Asianet Suvarna News Asianet Suvarna News

Salman Khan Birthday; ನನಗೆ ಮಕ್ಕಳು ಬೇಕು, ಆದ್ರೆ ಅವರ ತಾಯಿ ಬೇಡ; ಸಲ್ಮಾನ್ ಹೇಳಿಕೆ ವೈರಲ್

ಮಕ್ಕಳು ಬೇಕು ಆದರೆ ಅವರ ತಾಯಿ ಬೇಡ ಎಂದು ಸಲ್ಮಾನ್ ಖಾನ್ ಹೇಳಿರುವ ಮಾತು ಮತ್ತೆ ವೈರಲ್ ಆಗಿದೆ. 

When Salman Khan revealed he wanted kids but not the mother sgk
Author
First Published Dec 27, 2022, 12:14 PM IST

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರಿಗೆ ಇಂದು (ಡಿಸೆಂಬರ್ 27) ಹುಟ್ಟುಹಬ್ಬದ ಸಂಭ್ರಮ. ಅಂದಹಾಗೆ ಸಲ್ಮಾನ್ ಖಾನ್ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದಬಂಗ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್‌ನ ಅನೇಕ ಗಣ್ಯರು ಭಾಗಿಯಾಗಿದ್ದರು. ನಿನ್ನೆ ರಾತ್ರಿ (ಡಿಸೆಂಬರ್ 26) ನಡೆದ ಪಾರ್ಟಿಯಲ್ಲಿ ಬಾಲಿವುಡ್‌ನ ಬಹುತೇಕ ಮಂದಿ ಕಾಣಿಸಿಕೊಂಡಿದ್ದರು. 57ನೇ ವರ್ಷದ ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿರುವ ಸಲ್ಮಾನ್ ಖಾನ್‌ಗೆ ಅಭಿಮಾನಿಗಳು, ಸಿನಿ ಗಣ್ಯರು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್ ಖಾನ್ ಫೋಟೋ ಶೇರ್ ಮಾಡಿ ವಿಶ್ ಮಾಡಿ ಪ್ರೀತಿ ತೋರಿಸುತ್ತಿದ್ದಾರೆ. ಸಲ್ಮಾನ್ ಖಾನ್ ಮನೆ ಮುಂದೆ ಅಭಿಮಾನಿಗಳ ದಂಡೆ ನೆರೆದಿದೆ. ಅಭಿಮಾನಿಗಳತ್ತಾ ಕೈ ಬೀಸಿದ ಸಲ್ಮಾನ್ ಖಾನ್ ಪ್ರೀತಿಯ ಶುಭಾಶಯ ಸ್ವೀಕರಿಸಿದ್ದಾರೆ.   

ಅಂದಹಾಗೆ ಸಲ್ಮಾನ್ ಖಾನ್ ಬರ್ತಡೇ ಪಾರ್ಟಿಯಲ್ಲಿ ಶಾರುಖ್ ಖಾನ್ ಹೈಲೆಟ್ ಆಗಿದ್ದಾರೆ. ಗೆಳೆಯ ಸಲ್ಮಾನ್ ಅವರನ್ನು ಹಗ್ ಮಾಡಿ ಕೈ ಕೈ ಹಿಡಿದು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಹುಟ್ಟುಹಬ್ಬದ ದಿನ ಅವರ ಹಳೆಯ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸಲ್ಮಾನ್ ಖಾನ್ ಬಾಲಿವುಡ್‌ನ ಮೋಸ್ಟ್ ಎಲಿಜೆಬೆಲ್ ಬ್ಯಾಚುಲರ್. ಮದುವೆ ಬಗ್ಗೆ ಮಾತನಾಡದ ಸಲ್ಮಾನ್ ಖಾನ್ ಈ ಹಿಂದೆ ಮಕ್ಕಳ ಬಗ್ಗೆ ಮಾತನಾಡಿದ್ದ ಹೇಳಿಕೆ ಈಗ ಮತ್ತೆ ವೈರಲ್ ಆಗಿದೆ. ಮಕ್ಕಳು ಬೇಕು ಆದರೆ ಅವರ ತಾಯಿ ಬೇಡ ಎಂದು ಸಲ್ಮಾನ್ ಖಾನ್ ಒಮ್ಮೆ ಹೇಳಿದ್ದರು.   

salman Khan Birthday; ಹಗ್ ಮಾಡಿ, ಕೈ ಕೈ ಹಿಡಿದು ಪೋಸ್ ನೀಡಿದ ಶಾರುಖ್-ಸಲ್ಮಾನ್ ನೋಡಿ ಫ್ಯಾನ್ಸ್ ಖುಷ್

2019ರಲ್ಲಿ ಮುಂಬೈ ಮಿರರ್ ಜೊತೆ ಮಾತನಾಡಿದ ಸಲ್ಮಾನ್, ನಾನು ಮಕ್ಕಳನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದರು.  'ನನಗೆ ಮಕ್ಕಳು ಬೇಕು, ಆದರೆ ಮಕ್ಕಳೊಂದಿಗೆ ತಾಯಿ ಕೂಡ ಬರ್ತಾರೆ. ನನಗೆ ತಾಯಿ ಬೇಡ, ಆದರೆ ಮಕ್ಕಳಿಗೆ ತಾಯಿ ಬೇಕು. ಅವರನ್ನು ನೋಡಿಕೊಳ್ಳಲು ನನ್ನ ಜೊತೆ ಇಡೀ ಹಳ್ಳಿಯಿದೆ' ಎಂದು ಹೇಳಿದ್ದರು. ಸಲ್ಮಾನ್ ಖಾನ್ ಹಳೆಯ ಹೇಳಿಕೆ ಈಗ ಮತ್ತೆ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಸಲ್ಮಾನ್ ಖಾನ್ ಮದುವೆ ಆದ್ಮೇಲೆ ನಂದು; ಬಾಲಯ್ಯ ಪ್ರಶ್ನೆಗೆ ಪ್ರಭಾಸ್ ರಿಯಾಕ್ಷನ್ ವೈರಲ್

ಅಂದಹಾಗೆ ಸಲ್ಮಾನ್ ಖಾನ್ ಅನೇಕ ನಟಿಯರ ಜೊತೆ ಡೇಟಿಂಗ್ ಮಾಡಿರುವ ವದಂತಿ ಇದೆ. 1001ರಿಂದ 1999ರ ವರೆಗೂ ಸಲ್ಮಾನ್ ಖಾನ್ ನಟಿ ಸೋಮಿ ಅಲಿ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.  ಬಳಿಕ ಸಂಗೀತಾ ಬಿಜ್ಲಾನಿ, ಐಶ್ವರ್ಯಾ ರೈ, ಕತ್ರಿನಾ ಕೈಫ್, ಜಾಕ್ವೆಲಿನ್ ಸೇರಿದಂತೆ ಅನೇಕ ನಟಿಯರ ಜೊತೆ ಸಲ್ಮಾನ್ ಹೆಸರು ಥಳಕು ಹಾಕಿಕೊಂಡಿತ್ತು. ಸಲ್ಮಾನ್ ಸದ್ಯ ಲೂಲಿಯಾ ವಂತೂರ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎನ್ನಲಾಗಿದೆ. ಈ ನಡುವೆ ಪೂಜಾ ಹೆಗ್ಡೆ ಜೊತೆ ಸಲ್ಮಾನ್ ಖಾನ್ ಹೆಸರು ಥಳಕು ಹಾಕಿಕೊಂಡಿತ್ತು. 

ಸಲ್ಮಾನ್ ಖಾನ್ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೆ ಶಾರುಖ್ ಖಾನ್ ಪಠಾಣ್ ಸಿನಿಮಾದಲ್ಲೂ ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಟೈಗರ್3 ಮುಗಿಸಿರುವ ಸಲ್ಮಾನ್ ಸದ್ಯ ಕಿಸಿ ಕ ಬಾಯ್ ಕಿಸಿ ಕಿ ಜಾನ್ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.  

Follow Us:
Download App:
  • android
  • ios