ಅಬ್ಬಾ, ಈ ಸಲ್ಮಾನ್ ಖಾನ್ ಹತ್ತಿರಿ ಇಷ್ಟೆಲ್ಲಾ ಆಸ್ತಿ ಇದೆಯಾ?
ಬಾಲಿವುಡ್‌ನ ಬಾಯ್‌ಜಾನ್ ಸಲ್ಮಾನ್ ಖಾನ್ (Salman Khan) 57ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 27 ಡಿಸೆಂಬರ್ 1965 ರಂದು ಇಂದೋರ್ ಮಧ್ಯಪ್ರದೇಶದಲ್ಲಿ ಜನಿಸಿದ ಸಲ್ಮಾನ್ ಖಾನ್ ಅವರ ಕುಟುಂಬವು ಮುಂಬೈಗೆ ಬಂದಾಗ, ಅವರ ತಂದೆ ಅಂದರೆ ಸಲೀಮ್ ಖಾನ್ ಕೇವಲ 60 ರೂಪಾಯಿ ಹೊಂದಿದ್ದರಂತೆ. ಆ ಸಮಯದಲ್ಲಿ ಸಲ್ಮಾನ್ ಖಾನ್ 6 ವರ್ಷದ ಹುಡುಗ. ಆದರೆ ಆಗ ಬಹುಶಃ ಒಂದು ದಿನ ಸಲ್ಮಾನ್ ಬಾಲಿವುಡ್ ಅನ್ನು ಆಳುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಈ ಸಮಯದಲ್ಲಿ ಅವರು ದೇಶದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು. ಸಲ್ಮಾನ್ ಅವರ ನಿವ್ವಳ ಮೌಲ್ಯ, ಅವರ ಮನೆ, ಅವರ ಕಾರುಗಳ ಸಂಗ್ರಹ ಮತ್ತು ಅವರ ಗಳಿಕೆಯ ಬಗ್ಗೆ ಕೇಳಿದರೆ ಸಾಮಾನ್ಯ ಜನರಿಗೆ ಶಾಕ್ ಆಗುವದು ಗ್ಯಾರಂಟಿ

ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೊದಲು ಹೋಟೆಲ್ ತಾಜ್ ಕಾರ್ಯಕ್ರಮವೊಂದರಲ್ಲಿ ಹಿನ್ನೆಲೆ ಡ್ಯಾನ್ಸರ್ ಆಗಿ ಕೆಲಸ ಮಾಡಿದರು. ಇದಕ್ಕಾಗಿ ಅವರಿಗೆ ಕೇವಲ 75 ರೂಪಾಯಿ ಸಿಗುತ್ತಿತ್ತು. ಇದು ಸಲ್ಮಾನ್ ಅವರ ಮೊದಲ ಸಂಬಳ, ಆದರೆ ಇಲ್ಲಿಯವರೆಗೆ ಅವರ ಒಟ್ಟು ಆಸ್ತಿ ಸುಮಾರು 400 ಮಿಲಿಯನ್ ಡಾಲರ್ ಆಗಿದ್ದು, ಇದು ಭಾರತೀಯ ಕರೆನ್ಸಿಯಲ್ಲಿ 3300 ಕೋಟಿ ರೂ.ಗಳಿಗಿಂತ ಹೆಚ್ಚು .
ಸಲ್ಮಾನ್ ಖಾನ್ ಅವರ ಆಸ್ತಿಯಲ್ಲಿ ಮುಂಬೈ ಬಾಂದ್ರಾದ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಸೇರಿದೆ. ಅಲ್ಲಿ ಅವರು ತಮ್ಮ ಹೆತ್ತವರಾದ ಸಲೀಮ್ ಖಾನ್ ಮತ್ತು ಸಲ್ಮಾ ಸಲೀಮ್ ಅವರೊಂದಿಗೆ ವಾಸಿಸುತ್ತಿದ್ದಾರೆ. ಈ ಮನೆಯ ಬೆಲೆ ಸುಮಾರು 100 ಕೋಟಿ ಎಂದು ಹೇಳಲಾಗುತ್ತದೆ.
ಪನ್ವೆಲ್‌ನಲ್ಲಿ ಸಲ್ಮಾನ್ ಖಾನ್ ಅವರ ಸುಂದರವಾದ ತೋಟದಮನೆ ಇದೆ. ಅಲ್ಲಿ ಅವರು ಪಾರ್ಟಿಗಳನ್ನು ಮಾಡುತ್ತಲೇ ಇರುತ್ತಾರೆ. ಅವರ ಹುಟ್ಟು ಹಬ್ಬದ ಸಂತೋಷ ಕೂಟವೂ ಸಾಮಾನ್ಯವಾಗಿ ಇಲ್ಲಿ ನಡೆಯುತ್ತದೆ. ಭವ್ಯವಾದ ಜಿಮ್, ಅದ್ದೂರಿ ಈಜುಕೊಳ, ಅಶ್ವ ಶಾಲೆಗಳು ಮತ್ತು 5 ಕುದುರೆ ಜೊತಗೆ ಹಲವು ಸೌಲಭ್ಯಗಳನ್ನು ಹೊಂದಿದ್ದು, ಈ ಫಾರ್ಮ್ ಹೌಸ್‌ನ ಬೆಲೆ ಸುಮಾರು 80 ಕೋಟಿ ರೂ.
ದುಬೈನಲ್ಲಿ ಕೂಡ ಸಲ್ಮಾನ್ ಖಾನ್ ಅವರ ಮನೆ ಇದೆ. ಅವರ ಈ ಮನೆ ದಿ ಡೌನ್‌ಟೌನ್ ಆಡ್ರೆಸ್ ಬುರ್ಜ್ ಖಲೀಫಾ ಬಳಿಯಿದೆ. ಆದರೆ ಈ ಆಸ್ತಿಯ ಬೆಲೆಯ ವಿವರಗಳು ಎಲ್ಲಿಯೂ ಇಲ್ಲ. ಆದರೆ ಇದು ಐಷಾರಾಮಿ ಅಪಾರ್ಟ್ಮೆಂಟ್. ಸಲ್ಮಾನ್ ಆಗಾಗ್ಗೆ ತನ್ನ ಸಿಬ್ಬಂದಿ ಸದಸ್ಯರೊಂದಿಗೆ ದುಬೈಗೆ ಹೋಗುತ್ತಾರೆ ಮತ್ತು ತಮ್ಮ ಮನೆಯಲ್ಲಿಯೇ ಕಾಲ ಕಳೆಯುತ್ತಾರೆ.
ಸಲ್ಮಾನ್ ಖಾನ್‌ಗೆ ಮಹಾರಾಷ್ಟ್ರದ ಗೋರೈನಲ್ಲಿ ಒಂದು ತೋಟದಮನೆ ಇದೆ. ಇದರಲ್ಲಿ 5 ಮಲಗುವ ಕೋಣೆಗಳು, ಸಭಾಂಗಣಗಳು ಮತ್ತು ಅಡಿಗೆ ಮನೆಗಳಿವೆ. ಇದು ಸೀ ಫೇಸಿಂಗ್ ಬಂಗಲೆಯಾಗಿದ್ದು ಜಿಮ್, ಈಜುಕೊಳ, ಥೇಯಟರ್ ಮತ್ತು ವಿಶಿಷ್ಟ ಬೈಕು ಮುಂತಾದ ಸೌಲಭ್ಯಗಳನ್ನು ಹೊಂದಿದೆ
ಸಲ್ಮಾನ್ ಖಾನ್ ತನ್ನದೇ ಆದ ಖಾಸಗಿ ವಿಹಾರ ನೌಕೆಯನ್ನು ಹೊಂದಿದ್ದು, ಇದರ ಮೌಲ್ಯ ಸುಮಾರು 3 ಕೋಟಿ ರೂ. ಸಲ್ಮಾನ್ಇದನ್ನು 2016 ರಲ್ಲಿ ಖರೀದಿಸಿದರು. ಇಲ್ಲಿ ಅವರು ಖಾಸಗಿ ಪಾರ್ಟಿಗಳು ಮತ್ತು ಫ್ಯಾಮಿಲಿ ಗೆಟ್ ಟು ಗೆದರ್ ನಡೆಯುತ್ತದೆ.
ಸಲ್ಮಾನ್ ಖಾನ್ ಫೌಂಡೇಶನ್ ಎಂಬ ಹೆಸರಿನ ಸಂಸ್ಥೆಯನ್ನು ಈ ನಟ ನಡೆಸುತ್ತಿದ್ದಾರೆ, ಇದರ ಮೌಲ್ಯವು ಸುಮಾರು 235 ಕೋಟಿ ರೂ. ಈ ಸಂಸ್ಥೆಯಡಿಯಲ್ಲಿ, ಸಲ್ಮಾನ್ ತಮ್ಮ ಬಟ್ಟೆಯ ಬ್ರಾಂಡ್ ಬೀಯಿಂಗ್ ಹ್ಯೂಮನ್ ಅನ್ನು ಪ್ರಾರಂಭಿಸಿದ್ದಾನೆ, ಇದು ಯುವಕರಲ್ಲಿ ಬಹಳ ಜನಪ್ರಿಯವಾಗಿದೆ.
ಸಲ್ಮಾನ್ ಖಾನ್ ಫಿಲ್ಮ್ಸ್ಎಂ ಬ ತಮ್ದೇಮ ಪ್ರೊಡಕ್ಷನ್ ಕಂಪನಿಯನ್ನು ಹೊಂದಿದ್ದು, ಇದರಡಿಯಲ್ಲಿ, ಅವರು 'ಭಜರಂಗಿ ಭೈಜಾನ್', 'ಭಾರತ್', 'ದಬಾಂಗ್ 3' ಮತ್ತು 'ರಾಧೆ' ಮುಂತಾದ ಅನೇಕ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.
ದುಬಾರಿ ಕಾರುಗಳನ್ನು ಇಷ್ಟಪಡುವ ಸಲ್ಲೂ ಬಾಯಿ ಅವರ ಗ್ಯಾರೇಜ್ ಅಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಮೌಲ್ಯದ ಸುಮಾರು 2.26 ಕೋಟಿ ರೂ. ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ಸುಮಾರು 1.80 ಕೋಟಿ ರೂ ಕಾರಿನ ಜೊತೆ ಹಲವು ಕಾರುಗಳಿವೆ. ಕೆಲವು ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಅವರ ಕಾರುಗಳ ವೆಚ್ಚವು ಒಟ್ಟಾಗಿ 10 ಕೋಟಿ ರೂ
ಈ ಸೂಪರ್‌ಸ್ಟಾರ್ ಚಲನಚಿತ್ರಗಳು ಮತ್ತು ಜಾಹೀರಾತುಗಳಿಂದ ಹೆಚ್ಚಿನ ಹಣವನ್ನು ಗಳಿಸುತ್ತಾರೆ. ಅವರು ಬಾಲಿವುಡ್‌ನ ಅತ್ಯಂತ ದುಬಾರಿ ನಟರಲ್ಲಿ ಒಬ್ಬರಾಗಿದ್ದು ಒಂದು ಚಿತ್ರಕ್ಕಾಗಿ ಅವರ ಶುಲ್ಕವು ಸುಮಾರು 100 ಕೋಟಿ ಅಥವಾ ಹೆಚ್ಚಿನದಾಗಿದೆ.
ಅವರು ಬ್ರಾಂಡ್ ಅನುಮೋದನೆಗಾಗಿ ಪ್ರತಿ ಜಾಹೀರಾತಿಗೆ 4 ಕೋಟಿ ರೂ ಪಡೆಯುತ್ತಾರೆ ಈ ನಟ. ಟಿವಿಯಲ್ಲಿ 'ಬಿಗ್ ಬಾಸ್' ಶೋ ಹೋಸ್ಟ್ ಮಾಡುವ ಸಲ್ಮಾನ್ ಖಾನ್ ಅವರು ಪ್ರತಿ ಎಪಿಸೋಡ್‌ಗೆ ಕೋಟಿ ರೂಪಾಯಿಗಳನ್ನು ವಿಧಿಸುತ್ತಾರೆ.