- Home
- Entertainment
- Cine World
- Sneha Ullal Birthday Special: ನಟಿಯ ನೋಡಿ ಐಶ್ವರ್ಯಾ ಎಂದು ಬೊಗಳಿದ ಸಲ್ಮಾನ್ ನಾಯಿಗಳು!
Sneha Ullal Birthday Special: ನಟಿಯ ನೋಡಿ ಐಶ್ವರ್ಯಾ ಎಂದು ಬೊಗಳಿದ ಸಲ್ಮಾನ್ ನಾಯಿಗಳು!
ಸಲ್ಮಾನ್ ಖಾನ್ (Salman Khan) ಜೊತೆ ‘ಲಕ್ಕಿ ನೋ ಟೈಮ್ ಫಾರ್ ಲವ್’ ಸಿನಿಮಾದಲ್ಲಿ ಕೆಲಸ ಮಾಡಿದ್ದ ನಟಿ ಸ್ನೇಹಾ ಉಲ್ಲಾಳ್ (Sneha Ullal) ಅವರಿಗೆ 34 ವರ್ಷ. ಡಿಸೆಂಬರ್18, 1987 ರಂದು ಓಮನ್‌ನ ಮಸ್ಕತ್‌ನಲ್ಲಿ ಜನಿಸಿದ ಸ್ನೇಹಾ ಉಲ್ಲಾಲ್ ಅವರನ್ನು ಐಶ್ವರ್ಯಾ ರೈ ಅವರ ಲುಕ್‌ಲೈಕ್ ಎಂದೂ ಕರೆಯುತ್ತಾರೆ. ಈ ಕಾರಣಕ್ಕೆ ಸಲ್ಮಾನ್ ಖಾನ್ ಅವರಿಗೆ ತಮ್ಮ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ನೀಡಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ ಸ್ನೇಹಾಗೆ ಆರೋಗ್ಯ ಸಮಸ್ಯೆಯಿಂದಾಗಿ ಅವರು ಸಿನಿಮಾದಿಂದ ದೀರ್ಘ ವಿರಾಮ ತೆಗೆದುಕೊಳ್ಳಬೇಕಾಯಿತು. ನಟಿ 4 ವರ್ಷಗಳ ಕಾಲ ತನ್ನ ಕಾಲಿನ ಮೇಲೆ ನಿಲ್ಲಲು ಸಾಧ್ಯವಾಗಲಿಲ್ಲ.

ಸ್ನೇಹಾ ಉಲ್ಲಾಳ್ ಅವರು ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಅವರು ಸುಮಾರು 4 ವರ್ಷಗಳ ಕಾಲ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಖಾಯಿಲೆಯಿಂದ ಸ್ನೇಹಾ ಅರ್ಧ ಗಂಟೆಗೂ ಹೆಚ್ಚು ಕಾಲ ಕಾಲ ಮೇಲೆ ನಿಲ್ಲಲೂ ಸಾಧ್ಯವಾಗದಷ್ಟು ದುರ್ಬಲಳಾಗಿದ್ದರು ಎಂದು ಹೇಳಿದ್ದರು.
ಸ್ನೇಹಾ ಉಳ್ಳಾಲ್ ಪ್ರಕಾರ, ಅವರು ಆಟೋ ಇಮ್ಯೂನ್ ಡಿಸೀಸ್‌ನಿಂದ ಬಳಲುತ್ತಿದ್ದರು, ಇದು ರಕ್ತ ಸಂಬಂಧಿತ ಕಾಯಿಲೆಯಾಗಿದೆ. ಈ ಕಾರಣದಿಂದಾಗಿ, ಅವರು ತುಂಬಾ ವೀಕ್ ಆಗಿದ್ದರು ಮತ್ತು ಹೆಚ್ಚು ಕಾಲ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈಗ ಸ್ನೇಹಾ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಅವರು ಕೊನೆಯದಾಗಿ 2015 ರ ಬೆಜುಬಾನ್ ಇಷ್ಕ್ ಚಿತ್ರದಲ್ಲಿ ಕಾಣಿಸಿಕೊಂಡರು.
ನನಗೆ ನಿರಂತರವಾಗಿ ನಡೆಯಲು, ಕುಣಿಯಲು, ಶೂಟ್ ಮಾಡಲು ತುಂಬಾ ಕಷ್ಟವಾಗುತ್ತಿತ್ತು. ನಂತರ ನಾನು ಕೆಲಸದಿಂದ ವಿರಾಮ ತೆಗೆದುಕೊಂಡು ನನ್ನ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಬೇಕೆಂದು ನಿರ್ಧರಿಸಿದೆ, ಏಕೆಂದರೆ ನಾನು ಪ್ರತಿದಿನ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೆ. ನಾನು ಇಂಡಸ್ಟ್ರಿ ಬಿಡಲಿಲ್ಲ, ಆದರೆ ಅನಾರೋಗ್ಯದ ಕಾರಣ ಕೆಲವು ದಿನಗಳ ಕಾಲ ಬಿಡುವು ಮಾಡಿಕೊಂಡೆ ಎಂದು ಸ್ನೇಹಾ ಹೇಳಿದ್ದರು.
ಸ್ನೇಹಾ ಅವರನ್ನು ಸಲ್ಮಾನ್ ಖಾನ್ ಅವರ ಎಕ್ಸ್ ಗರ್ಲ್‌ಫ್ರೆಂಡ್ ಐಶ್ವರ್ಯಾ ರೈ ಅವರ ಲುಕ್ ಅಲೈಕ್ ಎಂದು ಪರಿಗಣಿಸಲಾಗಿದೆ. ಈ ಕಾರಣದಿಂದಲೇ ಸಲ್ಮಾನ್ ಅವರನ್ನು ಸಿನಿಮಾಗಳಲ್ಲಿ ಕರೆತಂದಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲ, ಸಿನಿಮಾಗಳಿಂದ ದೂರ ಉಳಿದಿರುವ ಸ್ನೇಹಾ ತಮ್ಮ ಸಂದರ್ಶನವೊಂದರಲ್ಲಿ ತನಗೆ ಬಹಳ ದಿನ ಕೆಲಸ ಇಲ್ಲದಿದ್ದರೂ ಸಲ್ಮಾನ್ ಬಳಿ ಕೆಲಸ ಕೇಳಿಕೊಂಡು ಹೋಗಿರಲಿಲ್ಲ ಎಂದು ಹೇಳಿದ್ದರು.
'ಲಕ್ಕಿ' ಚಿತ್ರಕ್ಕಾಗಿ ನಾನು ಮೊದಲ ಬಾರಿಗೆ ಸಲ್ಮಾನ್ ಖಾನ್ ಅವರ ಮನೆಗೆ ಬಂದಾಗ ಅವರ ನಾಯಿಗಳು ನನ್ನ ಮೇಲೆ ಬೊಗಳಲು ಪ್ರಾರಂಭಿಸಿದವು. ನನಗೂ ಸ್ವಲ್ಪ ಉದ್ವೇಗವಾಯಿತು. ಸಲ್ಮಾನ್ ನಾಯಿಗಳು ನನ್ನನ್ನು ಐಶ್ವರ್ಯಾ ಎಂದು ಭಾವಿಸಿದ್ದವು. ಸಲ್ಮಾನ್ ನಾಯಿಗಳಿಗೆ ಏನೋ ಹೇಳಿದರು ಮತ್ತು ಅವು ಬೊಗಳುವುದನ್ನು ನಿಲ್ಲಿಸಿದವು. ನಾನು ಐಶ್ವರ್ಯಾಳಂತೆ ಕಾಣುತ್ತೇನೆ ಎಂದು ಎಲ್ಲರೂ ಭಾವಿಸುತ್ತಾರೆ ಎಂದು ಸ್ನೇಹಾ ಉಲ್ಲಾಲ್ ಸಂದರ್ಶನವೊಂದರಲ್ಲಿ ಹೇಳಿದ್ದರು.
‘ಲಕ್ಕಿ’ ಸಿನಿಮಾದ ಮೂಲಕ ಸ್ನೇಹಾ ಗಮನ ಸೆಳೆದರು. ಸ್ನೇಹಾ ಪ್ರಕಾರ, ಈ ಸಿನಿಮಾಕ್ಕೆ ಬಂದಾಗ ನಾನು ತುಂಬಾ ಚಿಕ್ಕವಳಾಗಿದ್ದೆ (18 ವರ್ಷ). ಸಿನಿಮಾ ಕಾರಣದಿಂದ ನನ್ನ ಓದು ಸಹ ಮಧ್ಯದಲ್ಲಿಯೇ ಉಳಿಯಿತ್ತು. ಚಿತ್ರದ ಶೂಟಿಂಗ್ ಮುಗಿದ ತಕ್ಷಣ ನನ್ನ ಓದು ಮುಗಿಸಿದೆ. ಇದಾದ ನಂತರ ಸ್ನೇಹಾ ದಕ್ಷಿಣದಲ್ಲಿ ಬಿಝಿಯಾದರು.
ಸ್ನೇಹಾ ಉಲ್ಲಾಲ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಸ್ಕತ್‌ನ ಇಂಡಿಯನ್ ಸ್ಕೂಲ್ ಮತ್ತು ಇಂಡಿಯನ್ ಸ್ಕೂಲ್, ಸಲಾಹ್ (ಒಮಾನ್) ನಲ್ಲಿ ಮಾಡಿದರು. ನಂತರ ಅವರು ತಮ್ಮ ತಾಯಿಯೊಂದಿಗೆ ಮುಂಬೈಗೆ ಆಗಮಿಸಿದರು ಮತ್ತು ಡ್ಯುರೆಲ್ಲೊ ಕಾನ್ವೆಂಟ್ ಹೈಸ್ಕೂಲ್‌ಗೆ ಪ್ರವೇಶ ಪಡೆದರು ಮತ್ತು ಅವರು ಮಹಾರಾಷ್ಟ್ರದ ಮಾಣಿಕ್‌ಪುರದ ವರ್ತಕ್ ಕಾಲೇಜಿನ ವಿದ್ಯಾರ್ಥಿನಿಯೂ ಆಗಿದ್ದಾರೆ.