿದೆ. ಫುಟ್ಬಾಲ್ ಆಧಾರಿತ ಈ ಸಿನಿಮಾದಲ್ಲಿ ಸೌತ್ ನಟಿ ಪ್ರಿಯಾಮಣಿ (Priyamani) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

1016

ಆಯುಷ್ಮಾನ್ ಖುರಾನಾ (Ayushmann Khurrana )ಅವರ ಡಾಕ್ಟರ್ ಜಿ ಸಿನಿಮಾ ಜೂನ್ 17 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಆಯುಷ್ಮಾನ್ ಜೊತೆಗೆ ರಾಕುಲ್ ಪ್ರೀತ್ ಸಿಂಗ್  (Rakul Preet Singh) ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಇಬ್ಬರೂ ಸ್ಟಾರ್‌ಗಳು ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

1116

ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ಪ್ರಭಾಸ್  (Prabhas) ಮತ್ತು ಸೈಫ್ ಅಲಿ ಖಾನ್ ( Saif Ali Khan) ಅವರ ಸಿನಿಮಾ ಆದಿಪುರುಷ 11 ಆಗಸ್ಟ್ 2022 ರಂದು ಬಿಡುಗಡೆಯಾಗಲಿದೆ. ರಾಮಾಯಣ ಕಥೆಯ ಈ ಸಿನಿಮಾದಲ್ಲಿ ಕೃತಿ ಸನನ್ (Kriti Sanon) ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

1216

ರಣಬೀರ್ ಕಪೂರ್ ಅವರ ಬಹು ನಿರೀಕ್ಷಿತ ಚಿತ್ರ ಬ್ರಹ್ಮಾಸ್ತ್ರ 9 ಸೆಪ್ಟೆಂಬರ್ 2022 ರಂದು ಬಿಡುಗಡೆಯಾಗಲಿದೆ. ಈ ಅಯಾನ್ ಮುಖರ್ಜಿ ಸಿನಿಮಾದಲ್ಲಿ ರಣಬೀರ್ ಜೊತೆಗೆ ಆಲಿಯಾ ಭಟ್, ಅಮಿತಾಬ್ ಬಚ್ಚನ್ (Amitabh Bachchan) ಮತ್ತು ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
 

1316

ಈ ವರ್ಷ  ಬಿಡುಗಡೆಯಾದ  ರಣವೀರ್ ಸಿಂಗ್ ಅವರ  83  ಸಿನಿಮಾಕ್ಕೆ ಹೆಚ್ಚಿನ ಪ್ರತಿಕ್ರಿಯೆ ಸಿಗುತ್ತಿಲ್ಲ. ಈ ಸಿನಿಮಾ ಬಿಡುಗಡೆಯೊಂದಿಗೆ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಅವರ ಚಿತ್ರ ಸರ್ಕಸ್ 15 ಜುಲೈ 2022 ರಂದು ಬಿಡುಗಡೆಯಾಗುತ್ತಿದೆ. ಇವರೊಂದಿಗೆ ಪೂಜಾ ಹೆಗ್ಡೆ  (Pooja Hedge)  ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

1416

ಅಕ್ಷಯ್ ಕುಮಾರ್ ಅವರ ಚಿತ್ರ ರಾಮ್ ಸೇತು 21 ಅಕ್ಟೋಬರ್ 2022 ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅಕ್ಷಯ್ ಜೊತೆ ಜಾಕ್ವೆಲಿನ್ ಫರ್ನಾಂಡೀಸ್  (Jacqueline Fernandez) ಮತ್ತು ನುಸ್ರತ್ ಭರುಚಾ (Nushrat Bharucha) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹಲವು ಭಾಗಗಳು ಬಹುತೇಕ ಪೂರ್ಣಗೊಂಡಿವೆ.

1516

ಸಲ್ಮಾನ್ ಖಾನ್ ಅವರ ಟೈಗರ್ 3 ಚಿತ್ರ ಡಿಸೆಂಬರ್ 2022 ರಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಹಲವು ಭಾಗಗಳನ್ನು ಸಲ್ಮಾನ್ ಚಿತ್ರೀಕರಿಸಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್  (Katrina Kaif) ಮತ್ತೊಮ್ಮೆ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

1616

ಅಕ್ಷಯ್ ಕುಮಾರ್ ಅವರ ಚಿತ್ರ OMG 2 ಕೂಡ ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದೆ. ಆದರೆ, ಈ ಚಿತ್ರದ ಬಿಡುಗಡೆ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಚಿತ್ರದಲ್ಲಿ ಪಂಕಜ್ ತ್ರಿಪಾಠಿ (Pankaj Tripathi)  ಮತ್ತು ಯಾಮಿ ಗೌತಮ್  (Yami Gautam) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಇನ್ನೂ ನಡೆಯುತ್ತಿದೆ. 

About the Author

SN
Suvarna News
ಬಾಲಿವುಡ್
ರಣವೀರ್ ಸಿಂಗ್
ಆಮಿರ್ ಖಾನ್
ಸಲ್ಮಾನ್ ಖಾನ್
ಅಕ್ಷಯ್ ಕುಮಾರ್
ಆಲಿಯಾ ಭಟ್
ಕರೀನಾ ಕಪೂರ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved