MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Arjun Reddy ಮೊದಲ ಆಯ್ಕೆ ಈ ಸಿಂಪಲ್ ಬ್ಯೂಟಿ… ಸಂದೀಪ್ ವಾಂಗಾ ಬಿಚ್ಚಿಟ್ರು ಇಂಟ್ರೆಸ್ಟಿಂಗ್ ಸ್ಟೋರಿ

Arjun Reddy ಮೊದಲ ಆಯ್ಕೆ ಈ ಸಿಂಪಲ್ ಬ್ಯೂಟಿ… ಸಂದೀಪ್ ವಾಂಗಾ ಬಿಚ್ಚಿಟ್ರು ಇಂಟ್ರೆಸ್ಟಿಂಗ್ ಸ್ಟೋರಿ

Arjun Reddy: ಸಂದೀಪ್ ರೆಡ್ಡಿ ವಾಂಗಾ ನಿರ್ದೇಶನದ ‘ಅರ್ಜುನ್ ರೆಡ್ಡಿ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ವಿಜಯ್ ದೇವರಕೊಂಡ ಮತ್ತು ಶಾಲಿನಿ ಪಾಂಡೆ ಕೆಮೆಸ್ಟ್ರಿ ವರ್ಕೌಟ್ ಆಗಿತ್ತು. ಆದರೆ ಈ ಸಿನಿಮಾಗೆ ನಿರ್ದೇಶಕರ ಮೊದಲ ಆಯ್ಕೆ ಇದ್ದದ್ದು ನಟಿ ಸಾಯಿ ಪಲ್ಲವಿಯಂತೆ. 

1 Min read
Author : Pavna Das
Published : Jul 02 2026, 04:33 PM IST
Share this Photo Gallery
  • FB
  • TW
  • Linkdin
  • Whatsapp
16
ಅರ್ಜುನ್ ರೆಡ್ಡಿ ಸಿನಿಮಾ
Image Credit : social media

ಅರ್ಜುನ್ ರೆಡ್ಡಿ ಸಿನಿಮಾ

2017ರಲ್ಲಿ ತೆರೆಕಂಡ ಅರ್ಜುನ್ ರೆಡ್ಡಿ ಸಿನಿಮಾ ತೆಲುಗು ಸಿನಿಮಾ ಇಂಡಷ್ಟ್ರಿಯ ಸೂಪರ್ ಹಿಟ್ ಸಿನಿಮಾವಾಗಿತ್ತು. ಈ ರೊಮ್ಯಾಂಟಿಕ್ ಡ್ರಾಮಾ ನಿರ್ದೇಶನ ಮಾಡುವ ಮೂಲಕ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗಾ ಯಶಸ್ವಿಯಾಗಿದ್ದರು. ಆದರೆ ಈ ಸಿನಿಮಾಗೆ ಸಂದೀಪ್ ಮೊದಲಿಗೆ ಆಯ್ಕೆ ಮಾಡಿದ ನಾಯಕಿ ಯಾರು ಗೊತ್ತಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಹಳೆ ಸುದ್ದಿ ಮತ್ತೆ ವೈರಲ್
Image Credit : youtube/@PeopleMediaFactory

ಹಳೆ ಸುದ್ದಿ ಮತ್ತೆ ವೈರಲ್

ಕಳೆದ ವರ್ಷ ನಡೆದ ಕಾರ್ಯಕ್ರಮವೊಂದರಲ್ಲಿ ಸಂದೀಪ್ ರೆಡ್ಡಿ, ತಮ್ಮ ಸಿನಿಮಾಗೆ ತಾವು ಯಾರನ್ನು ಮೊದಲಿಗೆ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದು, ಆದರೆ ಸ್ನೇಹಿತರೊಬ್ಬರು ‘ಆ ಯೋಚನೆಯನ್ನೇ ಮರೆತು ಬಿಡು’ ಎಂದು ಬುದ್ದಿವಾದ ಹೇಳಿದ ಕಾರಣ, ಆ ಸ್ಟಾರ್ ನಾಯಕಿಯನ್ನು ಕೈಬಿಟ್ಟಿರುವ ಬಗ್ಗೆ ತಿಳಿಸಿದ್ದರು. ಇದೀಗ ಮತ್ತೆ ಆ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Related Articles

Related image1
Sai Pallavi Tragedy: ರಾಮಾಯಣದ ಸೀತೆಗೆ ಭಾರೀ ಸಮಸ್ಯೆ.. ನಟಿ ಸಾಯಿ ಪಲ್ಲವಿಗೆ ಅದೊಂದು ಬಾಗಿಲು ಬಂದ್ ಆಗೋಯ್ತು!
Related image2
ನಟಿ Sai Pallavi ಗೆ Filmfare ತಂದು ಕೊಟ್ಟ ಸಿನಿಮಾಗಳಿವು.. ಮಿಸ್ ಮಾಡ್ದೇ ನೋಡಿ
36
ಸಾಯಿ ಪಲ್ಲವಿ ಮೊದಲ ಆಯ್ಕೆ
Image Credit : our own

ಸಾಯಿ ಪಲ್ಲವಿ ಮೊದಲ ಆಯ್ಕೆ

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು 2017 ರ ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲು ಬಯಸಿದ್ದರು. ಆದರೆ ಅವರ ಸ್ನೇಹಿತರೊಬ್ಬರು ‘ಸಾಯಿ ಪಲ್ಲವಿ ಸ್ಲೀವ್‌ಲೆಸ್ ಧರಿಸುವುದಿಲ್ಲ… ಇನ್ನು ಇದೆಲ್ಲಾ… ‘ಆಕೆಯನ್ನು ನಾಯಕಿ ಮಾಡುವ ವಿಷಯ ಮರೆತುಬಿಡು’ ಎಂದಿದ್ದರಂತೆ.

46
ವಿಜಯ್ ದೇವರಕೊಂಡ -ಶಾಲಿನಿ
Image Credit : social media

ವಿಜಯ್ ದೇವರಕೊಂಡ -ಶಾಲಿನಿ

ಕೊನೆಗೆ ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡಗೆ ನಾಯಕಿಯಾಗಿ ಶಾಲಿನಿ ಪಾಂಡೆ ಆಯ್ಕೆಯಾದರು. ಇವರಿಬ್ಬರ ಕೆಮೆಸ್ಟ್ರಿ, ರೊಮ್ಯಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜೊತೆಗೆ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾವಾಗಿ ಹೊರಹೊಮ್ಮಿತು.

56
ಸಾಯಿ ಪಲ್ಲವಿ ಬೇಡಿಕೆಗಳು
Image Credit : instagram

ಸಾಯಿ ಪಲ್ಲವಿ ಬೇಡಿಕೆಗಳು

ಭಾರತೀಯ ಚಿತ್ರರಂಗದ ಅದ್ಭುತ ಕಲಾವಿದೆ ಸಾಯಿ ಪಲ್ಲವಿ. ಯಾವುದೇ ಪಾತ್ರವನ್ನು ಒಳಹೊಕ್ಕು, ತಾವೇ ಆ ಪಾತ್ರದಂತೆ ನಟಿಸುವ ಚತುರೆ. ಆದರೆ ಸಿನಿಮಾ ಮಾಡುವಾಗ ಇವರು ಕೆಲವೊಂದು ಬೇಡಿಕೆ ಇಡುತ್ತಾರೆ. ಹೆಚ್ಚು ಮೇಕಪ್ ಧರಿಸುವಂತಿಲ್ಲ, ತುಂಡು ಬಟ್ಟೆ ಧರಿಸುವಂತಿಲ್ಲ. ಕಿಸ್ಸಿಂಗ್, ಲಿಪ್ ಲಾಕ್ ಕೂಡ ಮಾಡುವುದಿಲ್ಲ. ಇದೆಲ್ಲಾ ಬೇಡಿಕೆಗಳಿಗೆ ಅಸ್ತು ಎಂದರೆ ಮಾತ್ರ ಸಾಯಿ ಪಲ್ಲವಿ ಆ ಸಿನಿಮಾದಲ್ಲಿ ನಟಿಸುತ್ತಾರೆ.

66
ಸಾಯಿ ಪಲ್ಲವಿ ಸಿನಿಮಾಗಳು
Image Credit : instagram

ಸಾಯಿ ಪಲ್ಲವಿ ಸಿನಿಮಾಗಳು

ಸಾಯಿ ಪಲ್ಲವಿ ಕೊನೆಯದಾಗಿ ಹಿಂದಿಯ ‘ಏಕ್ ದಿನ್’ ಸಿನಿಮಾದಲ್ಲಿ ನಟಿಸಿದ್ದರು. ಹಲವಾರು ಸಿನಿಮಾಗಳು ಸಾಯಿ ಪಲ್ಲವಿ ಕೈಯಲ್ಲಿದೆ. ಓಂ ಚಾಪ್ಟರ್ ೧, ರಾಮಾಯಣ್ ಪಾರ್ಟ್ 1ಮತ್ತು 2, ಮಣಿರತ್ನಂ ಅವರ ಸಿನಿಮಾ, ಧನುಷ್ ಜೊತೆಗಿನ ಸಿನಿಮಾದಲ್ಲೂ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸಾಯಿ ಪಲ್ಲವಿ
ಸಿನಿಮಾ
ಮನರಂಜನಾ ಸುದ್ದಿ
ಟಾಲಿವುಡ್

Latest Videos
Recommended Stories
Recommended image1
ಜನ ನಾಯಗನ್' ಚಿತ್ರದ ಕುರಿತು ಬಿಗ್‌ ಅಪ್ಡೇಟ್‌; ಹೈ ಕೋರ್ಟ್‌ ಹೇಳಿದ್ದಿಷ್ಟೇ!
Recommended image2
'2 ಲಕ್ಷಕ್ಕೆ ಆಸೆ ಪಟ್ಟು ಜೀವ ಕಳಕೊಂಡ್ರು..' ನಟಿ ಸೌಂದರ್ಯ ಸಾವಿನ ಬಗ್ಗೆ ನಿರ್ದೇಶಕ ವಿವಾದಾತ್ಮಕ ಹೇಳಿಕೆ
Recommended image3
ಅಜ್ಜಿ, ಅಮ್ಮ, ಪತ್ನಿ.. ರಾಮ್ ಚರಣ್‌ಗೆ ಯಾರ ಕೈತುತ್ತು ಹೆಚ್ಚು ಇಷ್ಟ? ಉಪಾಸನಾ ಅಡುಗೆ ಮಾಡ್ತಾರಾ?
Related Stories
Recommended image1
Sai Pallavi Tragedy: ರಾಮಾಯಣದ ಸೀತೆಗೆ ಭಾರೀ ಸಮಸ್ಯೆ.. ನಟಿ ಸಾಯಿ ಪಲ್ಲವಿಗೆ ಅದೊಂದು ಬಾಗಿಲು ಬಂದ್ ಆಗೋಯ್ತು!
Recommended image2
ನಟಿ Sai Pallavi ಗೆ Filmfare ತಂದು ಕೊಟ್ಟ ಸಿನಿಮಾಗಳಿವು.. ಮಿಸ್ ಮಾಡ್ದೇ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved