ಖ್ಯಾತ ನಿರ್ದೇಶಕನ ಜೊತೆ ಮದುವೆ ವದಂತಿಯ ಕುರಿತು ಸ್ಪಷ್ಟನೆ ನೀಡಿದ ನಟಿ ಸಾಯಿಪಲ್ಲವಿ
ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಹೆಚ್ಚು ಗಾಸಿಪ್‌ಗಳಿಗೆ ಸಿಲುಕಿ ಹಾಕಿಕೊಳ್ಳದೆ ಕೂಲಾಗಿರುವ ನಟಿ. ಆದ್ರೆ ಇತ್ತೀಚಿಗೆ ಈಕೆ ಮತ್ತು ನಿರ್ದೇಶಕ ರಾಜಕುಮಾರ್ ಪೆರಿಯಸಾಮಿ ಬಗ್ಗೆ ಮದುವೆಯ ವದಂತಿ ಕೇಳಿ ಬಂದಿತ್ತು. ಈ ಬಗ್ಗೆ ಸದ್ಯ ಸ್ವತಃ ಸಾಯಿ ಪಲ್ಲವಿ ಸ್ಪಷ್ಟನೆ ನೀಡಿದ್ದಾರೆ.
ನ್ಯಾಚುರಲ್ ಬ್ಯೂಟಿ ಎಂದೇ ಹೆಸರಾಗಿರುವ ನಟಿ ಸಾಯಿ ಪಲ್ಲವಿ. ಆಕೆಯ ವೈವಾಹಿಕ ಜೀವನದ ಕುರಿತಾದ ಊಹಾಪೋಹಗಳು ಆಗಾಗ ಹರಿದಾಡುತ್ತಲೇ ಇರುತ್ತದೆ. ಈ ಹಿಂದೆ ಅನೇಕ ವದಂತಿಗಳು ಆಕೆಯ ಬಗ್ಗೆ ಕೇಳಿ ಬಂದಿತ್ತು. ಇತ್ತೀಚೆಗೆ ಮದುವೆಯಾಗದೆ ಗರ್ಭಿಣಿಯಾಗಿದ್ದಾರೆಂದು ಸುದ್ದಿ ಹಬ್ಬಿತ್ತು.
ಇತ್ತೀಚಿಗೆ ಮತ್ತೊಮ್ಮೆ ಯಾರಿಗೂ ತಿಳಿಸದೆ ಸರಳವಾಗಿ ತಮಿಳಿನ ಖ್ಯಾತ ನಿರ್ದೇಶಕನನ್ನು ಮದುವೆಯಾಗಿದ್ದಾರೆ ಎಂಬ ಸುದ್ದಿಯ ಜೊತೆ ಫೋಟೋ ಸಹ ವೈರಲ್ ಆಗಿತ್ತು. ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಜೊತೆ ನಟಿ ಸಾಯಿ ಪಲ್ಲವಿ ಇರುವ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು.
ಫೋಟೋದಲ್ಲಿ ಸಾಯಿಪಲ್ಲವಿ ಹಾಗೂ ಪೆರಿಯಸ್ವಾಮಿ ಇಬ್ಬರು ತಮ್ಮ ಕುತ್ತಿಗೆಗೆ ಕೆಂಪು ಹೂವಿನ ಮಾಲೆಯನ್ನು ಧರಿಸಿದ್ದರು. ಅನೇಕ ಅಭಿಮಾನಿಗಳು ಇಬ್ಬರೂ ಮದುವೆಯಾಗಿದ್ದಾರೆ ಎಂದು ಖುಷಿಯಿಂದ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು.
ಆ ನಂತರ ಈ ಫೋಟೋ ಸಿನಿಮಾವೊಂದರ ಮುಹೂರ್ತ ಎಂಬ ಮಾತು ಕೇಳಿ ಬಂದಿತ್ತು. ಹಲವು ಊಹಾಪೋಹಗಳ ಮಧ್ಯೆ ಈಗ ಸ್ವತಃ ನಟಿ ಸಾಯಿ ಪಲ್ಲವಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸಾಯಿ ಪಲ್ಲವಿ ಇತ್ತೀಚೆಗೆ ತಮ್ಮ ಮದುವೆಯ ಸುದ್ದಿ ವೈರಲ್ ಆದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಯಿ ಪಲ್ಲವಿ ತನ್ನ X ನಲ್ಲಿ ವೈರಲ್ ವಿವಾಹದ ಫೋಟೋದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
'ಪ್ರಾಮಾಣಿಕವಾಗಿ, ನಾನು ವದಂತಿಗಳಿಗೆ ಹೆದರುವುದಿಲ್ಲ ಆದರೆ ಅದು ಕುಟುಂಬದ ಸ್ನೇಹಿತರನ್ನು ಒಳಗೊಂಡು ಆಗಿರುವಾಗ ನಾನು ಮಾತನಾಡಬೇಕಾಗುತ್ತದೆ.. ನನ್ನ ಚಿತ್ರದ ಪೂಜಾ ಸಮಾರಂಭದ ಚಿತ್ರವನ್ನು ಉದ್ದೇಶಪೂರ್ವಕವಾಗಿ ಕ್ರಾಪ್ ಮಾಡಲಾಗಿದೆ. ಕೆಟ್ಟ ಉದ್ದೇಶಗಳೊಂದಿಗೆ ಪ್ರಸಾರ ಮಾಡಲಾಗಿದೆ. ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸುವುದು ಸಂಪೂರ್ಣವಾಗಿ ಕೆಟ್ಟದ್ದು' ಎಂದು ನಟಿ ಹೇಳಿದ್ದಾರೆ.
ರಾಜ್‌ಕುಮಾರ್ ಮತ್ತು ಶಿವಕಾರ್ತಿಕೇಯನ್ ಅವರ ಚಿತ್ರಕ್ಕೆ ಪ್ರಸ್ತುತ ಎಸ್‌ಕೆ 21 ಎಂದು ಹೆಸರಿಸಲಾದ ಪೂಜಾ ಸಮಾರಂಭದಲ್ಲಿ ಫೋಟೋವನ್ನು ಸೆರೆಹಿಡಿಯಲಾಗಿದೆ. ಈ ಹಿಂದೆ ಸಾಯಿ ಪಲ್ಲವಿ ಹುಟ್ಟುಹಬ್ಬದ ಸಂದರ್ಭದಲ್ಲಿ ನಡೆದ ಪೂಜಾ ಸಮಾರಂಭದ ಕೆಲವು ಚಿತ್ರಗಳನ್ನು ರಾಜ್‌ಕುಮಾರ್ ಹಂಚಿಕೊಂಡಿದ್ದರು.
ತಮಿಳುನಾಡಿನಲ್ಲಿ ಮೇ 9, 1992 ರಂದು ಜನಿಸಿದ ಸಾಯಿ ಪಲ್ಲವಿ ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ ಭಾರತೀಯ ಚಲನಚಿತ್ರ ನಟಿ. ತನ್ನ ಎಂಬಿಬಿಎಸ್ ಪೂರ್ಣಗೊಳಿಸಿದ್ದರೂ, ನಟಿ ನೃತ್ಯ ಮತ್ತು ನಟನೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು.
ಸಾಯಿ ಪಲ್ಲವಿ ಅವರ ಬಾಲ್ಯದಲ್ಲಿ ತಮಿಳು ಚಲನಚಿತ್ರಗಳಾದ "ಕಸ್ತೂರಿ ಮಾನ್" (2005) ಮತ್ತು "ಧಾಮ್ ಧೂಮ್" (2008) ನಲ್ಲಿ ಬಾಲ ಕಲಾವಿದೆಯ ಪಾತ್ರಗಳೊಂದಿಗೆ ಚಲನಚಿತ್ರೋದ್ಯಮಕ್ಕೆ ಪ್ರಯಾಣ ಪ್ರಾರಂಭವಾಯಿತು. "ಉಂಗಲಿಲ್ ಯಾರ್ ಅದುತಾ ಪ್ರಭುದೇವ" ಮತ್ತು "ಧೀ ಅಲ್ಟಿಮೇಟ್ ಡ್ಯಾನ್ಸ್ ಶೋ" ನಂತಹ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಮೂಲಕ ಅವರು ಆರಂಭಿಕ ಮಾನ್ಯತೆ ಪಡೆದರು.
ಮಲಯಾಳಂ ಚಿತ್ರ 'ಪ್ರೇಮಂ' (2015) ನಲ್ಲಿ ನಟಿಸಿದ ಬಳಿಕ ಪಲ್ಲವಿಗೆ ಇದು ಸಾಕಷ್ಟು ಹೆಸರು ತಂದುಕೊಟ್ಟಿತು. ಅಲ್ಲಿ ಅವರು ವಿದ್ಯಾರ್ಥಿಯೊಂದಿಗೆ ಪ್ರೀತಿಯಲ್ಲಿ ಬೀಳುವ ಕಾಲೇಜು ಉಪನ್ಯಾಸಕಿ ಮಲಾರ್ ಪಾತ್ರ ಮಾಡಿದ್ದಾರೆ. ಪ್ರೇಮಂ ಚಿತ್ರದಲ್ಲಿನ ಅವರ ಅತ್ಯುತ್ತಮ ಅಭಿನಯವು ಆಕೆಗೆ ಅವಕಾಶಗಳನ್ನು ಹೆಚ್ಚಿಸಿತು ಮತ್ತು ಚಿತ್ರವು ಭಾರಿ ಹಿಟ್ ಆಯಿತು. ಸಾಯಿ ಪಲ್ಲವಿ ಇತ್ತೀಚೆಗೆ ನಾಗ ಚೈತನ್ಯ ಜೊತೆಗೆ ಚಿತ್ರಕ್ಕೆ ಸಹಿ ಹಾಕಿದ್ದಾರೆ. ತೆಲುಗು ಚಿತ್ರವನ್ನು ಅಲ್ಲು ಅರವಿಂದ್ ನಿರ್ಮಿಸಿ, ಮತ್ತು ಚಂದೂ ಮೊಂಡೆಟಿ ನಿರ್ದೇಶಿಸುತ್ತಿದ್ದಾರೆ.