2023ರಲ್ಲಿ ಫ್ಯಾನ್ಸ್ ರಂಜಿಸಲು ಮೊದಲ ಬಾರಿಗೆ ಒಂದಾಗುತ್ತಿರುವ ಜೋಡಿಗಳಿವು
ಹೊಸ ವರ್ಷ ಅಂದರೆ 2023 ಬಾಲಿವುಡ್ ಇಂಡಸ್ಟ್ರಿಗೆ ವಿಶೇಷವಾಗಲಿದೆ. 2023ರಲ್ಲಿ ಚಿತ್ರರಂಗದ ಅನೇಕ ದಿಗ್ಗಜರ ಚಿತ್ರಗಳು ಬಿಡುಗಡೆಯಾಗಲಿವೆ. ಇವುಗಳಲ್ಲಿ ಕೆಲವು ದೊಡ್ಡ ಬಜೆಟ್‌ನ ಚಿತ್ರಗಳು ಸಹ ಇವೆ. ಅದೇ ಸಮಯದಲ್ಲಿ ಬರುವ ವರ್ಷದಲ್ಲಿ, ಅಭಿಮಾನಿಗಳು ಬೆಳ್ಳಿತೆರೆಯಲ್ಲಿ ಹಿಂದೆಂದೂ ಒಟ್ಟಿಗೆ ಕೆಲಸ ಮಾಡಿಲ್ಲದ ಹೊಸ ಜೋಡಿಗಳನ್ನು ಸಹ ನೋಡಲಿದ್ದಾರೆ. 2023ರಲ್ಲಿ ಫ್ಯಾನ್ಸ್ ರಂಜಿಸಲು ಒಂದಾಗುತ್ತಿರುವ ಜೋಡಿಗಳ ಮಾಹಿತಿ ಇಲ್ಲಿದೆ

2023 ರಲ್ಲಿ, ಅನೇಕ ಸೂಪರ್‌ಸ್ಟಾರ್‌ಗಳ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅವರಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ಪ್ರ ಮುಖರು ಮತ್ತು ಅವರ ಅಭಿಮಾನಿಗಳು ತಮ್ಮ ಚಿತ್ರಗಳ ಬಿಡುಗಡೆಗಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರೆ. ಸಲ್ಮಾನ್ ಅಭಿನಯದ ಟೈಗರ್ 3 ಮತ್ತು ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಎರಡು ಚಿತ್ರಗಳು ಬಿಡುಗಡೆಯಾಗಲಿವೆ. ಕಿಸಿ ಕಿ ಭಾಯ್ ಕಿಸಿ ಕಿ ಜಾನ್ ನಲ್ಲಿ ಅವರು ತಮ್ಮ ಅರ್ಧ ವಯಸ್ಸಿನ ಪೂಜಾ ಹೆಗ್ಡೆ ಅವರೊಂದಿಗೆ ಫ್ಲರ್ಟಿಂಗ್ ಮಾಡುವುದನ್ನು ಕಾಣಬಹುದು. ಎರಡೂ ಚಿತ್ರಗಳು 2023ರಲ್ಲಿ ಬಿಡುಗಡೆಯಾಗಲಿವೆ.
ಫೈಟರ್ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಈ ಚಿತ್ರವು 28 ಸೆಪ್ಟೆಂಬರ್ 2023 ರಂದು ಬಿಡುಗಡೆಯಾಗಲಿದೆ.
ಅಕ್ಷಯ್ ಕುಮಾರ್ ಸೌತ್ ಚಿತ್ರ ಸುರಾರಿ ಪೊಟ್ರು ರಿಮೇಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ತಮ್ಮಗಿಂತ ಅರ್ಧ ವಯಸ್ಸಿನ ನಟಿ ರಾಧಿಕಾ ಮದನ್ ಅವರನ್ನು ರೊಮ್ಯಾನ್ಸ್ ಮಾಡಲಿದ್ದಾರೆ. ಸುಧಾ ಕೊಂಗರ ಪ್ರಸಾದ್ ಅವರ ಚಿತ್ರ ಜೂನ್ 8 ರಂದು ಬಿಡುಗಡೆಯಾಗುತ್ತಿದೆ. ಅಕ್ಷಯ್-ರಾಧಿಕಾ ಮೊದಲ ಬಾರಿಗೆ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.
ಬಾವಲ್ ಚಿತ್ರದಲ್ಲಿ ವರುಣ್ ಧವನ್ ಮತ್ತು ಜಾನ್ವಿ ಕಪೂರ್ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ಅವರ ಈ ಚಿತ್ರವು ಏಪ್ರಿಲ್ 2023 ರಲ್ಲಿ ಬಿಡುಗಡೆಯಾಗಲಿದೆ.
ಡ್ರೀಮ್ ಗರ್ಲ್ ಚಿತ್ರದ ಸೀಕ್ವೆಲ್‌ನಲ್ಲಿ ಆಯುಷ್ಮಾನ್ ಖುರಾನಾ ಮತ್ತು ಅನನ್ಯಾ ಪಾಂಡೆ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ರಾಜ್ ಶಾಂಡಿಲ್ಯ ಅವರ ಹಾಸ್ಯ ನಾಟಕ ಚಲನಚಿತ್ರವು 29 ಜೂನ್ 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ರಾಕುಲ್ ಪ್ರೀತ್ ಸಿಂಗ್ ಮೊದಲ ಬಾರಿಗೆ ಅರ್ಜುನ್ ಕಪೂರ್ ಜೊತೆ ಕೆಲಸ ಮಾಡಲಿದ್ದಾರೆ. ಮೇರೆ ಹಸ್ಬೆಂಡ್ ಕಿ ಬಿವಿ ಚಿತ್ರದಲ್ಲಿ ಇಬ್ಬರೂ ಕಾಣಿಸಿಕೊಳ್ಳಲಿದ್ದಾರೆ. ಮುದಸ್ಸರ್ ಅಜೀಜ್ ಅವರ ಈ ಹಾಸ್ಯ ಚಿತ್ರ 2023 ರಲ್ಲಿ ಬಿಡುಗಡೆಯಾಗಲಿದೆ.
ಹೊಸ ವರ್ಷದಲ್ಲಿ ಶಾರುಖ್ ಖಾನ್ ಅವರ 2-3 ಚಿತ್ರಗಳು ಬಿಡುಗಡೆಯಾಗುತ್ತಿವೆ. ಅವರು ರಾಜ್‌ಕುಮಾರ್ ಹಿರಾನಿಯವರ ಡ್ಯಾಂಕಿಯಲ್ಲಿ ಮೊದಲ ಬಾರಿಗೆ ತಮ್ಮಗಿಂತ ಅರ್ಧದಷ್ಟು ಕಡಿಮೆ ವಯಸ್ಸಿನ ತಾಪ್ಸಿ ಪನ್ನು ಅವರಿಗೆ ಜೋಡಿಯಾಗಲಿದ್ದಾರೆ ಮತ್ತು ದಕ್ಷಿಣ ನಿರ್ದೇಶಕ ಅಟ್ಲೀ ಅವರ ಜವಾನ್ ಚಿತ್ರದಲ್ಲಿ ಶಾರುಖ್ ಮೊದಲ ಬಾರಿಗೆ ನಯನತಾರಾ ಎದುರು ಕಾಣಿಸಿಕೊಳ್ಳಲಿದ್ದಾರೆ.
ಸಾರಾ ಅಲಿ ಖಾನ್ ಮತ್ತು ವಿಕ್ಕಿ ಕೌಶಲ್ ಜೋಡಿಯು ಮೊದಲ ಬಾರಿಗೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದೆ. ಇವರಿಬ್ಬರು ಮೊದಲ ಬಾರಿಗೆ ಲಕ್ಷ್ಮಣ್ ಉಟೇಕರ್ ಅವರ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ, ಚಿತ್ರದ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ.
ರಣಬೀರ್ ಕಪೂರ್ ಜೋಡಿ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಎದುರು ಕಾಣಿಸಿಕೊಳ್ಳಲಿದೆ. ಅನಿಮಲ್ ಚಿತ್ರದಲ್ಲಿ ಇಬ್ಬರೂ ಕಾಣಿಸಿಕೊಳ್ಳಲಿದ್ದಾರೆ. ಸಂದೀಪ್ ರೆಡ್ಡಿ ವಂಗ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರವು 11 ಆಗಸ್ಟ್ 2023 ರಂದು ಬಿಡುಗಡೆಯಾಗಲಿದೆ.
ಪ್ರಭಾಸ್ ಮತ್ತು ಕೃತಿ ಸನನ್ ಮೊದಲ ಬಾರಿಗೆ ಪೌರಾಣಿಕ ನಾಟಕ ಆದಿಪುರುಷನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ರಾಮಾಯಣ ಆಧಾರಿತ ಈ ಚಿತ್ರದಲ್ಲಿ ಇಬ್ಬರೂ ರಾಮ-ಸೀತೆಯ ಪಾತ್ರ ಮಾಡುತ್ತಿದ್ದಾರೆ. ಓಂ ರಾವುತ್ ಅವರ ಚಿತ್ರವು ಜೂನ್ 2023 ರಂದು ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.